Redmi Note 15 5G ಮೊದಲ ಸೇಲ್ ಆರಂಭ: 3,000 ರೂ. ವರೆಗೆ ರಿಯಾಯಿತಿ!
ಶಿಯೋಮಿ ಸಬ್‌ಬ್ರ್ಯಾಂಡ್ Redmi ಕಳೆದ ವಾರವಷ್ಟೇ ಪರಿಚಯಿಸಿರುವ ಬಹುನಿರೀಕ್ಷಿತ Redmi Note 15 5G ಸ್ಮಾರ್ಟ್‌ಫೋನ್ ಇಂದು (ಜನವರಿ 9) ದೇಶದಲ್ಲಿ ಮೊದಲ ಬಾರಿಗೆ ಮಾರಾಟಕ್ಕೆ ಬಂದಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್, Xiaomi ಇಂಡಿಯಾದ ಅಧಿಕೃತ ವೆಬ್‌ಸೈಟ್ ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಫೋನ್ ಖರೀದಿಗೆ ಲಭ್ಯವಾಗಲಿದ್ದು, ಬಿಡುಗಡೆ ಕೊಡುಗೆಯಾಗಿ 3,000 ರೂ. ವರೆಗೆ ತ್ವರಿತ ರಿಯಾಯಿತಿ ಹಾಗೂ ನೋ-ಕಾಸ್ಟ್ EMI ಆಯ್ಕೆಗಳನ್ನು ಒದಗಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.
Redmi Note 15 5G ಭಾರತದಲ್ಲಿ ಬೆಲೆ, ಮಾರಾಟದ ಕೊಡುಗೆಗಳು
ಭಾರತದಲ್ಲಿ Redmi Note 15 5G ಬೆಲೆ 8GB RAM+128GB ಸ್ಟೋರೇಜ್ ಮಾದರಿಗೆ ರೂ. 22,999 ರಿಂದ ಪ್ರಾರಂಭವಾಗುತ್ತದೆ. ಇದರ 8GB+256GB ಸ್ಟೋರೇಜ್ ಮಾದರಿಯ ಬೆಲೆ ರೂ. 24,9999 ಆಗಿದ್ದು, ಕಪ್ಪು, ಗ್ಲೇಸಿಯರ್ ಬ್ಲೂ ಮತ್ತು ಮಿಸ್ಟ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿರಲಿದೆ. ಗ್ರಾಹಕರು Axis ಬ್ಯಾಂಕ್, ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ EMI ವಹಿವಾಟುಗಳನ್ನು ಬಳಸಿಕೊಂಡು ಮಾಡಿದ ಖರೀದಿಯ ಮೇಲೆ 3,000 ವರೆಗೆ ತ್ವರಿತ ರಿಯಾಯಿತಿ ಸಿಗುತ್ತದೆ. ಮತ್ತು, ಇದರ ಜೊತೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳು ತಿಂಗಳಿಗೆ 3,333 ರಿಂದ ಪ್ರಾರಂಭವಾಗುತ್ತವೆ.

Redmi Note ಸರಣಿಯ ಈ ಹೊಸ ಸ್ಮಾರ್ಟ್‌ಫೋನ್ ದೇಶದಲ್ಲಿ ಕಳೆದ ವಾರವಷ್ಟೇ 6.77-ಇಂಚಿನ AMOLED ಡಿಸ್ಪ್ಲೇ ಜೊತೆಗೆ ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಯಿತು. ಕರ್ವ್ಡ್ AMOLED ಡಿಸ್‌ಪ್ಲೇ ಜೊತೆಗೆ ಸ್ಲಿಮ್ ಡಿಸೈನ್ 108MP OIS ಪ್ರೈಮರಿ ಕ್ಯಾಮೆರಾ ಸೆಟಪ್‌ನಂತಹ ನವೀನ ವೈಶಿಷ್ಟ್ಯಗಳೊಂದಿಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಮಧ್ಯಮ ಬೆಲೆ ಶ್ರೇಣಿಯಲ್ಲಿ ಛಾಪುಮೂಡಿಸುವಂತಿದೆ. ಹಾಗಾದರೆ, ಹೊಸ Redmi Note 15 5G ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಸಹ ಮುಂದೆ ಓದಿ ತಿಳಿಯೋಣ ಬನ್ನಿ.
Redmi Note 15 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Redmi Note 15 5G ಫೋನಿನಲ್ಲಿ ಇತ್ತೀಚಿನ Qualcomm Snapdragon 6 Gen 3 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಈ ಚಿಪ್‌ಸೆಟ್ ಹಿಂದಿನ ತಲೆಮಾರಿನ ಹೋಲಿಕೆಯಲ್ಲಿ ಹೆಚ್ಚು ವೇಗ ಮತ್ತು ಉತ್ತಮ ಗ್ರಾಫಿಕ್ಸ್ ಪ್ರದರ್ಶನವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಸಾಫ್‌ವೇರ್ ವಿಭಾಗದಲ್ಲಿ, ಈ ಫೋನ್ Xiaomi HyperOS 3 ಕಾರ್ಯನಿರ್ವಹಿಸಲಿದ್ದು, ಹೊಸ HyperIsland ಇಂಟರ್ಫೇಸ್ ಮೂಲಕ ಡೈನಾಮಿಕ್ ನೋಟಿಫಿಕೇಶನ್‌ಗಳು, ಸ್ಮಾರ್ಟ್ ವಿಡ್ಜೆಟ್‌ಗಳು ಮತ್ತು ಮಲ್ಟಿಟಾಸ್ಕಿಂಗ್ ಅನುಭವವನ್ನು ಸುಲಭಗೊಳಿಸುವ ಭರವಸೆಯನ್ನು ನೀಡಿದೆ.
