Redmi Note 15 Pro 5G ಸರಣಿ ಬಿಡುಗಡೆ: ಕೈಗೆಟುಕುವ ಬೆಲೆಗೆ ಪ್ರೀಮಿಯಂ ಫೀಚರ್ಸ್!
ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Redmi Note 15 Pro 5G ಸರಣಿ ಸ್ಮಾರ್ಟ್‌ಫೋನ್‌ಗಳು ಇಂದು (ಜ.29) ದೇಶದ ಮಾರುಕಟ್ಟೆಗೆ ಭರ್ಜರಿಯಾಗಿ ಬಿಡುಗಡೆಯಾಗಿವೆ. ಈ ಹೊಸ ಸರಣಿಯಲ್ಲಿ Redmi Note 15 Pro 5G ಮತ್ತು Redmi Note 15 Pro+ 5G ಎರಡು ಸ್ಮಾರ್ಟ್‌ಪೋನ್‌ಗಳು ಪರಿಚಯಗೊಂಡಿದ್ದು, ಹೊಸ ತಂತ್ರಜ್ಞಾನ, ಶಕ್ತಿಶಾಲಿ ಕ್ಯಾಮೆರಾ ಮತ್ತು ಪ್ರೀಮಿಯಂ ವಿನ್ಯಾಸದೊಂದಿಗೆ ಬಂದಿವೆ. 2026ರ ಮಧ್ಯಮ ಬೆಲೆ ವಿಭಾಗದಲ್ಲಿ ದೊಡ್ಡ ಗಮನ ಸೆಳೆಯುವಂತಿರುವ ಈ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ.
Redmi Note 15 Pro 5G ಸರಣಿ: ಭಾರತದಲ್ಲಿ ಬೆಲೆ, ಲಭ್ಯತೆ
ಭಾರತದಲ್ಲಿ Redmi Note 15 Pro+ 5G ಆರಂಭಿಕ ಬೆಲೆ ₹37,999 ಆಗಿದೆ (8GB RAM + 256GB ಸ್ಟೋರೇಜ್). ಇದು Coffee Mocha, Mirage Blue ಮತ್ತು Carbon Black ಬಣ್ಣಗಳಲ್ಲಿ ಲಭ್ಯವಿದೆ. ಇತ್ತ Redmi Note 15 Pro 5G ಫೋನ್ ₹29,999 (8GB RAM + 128GB ) ಬೆಲೆಗೆ ಬಿಡುಗಡೆಯಾಗಿದ್ದು, Silver Ash, Mirage Blue ಮತ್ತು Carbon Black ಬಣ್ಣಗಳಲ್ಲಿ ಲಭ್ಯವಿರಲಿದೆ. ಗ್ರಾಹಕರಿಗೆ HDFC, SBI ಮತ್ತು ICICI ಕ್ರೆಡಿಟ್ ಕಾರ್ಡ್ ಮೇಲೆ ₹3,000 ವರೆಗೆ ಬ್ಯಾಂಕ್ ರಿಯಾಯಿತಿ ಲಭ್ಯವಿದ್ದು, ಬೆಲೆಯು ಕ್ರಮವಾಗಿ ರೂ. 26,999 ಮತ್ತು ರೂ. 34,999 ಕ್ಕೆ ಇಳಿಕೆಯಾಗುತ್ತದೆ.
