Subscribe to Gizbot

ಶುರುವಾಯ್ತು ಶಿಯೋಮಿ ರೆಡ್‌ಮಿ ನೋಟ್ 5 ಸದ್ದು: ಬಜೆಟ್ ಬೆಲೆಗೆ ಬೊಂಬಾಟ್ ಫೋನ್...!!

Written By:

ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಲಾಂಚ್ ನಂತರದ ಸಂದರ್ಭದಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳು ಜನಪ್ರಿಯತೆಯನ್ನು ಕಳೆದುಕೊಳ್ಳಲಿವೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ಮಾತು ಅಷ್ಟು ನಿಜವಾಗಲಿಲ್ಲ.

ಶುರುವಾಯ್ತು ಶಿಯೋಮಿ ರೆಡ್‌ಮಿ ನೋಟ್ 5 ಸದ್ದು: ಬಜೆಟ್ ಬೆಲೆಗೆ ಬೊಂಬಾಟ್ ಫೋನ್...!!

ಈ ಮಾತಿಗೆ ಉತ್ತರವಾಗಿ ಶಿಯೋಮಿ ಮತ್ತೊಂದು ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲು ತಯಾರಿ ನಡೆಸಿದೆ. ಈಗಾಗಲೇ ಶಿಯೋಮಿಯ ರೆಡ್ ಮಿ ನೋಟ್ 4 ಸ್ಮಾರ್ಟ್‌ಫೋನ್ ಮೂರು ಆವೃತ್ತಿಯಲ್ಲಿ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಹಲವು ತಿಂಗಳು ಕಳೆದಿದ್ದರೂ ಇನ್ನು ಬೇಡಿಕೆಯನ್ನು ಉಳಿಸಿಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್ ಮಿ ನೋಟ್ 5 ಮತ್ತು ನೋಟ್ 5A:

ರೆಡ್ ಮಿ ನೋಟ್ 5 ಮತ್ತು ನೋಟ್ 5A:

ಇದೇ ಮಾದರಿಯಲ್ಲಿ ಶಿಯೋಮಿ ರೆಡ್ ಮಿ ನೋಟ್ 5 ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಸ್ಮಾರ್ಟ್‌ಫೋನ್ ಗಳನ್ನು ಪ್ಯಾಕ್ ಮಾಡಿ ಇಟ್ಟಿದೆ. ರೆಡ್ ಮಿ ನೋಟ್ 5A ಸಹ ಮಾರುಕಟ್ಟೆಗೆ ಬರಲಿದೆ ಎನ್ನುವ ಮಾಹಿತಿ ದೊರೆತಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನು ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 3GB RAM/ 32GB ಇಂಟರ್ನಲ್ ಮೆಮೊರಿಯೊಂದಿಗೆ ಒಂದು ಮಾದರಿ ಸುಮಾರು ಬೆಲೆ ರೂ. 10,999, 4GB RAM/ 64GB ಇಂಟರ್ನಲ್ ಮೆಮೊರಿಯೊಂದಿಗೆ ಇನ್ನೊಂದು ಮಾದರಿ ಬೆಲೆ ರೂ. 11,999 ಅಸುಪಾಸಿನಲ್ಲಿರಲಿದೆ.

ವಿಡಿಯೋ, ಗೇಮಿಂಗ್ ಗಾಗಿ ದೊಡ್ಡ ಸ್ಕ್ರಿನ್:

ವಿಡಿಯೋ, ಗೇಮಿಂಗ್ ಗಾಗಿ ದೊಡ್ಡ ಸ್ಕ್ರಿನ್:

ಮಾರುಕಟ್ಟೆಯಲ್ಲಿ ಸದ್ಯ ದೊಡ್ಡ ಸ್ಕ್ರಿನ್ ಮೊಬೈಲ್ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

ವೇಗದ ಕಾರ್ಯಚರಣೆ:

ವೇಗದ ಕಾರ್ಯಚರಣೆ:

ವೇಗದ ಕಾರ್ಯಚರಣೆಗಾಗಿ ಇದರಲ್ಲಿ 64 ಬಿಟ್ ಸ್ನಾಪ್ ಡ್ರಾಗನ್ 630 ಪ್ರೋಸೆಸರ್ ಅಳವಡಿಸಲಾಗಿದೆ. ಇದರೊಂದಿಗೆ ಆಡ್ರಿನೋ 508 GPU ಸಹ ಇರಲಿದ್ದು, ಗ್ರಾಫಿಕ್ಸ್ ಗೇಮ್ ಆಡಲು ಸಹಾಯ ಮಾಡಲಿದೆ.

ಆಂಡ್ರಾಯ್ಡ್ 7.1.1 ಮತ್ತು MIUI 9 ಇರಲಿದೆ:

ಆಂಡ್ರಾಯ್ಡ್ 7.1.1 ಮತ್ತು MIUI 9 ಇರಲಿದೆ:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1.1 ಮತ್ತು MIUI 9ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟಾಪ್ ಆಂಡ್ರಾಯ್ಡ್ ಮತ್ತು MIUI ಆವೃತ್ತಿಯಾಗಿದೆ. ಬಳಕೆದಾರಿಗೆ ಹೊಸ ಅನುಭವನ್ನು ಇದು ನೀಡಲಿದೆ.

ಉತ್ತಮ ಫೋಟೋ ತೆಗೆಯಬಹುದು:

ಉತ್ತಮ ಫೋಟೋ ತೆಗೆಯಬಹುದು:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದ್ದು, ಉತ್ತಮ ವಿಡಿಯೋ ಮತ್ತು ಫೋಟೋ ತೆಗೆಯಲು ಇದು ಹೇಳಿ ಮಾಡಿಸಿದಂತೆ ಮುಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ಇನ್ನು ಅನೇಕ ಆಯ್ಕೆಗಳಿದೆ:

ಇನ್ನು ಅನೇಕ ಆಯ್ಕೆಗಳಿದೆ:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ ವೇಗವಾಗಿ ಚಾರ್ಜ್ ಆಗಲು ಕ್ವೀಕ್ ಚಾರ್ಜರ್ 4.0, 4G VoLTE ಹಾಗೂ USB 3.1 ಅನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Redmi Note 5 will feature a 5.5 inch full HD display with 1920 x 1080 pixel resolution. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot