200-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ 'Redmi Note 14s' ಫೋನ್ ಬಿಡುಗಡೆ!
ಶಿಯೋಮಿಯ ಸಬ್‌ಬ್ರ್ಯಾಂಡ್ Redmi ಹೊಸದಾಗಿ 200-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಹೊಂದಿರುವ 'Redmi Note 14s' ಎಂಬ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುವ ಮೂಲಕ ಮೊಬೈಲ್ ಮಾರುಕಟ್ಟೆಯ ಗಮನಸೆಳೆದಿದೆ. MediaTek Helio G99-Ultra ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿರುವ ಹೊಸ ಸ್ಮಾರ್ಟ್‌ಫೋನ್ ಇದಾಗಿದ್ದು, ಈ ಸ್ಮಾರ್ಟ್‌ಫೋನಿನಲ್ಲಿ 200-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ, 6.67-ಇಂಚಿನ AMOLED , ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು 67W ಚಾರ್ಜಿಂಗ್ ಬೆಂಬಲಿತ 5,000mAh ಬ್ಯಾಟರಿಯಂತಹ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಹಾಗಾದರೆ, ಹೊಸ 'Redmi Note 14s' ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Redmi Note 14s ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ಡ್ಯುಯಲ್-ಸಿಮ್ (ನ್ಯಾನೋ+ನ್ಯಾನೋ) ಸಾಮರ್ಥ್ಯದ ಹೊಸ Redmi Note 14s ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ 6.67-ಇಂಚಿನ ಫುಲ್-HD+ (1,080×2,400 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ MediaTek Helio G99-Ultra SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು 8GB RAM ಮತ್ತು 256GB ಸ್ಟೋರೇಜ್ ಕಾನ್ಫಿಗರೇಶನ್‌ನಲ್ಲಿ ಲಭ್ಯವಿದೆ. Xiaomi ಯ HyperOS ಸ್ಕಿನ್ ಟಾಪ್‌ನಲ್ಲಿ ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿಯ ಮೇಲೆ ಕಾರ್ಯನಿರ್ವಹಿಸುತ್ತದೆ.

ಫೋಟೋ ಮತ್ತು ವೀಡಿಯೊಗಳಿಗಾಗಿ, Redmi Note 14s 200-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದ್ದು, ಇದರಲ್ಲಿ 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾಗಳನ್ನು ಸೇರಿಸಲಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗೆ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, 5,000mAh ಬ್ಯಾಟರಿಯೊಂದಿಗೆ 67W ವೇಗದ ಚಾರ್ಜಿಂಗ್ ಸಾಮರ್ಥ್ಯವಿದೆ.Redmi Note 14s ಸ್ಮಾರ್ಟ್‌ಫೋನಿನ ಸಂಪರ್ಕ ಆಯ್ಕೆಗಳಲ್ಲಿ 4G LTE, ವೈ-ಫೈ, ಬ್ಲೂಟೂತ್ 5.2, NFC, GPS ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಹ್ಯಾಂಡ್‌ಸೆಟ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ ಮತ್ತು ಇದು IP64 ರೇಟಿಂಗ್ ಹೊಂದಿದೆ. Redmi Note 14s 161.1×74.95×7.98mm ಅಳತೆಯಲ್ಲಿದೆ ಮತ್ತು 179g ತೂಕವಿದೆ.
Redmi Note 14s ಸ್ಮಾರ್ಟ್‌ಫೋನಿನ ಬೆಲೆ ಎಷ್ಟು?
ಹೊಸ Redmi Note 14s ಸ್ಮಾರ್ಟ್‌ಫೋನ್ ಈಗ ಕೇವಲ ಜೆಕ್ ಗಣರಾಜ್ಯ ಮತ್ತು ಉಕ್ರೇನ್ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡಿದ್ದು, Czech Republic ನಲ್ಲಿ ಇದರ ಬೆಲೆ CZK 5,999 (ಸುಮಾರು ರೂ. 22,700) ಮತ್ತು ಉಕ್ರೇನ್‌ನಲ್ಲಿ UAH 10,999 (ಸುಮಾರು ರೂ. 23,100) ಎಂದು ನಿಗದಿಪಡಿಸಲಾಗಿದೆ. ಇದು ಅರೋರಾ ಪರ್ಪಲ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ಓಷನ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಆ ಮಾರುಕಟ್ಟೆಗಳಲ್ಲಿ ಲಭ್ಯವಿದೆ. Redmi Note 14s ಸ್ಮಾರ್ಟ್‌ಫೋನ್ ಮೂಲಭೂತವಾಗಿ Redmi Note 13 Pro 4G ಸ್ಮಾರ್ಟ್‌ಫೋನಿನ ಮರುಬ್ಯಾಡ್ಜ್ ಮಾಡಿದ ಆವೃತ್ತಿಯಾಗಿ ಕಾಣಿಸುತ್ತದೆ. ಏಕೆಂದರೆ, Redmi Note 14s ಸ್ಮಾರ್ಟ್‌ಫೋನ್ ಹೊಂದಿರುವ ಎಲ್ಲಾ ವೈಶಿಷ್ಟ್ಯಗಳನ್ನು Redmi Note 13 Pro 4G ಸ್ಮಾರ್ಟ್‌ಫೋನ್ ಕೂಡ ಹೊಂದಿತ್ತು ಎಂಬುದನ್ನು ನಾವು ಗಮನಿಸಬಹುದು.


Click it and Unblock the Notifications








