Home
ಮೊಬೈಲ್

10,000mAh ಬ್ಯಾಟರಿಯ ರೆಡ್‌ಮಿ ನೋಟ್ 17 ಪ್ರೊ ಲಾಂಚ್ ಡೇಟ್ ಫಿಕ್ಸ್? ಈ ಫೋನ್ ವಿಶೇಷತೆಗಳೇನು?

ಭಾರತದಲ್ಲಿ ರೆಡ್‌ಮಿ ನೋಟ್ 17 ಪ್ರೊ ಸರಣಿಯು ಸೆಪ್ಟೆಂಬರ್ 15 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಟೆಕ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಪ್ರಸಿದ್ಧ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಹಂಚಿಕೊಂಡ ಮಾಹಿತಿ ಬೆನ್ನಲ್ಲೇ, ಹಲವು ಟೆಕ್ ವರದಿಗಳು ಇದೇ ದಿನಾಂಕವನ್ನು ಬೆಂಬಲಿಸಿವೆ. ಶವೋಮಿ ಸಂಸ್ಥೆ ಇನ್ಮಷ್ಟೇ ಅಧಿಕೃತ ಆಹ್ವಾನ ಬಿಡುಗಡೆ ಮಾಡಬೇಕಿದ್ದು, ಜಾಗತಿಕ ಲಾಂಚ್ ಮುಗಿಯುತ್ತಿದ್ದಂತೆಯೇ ಭಾರತದಲ್ಲೂ ಟೀಸರ್‌ಗಳು ಹರಿದುಬರುವ ನಿರೀಕ್ಷೆಯಿದೆ.

ಜಾಗತಿಕ ವರದಿಗಳ ಪ್ರಕಾರ, ಈ ಸರಣಿಯ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ 6.83-ಇಂಚಿನ 1.5K AMOLED ಡಿಸ್‌ಪ್ಲೇ ಹಾಗೂ ದೃಢವಾದ ಬಿಲ್ಡ್ ಕ್ವಾಲಿಟಿ ಇರಲಿದೆ. ಪ್ರೊ ಮ್ಯಾಕ್ಸ್ ಮಾದರಿಯಲ್ಲಿ ಬೃಹತ್ 10,000mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಇರಲಿದ್ದರೆ, ಪ್ರೊ ವೇರಿಯೆಂಟ್‌ನಲ್ಲಿ 9,000mAh ಬ್ಯಾಟರಿ ಹಾಗೂ 67W ಚಾರ್ಜಿಂಗ್ ಬೆಂಬಲ ಸಿಗಲಿದೆ ಎನ್ನಲಾಗಿದೆ. ಈ ಬ್ಯಾಟರಿ ಸಾಮರ್ಥ್ಯವೇ ಪ್ರಸ್ತುತ ಭಾರತೀಯ ಗ್ರಾಹಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ರೆಡ್‌ಮಿ ನೋಟ್ 17 ಪ್ರೊ ಲಾಂಚ್ ಡೇಟ್ ಫಿಕ್ಸ್?

ರೆಡ್‌ಮಿ ನೋಟ್ 17 ಪ್ರೊ ಲಾಂಚ್ ಡೇಟ್ ಮತ್ತು ವೈಶಿಷ್ಟ್ಯಗಳು

ಪ್ರೊಸೆಸರ್ ವಿಷಯಕ್ಕೆ ಬಂದರೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ಆರಂಭಿಕ ವರದಿಗಳ ಪ್ರಕಾರ, ಪ್ರೊ ಮ್ಯಾಕ್ಸ್ ಮಾದರಿಯಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7500 ಚಿಪ್‌ಸೆಟ್ ಮತ್ತು 200 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇರಲಿದೆ ಎನ್ನಲಾಗಿತ್ತು. ಆದರೆ ಇತ್ತೀಚಿನ ಲೀಕ್ಸ್ ಪ್ರಕಾರ, ಕನಿಷ್ಠ ಒಂದು ಪ್ರೊ ವೇರಿಯೆಂಟ್‌ನಲ್ಲಾದರೂ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 5 ಪ್ರೊಸೆಸರ್ ನೀಡುವ ಸಾಧ್ಯತೆಯಿದೆ. ಇದು ನಿಜವಾದರೆ, ಗ್ರಾಹಕರು ಬೆಸ್ಟ್ ಎಐ ಕ್ಯಾಮೆರಾ ಫೀಚರ್ಸ್ ಮತ್ತು ಸ್ಮೂತ್ ಗೇಮಿಂಗ್ ಅನುಭವವನ್ನು ನಿರೀಕ್ಷಿಸಬಹುದು.

