Home
ಮೊಬೈಲ್

ಭಾರತದಲ್ಲಿ Redmi Note 15 5G ಫೋನ್ ಲಾಂಚ್: ಮಧ್ಯಮ ಬೆಲೆಗೆ ಪ್ರೀಮಿಯಂ ಫೀಚರ್ಸ್!

ಭಾರತದಲ್ಲಿ ಇಂದು (ಜ.6, ಮಂಗಳವಾರ) ಶಿಯೊಮಿ ಕಂಪೆನಿಯು ತನ್ನ ಬಹನಿರೀಕ್ಷಿತ Redmi Note 15 5G ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕರ್ವ್ಡ್ AMOLED ಡಿಸ್‌ಪ್ಲೇ ಜೊತೆಗೆ ಸ್ಲಿಮ್ ಡಿಸೈನ್, ಇತ್ತೀಚಿನ Snapdragon ಚಿಪ್‌ಸೆಟ್‌ ಮತ್ತು 108MP OIS ಪ್ರೈಮರಿ ಕ್ಯಾಮೆರಾ ಸೆಟಪ್‌ನಂತಹ ನವೀನ ವೈಶಿಷ್ಟ್ಯಗಳೊಂದಿಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಮಧ್ಯಮ ಬೆಲೆ ಶ್ರೇಣಿಯಲ್ಲಿ ಛಾಪುಮೂಡಿಸುವಂತಿದೆ. ಹಾಗಾದರೆ, ಹೊಸ Redmi Note 15 5G ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Redmi Note 15 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Redmi Note 15 5G ಫೋನಿನಲ್ಲಿ ಇತ್ತೀಚಿನ Qualcomm Snapdragon 6 Gen 3 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಈ ಚಿಪ್‌ಸೆಟ್ ಹಿಂದಿನ ತಲೆಮಾರಿನ ಹೋಲಿಕೆಯಲ್ಲಿ ಹೆಚ್ಚು ವೇಗ ಮತ್ತು ಉತ್ತಮ ಗ್ರಾಫಿಕ್ಸ್ ಪ್ರದರ್ಶನವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಸಾಫ್‌ವೇರ್ ವಿಭಾಗದಲ್ಲಿ, ಈ ಫೋನ್ Xiaomi HyperOS 3 ಕಾರ್ಯನಿರ್ವಹಿಸಲಿದ್ದು, ಹೊಸ HyperIsland ಇಂಟರ್ಫೇಸ್ ಮೂಲಕ ಡೈನಾಮಿಕ್ ನೋಟಿಫಿಕೇಶನ್‌ಗಳು, ಸ್ಮಾರ್ಟ್ ವಿಡ್ಜೆಟ್‌ಗಳು ಮತ್ತು ಮಲ್ಟಿಟಾಸ್ಕಿಂಗ್ ಅನುಭವವನ್ನು ಸುಲಭಗೊಳಿಸುವ ಭರವಸೆಯನ್ನು ನೀಡಿದೆ.

ಭಾರತದಲ್ಲಿ Redmi Note 15 5G ಫೋನ್ ಲಾಂಚ್: ಮಧ್ಯಮ ಬೆಲೆಗೆ ಪ್ರೀಮಿಯಂ ಫೀಚರ್ಸ್!

ಈ Redmi Note 15 5G ಸ್ಮಾರ್ಟ್‌ಫೋನ್‌ನ ಪ್ರಮುಖ ಆಕರ್ಷಣೆಯೆಂದರೆ ಅದರ 6.77 ಇಂಚಿನ ಕರ್ವ್ಡ್ AMOLED ಡಿಸ್‌ಪ್ಲೇ. 120Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 3,200 ನಿಟ್ಸ್ ಬ್ರೈಟ್‌ನೆಸ್ ಇರುವುದರಿಂದ ಸೂರ್ಯನ ಬೆಳಕಿನಲ್ಲಿಯೂ ಸ್ಪಷ್ಟ ದೃಶ್ಯ ಅನುಭವ ಸಿಗುತ್ತದೆ. ಇದರಲ್ಲಿನ Hydro Touch 2.0 ತಂತ್ರಜ್ಞಾನದಿಂದ ಮಳೆ ಅಥವಾ ಒದ್ದೆಯ ಕೈಗಳಲ್ಲೂ ಟಚ್ ಪ್ರತಿಕ್ರಿಯೆಯನ್ನು ಉತ್ತಮವಾಗಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಇದಲ್ಲದೆ, ಕಣ್ಣಿನ ಆರೈಕೆಗೆ TUV Triple Eye Care ಪ್ರಮಾಣಪತ್ರವನ್ನೂ ನೀಡಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಫೋನಿನಲ್ಲಿರುವ 108MP OIS ಪ್ರೈಮರಿ ಕ್ಯಾಮೆರಾ ಪ್ರಮುಖ ಹೈಲೈಟ್ ಆಗಿದೆ. ಇದರಲ್ಲಿಮ Samsung HN9 ಸೆನ್ಸರ್ ಮತ್ತು MasterPixel ತಂತ್ರಜ್ಞಾನದಿಂದ ಕಡಿಮೆ ಬೆಳಕಿನಲ್ಲಿಯೂ ಸ್ಪಷ್ಟ ಮತ್ತು ನೈಸರ್ಗಿಕ ಫೋಟೋಗಳನ್ನು ಸೆರೆಹಿಡಿಯಬಹುದು ಎಂದು ಕಂಪೆನಿ ತಿಳಿಸಿದೆ. ಇಷ್ಟೇ ಅಲ್ಲದೆ, ಈ ಫೋನ್ 4K ವೀಡಿಯೋ ರೆಕಾರ್ಡಿಂಗ್ ಸೌಲಭ್ಯವನ್ನು ಹೊಂದಿದ್ದು, ಜೊತೆಗೆ ಮಲ್ಟಿಫೋಕಲ್ ಪೋರ್ಟ್ರೇಟ್ ಮೋಡ್ ಮತ್ತು AI ಆಧಾರಿತ AI Erase, AI Remove Reflection ಮುಂತಾದ ಫೀಚರ್‌ಗಳು ಫೋಟೋಗ್ರಫಿಯನ್ನು ಇನ್ನಷ್ಟು ಸುಧಾರಿಸುತ್ತವೆ.

