ಇನ್ನೆರಡು ದಿನದಲ್ಲಿ ಬೆಚ್ಚಿಬೀಳಲಿದೆ ಭಾರತದ ಮೊಬೈಲ್ ಮಾರುಕಟ್ಟೆ!..ಏಕೆ ಗೊತ್ತಾ?

|

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಇನ್ನಿಲ್ಲದಂತೆ ಮೋಡಿ ಮಾಡುತ್ತಿರುವ ಚೀನಾದ ಮೊಬೈಲ್ ಕಂಪೆನಿ ಶಿಯೋಮಿ ಭಾರತೀಯರಿಗೆ ಮತ್ತೊಂದು ಭರ್ಜರಿ ಸುದ್ದಿಯನ್ನು ನೀಡಿದೆ. ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನ ಮುಂದಿನ ಆವೃತ್ತಿಯಾದ ಶಿಯೋಮಿ 'ರೆಡ್‌ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್ ಅನ್ನು ಇದೇ ತಿಂಗಳ 22ನೇ ತಾರೀಖಿನಂದು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಇತ್ತೀಚಿಗಷ್ಟೇ ಥೈಲ್ಯಾಂಡ್‌ನಲ್ಲಿ ಬಿಡುಗಡೆಯಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ಶಿಯೋಮಿ 'ರೆಡ್‌ಮಿ ನೋಟ್ 6 ಪ್ರೊ' ಈ ವಾರದಲ್ಲೇ ಭಾರತೀಯರ ಕೈಸೇರುತ್ತಿದೆ ಎಂದು ಶಿಯೋಮಿ ಹೇಳಿದೆ. ನವೆಂಬರ್ 22ನೇ ತಾರೀಖಿನಂದು ಭಾರತದಲ್ಲಿ ಶಿಯೋಮಿ 'ರೆಡ್‌ಮಿ ನೋಟ್ 6 ಪ್ರೊ' ಲಾಂಚ್ ಆಗಲಿದ್ದು, ನವೆಂಬರ್ 23ನೇ ತಾರೀಖಿನಂದು ಸ್ಮಾರ್ಟ್‌ಫೋನ್ ಫ್ಲಾಶ್‌ಸೇಲ್ ಮಾರಾಟಕ್ಕೆ ಬರುತ್ತಿದೆ ಎಂದು ಕಂಪೆನಿ ತಿಳಿಸಿದೆ.

ಇನ್ನೆರಡು ದಿನದಲ್ಲಿ ಬೆಚ್ಚಿಬೀಳಲಿದೆ ಭಾರತದ ಮೊಬೈಲ್ ಮಾರುಕಟ್ಟೆ!..ಏಕೆ ಗೊತ್ತಾ?

ಒಟ್ಟು ನಾಲ್ಕು ಕ್ಯಾಮೆರಾಗಳು, ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್, 6.26-ಇಂಚಿನ ಪೂರ್ಣ ಹೆಚ್‌ಡಿ+ ಐಪಿಎಸ್ ಎಲ್ಸಿಡಿ ಡಿಸ್‌ಪ್ಲೇ ಯಂತಹ ಫೀಚರ್ಸ್ ಹೊತ್ತಿ ಬಂದಿರುವ 'ರೆಡ್ ಮಿ ನೋಟ್ 6 ಪ್ರೊ' ಇನ್ನೆರಡು ದಿನದಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವುದು ಖಾತ್ರಿಯಾಗಿದೆ. ಹಾಗಾದರೆ, ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿರುವ ಈ ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಸಂಚಲನ ಮೂಡಿಸುವುದು ಖಾತ್ರಿ

ಸಂಚಲನ ಮೂಡಿಸುವುದು ಖಾತ್ರಿ

'ರೆಡ್ ಮಿ ನೋಟ್ 6 ಪ್ರೊ' ನಾಲ್ಕು ಕ್ಯಾಮೆರಾಗಳನ್ನು ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಈ ಬಾರಿಯೂ ಶಿಯೋಮಿಯ ಸ್ಮಾರ್ಟ್‌ಪೋನ್ ಒಂದು ಅತ್ಯಂತ ಕಡಿಮೆ ಬೆಲೆಗೆ ಅತ್ಯದ್ಬುತ ಫೀಚರ್ಸ್ ಹೊಂದಿರುವ ಏಕೈಕ ಸ್ಮಾರ್ಟ್‌ಪೋನ್ ಆಗಿ ಹೊರಹೊಮ್ಮಿದೆ. ಸ್ಮಾರ್ಟ್‌ಫೋನಿನಲ್ಲಿರುವ ಫೀಚರ್ಸ್ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವುದು ಖಾತ್ರಿಯಾಗಿದೆ.

ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

ಆಪಲ್ ಮಾದರಿಯ ಡಿಸ್‌ಪ್ಲೇ ನೋಚ್, ನಾಲ್ಕು ಕ್ಯಾಮೆರಾಗಳು ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಪೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡು ಹೊಡೆಯುತ್ತದೆ. ಸ್ಮಾರ್ಟ್‌ಫೋನಿನ ನಾಲ್ಕು ಬದಿಗಳಲ್ಲಿ ರೌಂಡೆಡ್ ಕಾರ್ನರ್ ಎಡ್ಜ್ ವಿನ್ಯಾಸವಿರುವುದು ಸ್ಮಾರ್ಟ್‌ಫೋನಿನ ಅಂದವನ್ನು ಹೆಚ್ಚಿಸಿದೆ.

ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

ಮೊದಲೇ ಹೇಳಿದಂತೆ, 6.26-ಇಂಚಿನ ಪೂರ್ಣ ಹೆಚ್‌ಡಿ+ ಐಪಿಎಸ್ ಎಲ್ಸಿಡಿ (1080*2280p) ಡಿಸ್‌ಪ್ಲೇಯನ್ನು 'ರೆಡ್ ಮಿ ನೋಟ್ 6 ಪ್ರೊ'ನಲ್ಲಿ ಅಳವಡಿಸಲಾಗಿದೆ. 86 ಪ್ರತಿಶತ ಸ್ಕ್ರೀನ್-ಟು-ಬಾಡಿ ಸಾಮರ್ಥ್ಯದ ಡಿಸ್‌ಪ್ಲೇ 19:9 ಆಕಾರ ಅನುಪಾತದಲ್ಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಮಲ್ಟಿಮೀಡಿಯಾ ಪ್ರಿಯರಿಗೆ ಡಿಸ್‌ಪ್ಲೇ ಹೇಳಿ ಮಾಡಿಸಿದಂತಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಈ ಬಾರಿ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿರುವ ಶಿಯೋಮಿ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ 'ರೆಡ್ ಮಿ ನೋಟ್ 5 ಪ್ರೊ'ನಲ್ಲಿ ಅಳವಡಿಸಲಾಗಿದ್ದ ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್ ಅನ್ನೇ ನೀಡಲಾಗಿದೆ. ಜೊತೆಗೆ ಅಡ್ರಿನೋ 509 ಜಿಪಿಯು ಮತ್ತು 4 ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್‌ನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಡ್ಯುಯಲ್ ಸೆಲ್ಫಿ ಕ್ಯಾಮೆರಾ!

ಡ್ಯುಯಲ್ ಸೆಲ್ಫಿ ಕ್ಯಾಮೆರಾ!

'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನ ಪ್ರಮುಖ ಆಕರ್ಷಣೆಯೇ ನಾಲ್ಕು ಕ್ಯಾಮೆರಾಗಳಲಾಗಿದ್ದು, 2MP + 5MP ಹಿಂಬದಿಯ ಕ್ಯಾಮರಾ, 20MP + 2MP ಸೆಲ್ಫಿ ಕ್ಯಾಮರಾಗಳನ್ನು ನೀಡಲಾಗಿದೆ. ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್, 1.4-ಮೈಕ್ರಾನ್ ಪಿಕ್ಸೆಲ್‌ಗಳು, ಎಐ ಭಾವಚಿತ್ರ 2.0 ಮತ್ತು ಎಐ ಡೈನಾಮಿಕ್ ಬೊಕೆ ವೈಶಿಷ್ಟ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಬಂದಿದೆ.

ಬಿಗ್ ಬ್ಯಾಟರಿ ಲಭ್ಯ.!

ಬಿಗ್ ಬ್ಯಾಟರಿ ಲಭ್ಯ.!

ಏಕೈಕ ಪೂರ್ಣ ಚಾರ್ಜರ್‌ನಲ್ಲಿ 2 ದಿನಗಳವರೆಗೆ ಚಾರ್ಜಿಂಗ್ ಉಳಿಯುವ ಸಾಮರ್ಥ್ಯದ 4,000 mAh ಬ್ಯಾಟರಿಯನ್ನು 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ನೀಡಿರುವ ಬಗ್ಗೆ ಶಿಯೋಮಿ ಹೇಳಿದೆ. ಆದರೆ, ಕ್ವಿಕ್ ಚಾರ್ಜಿಂಗ್ ತಂತ್ರಜ್ಞಾನದ ಬಗ್ಗೆ ಶಿಯೋಮಿ ಈ ವರೆಗೂ ಯಾವುದೇ ಮಾಹಿತಿ ನೀಡಿಲ್ಲದಿರುವುದರಿಂದ, ನಾವು ಈ ಬಗ್ಗೆ ಎದುರುನೋಡುತ್ತಿದ್ದೇವೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಇಷ್ಟೆಲ್ಲಾ ಮುಖ್ಯ ಫೀಚರ್ಸ್‌ಗಳನ್ನು ಹೊಂದಿರುವ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್, 4-ಇನ್ -1 ಸೂಪರ್ ಪಿಕ್ಸೆಲ್ ಮತ್ತು ಎಐ ಫೇಸ್ ಅನ್ಲಾಕ್ ಸಾಮರ್ಥ್ಯಗಳನ್ನು ಹೊಂದಿರುವುದು ವಿಶೇಷತೆಯಾಗಿದೆ. ಈ ಸಾಧನವು ಶಿಯೋಮಿ MIUI 10 ಜೊತೆಗೆ ಆಂಡ್ರಾಯ್ಡ್ 8.1 (ಓರಿಯೋ) ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಣೆ ನೀಡಲಿದೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

ಕಳೆದ ಬಾರಿ ರೆಡ್‌ಮಿ ನೋಟ್ 5 ಪ್ರೋ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿ ಆಶ್ಚರ್ಯ ಮುಡಿಸಿದ್ದ ಶಿಯೋಮಿ, ಈ ಬಾರಿ 'ರೆಡ್ ಮಿ ನೋಟ್ 6 ಪ್ರೊ' ಫೋನ್ ಅನ್ನು ಥೈಲ್ಯಾಂಡ್‌ನಲ್ಲಿ ಮೊದಲಿಗೆ ಬಿಡುಗಡೆ ಮಾಡಿದೆ. ಆ ದೇಶದಲ್ಲಿ 6990THB ಬೆಲೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ಭಾರತದಲ್ಲಿ ಅಂದಾಜು 15,700 ರೂಪಾಯಿಗಳು ಮಾತ್ರ.!

ಭಾರತದಲ್ಲಿ ಶಿಯೋಮಿಯೇ ನಂ.1 ಬ್ರ್ಯಾಂಡ್!..ಒಪ್ಪೊ ಹಿಂದಿಕ್ಕಿದ ಮೈಕ್ರೋಮ್ಯಾಕ್ಸ್!!

ಭಾರತದಲ್ಲಿ ಶಿಯೋಮಿಯೇ ನಂ.1 ಬ್ರ್ಯಾಂಡ್!..ಒಪ್ಪೊ ಹಿಂದಿಕ್ಕಿದ ಮೈಕ್ರೋಮ್ಯಾಕ್ಸ್!!

ಭಾರತದ ಮೊಬೈಲ್ ಮಾರುಕಟ್ಟೆಲ್ಲಿ ತ್ರಿವಿಕ್ರಮನಂತೆ ಮೆರೆಯುತ್ತಿರುವ ಶಿಯೋಮಿ ಮೊಬೈಲ್ ಕಂಪೆನಿ ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿಯೂ ಸಹ ನಂ.1 ಮೊಬೈಲ್ ಕಂಪೆನಿಯಾಗಿ ಮುಂದುವರೆದಿದೆ. 2018 ನೇ ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷೆಯಂತೆಯೇ ಶಿಯೋಮಿ ಕಂಪೆನಿ ಮೊದಲ ಸ್ಥಾನದಲ್ಲಿದ್ದರೆ, ಸ್ಯಾಮ್‌ಸಂಗ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಈ ವರ್ಷದ ಮೂರನೇ ತ್ರೈಮಾಸಿಕದ ಭಾರತದ ಮೊಬೈಲ್ ಮಾರುಕಟ್ಟೆಯ ರಿಪೋರ್ಟ್ ಅನ್ನು ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೋರೇಷನ್(ಐಡಿಸಿ) ಬಿಡುಗಡೆ ಮಾಡಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ ಹಲವಾರು ಬದಲಾವಣೆಗಳಾಗಿವೆ. ಮಾರುಕಟ್ಟೆಯಲ್ಲಿ ಸೊರಗಿಹೋಗಿದ್ದ ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪೆನಿ ಒಪ್ಪೊ ಕಂಪೆನಿಯನ್ನು ಮೀರಿಸಿ ಆಶ್ಚರ್ಯ ಮೂಡಿಸಿದೆ.

