ಕೇವಲ 2 ತಿಂಗಳುಗಳಲ್ಲಿ ಮಾರಾಟವಾದ 'ರೆಡ್ಮಿ ನೋಟ್ 7' ಸರಣಿ ಫೋನ್‌ಗಳೆಷ್ಟು ಗೊತ್ತಾ?

|

ಭಾರತದಲ್ಲಿ ಶಿಯೋಮಿ 'ರೆಡ್ ಮಿ ನೋಟ್ 7' ಸರಣಿ ಸ್ಮಾರ್ಟ್‌ಪೋನ್‌ಗಳು ಬಿಡುಗಡೆ ಕಂಡ ಕೇವಲ ಎರಡೇ ತಿಂಗಳುಗಳಲ್ಲಿ ಭರ್ಜರಿ ದಾಖಲೆಯನ್ನು ಸೃಷ್ಟಿಸಿವೆ. ಅತಿ ಹೆಚ್ಚು ಭಾರತೀಯರನ್ನು ಸೆಳೆಯುತ್ತಿರುವ ಶಿಯೋಮಿ ಕಂಪೆನಿಯ 'ರೆಡ್ ಮಿ ನೋಟ್ 7' ಸರಣಿ ಸ್ಮಾರ್ಟ್‌ಪೋನ್‌ಗಳು ದೇಶದಲ್ಲಿ ಬಿಡುಗಡೆಯಾದ ಕೇವಲ ಎರಡೇ ಎರಡು ತಿಂಗಳುಗಳಲ್ಲಿ 'ಎರಡು ಮಿಲಿಯನ್ (ಎರಡು ದಶಲಕ್ಷ)' ಮಾರಾಟ ಕಂಡಿವೆ ಎಂದು ಶಿಯೋಮಿ ಕಂಪೆನಿ ಬಿಡುಗಡೆ ಮಾಡಿರುವ ಮಾಹಿತಿಯಿಂದ ತಿಳಿದುಬಂದಿದೆ.

ಹೌದು, ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಭರ್ಜರಿ ಹವಾ ಎಬ್ಬಿಸಿದ್ದ ರೆಡ್ ಮಿ ನೋಟ್ 7 ಮತ್ತು ರೆಡ್ ಮಿ ನೋಟ್ 7 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಿಡುಗಡೆಯಾದ ಮೊದಲ ತಿಂಗಳಿನಲ್ಲಿ ಒಂದು ಮಿಲಿಯನ್ ಮಾರಾಟ ಕಂಡಿದ್ದ ರೆಡ್ ಮಿ ನೋಟ್ 7 ಸರಣಿ ಸ್ಮಾರ್ಟ್‌ಫೋನ್‌ಗಳ ಜನಪ್ರಿಯತೆ ಎರಡನೇ ತಿಂಗಳಿನಲ್ಲೂ ಮುಂದುವರೆದಿದ್ದು, ಎರಡನೇ ತಿಂಗಳು ಕೂಡ ಒಂದು ಮಿಲಿಯನ್ ಮಾರಾಟ ಕಂಡಿವೆ ಎಂದು ಕಂಪೆನಿ ತಿಳಿಸಿದೆ.

ಕೇವಲ 2 ತಿಂಗಳುಗಳಲ್ಲಿ ಮಾರಾಟವಾದ 'ರೆಡ್ಮಿ ನೋಟ್ 7' ಸರಣಿ ಫೋನ್‌ಗಳೆಷ್ಟು ಗೊತ್ತಾ?

ಈ ಎರಡೂ ಸ್ಮಾರ್ಟ್‌ಫೋನ್‌ಗಳಿಗೆ ಮತ್ತಷ್ಟು ಬೇಡಿಕೆ ಇದ್ದು, ಆದಷ್ಟು ಬೇಗ ಇದನ್ನು ಪೂರೈಸಲು ಶಿಯೋಮಿ ಸಜ್ಜಾಗಿದೆ. ಹಾಗಾಗಿ, ಫ್ಲಿಪ್‌ಕಾರ್ಟ್, Mi.com ಮತ್ತು ಮಿ ಹೋಮ್ ಸೇರಿದಂತೆ ಆಫ್ಲೈನ್ ​​ಮಳಿಗೆಗಳಲ್ಲಿ ತೆರೆದ ಮಾರಾಟದಲ್ಲಿ ಈಗ ರೆಡ್ ಮಿ ನೋಟ್ 7 ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ. ಹಾಗಾದರೆ, 10,000 ಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯವಿರುವ ಉತ್ತಮ ಮೌಲ್ಯದ ಫೋನ್ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಹೇಗಿದೆ?, ಖರೀದಿಗೆ ಈ ಸ್ಮಾರ್ಟ್‌ಫೋನ್ ಯೋಗ್ಯವೇ ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ರೆಡ್‌ಮಿ ನೋಟ್ 7' ವಿನ್ಯಾಸ