ಭಾರತದಲ್ಲಿ Redmi Note 15 5G ಫೋನ್ ಲಾಂಚ್: ಮಧ್ಯಮ ಬೆಲೆಗೆ ಪ್ರೀಮಿಯಂ ಫೀಚರ್ಸ್!

ಬ್ಯಾಟರಿ ವಿಬಾಗದಲ್ಲಿ, Redmi Note 15 5G ನಲ್ಲಿ ದೊಡ್ಡದಾದ 5,520mAh ಬ್ಯಾಟರಿ ನೀಡಲಾಗಿದೆ. 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಚಾರ್ಜರ್ ಬಾಕ್ಸ್‌ನಲ್ಲೇ ಇದೆ. ಫೋನ್ ಒಂದೇ ಚಾರ್ಜ್‌ನಲ್ಲಿ ಸುಮಾರು ಒಂದೂವರೆ ದಿನಗಳ ಬಳಕೆಯನ್ನು ನೀಡುತ್ತದೆ ಎಂಬುದು ಕಂಪನಿಯು ಹೇಳಿಕೊಂಡಿದೆ. ವಿನ್ಯಾಸದ ವಿಚಾರದಲ್ಲಿ Redmi Note 15 5G ಫೋನ್ ತುಂಬಾ ಸ್ಲಿಮ್ ಆಗಿದ್ದು, ಕೇವಲ 7.35 ಮಿಮೀ ದಪ್ಪ ಮತ್ತು 178 ಗ್ರಾಂ ತೂಕ ಹೊಂದಿದೆ. ಜೊತೆಗೆ, IP66 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರಿನಿಂದ ರಕ್ಷಣೆ ದೊರೆಯುತ್ತದೆ.

Redmi Note 15 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Redmi Note 15 5G ಬೆಲೆ ₹22,999 ರಿಂದ ಆರಂಭವಾಗುತ್ತದೆ. 8GB RAM ಮತ್ತು 128GB ಸ್ಟೋರೇಜ್ ಮಾದರಿ ಈ ದರದಲ್ಲಿ ಲಭ್ಯವಿದ್ದು, 256GB ಸ್ಟೋರೇಜ್ ಹೊಂದಿರುವ ಮಾದರಿಯ ಬೆಲೆ ₹24,999 ಆಗಿದೆ. ಈ ಸ್ಮಾರ್ಟ್‌ಫೋನ್ ಮಾರಾಟವು ಜನವರಿ 9 ರಿಂದ ಶಿಯೊಮಿ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಆಯ್ದ ರಿಟೇಲ್ ಸ್ಟೋರ್‌ಗಳಲ್ಲಿ ಪ್ರಾರಂಭವಾಗಲಿದೆ. ಗ್ರಾಹಕರು ಬ್ಲ್ಯಾಕ್, ಮಿಸ್ಟ್ ಪರ್ಪಲ್ ಮತ್ತು ಗ್ಲೇಶಿಯರ್ ಬ್ಲೂ ಬಣ್ಣಗಳಲ್ಲಿ ಈ ಫೋನ್ ಅನ್ನು ಖರೀದಿಸಬಹುದು.

ಭಾರತದಲ್ಲಿ Redmi Note 15 5G ಫೋನ್ ಲಾಂಚ್: ಮಧ್ಯಮ ಬೆಲೆಗೆ ಪ್ರೀಮಿಯಂ ಫೀಚರ್ಸ್!

ಶಕ್ತಿಶಾಲಿ ಪ್ರೊಸೆಸರ್, ಪ್ರೀಮಿಯಂ ಡಿಸ್‌ಪ್ಲೇ, AI ಕ್ಯಾಮೆರಾ ವೈಶಿಷ್ಟ್ಯಗಳು ಮತ್ತು ಸ್ಪರ್ಧಾತ್ಮಕ ಬೆಲೆಯೊಂದಿಗೆ Redmi Note 15 5G ಭಾರತದಲ್ಲಿ ಮಧ್ಯಮ ಬೆಲೆ 5G ಸ್ಮಾರ್ಟ್‌ಫೋನ್ ಹುಡುಕುತ್ತಿರುವವರಿಗೆ ಗಮನಾರ್ಹ ಆಯ್ಕೆಯಾಗಬಹುದು. ಅದರಲ್ಲೂ ಯುವ ಬಳಕೆದಾರರನ್ನು ಗುರಿಯಾಗಿಸಿಕೊಂಡಂತೆ ಕಾಣಿಸುತ್ತದೆ. ಇನ್ನು ಈ Redmi Note 15 5G ಸ್ಮಾರ್ಟ್‌ಫೋನ್ ಜೊತೆಗೆ ಹೊಸದಾಗಿ Redmi Pad 2 Pro ಟ್ಯಾಬ್ಲೆಟ್ ಅನ್ನು ಕೂಡ ಪರಿಚಯಿಸಲಾಗಿದೆ. ಇದರ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ಓದಿ ತಿಳಿಯೋಣ.

Best Mobiles in India

English summary
Redmi Note 15 5G has launched in India with a curved AMOLED display, Snapdragon chipset, and a 108MP OIS camera, offering premium features in the mid-range segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+