ಭಾರತಕ್ಕೆ Redmi Note 15 5G: ಲಾಂಚ್ ಡೇಟ್, ಫೀಚರ್ಸ್ ಮತ್ತು ನಿರೀಕ್ಷಿತ ಬೆಲೆ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Xiaomi ಒಡೆತನದ Redmi ತನ್ನ ಹೊಸ ಮಿಡ್-ರೇಂಜ್ ಸ್ಮಾರ್ಟ್‌ಫೋನ್ Redmi Note 15 5G ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಈ ತಿಂಗಳ ಆರಂಭದಲ್ಲಷ್ಟೆ Redmi Note 15 Pro+ 5G ಮತ್ತು Note 15 Pro 5G ಸ್ಮಾರ್ಟ್‌ಫೋನ್‌ಗಳನ್ನು ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿತ್ತು. ಇದೀಗ Redmi Note 15 5G ಫೋನ್ ಅನ್ನು ಭಾರತದಲ್ಲಿ ಜನವರಿ 6, 2026ರಂದು ಪರಿಚಯಿಸಲಾಗುವುದು ಎಂದು Xiaomi ತಿಳಿಸಿದೆ. ಮತ್ತು ಫೋನಿನ ಪ್ರಮುಖ ಹಾರ್ಡ್‌ವೇರ್ ವಿವರಗಳನ್ನು ಬಹಿರಂಗಪಡಿಸಿದೆ.
ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಗಾಗಿ Redmi Note 15 5G 108 ಮಾಸ್ಟರ್‌ಪಿಕ್ಸೆಲ್ ಆವೃತ್ತಿಯನ್ನು(ಕ್ಯಾಮೆರಾ ಆಧಾರಿತವಾದ ಈ ಫೋನ್ ಸಹ ಜನವರಿ 6 ರಂದು ಬಿಡುಗಡೆಯಾಗುತ್ತಿದೆ) ಟೀಸರ್ ಮಾಡಿದೆ. ಇದೀಗ Redmi Note 15 5G ಕೂಡ ಮೀಸಲಾದ ಅಮೆಜಾನ್ ಮೈಕ್ರೋಸೈಟ್ನಲ್ಲಿ ಪಟ್ಟಿಯಾಗಿದೆ. ಇದರಿಂದ Redmi Note 15 5G ಫೋನ್‌ನ ಪ್ರೊಸೆಸರ್, ಬ್ಯಾಟರಿ ಸಾಮರ್ಥ್ಯ, ಚಾರ್ಜಿಂಗ್ ವೇಗ ಮತ್ತು ವಿನ್ಯಾಸದ ಪ್ರಮುಖ ಅಂಶಗಳು ಸ್ಪಷ್ಟವಾಗಿವೆ. ಲಭ್ಯವಿರುವ ಮಾಹಿತಿಯ ಆಧಾರದಲ್ಲಿ, ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ ರೂ. 20,000 ಒಳಗೇ ಇರಲಿದೆ ಎಂಬ ನಿರೀಕ್ಷೆ ಇದೆ.
Redmi Note 15 5G : ಪ್ರಮುಖ ವೈಶಿಷ್ಟ್ಯಗಳು
ಅಮೆಜಾನ್ ಪಟ್ಟಿಯ ಪ್ರಕಾರ, ಭಾರತದಲ್ಲಿ Redmi Note 15 5G ಜಾಗತಿಕ ಮಾದರಿಗೆ ಹೊಂದಿಕೆಯಾಗುವ Qualcomm ನ Snapdragon 6 Gen 3 ಪ್ರೊಸೆಸರ್ ಅನ್ನು ಹೊಂದಿರಲಿದೆ. Xiaomi ಹೇಳುವಂತೆ ಬಳಕೆದಾರರು ಶೇಕಡಾ 10 ರಷ್ಟು GPU "ಬೂಸ್ಟ್", ಶೇಕಡಾ 30 ರಷ್ಟು ಬಲವಾದ CPU ಕಾರ್ಯಕ್ಷಮತೆ ಮತ್ತು 48 ತಿಂಗಳ ಲ್ಯಾಗ್-ಫ್ರೀ ಬಳಕೆಯನ್ನು ನಿರೀಕ್ಷಿಸಬಹುದು. ಅಂತರಾಷ್ಟೀಯ ಮಾರುಕಟ್ಟೆಗಳಲ್ಲಿ ಈ ಫೋನ್ 8GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬಂದಿದೆ.