'ರೆಡ್‌ಮಿ ನೋಟ್ 7' ವಿನ್ಯಾಸ

ವಾಟರ್‌ಡ್ರಾಪ್ ಚಿಕ್ಕ ನೋಚ್ ವಿನ್ಯಾಸದ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಆಯ್ಕೆ ಸೇರಿದಂತೆ ಹಿಂಬಾಗದಲ್ಲಿ 2.5 ಡಿ ಬಾಗಿದ ಗಾಜಿನ ರಕ್ಷಣೆ ವಿನ್ಯಾಸವನ್ನು ಹೊಂದಿರುವ ಸ್ಮಾರ್ಟ್‌ಪೋನ್ ಹೈ ಎಂಡ್ ಲುಕ್ ಹೊಂದಿದೆ. ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಿಗೂ ಸೆಡ್ಡು ಹೊಡೆಯುವಂತಹ ಲುಕ್‌ನಲ್ಲಿ ಬಿಡುಗಡೆಯಾದ ಮೊದಲ ಬಜೆಟ್ ಫೋನಿನಂತೆ ಕಾಣುತ್ತಿದೆ.

'ರೆಡ್‌ಮಿ ನೋಟ್ 7' ಡಿಸ್‌ಪ್ಲೇ !

'ರೆಡ್‌ಮಿ ನೋಟ್ 7' ಡಿಸ್‌ಪ್ಲೇ !

'ರೆಡ್‌ಮಿ ನೋಟ್ 7' ಫೋನ್ 19.5: 9 ಆಕಾರ ಅನುಪಾತದಲ್ಲಿ 1080x2340 ಪಿಕ್ಸೆಲ್‌ಗಳ ಸಾಮರ್ಥ್ಯದ 6.3-ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿರುವ ಡಿಸ್‌ಪ್ಲೇ ವಾಟರ್‌ಡ್ರಾಪ್ ಚಿಕ್ಕ ನೋಚ್ ವಿನ್ಯಾಸವನ್ನು ಹೊಂದಿರುವುದನ್ನು ನೋಡಬಹುದಾಗಿದೆ. ಇದು ಮಲ್ಟಿಮೀಡಿಯಾ ಪ್ರಿಯರ ಮನಗೆಲ್ಲಲು ಯಶಸ್ವಿಯಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 2.2GHz ಸ್ನಾಪ್ಡ್ರಾಗನ್ 660 ಎಸ್‌ಒಸಿ ಪ್ರೊಸೆಸರ್, ಅಡ್ರಿನೋ 512 ಗ್ರಾಫಿಕ್ಸ್, 3 ಜಿಬಿಮತ್ತು 4 ಜಿಬಿ RAM ಆಯ್ಕೆಗಳೊಂದಿಗೆ ಬಿಡುಗಡೆಯಾಗಿದೆ. 32GB ಮತ್ತು 64GB ಮೆಮೊರಿ ಆಯ್ಕೆಗಳ ಸ್ಮಾರ್ಟ್‌ಫೋನಿನ ಆಂತರಿಕ ಮೆಮೊರಿಯನ್ನು 256GB ವರೆಗೆ ವಿಸ್ತರಿಸುವ ಆಯ್ಕೆಯೂ ಸಹ ಲಭ್ಯವಿದೆ.

12+2MP ಕ್ಯಾಮೆರಾ!

12+2MP ಕ್ಯಾಮೆರಾ!

ಶಿಯೋಮಿ ಕಂಪೆನಿ ತನ್ನರೆಡ್‌ಮಿ ನೋಟ್ 7 ಸ್ಮಾರ್ಟ್‌ಪೋನಿನಲ್ಲಿ 12 ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಎರಡು ಕ್ಯಾಮೆರಾಗಳನ್ನು ಹಿಂಬಾಗದಲ್ಲಿ ನೀಡಿದೆ. (ಭಾರತದಲ್ಲಿ ರೆಡ್‌ಮಿ ನೋಟ್ 7 ಪ್ರೊ ನಲ್ಲಿ ಮಾತ್ರ 48MP+5MP ರಿಯರ್ ಕ್ಯಾಮೆರಾಗಳನ್ನು ನೀಡಲಾಗಿದೆ)ಇನ್ನುಳಿದಂತೆ ಡ್ಯುಯಲ್-ಎಲ್ಇಡಿ ಫ್ಲಾಶ್ ಬೆಂಬಲ, ಪಿಡಿಎಎಫ್ ಅನ್ನು ಸಹ ಹಿಂಬಾಗದಲ್ಲಿ ನೋಡಬಹುದಾಗಿದೆ.

