Home
ಮೊಬೈಲ್

ಜಾಗತಿಕ ಮಾರುಕಟ್ಟೆಗೆ Redmi Note 15 ಸರಣಿ ಎಂಟ್ರಿ: ಇಲ್ಲಿದೆ ಫುಲ್ ಡೀಟೇಲ್ಸ್!

Redmi Note 15 5G 108 MasterPixel ಆವೃತ್ತಿಯು ಜನವರಿ 6, 2026 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ದೃಢಪಡಿಸಲಾಗಿದೆ. ಸರಣಿಯ ಇತರ ಮಾದರಿಗಳು, ಉದಾಹರಣೆಗೆ Pro ಮತ್ತು Pro Plus ರೂಪಾಂತರಗಳು, 2026 ರ ನಂತರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದಕ್ಕೂ ಮೊದಲೆ, ಶಿಯೋಮಿ ತನ್ನ Redmi Note 15 Pro+ 5G, Redmi Note 15 Pro 5G, ಮತ್ತು Redmi Note 15 5G ಮೂರು ಮಾದರಿಗಳನ್ನು ಪೋಲೆಂಡ್‌ನಲ್ಲಿ ಬಿಡುಗಡೆ ಮಾಡಿದೆ. ಕಳೆದ ತಿಂಗಳು ಚೀನಾದಲ್ಲಿ ಪರಿಚಯಿಸಲ್ಪಟ್ಟ ಈ ಫೋನ್‌ಗಳು ಈಗ ಗ್ಲೋಬಲ್ ಮಾರುಕಟ್ಟೆಗೂ ಬರುತ್ತಿದ್ದು, Android 15 ಆಧಾರಿತ HyperOS 2, ದೊಡ್ಡ ಬ್ಯಾಟರಿ ಸಾಮರ್ಥ್ಯ ಮತ್ತು ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳಿಂದ ಗಮನ ಸೆಳೆಯುತ್ತಿವೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

Redmi Note 15 ಸರಣಿ ಬೆಲೆ (ಪೋಲೆಂಡ್)
Redmi Note 15 Pro+ 5G - PLN 1,999 (ಸುಮಾರು ₹49,000)
ಬಣ್ಣಗಳು: Black, Glacier Blue, Mocha Brown

Redmi Note 15 Pro 5G - PLN 1,699 (ಸುಮಾರು ₹42,000)
ಬಣ್ಣಗಳು: Black, Glacier Blue, Titanium

Redmi Note 15 5G - PLN 1,199 (ಸುಮಾರು ₹30,000)
ಬಣ್ಣಗಳು: Black, Glacier Blue, Mist Purple

ಈ ಬೆಲೆಗಳನ್ನು ಗಮನಿಸಿದರೆ, ಶಿಯೋಮಿ ಈ ವರ್ಷದ ಮಿಡ್-ರೇಂಜ್ ಸೆಗ್ಮೆಂಟ್‌ನಲ್ಲಿ ಅತ್ಯಂತ ಸ್ಪರ್ಧಾತ್ಮಕ ಫೋನ್‌ಗಳನ್ನು ನೀಡುತ್ತಿರುವುದು ಸ್ಪಷ್ಟವಾಗಿದೆ.

Redmi Note 15 Pro+ 5G ಮತ್ತು Note 15 Pro 5G: ಪ್ರಮುಖ ವೈಶಿಷ್ಟ್ಯಗಳು
Redmi Note 15 ಸರಣಿಯಲ್ಲಿ ಎರಡೂ Pro ಮಾದರಿಗಳು 6.83 ಇಂಚಿನ 1.5K AMOLED ಡಿಸ್‌ಪ್ಲೇ, 120Hz ರಿಫ್ರೆಶ್‌ ರೇಟ್ ಮತ್ತು 3,200 nits ಪೀಕ್ ಬ್ರೈಟ್ನೆಸ್‌ನೊಂದಿಗೆ ಬರುತ್ತವೆ. Gorilla Glass Victus 2 ರಕ್ಷಣೆ ಇರುವ ಕಾರಣ, ಡಿಸ್‌ಪ್ಲೇ ಹೆಚ್ಚು ಬಲಿಷ್ಠ ಮತ್ತು ಸ್ಕ್ರಾಚ್ ರೆಸಿಸ್ಟೆಂಟ್ ಆಗಿದೆ. ಕಾರ್ಯಕ್ಷಮತೆಗಾಗಿ, Pro+ 5G: Snapdragon 7s Gen 4 + 12GB RAM + 512GB ಸ್ಟೋರೇಜ್ ಹೊಂದಿದ್ದರೆ, Pro 5G: MediaTek Dimensity 7400-Ultra + 8GB RAM + 256GB ಸ್ಟೋರೇಜ್ ಹೊಂದಿದೆ.

ಜಾಗತಿಕ ಮಾರುಕಟ್ಟೆಗೆ Redmi Note 15 ಸರಣಿ ಎಂಟ್ರಿ: ಇಲ್ಲಿದೆ ಫುಲ್ ಡೀಟೇಲ್ಸ್!

ಕ್ಯಾಮೆರಾ ವಿಭಾಗದಲ್ಲಿ, ಈ ಎರಡೂ ಫೋನ್‌ಗಳು ಹಿಂಆಭದಲ್ಲಿ 200MP ಮುಖ್ಯ ಕ್ಯಾಮೆರಾ (OIS ಸಹಿತ), 8MP ಅಲ್ಟ್ರಾ-ವೈಡ್ ಲೆನ್ಸ್ ಹೊಂದಿವೆ. ಸೆಲ್ಫಿ ಕ್ಯಾಮೆರಾವು Pro+ ನಲ್ಲಿ 32MP ಇದ್ದರೆ, Pro ನಲ್ಲಿ 20MP ಇದೆ. ಬ್ಯಾಟರಿ ವಿಭಾಗದಲ್ಲಿ, Pro+ ಸಾಧನವು 6,500mAh + 100W ಫಾಸ್ಟ್ ಚಾರ್ಜಿಂಗ್ + 22.5W ರಿವರ್ಸ್ ಚಾರ್ಜಿಂಗ್ ಹೊಂದಿದ್ದರೆ, Pro ಫೋನ್ 6,580mAh + 45W ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಎರಡೂ ಫೋನ್‌ಗಳು IP68 ಜಲ-ಧೂಳು ರೇಟಿಂಗ್, Dolby Atmos ಸ್ಟೀರಿಯೋ ಸ್ಪೀಕರ್‌ಗಳು, NFC, 5G, ಮತ್ತು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳನ್ನು ಒಳಗೊಂಡಿವೆ.

Redmi Note 15 5G:ಪ್ರಮುಖ ವೈಶಿಷ್ಟ್ಯಗಳು
ಇತ್ತ ಮೂಲ ಮಾದರಿ Redmi Note 15 5G ಅನ್ನು ಸಾಮಾನ್ಯ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 6.77 ಇಂಚಿನ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 3,200 nits ಬ್ರೈಟ್ನೆಸ್ ಲಭ್ಯ. Gorilla Glass 7i ರಕ್ಷಣೆ ಇದೆ. ಕಾರ್ಯಕ್ಷಮತೆಗಾಗಿ, Snapdragon 6 Gen 3 + 8GB RAM + 256GB ಸ್ಟೋರೇಜ್, 108MP ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಸೆಟಪ್, 20MP ಸೆಲ್ಫಿ ಕ್ಯಾಮೆರಾ, 5,520mAh ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್18W ರಿವರ್ಸ್ ಚಾರ್ಜಿಂಗ್, IP65 ರೇಟಿಂಗ್ ಮತ್ತು Dolby Atmos ಸ್ಪೀಕರ್‌ಗಳಿವೆ.

Redmi Note 15 ಸರಣಿ ಈ ಬಾರಿ ಡಿಸ್‌ಪ್ಲೇ, ಕ್ಯಾಮೆರಾ, ಬ್ಯಾಟರಿ, ಮತ್ತು ಸಾಫ್ಟ್‌ವೇರ್ ವಿಭಾಗಗಳಲ್ಲಿ ಮಹತ್ತರ ಅಪ್‌ಗ್ರೇಡ್‌ಗಳನ್ನು ತಂದುಕೊಟ್ಟಿದೆ. Pro+ ಮಾದರಿಯು ಪ್ರೀಮಿಯಂ ಅನುಭವ ಬಯಸುವವರಿಗೆ ಸೂಕ್ತ, Pro ಮಾದರಿ ಸಮತೋಲನಿತ ಪರ್ಫಾರ್ಮೆನ್ಸ್‌ಗೆ, ಮತ್ತು Redmi Note 15 5G ಸಾಮಾನ್ಯ ಬಳಕೆದಾರರಿಗೆ ಬೆಲೆ-ಪರಿಣಾಮಕಾರಿ ಆಯ್ಕೆಯಾಗಿ ಹೊರಹೊಮ್ಮಿದೆ. ಇದೇ ಸರಣಿಯ Redmi Note 15 5G 108 MasterPixel ಆವೃತ್ತಿಯು ಜನವರಿ 6, 2026 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ . ಈ ಕುರಿತಂತೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
The Redmi Note 15 5G 108 MasterPixel Edition will launch in India on January 6, 2026. The Pro and Pro+ models are expected later in the year. Earlier, Xiaomi introduced the Redmi Note 15 Pro+ 5G, Note 15 Pro 5G, and Note 15 5G in Poland.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+