Redmi Note 15 Pro 5G ಸರಣಿ: ಪ್ರಮುಖ ವೈಶಿಷ್ಟ್ಯಗಳು
Redmi Note 15 Pro ಮತ್ತು Redmi Note 15 Pro+ 5G ಎರಡೂ ಸ್ಮಾರ್ಟ್‌ಫೋನ್‌ಗಳು 1.5K (1,280 x 2,772 ಪಿಕ್ಸೆಲ್‌ಗಳು) ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 3,200 ನಿಟ್‌ಗಳ ಹೊಳಪಿನೊಂದಿಗೆ 6.83-ಇಂಚಿನ AMOLED ಡಿಸ್‌ಪ್ಲೆಯನ್ನು ಹೊಂದಿವೆ. ಈ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಕಾರ್ಯಕ್ಷಮತೆ ವಿಭಾಗದಲ್ಲಿ, Redmi Note 15 Pro+ 5G ಸ್ನಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 12GB ವರೆಗೆ RAM ಮತ್ತು 512GB ವರೆಗೆ ಆಂತರಿಕ ಮೆಮೊರಿಯೊಂದಿಗೆ ಜೋಡಿಸಲ್ಪಟ್ಟಿದೆ. Redmi Note 15 Pro 5G ಮೀಡಿಯಾ ಟೆಕ್ ಡೈಮೆನ್ಸಿಟಿ 7400-ಅಲ್ಟ್ರಾ SoC ಅನ್ನು ಹೊಂದಿದೆ, 8GB RAM ಮತ್ತು 256GB ವರೆಗೆ ಆನ್‌ಬೋರ್ಡ್ ಮೆಮೊರಿಯೊಂದಿಗೆ ಜೋಡಿಸಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಎರಡೂ ಮಾದರಿಗಳು ಒಂದೇ ರೀತಿಯ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. ಇದು OIS ಹೊಂದಿರುವ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. Pro ಮಾದರಿಯು 20-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದ್ದರೆ, Redmi Note 15 Pro+ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಬ್ಯಾಟರಿ ವಿಭಾಗದಲ್ಲಿ, Redmi Note 15 Pro+ 5G 100W ವೈರ್ಡ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 6,500mAh ಬ್ಯಾಟರಿ ಹೊಂದಿದೆ. ಆದರೆ Redmi Note 15 Pro 5G 45W ಫಾಸ್ಟ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ಚಾರ್ಜಿಂಗ್ ಬೆಂಬಲದೊಂದಿಗೆ 6,580mAh ಬ್ಯಾಟರಿಯನ್ನು ಹೊಂದಿದೆ.

ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಎರಡೂ ಫೋನ್‌ಗಳು ಆಂಡ್ರಾಯ್ಡ್ 15-ಆಧಾರಿತ ಹೈಪರ್‌ಓಎಸ್ 2 ನಲ್ಲಿ ಕಾರ್ಯನಿರ್ವಹಿಸುತ್ತವೆ. ಸಂಪರ್ಕ ಆಯ್ಕೆಗಳಲ್ಲಿ 5G, Wi-Fi 6E ವರೆಗೆ, ಬ್ಲೂಟೂತ್ 5.4, GPS, NFC ಮತ್ತು USB ಟೈಪ್-C ಸೇರಿವೆ. ಎರಡೂ ಮಾದರಿಗಳು Dolby Atmos ಮತ್ತು Hi-Res ಆಡಿಯೊ ಬೆಂಬಲದೊಂದಿಗೆ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿವೆ. ಎರಡೂ ಫೋನ್‌ಗಳು ಧೂಳು ಮತ್ತು ನೀರಿನ ಪ್ರವೇಶ ರಕ್ಷಣೆಗಾಗಿ IP66 + IP68 + IP69 + IP69K ರೇಟಿಂಗ್‌ಗಳನ್ನು ಹೊಂದಿವೆ. ಒಟ್ಟಾರೆಯಾಗಿ, ಶಕ್ತಿಶಾಲಿ 200MP ಕ್ಯಾಮೆರಾ, ದೊಡ್ಡ AMOLED ಡಿಸ್ಪ್ಲೇ, ಹೊಸ ತಲೆಮಾರಿನ ಪ್ರೊಸೆಸರ್ ಮತ್ತು ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ Redmi Note 15 Pro Series 5G ಸರಣಿಯುವ ಭಾರತೀಯ ಮಾರುಕಟ್ಟೆಯಲ್ಲಿ ಬಲವಾದ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಪ್ರೀಮಿಯಂ ಫೀಚರ್‌ಗಳನ್ನು ಕೈಗೆಟುಕುವ ಬೆಲೆಗೆ ಹುಡುಕುತ್ತಿರುವ ಬಳಕೆದಾರರಿಗೆ ಈ ಸರಣಿ ಉತ್ತಮ ಆಯ್ಕೆಯಾಗಬಹುದು.


Click it and Unblock the Notifications






