Home
ಮೊಬೈಲ್

ಭಾರತಕ್ಕೆ Redmi Note 15 Pro ಸರಣಿ: ಲಾಂಚ್ ಡೇಟ್ ಫಿಕ್ಸ್, ಫೀಚರ್ಸ್ ಔಟ್!

ಶಿಯೋಮಿ ಸಬ್‌-ಬ್ರ್ಯಾಂಡ್ ರೆಡ್ಮಿ ತನ್ನ ಜನಪ್ರಿಯ Note ಸರಣಿಯ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಾದ Redmi Note 15 Pro ಸರಣಿಯನ್ನು ಭಾರತದಲ್ಲಿ ಜನವರಿ 29 ರಂದು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಬಗ್ಗೆ ರೆಡ್ಮಿ ಗುರುವಾರದಂದು ಅಧಿಕೃತ ಘೋಷಣೆ ಮಾಡಿದ್ದು, Redmi Note 15 Pr ಫೋನ್‌ಗಾಗಿ ವಿಶೇಷ ಮೈಕ್ರೋಸೈಟ್ ಕೂಡ ಈಗಾಗಲೇ ಲೈವ್ ಆಗಿದೆ. ಇದರ ಮೂಲಕ Redmi Note 15 Pro ಡಿಸೈನ್, ಪ್ರಮುಖ ಫೀಚರ್‌ಗಳು ಹಾಗೂ ನಿರೀಕ್ಷಿತ ಬೆಲೆ ಕುರಿತು ಹಲವು ಮಾಹಿತಿಗಳು ಬಹಿರಂಗವಾಗಿವೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

200MP MasterPixel ಕ್ಯಾಮೆರಾ ಹೈಲೈಟ್
Redmi Note 15 Pro ಸರಣಿಯ ಪ್ರಮುಖ ಆಕರ್ಷಣೆಯೆಂದರೆ 200 ಮೆಗಾಪಿಕ್ಸೆಲ್ 'MasterPixel' ಪ್ರೈಮರಿ ಕ್ಯಾಮೆರಾ. ಇದಕ್ಕೆ OIS (Optical Image Stabilisation), HDR ಹಾಗೂ AI ಇಮೇಜ್ ಎಂಜಿನ್ ಬೆಂಬಲ ದೊರೆಯುತ್ತದೆ. ಫೋನ್‌ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಆಯ್ಕೆಯೂ ಇರುವುದನ್ನು ಖಚಿತಪಡಿಸಲಾಗಿದೆ. ಇದರಿಂದ Redmi Note 15 Pro ಫೋನ್ ಫೋಟೋಗ್ರಫಿ ಮತ್ತು ಕಂಟೆಂಟ್ ಕ್ರಿಯೇಷನ್‌ಗೆ ಇದು ಉತ್ತಮ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

Redmi Note 15 Pro ಡಿಸೈನ್ ಮತ್ತು ಬಣ್ಣ ಆಯ್ಕೆಗಳು
ನಿರೀಕ್ಷೆಯಂತೆಯೇ, Redmi Note 15 Pro 5G ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಅವುಗಳನ್ನು ಚೌಕಾಕಾರದ (squircle) ಕ್ಯಾಮೆರಾ ಮೋಡ್ಯೂಲ್‌ನಲ್ಲಿ ಅಳವಡಿಸಲಾಗಿದೆ. ಪ್ರೀಮಿಯಂ ಲುಕ್ ನೀಡುವ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಕನಿಷ್ಠ ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಗೋಲ್ಡನ್ ಫ್ರೇಮ್ ಜೊತೆಗೆ ಬರುವ ಬ್ರೌನ್ ಶೇಡ್ ಮತ್ತು ಕ್ಲಾಸಿಕ್ ಲುಕ್‌ನ ಗ್ರೇ ಬಣ್ಣ ಬಳಕೆದಾರರನ್ನು ಆಕರ್ಷಿಸುವ ಸಾಧ್ಯತೆ ಇದೆ.

ಭಾರತಕ್ಕೆ Redmi Note 15 Pro ಸರಣಿ: ಲಾಂಚ್ ಡೇಟ್ ಫಿಕ್ಸ್, ಫೀಚರ್ಸ್ ಔಟ್!

Snapdragon 7s Gen 4 ಪ್ರೊಸೆಸರ್ ಪರ್ಫಾರ್ಮೆನ್ಸ್
Redmi Note 15 Pro ಸರಣಿಗೆ ಶಕ್ತಿ ನೀಡುವದು Qualcomm Snapdragon 7s Gen 4 ಚಿಪ್‌ಸೆಟ್. 4nm ತಂತ್ರಜ್ಞಾನದ ಮೇಲೆ ನಿರ್ಮಿತವಾದ ಈ ಪ್ರೊಸೆಸರ್ ಉತ್ತಮ ಪರ್ಫಾರ್ಮೆನ್ಸ್ ಹಾಗೂ ಬ್ಯಾಟರಿ ಎಫಿಷಿಯನ್ಸಿಗಾಗಿ ಹೆಸರುವಾಸಿಯಾಗಿದೆ. ಫೋನ್ ಗರಿಷ್ಠ 12GB RAM ಆಯ್ಕೆಯೊಂದಿಗೆ ಲಭ್ಯವಾಗಲಿದ್ದು, ತಾಪಮಾನ ನಿಯಂತ್ರಣಕ್ಕಾಗಿ IceLoop Cooling ಸಿಸ್ಟಮ್ ಕೂಡ ಸೇರಿಸಲಾಗಿದೆ.