ಮೊದಲ 5 ಮೊಬೈಲ್ ಕಂಪೆನಿಗಳು ಸೇರಿ ಶೇ. 57.4 ರಷ್ಟು ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದರೆ, ಇತರೆ ಕಂಪೆನಿಗಳೆಲ್ಲವೂ ಸೇರಿ ಒಟ್ಟು 42.6 ರಷ್ಟು ಮಾರುಕಟ್ಟೆಯನ್ನು ಹೊಂದಿವೆ. ಹಾಗಾದರೆ, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಟಾಪ್ 5 ಮೊಬೈಲ್ ಕಂಪೆನಿಗಳ ಪಾಲು ಎಷ್ಟೆಷ್ಟು ಎಂಬುದನ್ನು ಮುಂದೆ ನೋಡಿ.

ಮೊದಲ ಸ್ಥಾನದಲ್ಲಿ ಶಿಯೋಮಿ !

ಮೊದಲ ಸ್ಥಾನದಲ್ಲಿ ಶಿಯೋಮಿ !

2018ರ 3ನೇ ತ್ರೈಮಾಸಿಕದಲ್ಲಿ ಶಿಯೋಮಿ ಶೇ.27ರಷ್ಟು ಷೇರನ್ನು ಹೊಂದುವುದರ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಅಧಿಪತ್ಯ ಸಾಧಿಸಿದೆ. 2018 ನೇ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಒಟ್ಟು 11.7 ಮಿಲಿಯನ್ ಮೊಬೈಲ್‌ಗಳನ್ನು ಮಾರಾಟ ಮಾಡಿ ಗಮನಸೆಳೆದಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಮೊಬೈಲ್‌ಗಳು ಆನ್‌ಲೈನ್ ಮೂಲಕವೇ ಮಾರಾಟವಾಗಿದೆ ಎಂದು ರಿಪೋರ್ಟ್ ಹೇಳಿದೆ.

ಎರಡನೇ ಸ್ಥಾನಕ್ಕೆ ಸ್ಯಾಮಸಂಗ್

ಎರಡನೇ ಸ್ಥಾನಕ್ಕೆ ಸ್ಯಾಮಸಂಗ್

2018ರ 3ನೇ ತ್ರೈಮಾಸಿಕದಲ್ಲಿ ನಿರೀಕ್ಷೆಯಂತೆಯೇ ಸ್ಯಾಮ್‌ಸಂಗ್ ಕಂಪೆನಿ 2ನೇ ಸ್ಥಾನವನ್ನು ಗಳಿಸಿಕೊಂಡಿದೆ. ಈ ತ್ರೈಮಾಸಿಕದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸ್ಯಾಮ್‌ಸಂಗ್ ಕಂಪೆನಿ ಶೇ.22.6ರಷ್ಟು ಮಾರುಕಟ್ಟೆಯನ್ನು ಗಳಿಸಿಕೊಂಡಿದೆ. 2018ರ 3ನೇ ತ್ರೈಮಾಸಿಕದಲ್ಲಿ ಒಟ್ಟು 9.6 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಸ್ಯಾಮ್‌ಸಂಗ್ ಮಾರಾಟ ಮಾಡಿದೆ.