ಈ Redmi Note 15 5G ಸ್ಮಾರ್ಟ್‌ಫೋನ್‌ನ ಪ್ರಮುಖ ಆಕರ್ಷಣೆಯೆಂದರೆ ಅದರ 6.77 ಇಂಚಿನ ಕರ್ವ್ಡ್ AMOLED ಡಿಸ್‌ಪ್ಲೇ. 120Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 3,200 ನಿಟ್ಸ್ ಬ್ರೈಟ್‌ನೆಸ್ ಇರುವುದರಿಂದ ಸೂರ್ಯನ ಬೆಳಕಿನಲ್ಲಿಯೂ ಸ್ಪಷ್ಟ ದೃಶ್ಯ ಅನುಭವ ಸಿಗುತ್ತದೆ. ಇದರಲ್ಲಿನ Hydro Touch 2.0 ತಂತ್ರಜ್ಞಾನದಿಂದ ಮಳೆ ಅಥವಾ ಒದ್ದೆಯ ಕೈಗಳಲ್ಲೂ ಟಚ್ ಪ್ರತಿಕ್ರಿಯೆಯನ್ನು ಉತ್ತಮವಾಗಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಇದಲ್ಲದೆ, ಕಣ್ಣಿನ ಆರೈಕೆಗೆ TUV Triple Eye Care ಪ್ರಮಾಣಪತ್ರವನ್ನೂ ನೀಡಲಾಗಿದೆ.
ಕ್ಯಾಮೆರಾ ವಿಭಾಗದಲ್ಲಿ, ಈ ಫೋನಿನಲ್ಲಿರುವ 108MP OIS ಪ್ರೈಮರಿ ಕ್ಯಾಮೆರಾ ಪ್ರಮುಖ ಹೈಲೈಟ್ ಆಗಿದೆ. ಇದರಲ್ಲಿಮ Samsung HN9 ಸೆನ್ಸರ್ ಮತ್ತು MasterPixel ತಂತ್ರಜ್ಞಾನದಿಂದ ಕಡಿಮೆ ಬೆಳಕಿನಲ್ಲಿಯೂ ಸ್ಪಷ್ಟ ಮತ್ತು ನೈಸರ್ಗಿಕ ಫೋಟೋಗಳನ್ನು ಸೆರೆಹಿಡಿಯಬಹುದು ಎಂದು ಕಂಪೆನಿ ತಿಳಿಸಿದೆ. ಇಷ್ಟೇ ಅಲ್ಲದೆ, ಈ ಫೋನ್ 4K ವೀಡಿಯೋ ರೆಕಾರ್ಡಿಂಗ್ ಸೌಲಭ್ಯವನ್ನು ಹೊಂದಿದ್ದು, ಜೊತೆಗೆ ಮಲ್ಟಿಫೋಕಲ್ ಪೋರ್ಟ್ರೇಟ್ ಮೋಡ್ ಮತ್ತು AI ಆಧಾರಿತ AI Erase, AI Remove Reflection ಮುಂತಾದ ಫೀಚರ್‌ಗಳು ಫೋಟೋಗ್ರಫಿಯನ್ನು ಇನ್ನಷ್ಟು ಸುಧಾರಿಸುತ್ತವೆ.
ಬ್ಯಾಟರಿ ವಿಬಾಗದಲ್ಲಿ, Redmi Note 15 5G ನಲ್ಲಿ ದೊಡ್ಡದಾದ 5,520mAh ಬ್ಯಾಟರಿ ನೀಡಲಾಗಿದೆ. 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಚಾರ್ಜರ್ ಬಾಕ್ಸ್‌ನಲ್ಲೇ ಇದೆ. ಫೋನ್ ಒಂದೇ ಚಾರ್ಜ್‌ನಲ್ಲಿ ಸುಮಾರು ಒಂದೂವರೆ ದಿನಗಳ ಬಳಕೆಯನ್ನು ನೀಡುತ್ತದೆ ಎಂಬುದು ಕಂಪನಿಯು ಹೇಳಿಕೊಂಡಿದೆ. ವಿನ್ಯಾಸದ ವಿಚಾರದಲ್ಲಿ Redmi Note 15 5G ಫೋನ್ ತುಂಬಾ ಸ್ಲಿಮ್ ಆಗಿದ್ದು, ಕೇವಲ 7.35 ಮಿಮೀ ದಪ್ಪ ಮತ್ತು 178 ಗ್ರಾಂ ತೂಕ ಹೊಂದಿದೆ. ಜೊತೆಗೆ, IP66 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರಿನಿಂದ ರಕ್ಷಣೆ ದೊರೆಯುತ್ತದೆ.


Click it and Unblock the Notifications








