ರೆಡ್‌ಮಿ ನೋಟ್ 5 ಪ್ರೊ: ವಿಶ್ವದ ಬೆಸ್ಟ್ ಫೋನ್, ಬಜೆಟ್ ಬೆಲೆಯಲ್ಲಿ -ವಿಶೇಷತೆಗಳಿಗೆ ಮಿತಿ ಇಲ್ಲ...!

|

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಹೊಸ ಸಾಧ್ಯತೆಯನ್ನು ಮಾಡಿ ತೊರಿಸಿದ್ದು, ಇಂದು ಮೊದಲ ಬಾರಿಗೆ ಭಾರತದಲ್ಲಿ ಮತ್ತು ಭಾರತಕ್ಕಾಗಿಯೇ ಸ್ಮಾರ್ಟ್‌ ಫೋನ್ ಅನ್ನು ಲಾಂಚ್ ಮಾಡಿದೆ. ರೆಡ್‌ಮಿ ನೋಟ್ 5 ಪ್ರೊ ಸದ್ಯದ ಮಾರುಕಟ್ಟೆಯಲ್ಲಿರುವ ನೋಟ್ ಸರಣಿಯ ಟಾಪ್ ಎಂಡ್ ಫೋನ್ ಎಂದರೆ ತಪ್ಪಾಗುವುದಿಲ್ಲ. ಮಾರುಕಟ್ಟೆಯಲ್ಲಿರುವ ಟಾಪ್ ಎಂಡ್ ಫೋನ್‌ ಗಳ ವಿಶೇಷತೆ ಮತ್ತು ಗುಣಮಟ್ಟವನ್ನು ಈ ಫೋನ್ ಹೊಂದಿದೆ ಎನ್ನಲಾಗಿದೆ.

ವಿಶ್ವದ ಬೆಸ್ಟ್ ಫೋನ್, ಬಜೆಟ್ ಬೆಲೆಯಲ್ಲಿ -ವಿಶೇಷತೆಗಳಿಗೆ ಮಿತಿ ಇಲ್ಲ...!

ಇದಲ್ಲದೇ ರೆಡ್‌ಮಿ ನೋಟ್ 5 ಪ್ರೊ ನೋಡಲು ಸುಂದರವಾಗಿದ್ದು, ಉತ್ತಮವಾಗಿದೆ. ಇದಲ್ಲದೇ ಪ್ರಿಮಿಯಮ್ ಡಿಸೈನ್ ಹೊಂದಿದ್ದು, ಹಿಂಭಾಗದಲ್ಲಿ ಐಫೋನ್ ‍‍X ಮಾದರಿಯಲ್ಲಿ ಕಾಣಿಸುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿಯೇ ಮೊದಲು:

ಭಾರತದಲ್ಲಿಯೇ ಮೊದಲು:

ಶಿಯೋಮಿ ಭಾರತದಿಂದ ಹೆಚ್ಚಿನ ಪಡೆದುಕೊಂಡಿದ್ದು, ಈ ಕಾರಣಕ್ಕಾಗಿಯೇ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿಯೇ ಮೊದಲು ಲಾಂಚ್ ಮಾಡಿದ್ದು, ನಂತರದಲ್ಲಿ ಬೇರೆ ದೇಶಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ.

ಕ್ವಾಲ್ಕಮ್  ಸ್ನಾಪ್‌ಡ್ರಾಗನ್ 636:

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636:

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636 ಪ್ರೋಸೆಸರ್ ಹೊಂದಿರುವ ವಿಶ್ವದಲ್ಲಿ ಮೊದಲ ಸ್ಮಾರ್ಟ್‌ಫೋನ್ ರೆಡ್‌ಮಿ ನೋಟ್ 5 ಪ್ರೊ ಆಗಲಿದ್ದು, ಮಾರುಕಟ್ಟೆಯಲ್ಲಿ ಈ ಪ್ರೋಸೆಸರ್ ಭಾರಿ ಸಂಚಲವನ್ನು ಮೂಡಿಸಲಿದೆ ಎನ್ನಲಾಗಿದೆ. ಇದಾದ ನಂತರದಲ್ಲಿ ಬೇರೆ ಸ್ಮಾರ್ಟ್‌ಫೋನ್‌ಗಳು ಈ ಪ್ರೋಸೆಸರ್ ಅನ್ನು ಅಳವಡಿಸಿಕೊಳ್ಳಲಿವೆ.

