Home
ಮೊಬೈಲ್

Redmi Note 14 ಸರಣಿ ಬಿಡುಗಡೆ ಖಚಿತ: ಬರ್ತಿವೆ 3 ಹೊಸ ಫೋನ್.. ಫೀಚರ್ಸ್‌ ಲೀಕ್!

Redmi Note 14 Series: ಪ್ರಸಿದ್ಧ ಟೆಕ್ ಕಂಪನಿ ಶಿಯೋಮಿ (Xiaomi) ತನ್ನ ರೆಡ್ಮಿ ನೋಟ್ 14 (Redmi Note 14) ಸರಣಿಯ ಬಿಡುಗಡೆಯನ್ನು ಘೋಷಿಸಿದೆ. ಕಂಪನಿಯ ಅಧಿಕೃತ ಚೀನಾ ವೆಬ್‌ಸೈಟ್‌ನಲ್ಲಿ ನೂತನ ಫೋನ್‌ಗಳ ಟೀಸರ್ ಪಟ್ಟಿಮಾಡಲಾಗಿದೆ. ಇದರಲ್ಲಿ ವಿನ್ಯಾಸವನ್ನೂ ಬಹಿರಂಗಪಡಿಸಲಾಗಿದೆ. ಈ ಸರಣಿಯಲ್ಲಿ Redmi Note 14, Redmi Note 14 Pro ಮತ್ತು Redmi Note 14 Pro Plus 5G ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಲೇಖನದಲ್ಲಿ ಮುಂಬರುವ ರೆಡ್ಮಿ ನೋಟ್ 14 ಸರಣಿಯ ವಿಶೇಷತೆಗಳನ್ನು ತಿಳಿಯೋಣ.

ಕಂಪನಿಯು ರೆಡ್ಮಿ ನೋಟ್ 14 ಬಿಡುಗಡೆಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೂ, ಮುಂದಿನ ವಾರ ಮೊಬೈಲ್‌ಗಳು ಬರಲಿವೆ. ಕಂಪನಿಯು ಟೀಸರ್ ಚಿತ್ರದಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳನ್ನು ತೋರಿಸಿರುವುದನ್ನು ನೋಡಬಹುದು. ಇವು Redmi Note 14 Pro ಮತ್ತು Note 14 Pro ಪ್ಲಸ್ ಆಗಿರಬಹುದು. ಎರಡೂ ಫೋನ್‌ಗಳ ಹಿಂಭಾಗದ ಫಲಕದಲ್ಲಿ ಬಾಗಿದ ಚದರ ಆಕಾರದ ಕ್ಯಾಮೆರಾವನ್ನು ಕಾಣಬಹುದು. ಮತ್ತು ಫೋನ್‌ಗಳ ಪ್ಯಾನೆಲ್ ಅನ್ನು ಸಹ ವಕ್ರವಾಗಿ ಇರಿಸಲಾಗಿದೆ.

Redmi Note 14 ಸರಣಿ ಬಿಡುಗಡೆ ಖಚಿತ: ಬರ್ತಿವೆ 3 ಹೊಸ ಫೋನ್.. ಫೀಚರ್ಸ್‌ ಲೀಕ್!

ಎರಡೂ ಮೊಬೈಲ್‌ಗಳಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಎಲ್‌ಇಡಿ ಫ್ಲ್ಯಾಷ್ ಕಾಣಬಹುದು. ರೆಡ್ಮಿ ನೋಟ್ 14 ಪ್ರೊ ಪ್ಲಸ್ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಕ್ಯಾಮೆರಾ ಲೆನ್ಸ್‌ಗಳನ್ನು ಹೊಂದಿದೆ. ಪ್ರೊ ಮಾದರಿಯು ವಿಭಿನ್ನ ಕ್ಯಾಮೆರಾ ಉಂಗುರಗಳನ್ನು ಹೊಂದಿದೆ. ರೆಡ್ಮಿ ನೋಟ್ 14 ಸರಣಿಯ ಫೋನ್‌ಗಳನ್ನು ನೀರು ಮತ್ತು ಧೂಳಿನ ರಕ್ಷಣೆಗಾಗಿ IP68 ರೇಟಿಂಗ್‌ನೊಂದಿಗೆ ಪರಿಚಯಿಸಲಾಗುವುದು. ಒಂದು ಫೋನನ್ನು ಹಸಿರು ಮತ್ತು ಬೂದು ಬಣ್ಣದಲ್ಲಿ ತೋರಿಸಲಾಗಿದೆ.

