Home
ಮೊಬೈಲ್

ಭಾರತಕ್ಕೆ Redmi Note 15 Pro ಸರಣಿ: ಇದೇ ತಿಂಗಳು ಬಿಡುಗಡೆ ಸಾಧ್ಯತೆ!

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಇದೇ ತಿಂಗಳ ಆರಂಭದಲ್ಲಷ್ಟೇ ಬಿಡುಗಡೆಯಾಗಿರುವ Redmi Note 15 ಫೋನ್ ಭರ್ಜರಿ ಸದ್ದು ಮಾಡುತ್ತಿದೆ. ಇದೀಗ ಇದರ ಹೈ-ಎಂಡ್ ಮಾದರಿಗಳಾದ Redmi Note 15 Pro 5G ಮತ್ತು Redmi Note 15 Pro+ 5G ಎಂಬ ಎರಡು ಪ್ರೀಮಿಯಂ ಮಧ್ಯಮ ಬೆಲೆಯ ಹೊಸ ಸ್ಮಾರ್ಟ್‌ಫೋನ್‌ಗಳು ಪರಿಚಯವಾಗುವ ಸೂಚನೆ ದೊರೆಯಿದೆ. ವಿಶ್ವಾಸಾರ್ಹ ಮೂಲಗಳಿಂದ ಲಭ್ಯವಾದ ಮಾಹಿತಿಯ ಪ್ರಕಾರ, ಜನವರಿ 27ರಂದು Redmi Note 15 Pro ಸರಣಿಯು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗುವ ಸಾಧ್ಯತೆ ಇದೆ.

ಸ್ಮಾರ್ಟ್‌ಪ್ರಿಕ್ಸ್ ವರದಿಯಲ್ಲಿ, ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು Redmi Note 15 Pro ಮತ್ತು Redmi Note 15 Pro+ 5G ಅನ್ನು ಜನವರಿ 27 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. Redmi ಕಂಪೆನಿಯು ಈಗಾಗಲೇ ಈ ಸರಣಿಯ ಬಗ್ಗೆ ಟೀಸರ್ ಬಿಡುಗಡೆ ಮಾಡಿರುವುದರಿಂದ, ಬಿಡುಗಡೆ ದಿನಾಂಕವು ಹತ್ತಿರದಲ್ಲಿದೆ ಎಂಬ ನಿರೀಕ್ಷೆ ಗ್ರಾಹಕರಲ್ಲಿ ಹೆಚ್ಚಾಗಿದೆ. ಇವುಗಳಲ್ಲಿ Pro+ ಮಾದರಿಯು ಆಗಸ್ಟ್ 2025 ರಲ್ಲಿ Qualcomm ನಿಂದ ಬಿಡುಗಡೆಯಾದ Snapdragon 7s Gen 4 ಚಿಪ್‌ಸೆಟ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ.

ಇದೀಗ ದೊರೆತಿರುವ ಮಾಹಿತಿಯಂತೆ, Redmi Note 15 Pro+ 5G ಫೋನ್ 6.83 ಇಂಚಿನ 1.5K ಕರ್ವ್ಡ್ AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಕ್ಯಾಮೆರಾ ವಿಭಾಗದಲ್ಲಿ, 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್ ಅನ್ನು ಒಳಗೊಂಡಿರುವ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಪ್ಯಾಕ್ ಮಾಡಬಹುದು.ಸೆಲ್ಫಿಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ, 6,500mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಸಹ ಸಹ ಹೊಂದಿದೆ ಎಂದು ಹೇಳಲಾಗಿದೆ.

ಭಾರತಕ್ಕೆ Redmi Note 15 Pro ಸರಣಿ: ಇದೇ ತಿಂಗಳು ಬಿಡುಗಡೆ ಸಾಧ್ಯತೆ!