 ಕರಿಯೋ CPU

ಕರಿಯೋ CPU

ಇದಲ್ಲದೇ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ ಕರಿಯೋ 260 CPU ಅನ್ನು ಒಳಗೊಂಡಿದ್ದು, ಕ್ವಾಡ್ ಕೋರ್ ಇದಾಗಿದ್ದು, ಅತೀ ಹೆಚ್ಚಿನ ವೇಗದ ಕಾರ್ಯಚರಣೆಯನ್ನ ಹೊಂದಿದೆ. ಎಲ್ಲಾ ಟಾಸ್ಕ್ ಗಳನ್ನು ಒಂದೇ ಸಂದರ್ಭದಲ್ಲಿ ಕಾಣಿಸಿಕೊಳ್ಳಲಿದೆ.

ಅಂಟಂಟು ಬೆಂಚ್ ಮಾರ್ಕ್

ಅಂಟಂಟು ಬೆಂಚ್ ಮಾರ್ಕ್

ಇದಲ್ಲದೇ ಅಂಟಂಟು ಬೆಂಚ್ ಮಾರ್ಕ್ ನಲ್ಲಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ 109692 ಅಂಕವನ್ನು ಪಡೆದುಕೊಂಡಿದ್ದು, ಹಿಂದಿನ ಫೋನ್ ಗಿಂತಲೂ ಶೇ.62 ರಷ್ಟು ಹೆಚ್ಚು ವೇಗವಾಗಿ ಕಾರ್ಯವನ್ನು ಮಾಡಲಿದೆ ಎನ್ನಲಾಗಿದೆ.

6GB RAM:

6GB RAM:

ಇದಲ್ಲದೇ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ 6GB RAM ಅನ್ನು ಕಾಣಬಹುದಾಗಿದ್ದು, LPDDR4X RAM ಇದಾಗಿದೆ. ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗಳಲ್ಲಿ ಕಾಣಿಸಿಕೊಳ್ಳುವ RAM ಇದಾಗಿದೆ ಎನ್ನಲಾಗಿದೆ. ಟಾಪ್ ಎಂಡ್ ಸ್ಮಾರ್ಟ್ ಫೋನ್ ವೇಗವನ್ನು ಮೀರಿಸಲಿದೆ.

ಬೆಸ್ಟ್ ಡ್ಯುಯಲ್ ಕ್ಯಾಮೆರಾ:

ಬೆಸ್ಟ್ ಡ್ಯುಯಲ್ ಕ್ಯಾಮೆರಾ:

ಸೋನಿ 12MP +5MP ಹಾರಿಜಂಟಲ್ ಕ್ಯಾಮೆರಾ ಸೆಟಪ್ ಅನ್ನು ಈ ಫೋನಿನಲ್ಲಿ ಕಾಣಹುದಾಗಿದ್ದು, AI (ಕೃತಕ ಬುದ್ದಿ) ಸಹಾಯದಿಂದ ಫೋಟೋಗಳನ್ನು ತೆಗೆಯಲಿದ್ದು, ಉತ್ತಮ ಪೋಟ್ರೆಟ್ ಗಳನ್ನು ತೆಗೆಯಬಹುದಾಗಿದೆ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗಳ ಮಾದರಿಯಲ್ಲಿ ಫೋಟೋವನ್ನು ಕ್ಲಿಕ್ ಮಾಡಲಿದೆ.

ಗುಣಮಟ್ಟದ ಫೋಟೋಗಳನ್ನು ಕ್ಲಿಕ್ ಮಾಡಬಹುದು:

ಗುಣಮಟ್ಟದ ಫೋಟೋಗಳನ್ನು ಕ್ಲಿಕ್ ಮಾಡಬಹುದು:

ಇದೇ ಮೊದಲ ಬಾರಿಗೆ ಕೃತಕ ಬುದ್ದಿಮತ್ತೆ ಸಹಾಯದಿಂದ ಫೋಟೋಗಳನ್ನು ತೆಗೆಯಲು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ಶಕ್ತವಾಗಿದೆ ಎನ್ನಲಾಗಿದೆ. ಇದರಲ್ಲಿ ತೆಗೆದ ಫೋಟೋಗಳು ಕ್ವಾಲಿಟಿಯನ್ನು ಹೊಂದಿದೆ. ಉತ್ತಮ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಇದಕ್ಕಾಗಿ EIS ಟೆಕ್ನಾಲಜಿಯನ್ನು ಹೊಂದಿದೆ.

