Subscribe to Gizbot

ಮೊದಲ ಬಾರಿಗೆ ಸ್ಮಾರ್ಟ್‌ಫೋನಿನೊಂದಿಗೆ ಇಯರ್ ಫೋನ್ ಕೊಟ್ಟ ಶಿಯೋಮಿ: ಯಾವ ಫೋನ್‌.?

Written By:

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಇತ್ತೀಚೆಗೆ ಬಿಡುಗಡೆ ಮಾಡಿರುವ ರೆಡ್‌ಮಿ ನೋಟ್ 5 ಪ್ರೋ ಭಾರೀ ಬೇಡಿಕೆಯನ್ನ ಸೃಷ್ಠಿಸಿಕೊಂಡಿದ್ದು, ಅಭಿಮಾನಿಗಳು ಮಿ ಹೋಮ್ ಮತ್ತು ಫ್ಲಾಷ್ ಸೇಲಿನಲ್ಲಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಖರೀದಿಸಲು ಮುಗಿಬಿಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಲಾಭವನ್ನು ಮಾಡಿಕೊಡಲು ಶಿಯೋಮಿ ಮುಂದಾಗಿದೆ.

ಮೊದಲ ಬಾರಿಗೆ ಸ್ಮಾರ್ಟ್‌ಫೋನಿನೊಂದಿಗೆ ಇಯರ್ ಫೋನ್ ಕೊಟ್ಟ ಶಿಯೋಮಿ: ಯಾವ ಫೋನ್‌

ಸದ್ಯ ನಡೆಯುತ್ತಿರುವ ಶಿಯೋಮಿ ಮಿ ಫ್ಯಾನ್ ಫೆಸ್ಟಿವಲ್‌ನಲ್ಲಿ ರೆಡ್‌ಮಿ ನೋಟ್ 5 ಪ್ರೋ ಖರೀದಿಸುವವರಿಗೆ ಶಿಯೋಮಿ ಉಚಿತವಾಗಿ ಇಯರ್ ಫೋನ್ ವೊಂದನ್ನು ನೀಡಲು ಮುಂದಾಗಿದೆ. ಹಾಗಾಗಿ ಏಪ್ರಿಲ್ 5 ಮತ್ತು 6 ರಂದು 'ಮಿ ಫ್ಯಾನ್ ಫೆಸ್ಟಿವಲ್' ಆಯೋಜನೆಯಾಗಿದ್ದು, ಇಲ್ಲಿ ಮಾತ್ರವೇ ಈ ಆಫರ್ ದೊರೆಯಲಿದೆ. ಇದಲ್ಲದೇ ಶಿಯೋಮಿಯ ಹಲವು ಡಿವೈಸ್‌ಗಳ ಮೇಲೆ ರಿಯಾಯಿತಿಯನ್ನು ಘೋಷಿಸಲಾಗಿದೆ.

ಶಿಯೋಮಿ ರೆಡ್ ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ಖರೀದಿಗೆ ಶಿಯೋಮಿ 399 ರೂಪಾಯಿ ಬೆಲೆ ಹೊಂದಿರುವ ಹೆಡ್‌ಫೋನ್ ಅನ್ನು ಉಚಿತವಾಗಿ ನೀಡುತ್ತಿದ್ದು, ಇದೇ ಮೊದಲ ದಾರಿ ಶಿಯೋಮಿ ತನ್ನ ಸ್ಮಾರ್ಟ್‌ಫೋನ್ ಜೊತೆಗೆ ಹೆಡ್‌ಫೋನ್ ಅನ್ನು ಉಚಿತವಾಗಿ ನೀಡುತ್ತಿರುವುದು ಎನ್ನಲಾಗಿದೆ.

ಮೊದಲ ಬಾರಿಗೆ ಸ್ಮಾರ್ಟ್‌ಫೋನಿನೊಂದಿಗೆ ಇಯರ್ ಫೋನ್ ಕೊಟ್ಟ ಶಿಯೋಮಿ: ಯಾವ ಫೋನ್‌

5.99 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 636 ಪ್ರೋಸೆಸರ್, 6GB RAM, ಡ್ಯುಯಲ್ ಕ್ಯಾಮೆರಾ, ಫೇಸ್‌ಅನ್ ಲಾಕ್ ನಂತಹ ಹೈ ಎಂಡ್ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ರೂ,16,999ಕ್ಕೆ ಮಾರಾಟವಾಗಲಿದ್ದು, ಇದೇ ಮಾದರಿಯಲ್ಲಿ 4GB RAM ಮತ್ತು 64GB ಮೆಮೊರಿಯ ಫೋನ್ ರೂ.13,999ಕ್ಕೆ ಲಭ್ಯವಿದೆ.

ಶಿಯೋಮಿ 20MP ಸೆಲ್ಫಿ ಕ್ಯಾಮೆರಾವನ್ನು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ ನೀಡಿದೆ. ಕೃತಕ ಬುದ್ದಿ ಮತ್ತೆಯ ಮೂಲಕ ಕಾರ್ಯನಿರ್ವಹಿಸಲಿರುವ ಈ ಸೆಲ್ಫಿ ಕ್ಯಾಮೆರಾ ಬ್ಯೂಟಿಫೈ 4.0 ಮೋಡ್ ಆಯ್ಕೆಯನ್ನು ಸಹ ಹೊಂದಿರುವುದರಿಂದ ಅತ್ಯುತ್ತಮ ಸೆಲ್ಫಿ ಗಳನ್ನು ಕ್ಲಿಕಿಸಲು ಉತ್ತಮವಾಗಿದೆ.

English summary
Redmi Note 5 Pro With Free Mi Earphones, Discounts on Mobile Phones, and Other Xiaomi Sale Deals. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot