Subscribe to Gizbot

ಫ್ಲಾಷ್‌ ಸೇಲ್‌ನಲ್ಲಿ ನೋಟ್‌ 5 ಮತ್ತು ನೋಟ್ 5 ಪ್ರೋ: ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಹೊಸದೊಂದು ಆಫರ್..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಿರುವ ಶಿಯೋಮಿ, ಹೊಸ ಹೊಸ ಸ್ಮಾರ್ಟ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಆನ್‌ಲೈನಿನಲ್ಲಿ ಫ್ಲಾಷ್ ಸೇಲ್‌ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಮೂಲಕ ಅಭಿಮಾನಿಗಳನ್ನು ತನ್ನ ಫೋನ್‌ ಬಿಡುಗಡೆಗೆ ಕಾಯುವಂತೆ ಮಾಡುತ್ತದೆ. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ರೆಡ್‌ಮಿ ನೋಟ್‌ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ ಫೋನ್‌ಗಳು ಇಂದು ಮತ್ತೊಮ್ಮೆ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಫ್ಲಾಷ್‌ ಸೇಲ್‌ನಲ್ಲಿ ನೋಟ್‌ 5 ಮತ್ತು ನೋಟ್ 5 ಪ್ರೋ:

ಮಿ.ಕಾಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರೆಡ್‌ಮಿ ನೋಟ್‌ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ ಫೋನ್‌ಗಳು ಇಂದು ಮಧ್ಯಾಹ್ನ 12ಕ್ಕೆ ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕೆಲವೇ ನಿಮಿಷಗಳಲ್ಲಿ ಮಾರಾಟವಾಗುವ ಸಾಧ್ಯತೆ ಅಧಿಕವಾಗಿದೆ. ದೊಡ್ಡ ಡಿಸ್‌ಪ್ಲೇ, ದೊಡ್ಡ ಬ್ಯಾಟರಿಯಿಂದಲೇ ಗಮನ ಸೆಳೆದಿರುವ ಈ ಸ್ಮಾರ್ಟ್‌ಫೋನ್ ಗಳ ಬೇಡಿಕೆ ನಿರೀಕ್ಷೆಯಂತೆ ಹೆಚ್ಚಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್‌ಮಿ ನೋಟ್ 5:

ರೆಡ್‌ಮಿ ನೋಟ್ 5:

5.99 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್, 4000mAh ಬ್ಯಾಟರಿ, 3GB RAM ಹಾಗೂ 12 MP ಹಿಂಬದಿ ಕ್ಯಾಮೆರಾದಂತಹ ಆಯ್ಕೆಗಳನ್ನು ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ರೂ. 9,999ಕ್ಕೆ ಮಾರಾಟವಾಗಲಿದ್ದು, ಇನ್ನೊಂದು ಮಾದರಿಯಲ್ಲಿ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದ್ದು, ರೂ. 11,999ಕ್ಕೆ ಮಾರಾಟವಾಗಲಿದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ರೆಡ್‌ಮಿ ನೋಟ್ 5 ಪ್ರೋ:

ರೆಡ್‌ಮಿ ನೋಟ್ 5 ಪ್ರೋ:

5.99 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 636 ಪ್ರೋಸೆಸರ್, 6GB RAM, ಡ್ಯುಯಲ್ ಕ್ಯಾಮೆರಾ, ಫೇಸ್‌ಅನ್ ಲಾಕ್ ನಂತಹ ಹೈ ಎಂಡ್ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ರೂ,16,999ಕ್ಕೆ ಮಾರಾಟವಾಗಲಿದ್ದು, ಇದೇ ಮಾದರಿಯಲ್ಲಿ 4GB RAM ಮತ್ತು 64GB ಮೆಮೊರಿಯ ಫೋನ್ ರೂ.13,999ಕ್ಕೆ ಲಭ್ಯವಿದೆ.

ಆಫರ್:

ಆಫರ್:

ಫ್ಲಿಪ್‌ಕಾರ್ಟ್‌ನಲ್ಲಿ ರೆಡ್‌ಮಿ ನೋಟ್‌ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ ಫೋನ್‌ಗಳು ಕೊಳ್ಳುವವರಿಗೆ ನೋ ಕಾಸ್ಟ್ EMI ಆಯ್ಕೆಯನ್ನು ನೀಡಲಾಗಿದ್ದು, HDFC ಕಾರ್ಡ್‌ ಬಳಕೆದಾರರಿಗೆ ಮಾತ್ರವೇ ಈ ಆಫರ್ ದೊರೆಯಲಿದೆ. ಇದಲ್ಲದೇ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 5 ಪ್ರೋ ಬೇಡಿಕೆ ಹೆಚ್ಚಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Redmi Note 5, Redmi Note 5 Pro Today in 12pm Flash Sale. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot