15,999ಕ್ಕೆ 6GB RAM ಸಾಮರ್ಥ್ಯದ ಶಿಯೋಮಿ 'ನೋಟ್ 7 ಪ್ರೊ' ಬಿಡುಗಡೆ!
ಭಾರತದ ಮಾರುಕಟ್ಟೆಗೆ ಈ ಮೊದಲು ಎರಡು ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದ್ದ 'ರೆಡ್ಮಿ ನೋಟ್ 7 ಪ್ರೊ' ಪೋನಿನ ಹೊಸ ವೆರಿಯಂಟ್ ಸ್ಮಾರ್ಟ್‌ಫೋನ್ ಇದೀಗ ಬಿಡುಗಡೆಯಾಗಿದೆ. ಕಳೆದ ಫೆಬ್ರವರಿಯಲ್ಲಿ 4 ಜಿಬಿ / 64 ಜಿಬಿ ಮತ್ತು 6 ಜಿಬಿ / 128 ಜಿಬಿ ಎರಡು ಮಾದರಿಗಳಲ್ಲಿ ರೆಡ್ಮಿ ನೋಟ್ 7 ಪ್ರೊ ಬಿಡುಗಡೆಯಾಗಿತ್ತು. ಇದೀಗ ಇದೇ ಮೊದಲ ಬಾರಿಗೆ 6 ಜಿಬಿ RAM ಮತ್ತು 64 ಜಿಬಿ ಸಂಗ್ರಹದ ರೂಪಾಂತರದಲ್ಲಿ ದೇಶದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಹೌದು, 4 ಜಿಬಿ / 64 ಜಿಬಿ ಮತ್ತು 6 ಜಿಬಿ / 128 ಜಿಬಿ ಎರಡು ಆವೃತ್ತಿಗಳಲ್ಲಿ ಈ ಮೊದಲು 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿತ್ತು. ಆದರೆ, ಮೊಬೈಲ್ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ 6GB RAM ಸಾಮರ್ಥ್ಯದ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಗೆ ಸಿಗುತ್ತಿರಲಿಲ್ಲ. ಹಾಗಾಗಿ, ಶಿಯೋಮಿ ದೇಶಕ್ಕೆ ಮೂರನೇ ರೂಪಾಂತರವನ್ನು ತಂದಿದೆ. 6 ಜಿಬಿ RAM ಮತ್ತು 64 ಜಿಬಿ ಸಂಗ್ರಹವಿರುವ ಈ ನೂತನ ಮಾದರಿ ಫೋನ್ ಬೆಲೆ ದೇಶದಲ್ಲಿ ಕೇವಲ 15,999 ರೂ.ಗಳಾಗಿವೆ.
4 ಜಿಬಿ / 64 ಜಿಬಿ ಮಾದರಿಯ ನೋಟ್ 7 ಪ್ರೊ ಫೋನ್ ಬೆಲೆ 13,999 ರೂ. ಗಳಾದರೆ, 6 ಜಿಬಿ / 128 ಜಿಬಿ ಮಾದರಿಯ ನೋಟ್ 7 ಪ್ರೊ ಬೆಲೆ 16,999 ರೂ.ಗಳಾಗಿದ್ದವು. ಇವೆರಡರ ಮಧ್ಯಬೆಲೆಯಲ್ಲಿ ನೂತನ ವೆರಿಯಂಟ್ ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದೆ. ಇನ್ನು ಈ ಫೋನ್ ಜುಲೈ 3 ರಿಂದಲೇ ಖರೀದಿಗೂ ಸಹ ಲಭ್ಯವಿದೆ. ಹಾಗಾದರೆ, ಶಿಯೋಮಿ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಹೇಗಿದೆ? ಫೀಚರ್ಸ್ ಯಾವುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ರೆಡ್‌ಮಿ ನೋಟ್ 7 ಪ್ರೊ' ಡಿಸೈನ್
ಈಗಾಗಲೇ ವಿಶ್ವ ಮಾರುಕಟ್ಟೆಗೆ ಕಾಲಿಟ್ಟಿರುವ ರೆಡ್‌ಮಿ ನೋಟ್ 7 ಮಾದರಿಯಲ್ಲೇ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್‌ಪ್ರಿಂಟ್ ಆಯ್ಕೆಯ ಡಿಸೈನ್ ಹೊಂದಿರುವ ಸ್ಮಾರ್ಟ್‌ಪೋನ್ ಎರಡೂ ಭಾಗಗಳಲ್ಲಿ 2.D ಕರ್ವಡ್ ಗ್ಲಾಸ್ ಡಿಸೈನ್ ಹೊಂದಿರುವುದು ವಿಶೇಷ ಎನ್ನಬಹುದು.

'ರೆಡ್‌ಮಿ ನೋಟ್ 7 ಪ್ರೊ' ಡಿಸ್‌ಪ್ಲೇ.
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ FHD + ರೆಸಲ್ಯೂಶನ್ ಮತ್ತು 19.5:9ರ ಆಕಾರ ಅನುಪಾತದೊಂದಿಗೆ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಕಣ್ಣಿನ ಒತ್ತಡವನ್ನು ತಪ್ಪಿಸಲು ಸನ್‌ಲೈಟ್ ಡಿಸ್‌ಪ್ಲೇ ಮತ್ತು ಓದುವಿಕೆ ವಿಶೇಷ ಮೋಡ್ ಅನ್ನು ಹೊಂದಿರುವ ಫೋನ್ ಭಾಗಶಃ ಪೂರ್ಣ ಪ್ರಮಾಣದ ಸ್ಕ್ರೀನ್ ಡಿಸ್‌ಪ್ಲೇಯಂತೆ ಹೊಂದಿದೆ.

'ರೆಡ್‌ಮಿ ನೋಟ್ 7 ಪ್ರೊ' ಪ್ರೊಸೆಸರ್
ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಮತ್ತು 64GB ಆಂತರಿಕ ಮೆಮೊರಿಯನ್ನು ಫೋನಿನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್ ಕಾರ್ಯನಿರ್ವಹಣೆ ನೀಡಲಿದೆ.

'ರೆಡ್‌ಮಿ ನೋಟ್ 7 ಪ್ರೊ' ರಿಯರ್ ಕ್ಯಾಮೆರಾ
ರೆಡ್‌ಮಿ ನೋಟ್ 7 ಪ್ರೊನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತಿದ್ದು, ಇದು ಸ್ಮಾರ್ಟ್ಫೋನ್ಗಳಿಗಾಗಿ ಅತ್ಯುನ್ನತ ರೆಸಲ್ಯೂಶನ್ ಸಂವೇದಕವಾಗಿದ್ದು ಉತ್ತಮ ಫೋಟೋಗಳಿಗಾಗಿ 4x ಡೈನಾಮಿಕ್ ಶ್ರೇಣಿಯನ್ನು ಬೆಂಬಲಿಸಲಿದೆ.

'ರೆಡ್‌ಮಿ ನೋಟ್ 7 ಪ್ರೊ' ಕ್ಯಾಮೆರಾ ತಂತ್ರಜ್ಞಾನ!
ರೆಡ್‌ಮಿ ನೋಟ್ 7 ಪ್ರೊ ಸಂವೇದಕವು 4 ಪಿಕ್ಸೆಲ್‌ಗಳನ್ನು 1 ಸೂಪರ್ ಪಿಕ್ಸೆಲ್‌ಗೆ ವಿಲೀನಗೊಳಿಸುವ ಮೂಲ ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸಲಿದೆ. ಕೃತಕ ಬುದ್ದಿಮತ್ತೆ ಸಹಾಯದಿಂದ ರಾತ್ರಿ ಸಮಯದಲ್ಲೂ ಛಾಯಾಗ್ರಹಣಕ್ಕೆ ಶಕ್ತವಾಗಿದೆ. AI ಪೋರ್ಟ್ರೇಟ್ 2.0 ಹೊಂದಿರುವ ಕ್ಯಾಮೆರಾ ಬೊಕೆ ಚಿತ್ರಗಳು, 4K ವೀಡಿಯೋ ರೆಕಾರ್ಡಿಂಗ್ ಫೀಚರ್ಸ್ ಹೊಂದಿದೆ

'ರೆಡ್‌ಮಿ ನೋಟ್ 7 ಪ್ರೊ' ಸೆಲ್ಫೀ ಕ್ಯಾಮೆರಾ!
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆ ತಂತ್ರಜ್ಞಾನ ಹೊಂದಿರುವುದು ಇದರ ವಿಶೇಷತೆ.

'ರೆಡ್‌ಮಿ ನೋಟ್ 7 ಪ್ರೊ' ಬ್ಯಾಟರಿ
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ. ಶಿಯೋಮಿ ರೆಡ್ಮಿ ನೋಟ್ 6 ನಲ್ಲಿ ಕ್ವಿಕ್ ಚಾರ್ಜ್ 3.0 ತಂದಿದನ್ನು ನಾವಿಲ್ಲಿ ನೋಡಬಹುದು.

'ರೆಡ್‌ಮಿ ನೋಟ್ 7 ಪ್ರೊ' ಇತರೆ ಫೀಚರ್ಸ್
ಅಂಟುಂಟು ಬೆಂಚ್‌ಮಾರ್ಕ್ನಲ್ಲಿ 180,808 ರಷ್ಟು ಸ್ಕೋರ್ ಮಾಡಿರುವ 'ರೆಡ್‌ಮಿ ನೋಟ್ 7 ಪ್ರೊ' ಡ್ಯುಯಲ್ ವೋಲ್ಟ್ ಸಿಮ್ ಸಪೋರ್ಟ್ ಮಾಡಲಿದೆ. ಇನ್ನುಳಿದಂತೆ 3.5mm ಜಾಕ್, ಫೇಸ್‌ಲಾಕ್, ಸ್ಟೂಡಿಯೋ ಲೈಟಿಂಗ್, 8 ಯುನಿಕ್ ಎಫೆಕ್ಟ್ ಕ್ಯಾಮೆರಾ ತಂತ್ರಜ್ಞಾನಗಳು, 4k ವಿಡಿಯೋ ರೆಕಾರ್ಡಿಂಗ್, ಹೆವಿ ಗೇಮಿಗ್‌ಗಾಗಿ ಅಡ್ರಿನೋ 612 ಜಿಪಿಯುಗಳನ್ನು ಹೊಂದಿದೆ.


Click it and Unblock the Notifications