ಡಿಸ್ಪ್ಲೇ ಮತ್ತು ರಕ್ಷಣಾ ವೈಶಿಷ್ಟ್ಯಗಳು
Redmi Note 15 Pro ಸರಣಿಯ ಡಿಸ್ಪ್ಲೇಗೆ Corning Gorilla Glass Victus 2 ರಕ್ಷಣೆಯನ್ನು ಒದಗಿಸಲಾಗಿದೆ. ಜೊತೆಗೆ IP66, IP68, IP69 ಮತ್ತು IP69K ರೇಟಿಂಗ್‌ಗಳ ಮೂಲಕ ಧೂಳು ಹಾಗೂ ನೀರಿನಿಂದ ಉನ್ನತ ಮಟ್ಟದ ರಕ್ಷಣೆ ನೀಡಲಾಗಿದೆ. ಕಂಪನಿಯ ಪ್ರಕಾರ, ಹೊಸ Redmi Titan ಸ್ಟ್ರಕ್ಚರ್ ಬಳಕೆಯಿಂದ ಫೋನ್‌ಗೆ ಉತ್ತಮ ಇಂಪ್ಯಾಕ್ಟ್ ರೆಸಿಸ್ಟನ್ಸ್ ಕೂಡ ದೊರೆಯುತ್ತದೆ.

ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್
Redmi Note 15 Pro ಸ್ಮಾರ್ಟ್‌ಫೋನ್‌ನಲ್ಲಿ 6,500mAh ಸಾಮರ್ಥ್ಯದ ಸಿಲಿಕಾನ್ ಕಾರ್ಬನ್ ಬ್ಯಾಟರಿ ಅಳವಡಿಸಲಾಗಿದೆ. ಇದು ಐದು ವರ್ಷಗಳವರೆಗೆ ದೀರ್ಘ ಆಯುಷ್ಯ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ 100W HyperCharge ಫಾಸ್ಟ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲವೂ ಲಭ್ಯವಿರಲಿದೆ.

ಜಾಗತಿಕ ಬೆಲೆ ಮತ್ತು ಫೀಚರ್ಸ್
ಜಾಗತಿಕ ಮಾರುಕಟ್ಟೆಯಲ್ಲಿ Redmi Note 15 Pro 5Gಗ ಫೋನ್ ಈಗಾಗಲೇ ಪರಿಚಯಗೊಂಡಿದ್ದು, ಇದು 6.83 ಇಂಚಿನ 1.5K AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 3,200 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದೆ. ಪೋಲ್ಯಾಂಡ್‌ನಲ್ಲಿ ಈ ಫೋನ್ ಡಿಸೆಂಬರ್ 2025ರಲ್ಲಿ PLN 1,699 (ಸುಮಾರು ₹42,000) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದಕ್ಕಿಂತಲೂ ಕಡಿಮೆ ಬೆಲೆಯನ್ನು ಭಾರತದಲ್ಲಿ ನಿರೀಕ್ಷಿಸಬಹುದು(ಅಂದಾಜು 30 ಸಾವಿರ ಆಸುಪಾಸು). ಇನ್ನು ಜಾಗತಿಕವಾಗಿ Note 15 Pro ಜೊತೆಗೆ Redmi Note 15 Pro+ 5G ಮಾದರಿಯೂ ಲಭ್ಯವಿದೆ.

ಒಟ್ಟಾರೆಯಾಗಿ, Redmi Note 15 Pro ಸರಣಿ ಪ್ರೀಮಿಯಂ ಡಿಸೈನ್, ಶಕ್ತಿಶಾಲಿ ಕ್ಯಾಮೆರಾ, ದೀರ್ಘ ಬ್ಯಾಟರಿ ಲೈಫ್ ಮತ್ತು ಫ್ಲ್ಯಾಗ್‌ಶಿಪ್ ಮಟ್ಟದ ಫೀಚರ್‌ಗಳೊಂದಿಗೆ ಭಾರತದಲ್ಲಿ ದೊಡ್ಡ ಗಮನ ಸೆಳೆಯುವ ನಿರೀಕ್ಷೆಯಿದೆ. ಜನವರಿ 29ರ ಅಧಿಕೃತ ಲಾಂಚ್ ನಂತರ ಇದರ ಭಾರತೀಯ ಬೆಲೆ, ಮಾರಾಟ ಮತ್ತು ಲಭ್ಯತೆ ಕುರಿತು ಇನ್ನಷ್ಟು ವಿವರಗಳು ಬಹಿರಂಗವಾಗಲಿವೆ. ಅಲ್ಲಿಯವರೆಗೂ, ಹೆಚ್ಚಿನ ಟೆಕ್‌ ಅಪ್‌ಡೇಟ್‌ಗಳಿಗಾಗಿ ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.

Best Mobiles in India

English summary
Redmi Note 15 Pro Series is set to launch in India on January 29, featuring a 200MP MasterPixel camera with OIS and 4K video support.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+