ರೆಡ್‌ಮಿ ನೋಟ್ 17 ಪ್ರೊ ಮ್ಯಾಕ್ಸ್ ಬ್ಯಾಟರಿ ಮತ್ತು ಸರ್ಟಿಫಿಕೇಶನ್ ವಿವರ

ಭಾರತೀಯ ಮಾರುಕಟ್ಟೆಗೆ ಈ ಫೋನ್‌ಗಳು ಶೀಘ್ರದಲ್ಲೇ ಬರಲಿವೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳು ಸಿಕ್ಕಿವೆ. ಭಾರತದ BIS ವೆಬ್‌ಸೈಟ್‌ನಲ್ಲಿ ನೋಟ್ 17 (ಮಾಡಲ್ 2607DRA18I) ಕಾಣಿಸಿಕೊಂಡಿದ್ದರೆ, ಥೈಲ್ಯಾಂಡ್‌ನ NBTC ವೆಬ್‌ಸೈಟ್‌ನಲ್ಲಿ ಪ್ರೊ ಮ್ಯಾಕ್ಸ್ (ಮಾಡಲ್ 2609FRA74G) ಹೆಸರು ಖಚಿತವಾಗಿದೆ. ಅಲ್ಲದೆ, GCF ಸರ್ಟಿಫಿಕೇಷನ್‌ನಲ್ಲೂ ಗ್ಲೋಬಲ್ ನೋಟ್ 17 ಪಟ್ಟಿಯಾಗಿದೆ. ಈಗಾಗಲೇ ಅಮೆಜಾನ್‌ನಲ್ಲಿ ನೋಟ್ 17 ಮೈಕ್ರೋಸೈಟ್ ಲೈವ್ ಆಗಿದ್ದು, ಪ್ರೊ ಮತ್ತು ಪ್ರೊ ಮ್ಯಾಕ್ಸ್ ಪೇಜ್‌ಗಳು ಇನ್ನಷ್ಟೇ ಲೈವ್ ಆಗಬೇಕಿದೆ.

ಭಾರತದಲ್ಲಿ ರೆಡ್‌ಮಿ ನೋಟ್ 17 ಪ್ರೊ ಅಂದಾಜು ಬೆಲೆ

ವೇರಿಯೆಂಟ್ಅಂದಾಜು ಬೆಲೆಪ್ರಮುಖ ಫೀಚರ್ಸ್ವಿವರಗಳು
ನೋಟ್ 17 ಪ್ರೊ₹30,000 ಕ್ಕಿಂತ ಕಡಿಮೆ6.83-ಇಂಚಿನ 1.5K, 9,000mAh, 67Wಬೆಲೆಯಲ್ಲಿ ₹5,000–₹8,000 ಹೆಚ್ಚಳವಾಗುವ ಸಾಧ್ಯತೆ.
ಪ್ರೊ ಮ್ಯಾಕ್ಸ್₹30,000 ಕ್ಕಿಂತ ಹೆಚ್ಚು10,000mAh, 100W, ದೊಡ್ಡ ಕ್ಯಾಮೆರಾ ಸೆಟಪ್ಗ್ಲೋಬಲ್ ಪೇಜ್ ಪ್ರಕಾರ ಬಾಕ್ಸ್‌ನಲ್ಲಿ ಚಾರ್ಜರ್ ಇರುವುದಿಲ್ಲ.

ಭಾರತೀಯ ಗ್ರಾಹಕರು ಗಮನಿಸಬೇಕಾದ ಎರಡು ಪ್ರಮುಖ ವಿಷಯಗಳೆಂದರೆ - ಬಾಕ್ಸ್‌ನಲ್ಲಿ ಸಿಗುವ ಅಕ್ಸೆಸರೀಸ್ ಮತ್ತು SAR ಮೌಲ್ಯ. 100W ಸಾಮರ್ಥ್ಯದ ಪ್ರೊ ಮ್ಯಾಕ್ಸ್ ಗ್ಲೋಬಲ್ ವೇರಿಯೆಂಟ್ ಬಾಕ್ಸ್‌ನಲ್ಲಿ ಅಡಾಪ್ಟರ್ ಇರುವುದಿಲ್ಲ ಎಂದು ಶವೋಮಿ ತಿಳಿಸಿದೆ. ಆದರೆ ಭಾರತದ ಬೇಸ್ ನೋಟ್ 17 ಮಾಡೆಲ್ ಬಾಕ್ಸ್‌ನಲ್ಲಿ 45W ಚಾರ್ಜರ್ ಇರಲಿದೆ. ಮಾರುಕಟ್ಟೆಯಲ್ಲಿ ರಿಯಲ್‌ಮಿ P4s, ಮೋಟೋ G ಮ್ಯಾಕ್ಸ್ ಮತ್ತು ಗ್ಯಾಲಕ್ಸಿ F70 ಪ್ರೊ ಫೋನ್‌ಗಳಿಗೆ ಪೈಪೋಟಿ ನೀಡಲು ಆರಂಭಿಕ ಆಫರ್‌ಗಳು ಹಾಗೂ ಬ್ಯಾಂಕ್ ಕ್ಯಾಶ್‌ಬ್ಯಾಕ್‌ಗಳನ್ನು ನೀಡುವ ನಿರೀಕ್ಷೆಯಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+