ಬ್ಯಾಟರಿ ವಿಭಾಗದಲ್ಲಿ, Redmi Note 15 5G ಫೋನ್ 5,520mAh ದೊಡ್ಡ ಬ್ಯಾಟರಿ ಹೊಂದಿದೆ. ಕಂಪನಿಯ ಪ್ರಕಾರ, ಇದು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 1.5 ದಿನಗಳಿಗಿಂತ ಹೆಚ್ಚು ಬಳಕೆಯನ್ನು ಒದಗಿಸಬಹುದು. ಜೊತೆಗೆ, 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ. ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಿವರ್ಸ್ ಚಾರ್ಜಿಂಗ್ ಸೌಲಭ್ಯವೂ ಇರುವುದರಿಂದ, ಭಾರತದಲ್ಲೂ ಇದು ಲಭ್ಯವಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ದೃಢತೆಯ ದೃಷ್ಟಿಯಿಂದ, Redmi Note 15 5G ಜಾಗತಿಕ ಆವೃತ್ತಿಯಲ್ಲಿ IP65 ರೇಟಿಂಗ್ ಹೊಂದಿದ್ದು, ಧೂಳು ಮತ್ತು ಸಣ್ಣ ನೀರಿನ ಸಿಂಪಡಣೆಯಿಂದ ರಕ್ಷಣೆ ನೀಡುತ್ತದೆ. ಮುಂಭಾಗದಲ್ಲಿ Corning Gorilla Glass 7i ಬಳಸಲಾಗಿದ್ದು, ಸ್ಕ್ರೀನ್‌ಗೆ ಹೆಚ್ಚುವರಿ ಭದ್ರತೆ ಒದಗಿಸುತ್ತದೆ.
ಡಿಸ್ಪ್ಲೇ ವಿಷಯಕ್ಕೆ ಬಂದರೆ, ಈ ಸ್ಮಾರ್ಟ್‌ಫೋನ್‌ನಲ್ಲಿ 6.77 ಇಂಚಿನ AMOLED ಡಿಸ್ಪ್ಲೇ ಇದೆ. ಇದಕ್ಕೆ 120Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 3200 ನಿಟ್ಸ್ ಬ್ರೈಟ್‌ನೆಸ್ ಸಪೋರ್ಟ್ ಇದೆ. ಇದರಿಂದ ಸ್ಕ್ರೋಲಿಂಗ್ ಸ್ಮೂತ್ ಆಗಿದ್ದು, ಹೊರಾಂಗಣದಲ್ಲಿ ಕೂಡ ಉತ್ತಮ ವೀಕ್ಷಣಾ ಅನುಭವ ಸಿಗುವ ನಿರೀಕ್ಷೆ ಇದೆ.
ಕ್ಯಾಮೆರಾ ವಿಭಾಗದಲ್ಲಿ, Redmi Note 15 5G ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ 108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಸೇರಿವೆ. ಮುಂಭಾಗದಲ್ಲಿ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ವಿನ್ಯಾಸದ ದೃಷ್ಟಿಯಿಂದ, Redmi Note 15 5G ಕರ್ವ್ಡ್ ಡಿಸ್ಪ್ಲೇ ಹೊಂದಿದೆ. ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ಗಳನ್ನು ಬಲಭಾಗದಲ್ಲಿ ನೀಡಲಾಗಿದೆ. ಜಾಗತಿಕ ಆವೃತ್ತಿಯಂತೆ, ಭಾರತೀಯ ಮಾದರಿಯಲ್ಲೂ HyperOS 2 ಸಾಫ್ಟ್‌ವೇರ್ ಲಭ್ಯವಾಗುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ, Redmi Note 15 5G ತನ್ನ ಬೆಲೆ ವಿಭಾಗದಲ್ಲಿ ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಬ್ಯಾಟರಿ, ಪ್ರೀಮಿಯಂ ಡಿಸ್ಪ್ಲೇ ಮತ್ತು ಹೈ-ರೆಸಲ್ಯೂಷನ್ ಕ್ಯಾಮೆರಾ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಗಮನ ಸೆಳೆಯುವ ಸಾಧ್ಯತೆ ಇದೆ. ಲಾಂಚ್ ನಂತರ ಇದರ ನಿಖರ ಬೆಲೆ, ಸ್ಟೋರೇಜ್ ಆಯ್ಕೆಗಳು ಮತ್ತು ಬ್ಯಾಂಕ್ ಆಫರ್‌ಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಅಲ್ಲಿಯವರೆಗೂ ಕನ್ನಡ ಗಿಜ್‌ಬಾಟ್‌ನಲ್ಲಿ ಟ್ಯೂನ್ ಆಗಿರಿ.


Click it and Unblock the Notifications