ಮೂರನೇ ಸ್ಥಾನದಲ್ಲಿ ವಿವೋ

ಮೂರನೇ ಸ್ಥಾನದಲ್ಲಿ ವಿವೋ

ಶಿಯೋಮಿ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ನಂತರದ ಸ್ಥಾನವನ್ನು ವಿವೋ ಕಂಪೆನಿ ಪಡೆದುಕೊಂಡಿದೆ. 2018ರ ತ್ರೈಮಾಸಿಕ ವರದಿಯ ಪ್ರಕಾರ, ದೇಶದ ಮೊಬೈಲ್ ಮಾರುಕಟ್ಟೆಯ ಶೇ.10.6 ರಷ್ಟು ಪಾಲನ್ನು ವಿವೋ ಪಡೆದುಕೊಂಡಿದೆ. ಐಪಿಎಲ್ ಪಂದ್ಯಾವಳಿಗಳಿಗೆ ಪ್ರಾಯೋಜಕತ್ವವನ್ನು ಪಡೆಯುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಫಲವಾಗಿರುವ ವಿವೋ ಕಂಪೆನಿ, ಈ ತ್ರೈಮಾಸಿಕದಲ್ಲಿ ಒಟ್ಟು 4.5 ಮಿಲಿಯನ್ ಮೊಬೈಲ್‌ಗಳನ್ನು ಮಾರಾಟ ಮಾಡಿದೆ.

ಮೈಕ್ರೋಮ್ಯಾಕ್ಸ್‌ಗೆ 4ನೇ ಸ್ಥಾನ!

ಮೈಕ್ರೋಮ್ಯಾಕ್ಸ್‌ಗೆ 4ನೇ ಸ್ಥಾನ!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸೊರಗಿಹೋಗಿದ್ದ ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪೆನಿ ಈ ಬಾರಿ ಪುಟಿದೆದ್ದಿದೆ. ಕಳೆದ ತ್ರೈ ಮಾಸಿಕಗಳಲ್ಲಿ 7 ರಿಂದ 8 ನೇ ಸ್ಥಾನಕ್ಕೆ ಜಾರಿದ್ದ ಮೈಕ್ರೋಮ್ಯಾಕ್ಸ್ ಈ ಬಾರಿ ಒಪ್ಪೊ ಕಂಪೆನಿಯನ್ನು ಹಿಂದಿಕ್ಕಿ 4 ನೇ ಸ್ಥಾನ ಪಡೆದು ಆಶ್ಚರ್ಯ ಮೂಡಿಸಿದೆ. 2018ರ ತ್ರೈಮಾಸಿಕ ವರದಿ ಪ್ರಕಾರ ಒಟ್ಟು 2.9 ಮಿಲಿಯನ್‌ ಮೊಬೈಲ್‌ಗಳನ್ನು ಮಾರಿ ಮೈಕ್ರೋಮ್ಯಾಕ್ಸ್ ಶೇ.6.9ರಷ್ಟು ಮಾರುಕಟ್ಟೆಯನ್ನು ಹೊಂದಿದೆ.

5ನೇ ಸ್ಥಾನಕ್ಕೆ ಜಾರಿದ ಒಪ್ಪೊ!

5ನೇ ಸ್ಥಾನಕ್ಕೆ ಜಾರಿದ ಒಪ್ಪೊ!

ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪೆನಿಯ ಆರ್ಭಟದಿಂದಾಗಿ ಈ ತ್ರೈಮಾಸಿಕದಲ್ಲಿ ಒಪ್ಪೋ ಮೊಬೈಲ್ ಕಂಪೆನಿ 5ನೇ ಸ್ಥಾನಕ್ಕೆ ಜಾರಿದೆ. . 2018ರ ತ್ರೈಮಾಸಿಕ ವರದಿ ಪ್ರಕಾರ ಒಟ್ಟು 2.9 ಮಿಲಿಯನ್‌ ಮೊಬೈಲ್‌ಗಳನ್ನು ಮಾರಿರುವ ಒಪ್ಪೊ, ಶೇ. 6.7ರಷ್ಟು ಮೊಬೈಲ್ ಮಾರುಕಟ್ಟೆಯನ್ನು ಗಳಿಸುವ ಮೂಲಕ ಭಾರತದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಎಡವಿದೆ.ಒಪ್ಪೋ-ಎಕ್ಸ್ ಅವತರಣೆಯ ಸಿದ್ಧತೆಯಲ್ಲಿ ತೊಡಗಿದ್ದರಿಂದ ಒಪ್ಪೊ ಮಾರುಕಟ್ಟೆಯನ್ನು ಕಳೆದುಕೊಂಡಿದೆ ಎಂದು ಐಡಿಸಿ ಅಭಿಪ್ರಾಯಪಟ್ಟಿದೆ.

Most Read Articles
Best Mobiles in India

English summary
In simple words: the Redmi Note 6 Pro screen is a polished version of what you get in the Redmi Note 5 Pro. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more