13MP ಸೆಲ್ಫಿ ಕ್ಯಾಮೆರಾ!

13MP ಸೆಲ್ಫಿ ಕ್ಯಾಮೆರಾ!

ಹಿಂಬಾಗದಲ್ಲಿ 12MP+2MP ಸಾಮರ್ಥ್ಯದ ಕ್ಯಾಮೆರಾಗಳನ್ನು ಹೊಂದಿರುವ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಪೊರ್ಟ್ರೇಟ್ ಮೋಡ್, ಹೆಚ್‌ಡಿಆರ್, ಎಐ ಫೇಸ್ ಅನ್ಲಾಕ್, ಎಐ ಸ್ಮಾರ್ಟ್ ಬ್ಯೂಟಿ, ಎಐ ಸಿಂಗಲ್ ಶಾಟ್ ಬ್ಲರ್, ಫ್ರಂಟ್ ಹೆಚ್‌ಡಿಆರ್‌ನಂತಹ ವಿಶೇಷತೆಗಳನ್ನು ಈ ಕ್ಯಾಮೆರಾ ತಂತ್ರಜ್ಞಾನದಲ್ಲಿವೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಕ್ವಿಕ್ ಚಾರ್ಜ್ 4 ತಂತ್ರಜ್ಞಾನ ಬೆಂಬಲದೊಂದಿಗೆ 4,000 mAh ಬ್ಯಾಟರಿಯನ್ನು 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇದು 251 ಗಂಟೆಗಳ ಸ್ಟ್ಯಾಂಡ್‌ ಬೈ ಸಮಯ, 23 ಗಂಟೆಗಳ ಟಾಕ್ ಟೈಮ್, 13 ಗಂಟೆಗಳ ವೀಡಿಯೋ ಪ್ಲೇಬ್ಯಾಕ್, ಮತ್ತು 7 ಗಂಟೆಗಳ ಗೇಮಿಂಗ್‌ವರೆಗೆ ಬ್ಯಾಟರಿ ಸಾಮರ್ಥ್ಯವನ್ನು ನೀಡಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಟೈಪ್ ಸಿ ಪೋರ್ಟ್, 3.5mm ಆಡಿಯೋ ಜ್ಯಾಕ್, 4ಜಿ ವೋಲ್ಟ್, ಜಿಪಿಎಸ್, ಎಜಿಪಿಎಸ್, ಗ್ಲೋನಾಸ್, ಬ್ಲೂಟೂತ್ ವಿ5, ಮತ್ತು ವೈ-ಫೈ 802.11 ಎ / ಬಿ / ಜಿ / ಎನ್ / ಎಸಿ. ಸೇರಿದಂತೆ 450 ನಿಟ್ಸ್ ಬ್ರೈಟ್ನೆಸ್, 84 ಶೇಕಡಾ ಎನ್ ಟಿ ಎಸ್ ಸಿ ಕಲರ್ ಗ್ಯಾಮೆಟ್‌ನಂತಹ ಇತ್ತೀಚಿನ ಹಲವು ನೂತನ ತಂತ್ರಜ್ಞಾನಗಳನ್ನು 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಪೋನಿನಲ್ಲಿ ತರಲಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಬಿಡುಗಡೆ ಕಂಡಿದ್ದು, 3GB RAM + 32GB ಮಾದರಿಯ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಬೆಲೆ ಕೇವಲ 9,999 ರೂ.ಗಳಿಂದ ಶುರುವಾಗಿದೆ. ಹಾಗೆಯೇ, 4GB RAM + 64GB ಮಾದರಿಯ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಬೆಲೆ 11,999 ರೂಪಾಯಿಗಳಾಗಿವೆ.

Best Mobiles in India

English summary
Redmi Note 7, Redmi Note 7 Pro Cross 2 Million Sales Mark in India. The two phones clocked 1 million units in sale in just over a month after going on sale, and continuing the hot streak, have now gone past the 2 million mark. The Redmi Note 7 was made available on open sale in April.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X