ರೆಡ್ಮಿ ನೋಟ್ 14 ಸರಣಿಯ ವೈಶಿಷ್ಟ್ಯಗಳು

ರೆಡ್ಮಿ ನೋಟ್ 14 ಪ್ರೊ ಪ್ಲಸ್ ಫೋನ್ ಹಸಿರು ಬಣ್ಣದಲ್ಲಿ ಬರುತ್ತದೆ. ಇದು OIS ನೊಂದಿಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಪ್ರಾಥಮಿಕ ಕ್ಯಾಮೆರಾಕ್ಕಾಗಿ f/1.6 ಅಪರ್ಚರ್ ಹೊಂದಿದೆ. ಇದು 60 ಎಂಎಂ f/2.2 ಮಿಡ್-ಫೋಕಸ್ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ, ನೋಟ್ ಫೋನ್ OIS ಜೊತೆಗೆ 50 ಮೆಗಾಪಿಕ್ಸೆಲ್ ಎಐ ಕ್ಯಾಮೆರಾವನ್ನು ಹೊಂದಿದೆ. ಪ್ರಸ್ತುತ ಈ ಮಾಹಿತಿ ಮಾತ್ರ ಅಧಿಕೃತವಾಗಿ ಲಭ್ಯವಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ವಿವರಗಳನ್ನು ಬಹಿರಂಗಪಡಿಸಲಾಗುವುದು.

ರೆಡ್ಮಿ ನೋಟ್ 14 ಫೋನಿನ ನಿರೀಕ್ಷಿತ ಫೀಚರ್ಸ್‌

ರೆಡ್ಮಿ ನೋಟ್ 14 ಈ ಸರಣಿಯ ಅಗ್ಗದ ಫೋನ್ ಆಗಿರಲಿದೆ. ವರದಿಗಳ ಪ್ರಕಾರ, ರೆಡ್ಮಿ ನೋಟ್ 14 ಫೋನ್ 1.5K ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಅದರ ಹಿಂದಿನ ರೆಡ್ಮಿ ನೋಟ್ 13 ಫೋನ್‌ಗಳ ಎಫ್‌ಹೆಚ್‌ಡಿ ಪ್ಯಾನೆಲ್‌ಗಿಂತ ಉತ್ತಮವಾಗಿರುತ್ತದೆ. ರೆಡ್ಮಿ ನೋಟ್ 14 5G ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ಬಹಿರಂಗಪಡಿಸಲಾಗಿದೆ. ಈ ಮೊಬೈಲ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್‌ ಚಿಪ್‌ಸೆಟ್ ಅನ್ನು ಒದಗಿಸಲಾಗುವುದು.

Redmi Note 14 ಸರಣಿ ಬಿಡುಗಡೆ ಖಚಿತ: ಬರ್ತಿವೆ 3 ಹೊಸ ಫೋನ್.. ಫೀಚರ್ಸ್‌ ಲೀಕ್!

ರೆಡ್ಮಿ ನೋಟ್ 14 ಪ್ರೊ ಮತ್ತು ಪ್ಲಸ್ ಫೋನಿನ ನಿರೀಕ್ಷಿತ ವೈಶಿಷ್ಟ್ಯಗಳು

ರೆಡ್ಮಿ ನೋಟ್ 14 ಪ್ರೊ ಮತ್ತು ರೆಡ್ಮಿ ನೋಟ್ 14 ಪ್ರೊ ಪ್ಲಸ್ ಅನ್ನು 120Hz ರಿಫ್ರೆಶ್ ದರದೊಂದಿಗೆ ಬಾಗಿದ 1.5K OLED ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲಾಗುವುದು. ಎರಡೂ ಫೋನ್‌ಗಳು ಹಿಂಭಾಗದ ಪ್ಯಾನೆಲ್‌ನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ.

ಕಂಪನಿಯು ರೆಡ್ಮಿ ನೋಟ್ 14 ಪ್ರೊ ಫೋನನ್ನು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7S Gen 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ, ರೆಡ್ಮಿ ನೋಟ್ 14 ಪ್ರೊ ಪ್ಲಸ್ ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಚಿಪ್‌ಸೆಟ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಸೋರಿಕೆ ಪ್ರಕಾರ, ರೆಡ್ಮಿ ನೋಟ್ 14 ಪ್ರೊ ಫೋನ್‌ಗಳು 90W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರಲಿದೆ.

Best Mobiles in India

English summary
Xiaomi Redmi Note 14 Series Launch Confirmed: Design, Camera Setup Teased: Expected Price, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+