ಇನ್ನೊಂದೆಡೆ, Redmi Note 15 Pro 5G 6.83-ಇಂಚಿನ 1.5K ಫ್ಲಾಟ್ AMOLED ಪರದೆಯನ್ನು ಹೊಂದುವ ನಿರೀಕ್ಷೆಯಿದೆ. ಇದು MediaTek Dimensity 7400 Ultra ಪ್ರೊಸೆಸರ್‌ನಿಂದ ಚಾಲಿತವಾಗಬಹುದು. ಮುಂಬರುವ Pro ಮಾದರಿಯು Pro Plus ರೂಪಾಂತರದಂತೆಯೇ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ, ಆದರೆ 20-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಪಡೆಯುತ್ತದೆ ಎಂದು ಹೇಳಲಾಗಿದೆ. Redmi Note 15 Pro 5G ದೊಡ್ಡ 6,580mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಎಂದು ವರದಿಯಾಗಿದೆ, ಆದರೆ ಸ್ವಲ್ಪ ನಿಧಾನ ಚಾರ್ಜಿಂಗ್ ವೇಗ ಇರಬಹುದು.

ಸಾಫ್ಟ್‌ವೇರ್ ವಿಭಾಗದಲ್ಲಿ, Redmi Note 15 Pro ಮತ್ತು Redmi Note 15 Pro+ 5G ಎರಡೂ ಫೋನ್‌ಗಳು Android 15 ಆಧಾರಿತ HyperOS 2 ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. Redmi ನಾಲ್ಕು ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು ಆರು ವರ್ಷಗಳ ಭದ್ರತಾ ಅಪ್ಡೇಟ್ ಭರವಸೆ ನೀಡಬಹುದು ಎಂಬುದು ದೀರ್ಘಾವಧಿ ಬಳಕೆಯನ್ನು ಬಯಸುವ ಗ್ರಾಹಕರಿಗೆ ಪ್ಲಸ್ ಪಾಯಿಂಟ್ ಆಗಲಿದೆ .ಇನ್ನು ಇತ್ತೀಚೆಗೆ Redmi Note 15 Pro 5G ಫೋನ್ Geekbench ಲಿಸ್ಟಿಂಗ್‌ನಲ್ಲಿ ಕಾಣಿಸಿಕೊಂಡಿರುವುದು, ಭಾರತೀಯ ಲಾಂಚ್ ಇನ್ನೂ ಹತ್ತಿರದಲ್ಲಿದೆ ಎಂಬುದಕ್ಕೆ ಮತ್ತೊಂದು ಸೂಚನೆ.

ಒಟ್ಟಾರೆಯಾಗಿ, Redmi Note 15 Pro ಸೆರಣಿಯು ಭಾರತದಲ್ಲಿ ಮಧ್ಯಮ ಬೆಲೆ ವಿಭಾಗದಲ್ಲಿ ಹೊಸ ಸ್ಪರ್ಧೆ ಉಂಟುಮಾಡುವ ಸಾಧ್ಯತೆ ಇದೆ. ಗ್ರಾಹಕರ ನಿರೀಕ್ಷೆಯನ್ನು ಹೆಚ್ಚಿಸುವಂತಹ ಫೀಚರ್ಸ್‌ಗಳು ಈ ಹೊಸ ಫೋನ್‌ಗಳ ಗಮನಸೆಳೆಯುವಂತೆ ಮಾಡುತ್ತಿವೆ. ನಾವು ಈಗಾಗಲೇ ತಿಳಿದಿರಂತೆ, Redmi Note ಸರಣಿ ಪೋನ್‌ಗಳ ಬೆಲೆಗಳು ಸಾಮಾನ್ಯವಾಗಿ ಮಧ್ಯಮ ವಿಭಾಗದಲ್ಲಿ ಇರುತ್ತವೆ. ಜಾಗತಿಕ ಬೆಲೆಗಳನ್ನು ಆಧರಿಸಿ, ಭಾರತದಲ್ಲಿ ಈ ಫೋನ್‌ಗಳ ಬೆಲೆಗಳು ₹30,000 ರಿಂದ ₹35,000 ಇರಬಹುದು ಎಂಬುದು ನಮ್ಮ ಅಭಿಪ್ರಾಯ. ಆದರೆ, ಅಧಿಕೃತ ಮಾಹಿತಿಗಾಗಿ ನಾವು ಕಾದುನೋಡಬೇಕು.

Best Mobiles in India

English summary
Redmi is reportedly set to launch the Redmi Note 15 Pro and Note 15 Pro+ 5G in India on January 27. The upcoming premium mid-range smartphones are expected to feature upgraded performance, with the Pro+ variant likely powered by Qualcomm’s Snapdragon 7s Gen 4 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+