Just In
Don't Miss
- News
Traffic Violation: ಎರಡೇ ದಿನದಲ್ಲಿ 13.8 ಕೋಟಿ ರೂ.ದಂಡ ಸಂಗ್ರಹ, ತೆರವಾದ ಪ್ರಕರಣಗಳ ವಿವರ ಇಲ್ಲಿದೆ
- Movies
ಒಂದೂವರೆ ವರ್ಷ ಕಥೆ ಬರೆದ್ರೂ ಚಿರಂಜೀವಿಗೆ ಸಿನಿಮಾ ಮಾಡೋಕಾಗಿಲ್ಲ:ತೆಲುಗು ಫ್ಯಾನ್ಸ್ ಉಪ್ಪಿ ಕೊಟ್ಟ ಮಾತೇನು?
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Sports
ಮತ್ತೆ ವಿವಾದದ ಸುಳಿಯಲ್ಲಿ ವಿನೋದ್ ಕಾಂಬ್ಳಿ: ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೆಡ್ಮಿ ನೋಟ್ 6 ಪ್ರೋ ಬೆಲೆ ಇಳಿಕೆ- 6ಜಿಬಿ ಮೆಮೊರಿ ವೇರಿಯಂಟ್ ಕೂಡ ಇದೀಗ ಅಗ್ಗ
ಶಿಯೋಮಿಯ ಸಹ ಬ್ರ್ಯಾಂಡ್ ಆಗಿರುವ ರೆಡ್ಮಿ ಭಾರತೀಯ ಮಾರುಕಟ್ಟೆಗೆ ಹೊಸದಾಗಿ ರೆಡ್ಮಿ ಕೆ20 ಮತ್ತು ಕೆ20 ಪ್ರೋಗಳನ್ನು ಬಿಡುಗಡೆಗೊಳಿಸಲಿದೆ. ದೇಶದಲ್ಲಿ ಈ ಸ್ಮಾರ್ಟ್ ಫೋನ್ ನ್ನು ಪೋಕೋ ಎಫ್2 ಎಂದು ಕರೆಯುವ ಸಾಧ್ಯತೆ ಇದೆ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಇದೇ ಸಂದರ್ಬದಲ್ಲಿ ರೆಡ್ಮಿ ನೋಟ್ 6 ಪ್ರೋ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬೆಲೆ ಇಳಿಕೆಯನ್ನು ಕಂಡಿದೆ. ಅಂದರೆ ಇದರಲ್ಲಿ 6ಜಿಬಿ ಮೆಮೊರಿ ವೇರಿಯಂಟ್ ನ ಡಿವೈಸ್ ಗೆ ಮಾತ್ರವೇ ಬೆಲೆ ಇಳಿಕೆಯಾಗಿದೆ.

ರೆಡ್ಮಿ ನೋಟ್ 6 ಪ್ರೋ ಬೆಲೆ ಇಳಿಕೆ
ಟಾಪ್ ಎಂಡ್ ವೇರಿಯಂಟ್ ಆಗಿರುವ ರೆಡ್ಮಿ ನೋಟ್ 6 ಪ್ರೋ 6ಜಿಬಿ ಮೆಮೊರಿ ಫೋನ್ ಗೆ 2,000 ರುಪಾಯಿ ಬೆಲೆ ಇಳಿಕೆಯಾಗಿದೆ. ಇದು ಶಾಶ್ವತ ಬೆಲೆ ಇಳಿಕೆಯಾಗಿದೆ ಮತ್ತು ಇದೀಗ ಈ ಡಿವೈಸ್ 13,999 ರುಪಾಯಿ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ, ಎಂಐ.ಕಾಮ್ ನಲ್ಲಿ ಮತ್ತು ಎಂಐ ಹೋಮ್ ಸ್ಟೋರ್ ಗಳಲ್ಲಿ ಮಾರಾಟವಾಗುತ್ತಿದೆ.
ಇದರ ನೈಜ ಬೆಲೆ ಅಥವಾ ಬಿಡುಗಡೆಗೊಂಡಾಗಿನ ಬೆಲೆ 15,999 ರುಪಾಯಿಗಳಿತ್ತು. ಅಂದರೆ ಇದೀಗ 2,000 ರುಪಾಯಿ ಬೆಲೆ ಇಳಿಕೆಯಾಗಿದ್ದು 13,999 ರುಪಾಯಿ ಬೆಲೆಗೆ ನಿಮ್ಮ ಕೈಗೆ ಸಿಗುತ್ತದೆ. ಈ ಹಿಂದೆ 4ಜಿಬಿ ಮೆಮೊರಿ ವೇರಿಯಂಟ್ ನ ಸ್ಮಾರ್ಟ್ ಫೋನ್ ಇದೇ ರೀತಿ 2,000 ರುಪಾಯಿ ಬೆಲೆ ಇಳಿಕೆ ಕಂಡಿದೆ ಅಂದರೆ 13,999 ರುಪಾಯಿ ಬೆಲೆಯ ಫೋನ್ ಕೇವಲ 11,999 ರುಪಾಯಿ ಬೆಲೆಗೆ ಕೈಗೆಟುಕುತ್ತದೆ.

