Redmi Note 15 Pro Plus ಲಾಂಚ್‌ಗೆ ಇನ್ನೆರಡೇ ದಿನ: ಬೆಲೆ ಲೀಕ್, ಆಫರ್ಸ್ ನೋಡಿ!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ Redmi ತನ್ನ ಬಹುನಿರೀಕ್ಷಿತ Redmi Note 15 Pro Series ಅನ್ನು ಜನವರಿ 29ರಂದು ಅಧಿಕೃತವಾಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಸರಣಿಯಲ್ಲಿ Redmi Note 15 Pro ಮತ್ತು Redmi Note 15 Pro Plus ಎಂಬ ಎರಡು ಮಾದರಿಗಳು ಇರಲಿದ್ದು, ಈಗಾಗಲೇ ಈ ಫೋನ್‌ಗಳು ಅಮೆಜಾನ್‌ನಲ್ಲಿ ₹1,999 ಟೋಕನ್ ಮೊತ್ತಕ್ಕೆ ಪ್ರೀ-ಬುಕಿಂಗ್‌ಗೆ ಲಭ್ಯವಾಗಿವೆ. ಇದೇ ವೇಳೆಗೆ ಜನಪ್ರಿಯ ಟಿಪ್‌ಸ್ಟಾರ್ ಓರ್ವರಿಂದ Redmi Note 15 Pro Plus ಸ್ಮಾರ್ಟ್‌ಫೋನ್‌ನ ಬೆಲೆ ಸೋರಿಕೆಯಾಗಿದೆ.!
Redmi Note 15 Pro Plus ಬೆಲೆ ಲೀಕ್: ಪ್ರೀಮಿಯಂ ಸೆಗ್ಮೆಂಟ್ ಗುರಿ
ಇತ್ತೀಚಿನ ಲೀಕ್‌ಗಳ ಪ್ರಕಾರ, Redmi Note 15 Pro Plus ಸ್ಮಾರ್ಟ್‌ಫೋನ್‌ನ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ ಸುಮಾರು ₹38,999 ಇರಬಹುದು. ಈ ಬೆಲೆ ಮಾಹಿತಿಯನ್ನು ವಿಶ್ವಾಸಾರ್ಹ ಟಿಪ್ಸ್ಟರ್ ಅಭಿಷೇಕ್ ಯಾದವ್ ಅವರು ಹಂಚಿಕೊಂಡಿದ್ದಾರೆ. ಇದಲ್ಲದೆ, 12GB RAM ಜೊತೆಗೆ 256GB ಮತ್ತು 512GB ಸ್ಟೋರೇಜ್ ಆಯ್ಕೆಗಳೂ ಲಭ್ಯವಾಗುವ ಸಾಧ್ಯತೆ ಇದೆ. ಈ ಬೆಲೆ ಶ್ರೇಣಿಯಿಂದ ನೋಡಿದರೆ, ಈ ಫೋನ್ ಮಧ್ಯಮ-ಪ್ರೀಮಿಯಂ ವಿಭಾಗವನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ.
ಪ್ರೀ-ಬುಕಿಂಗ್ ಗ್ರಾಹಕರಿಗೆ ಹೆಚ್ಚುವರಿ ಲಾಭ
ಈಗಾಗಲೇ ನಾವು ತಿಳಿದಿರುವಂತೆ, Redmi Note 15 Pro Plus ಸ್ಮಾರ್ಟ್‌ಫೋನ್ ಅನ್ನು ಪ್ರೀ-ಬುಕ್ ಮಾಡುವ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದೆ. ಪ್ರೀ-ಬುಕಿಂಗ್ ಮಾಡಿದವರಿಗೆ ಒಂದು ವರ್ಷದ ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಜೊತೆಗೆ Redmi Watch Move ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ. ಪ್ರೀ-ಬುಕ್ ಮಾಡುವ ಗ್ರಾಹಕರಿಗೆ Coffee Mocha, Carbon Black ಮತ್ತು Mirage Blue ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಫೋನ್ ಖರೀದಿಗೆ ಲಭ್ಯವಾಗಲಿದೆ.

Redmi Note 15 Pro Plus: ಪ್ರಮುಖ ವೈಶಿಷ್ಟ್ಯಗಳು
Redmi Note 15 Pro Plus ಸ್ಮಾರ್ಟ್‌ಫೋನ್‌ನಲ್ಲಿ 6.83 ಇಂಚಿನ CrystalRes AMOLED ಡಿಸ್ಪ್ಲೇ ನೀಡಲಾಗಿದೆ. ಇದು 1.5K ರೆಸಲ್ಯೂಶನ್ (2772 × 1280 ಪಿಕ್ಸೆಲ್) ಹಾಗೂ 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ.
200MP ಕ್ಯಾಮೆರಾ: ಫೋಟೋಗ್ರಫಿಗೆ ಹೊಸ ಮಟ್ಟ
ಕ್ಯಾಮೆರಾ ವಿಭಾಗದಲ್ಲಿ Redmi Note 15 Pro Plus ಅತ್ಯಂತ ಆಕರ್ಷಕವಾಗಿದೆ. ಫೋನ್‌ನಲ್ಲಿ 200MP ಪ್ರೈಮರಿ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 32MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ.
Snapdragon ಚಿಪ್‌ಸೆಟ್ ಮತ್ತು ದೊಡ್ಡ ಬ್ಯಾಟರಿ
ಕಾರ್ಯಕ್ಷಮತೆಯ ವಿಷಯದಲ್ಲಿ, Redmi Note 15 Pro Plus ಸ್ಮಾರ್ಟ್‌ಫೋನ್ Snapdragon 7s Gen 4 ಪ್ರೊಸೆಸರ್ ಅನ್ನು ಹೊಂದಿದೆ.ಜೊತೆಗೆ 6,500mAh ಸಾಮರ್ಥ್ಯದ ಬ್ಯಾಟರಿ ಮತ್ತು 100W HyperCharge ಫಾಸ್ಟ್ ಚಾರ್ಜಿಂಗ್ ಬೆಂಬಲ ಇರಲಿದೆ
ನೀರು ಮತ್ತು ಧೂಳಿಗೆ ಗಟ್ಟಿಯಾದ ರಕ್ಷಣೆ
Redmi Note 15 Pro Plus ಫೋನ್ IP66, IP68, IP69 ಮತ್ತು IP69K ರೇಟಿಂಗ್‌ಗಳನ್ನು ಹೊಂದಿದೆ. ಈ ಫೀಚರ್ ಈ ಬೆಲೆ ಶ್ರೇಣಿಯಲ್ಲಿ ಅಪರೂಪವೆಂದೇ ಹೇಳಬಹುದು.
Redmi Note 15 Pro Plus ಸ್ಮಾರ್ಟ್‌ಫೋನ್ ಕುರಿತ ಎಲ್ಲಾ ಅಧಿಕೃತ ವಿವರಗಳು ಜನವರಿ 29ರಂದು ಪ್ರಕಟವಾಗಲಿದೆ. ಈ ಸರಣಿಯಲ್ಲಿ ಬರಲಿರುವ Redmi Note 15 Pro ಮತ್ತು Redmi Note 15 Pro Plus ಎರಡೂ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ನಿರೀಕ್ಷೆ ಇದೆ. ಮಧ್ಯಮ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳಿಂದ ಈ ಸರಣಿಯು ವಿಭಿನ್ನವಾಗಿ ಕಾಣಿಸಬಹುದು. ಜನವರಿ 29 ರಂದು ಅಧಿಕೃತ ಘೋಷಣೆಗಾಗಿ ನಿಮ್ಮ ನೆಚ್ಚಿನ ಗಿಜ್‌ಬಾಟ್ ಕನ್ನಡದಲ್ಲಿ ಲೈವ್ ಆಗಿರಿ.


Click it and Unblock the Notifications