ಉತ್ತಮ ಫ್ರಂಟ್ ಕ್ಯಾಮೆರಾ:

ಉತ್ತಮ ಫ್ರಂಟ್ ಕ್ಯಾಮೆರಾ:

ಸೋನಿ 20MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ ಉತ್ತಮ ಪೋಟರೆಟ್ ಗಳನ್ನು ತೆಗೆಯಬಹುದಾಗಿದ್ದು, ಬೊಕ್ಕೆ ಎಫೆಕ್ಟ್ ಅನ್ನು ನೀಡಲಿದೆ ಎನ್ನಲಾಗಿದೆ. ಇದಕ್ಕಾಗಿಯೂ ಕೃತಕ ಬುದ್ದಿ ಮತ್ತೆಯನ್ನು ಬಳಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ಐಫೋನ್ X ಮಾದರಿ

ಐಫೋನ್ X ಮಾದರಿ

ಐಫೋನ್ X ಮಾದರಿಯಲ್ಲಿ ಫೋಟೋಗಳನ್ನು ಎನ್ನಲಾಗಿದೆ. ಗೂಗಲ್ ಪಿಕ್ಸಲ್ ಫೋನ್ ಗಿಂತಲೂ ಉತ್ತಮ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೇ LED ಸೆಲ್ಪೀ ಲೈಟ್ ಅನ್ನು ಕಾಣಬಹುದಾಗಿದೆ.

ಬ್ಯೂಟಿ ಮೋಡ್:

ಬ್ಯೂಟಿ ಮೋಡ್:

ಇದಲ್ಲದೇ ಇದೇ ಮೊದಲ ಬಾರಿಗೆ ಶಿಯೋಮಿ ಬ್ಯೂಟಿ ಮೂಡ್ ಅನ್ನು ರೆಡ್‌ಮಿ ನೋಟ್ 5 ಪ್ರೊ ನಲ್ಲಿ ಅಳವಡಿಸಿದ್ದು, ಮಾರುಕಟ್ಟೆಯಲ್ಲಿಯೇ ಅತ್ಯಂತ ಸುಂದರವಾಗಲಿದೆ. ಅಲ್ಲದೇ ಇದು ನಿಮ್ಮ ಚಿತ್ರಗಳನ್ನು ಇನ್ನುಷ್ಟು ಸುಂದರಗೊಳಿಸಿದೆ.

ಫೇಸ್ ಅನ್ ಲಾಕ್:

ಫೇಸ್ ಅನ್ ಲಾಕ್:

ಶಿಯೋಮಿಯಲ್ಲಿ ಇದೇ ಮೊದಲ ಬಾರಿಗೆ ಫೇಸ್ ಅನ್ ಲಾಕ್ ಅನ್ನು ನೀಡಲಾಗಿದ್ದು, ಇದು ಆಂಡ್ರಾಯ್ಡ್ ಫೋನ್ ನಲ್ಲಿಯೇ ಬೆಸ್ಟ್ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಇದು ಹೊಸ ದಾಖಲೆಯನ್ನು ನಿರ್ಮಿಸಲಿದೆ.

ಬೆಲೆ..?

ಬೆಲೆ..?

6GB/64GB ಆವೃತ್ತಿಯ ಬೆಲೆಯೂ ರೂ. 16,999ಕ್ಕೆ ದೊರೆಯುತ್ತಿದ್ದು ಮತ್ತು 4GB/64GB ಆವೃತ್ತಿಯೂ ರೂ,13,999ಕ್ಕೆ ಲಭ್ಯವಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಈ ಸ್ಮಾರ್ಟ್‌ಫೋನ್ ಸೃಷ್ಟಿಸಲಿದೆ.

Best Mobiles in India

English summary
Redmi Note 5 Pro Launched in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X