ಎಂಐ.ಕಾಮ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಆಫರ್ ಗಳು ಲಭ್ಯ :
ಬೆಲೆ ಇಳಿಕೆಯ ಜೊತೆಗೆ ಎಂಐ.ಕಾಮ್ ನಲ್ಲಿ ಕೆಲವು ರಿಯಾಯಿತಿಗಳು ಮತ್ತು ಆಫರ್ ಗಳು ಖರೀದಿದಾರರಿಗಾಗಿ ಕಾಯುತ್ತಿದೆ. ಹಳೆಯ ರೆಡ್ಮಿ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿ ಹೊಸದಾಗಿ ರೆಡ್ಮಿ ನೋಟ್ 6 ಪ್ರೋ ಖರೀದಿಗೆ ಅವಕಾಶವಿರುತ್ತದೆ. ನೋ ಕಾಸ್ಟ್ ಇಎಂಐ ಆಯ್ಕೆಗಳು, ರಿಲಯನ್ಸ್ ಜಿಯೋದಿಂದ 2,400 ರುಪಾಯಿಯ ಕ್ಯಾಷ್ ಬ್ಯಾಕ್ ಆಫರ್ ಗಳು ಮತ್ತು 6ಟಿಬಿ 4ಜಿ ಡಾಟಾವು ಜಿಯೋದಿಂದ ಲಭ್ಯವಾಗುತ್ತದೆ. ಫ್ಲಿಪ್ ಕಾರ್ಟ್ ನಲ್ಲೂ ಕೂಡ 10% ರಿಯಾಯಿತಿ ಲಭ್ಯವೆ ಅದಕ್ಕಾಗಿ ಗ್ರಾಹಕರು ಆಕ್ಸಿಸ್ ಬ್ಯಾಂಕ್ ನ ಬಝ್ ಕ್ರೆಡಿಟ್ ಕಾರ್ಡ್ ನ ಮೂಲಕ ಖರೀದಿ ಮಾಡಬೇಕು.

ರೆಡ್ಮಿ ನೋಟ್ 6 ಪ್ರೋ ಅಥಾ ರೆಡ್ಮಿ ನೋಟ್ 7 ಪ್ರೋ?
ರೆಡ್ಮಿ ನೋಟ್ 6 ಪ್ರೋ ನವೆಂಬರ್ 2018 ರಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿದೆ.ಈ ಡಿವೈಸ್ ನಲ್ಲಿ 19:9 ಡಿಸ್ಪ್ಲೇ, ಡುಯಲ್ ಸೆಲ್ಫೀ ಕ್ಯಾಮರಾಗಳು, 4000mAh ಬ್ಯಾಟರಿ ಮತ್ತು P2i ವಾಟರ್ ರಿಪೆಲೆಂಟ್ ನ್ಯಾನೋ ತಂತ್ರಗಾರಿಕೆಯನ್ನು ಇದು ಹೊಂದಿದೆ. ಖಂಡಿತ ಇದು ಹಣಕ್ಕೆ ತಕ್ಕ ಆಫರ್ ಇರುವ ಸ್ಮಾರ್ಟ್ ಫೋನ್ ಆಗಿದೆ.
ಇನ್ನು ರೆಡ್ಮಿ ನೋಟ್ 7 ಪ್ರೋ ಕೂಡ ಭಾರತದಲ್ಲಿ ಬಿಡುಗಡೆಗೊಂಡಿದ್ದು ಕೆಲವು ಉತ್ತಮವಾಗಿರುವ ವೈಶಿಷ್ಟ್ಯತೆಗಳನ್ನು ಇದರಲ್ಲಿ ಸೇರಿಸಲಾಗಿದೆ. ಈ ಫೀಚರ್ ಗಳಿಂದಾಗಿ ಫೋನಿನ ಬೆಲೆಯಲ್ಲೂ ವ್ಯತ್ಯಾಸವಿದ್ದು 13,999 ರುಪಾಯಿ ಆರಂಭಿಕ ಬೆಲೆಯಾಗಿರುತ್ತದೆ. ಒಂದು ವೇಳೆ ನಿಮ್ಮ ಬಜೆಟ್ ಮೇಲೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಿಕೊಳ್ಳಬಹುದು. ರೆಡ್ಮಿ ನೋಟ್ 7 ಪ್ರೋ ನಲ್ಲಿ ಕೆಲವು ಅಪ್ ಗ್ರೇಡ್ ಆಗುವ ವೈಶಿಷ್ಟ್ಯತೆಗಳು ಲಭ್ಯವಿದೆ ಮತ್ತು 48ಎಂಪಿ ಪ್ರೈಮರಿ ಕ್ಯಾಮರಾ ಸೌಲಭ್ಯವಿದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470