Home
ಮೊಬೈಲ್

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಖರೀದಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿರುವ ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ, ಭಾರೀ ಬೇಡಿಕೆಯನ್ನು ಗಳಿಕೊಂಡಿದೆ. ನೋಟ್ 5ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಕೊಳ್ಳಲು ಅಭಿಮಾನಿಗಳು ಮುಗಿಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶಿಯೋಮಿ ಹೊಸದೊಂದು ಪ್ಲಾನ್ ಮಾಡಿದೆ. ಫ್ಲಾಷ್ ಸೇಲ್ ಅನ್ನು ಕೊನೆಗಳಿಸಿ ನಾರ್ಮಲ್ ಸೇಲ್ ಆರಂಭಿಸಲಿದೆ.

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಖರೀದಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ..!
Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!

ವಿಶೇಷತೆ ಮತ್ತು ಗುಣಮಟ್ಟದಿಂದ ಅಭಿಮಾನಿಗಳ ಮನಗೆದ್ದಿರುವ ರೆಡ್‌ಮಿ ನೋಟ್ 5 ಪ್ರೊ ಫ್ಲಾಷ್ ಸೇಲಿನಲ್ಲಿ ಕ್ಷಣ ಮಾತ್ರದಲ್ಲಿಯೇ ಖಾಲಿಯಾಗುತಿತ್ತು. ಈ ಹಿನ್ನಲೆಯಲ್ಲಿ ಶಿಯೋಮಿ ತನ್ನ ಅಭಿಮಾನಿಗಳಿಗಾಗಿ ಫ್ಲಾಷ್ ಸೇಲ್ ಇಲ್ಲದೇ ಸಾಮಾನ್ಯ ಫೋನ್ ಮಾದರಿಯಲ್ಲಿ ಖರೀದಿಸಲು ಏಪ್ರಿಲ್ 13ರಿಂದ ಅನುವು ಮಾಡಿಕೊಡಲಿದೆ. ಏಪ್ರಿಲ್ 13 ಮದ್ಯಾಹ್ನ 12ಕ್ಕೆ ಪ್ರೀ ಬುಕ್ಕಿಂಗ್ ಆರಂಭಿಸಲಿದೆ. ಇಲ್ಲಿ ಗ್ರಾಹಕರು ಸುಲಭವಾಗಿ ಬುಕ್ ಮಾಡಬಹುದಾಗಿದೆ. ಇದು ಮಿ.ಕಾಮ್ ನಲ್ಲಿ ಮಾತ್ರವೇ ಲಭ್ಯವಿರಲಿದೆ.

ರೆಡ್‌ಮಿ ನೋಟ್ 5 ಪ್ರೊನಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ವೇಗವನ್ನು ಮೀರಿಸಲಿರುವ ಸ್ನಾಪ್‌ಡ್ರಾಗನ್ 636 ಪ್ರೋಸೆಸರ್ ನೊಂದಿಗೆ 6GB RAM ಅನ್ನು ಕಾಣಬಹುದಾಗಿದ್ದು, LPDDR4X RAM ಇದಾಗಿದೆ. ಇದಲ್ಲದೇ 4GB RAM ನೊಂದಿಗೂ ರೆಡ್‌ಮಿ ನೋಟ್ 5 ಪ್ರೊ ದೊರೆಯಲಿದೆ.

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಖರೀದಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ..!

ರೆಡ್‌ಮಿ ನೋಟ್ 5 ಪ್ರೊ ಹಿಂಭಾಗದಲ್ಲಿ ಸೋನಿ 12MP +5MP ಹಾರಿಜಂಟಲ್ ಕ್ಯಾಮೆರಾ ಸೆಟಪ್ ಫೋನಿನಲ್ಲಿ ಕಾಣಹುದಾಗಿದ್ದು, AI (ಕೃತಕ ಬುದ್ದಿ) ಸಹಾಯದಿಂದ ಫೋಟೋಗಳನ್ನು ತೆಗೆಯಲಿದೆ. ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗಳ ಮಾದರಿಯಲ್ಲಿ ಫೋಟೋವನ್ನು ಕ್ಲಿಕ್ ಮಾಡಬಹುದಾಗಿದೆ.

ಇದೇ ಮೊದಲ ಬಾರಿಗೆ ಕೃತಕ ಬುದ್ದಿಮತ್ತೆ ಸಹಾಯದಿಂದ ಫೋಟೋಗಳನ್ನು ತೆಗೆಯಲು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ಶಕ್ತವಾಗಿದೆ. ಇದಲ್ಲದೇ ಶಿಯೋಮಿಯಲ್ಲಿ ಇದೇ ಮೊದಲ ಬಾರಿಗೆ ಫೇಸ್ ಅನ್ ಲಾಕ್ ಅನ್ನು ನೀಡಲಾಗಿದ್ದು, ಮಾರುಕಟ್ಟೆಯಲ್ಲಿ ಇದು ಹೊಸ ದಾಖಲೆಯನ್ನು ನಿರ್ಮಿಸಲಿದೆ.

ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯಲಿರುವ ಈ ಸ್ಮಾರ್ಟ್‌ಫೋನ್, 6GB/64GB ಆವೃತ್ತಿಯ ಬೆಲೆ ರೂ. 16,999 ಆಗಿದ್ದು, 4GB/64GB ಆವೃತ್ತಿಯೂ ರೂ,13,999ಕ್ಕೆ ಲಭ್ಯವಿದೆ.

Best Mobiles in India

English summary
Redmi Note 5 Pro Be Available Without Flash Sale on April 13 via Mi.com. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+