10 ಸಾವಿರಕ್ಕೆ 48MP ಕ್ಯಾಮೆರಾ ಫೋನ್!..ಏಕಾಏಕಿ 'ರೆಡ್‌ಮಿ ನೋಟ್ 7' ಲಾಂಚ್‌!..ಬೆಚ್ಚಿಬಿತ್ತು ಮಾರುಕಟ್ಟೆ!!

|

'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನೇ ಇನ್ನು ಬಹುತೇಕರ ಕೈಗೇ ಸಿಕ್ಕಿಲ್ಲ. ಆದರೆ, ಏಕಾಏಕಿ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಬಿಡುಗಡೆಯಾದರೆ ಹೇಗಿರುತ್ತದೆ ಹೇಳಿ?. ಹೌದು, ಚೀನಾದಲ್ಲಿಂದು ಶಿಯೋಮಿ ಇಂತಹದೊಂದು ಭರ್ಜರಿ ಶಾಕ್ ನೀಡಿದೆ.ವಿಶ್ವ ಮೊಬೈಲ್ ಮಾರುಕಟ್ಟೆಗೆ ಸರಿಯಾದ ಮಾಹಿತಿ ಇಲ್ಲದೆ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.

ಶಿಯೋಮಿ ಕಂಪೆನಿ ಇಂದು ರೆಡ್‌ಮಿ ನೋಟ್ 7 ಸ್ಮಾರ್ಟ್‌ಪೋನ್‌ ಅನ್ನು ಏಕಾಏಕಿ ಲಾಂಚ್ ಮಾಡಿದ್ದು, ಅಂದಾಜು 10,000 ರೂಪಾಯಿಗಳಿಂದ ಆರಂಭವಾಗಿರುವ ಸ್ಮಾರ್ಟ್‌ಫೋನ್ ಫೀಚರ್ಸ್ ಊಹೆಗೂ ಸಿಲುಕದಂತಿವೆ. 10.000 ರೂ.ಗಳಿಂದ ಆರಂಭವಾಗಿರುವ ಈ ಸ್ಮಾರ್ಟ್‌ಫೋನ್ 48MP ಹಿಂಬದಿಯ ಕ್ಯಾಮೆರಾ ಮತ್ತು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 ಪ್ರೊಸೆಸರ್ ಅನ್ನು ಹೊಂದಿದೆ.

10 ಸಾವಿರಕ್ಕೆ 48MP ಕ್ಯಾಮೆರಾ ಫೋನ್!..ಏಕಾಏಕಿ 'ರೆಡ್‌ಮಿ ನೋಟ್ 7' ಲಾಂಚ್‌!!

ವಿಶ್ವ ಮೊಬೈಲ್ ಮಾರುಕಟ್ಟೆಗೆ ಅಚ್ಚರಿ ಮೂಡಿಸಿರುವ ಶಿಯೋಮಿಯ ಈ ಸ್ಮಾರ್ಟ್‌ಪೋನ್‌ ಬಿಡುಗಡೆಗೆ ಚೀನಾ ಮೊಬೈಲ್ ಮಾರುಕಟ್ಟೆ ಸೇರಿದಂತೆ ವಿಶ್ವ ಮೊಬೈಲ್ ಮಾರುಕಟ್ಟೆಯೂ ಸಹ ಬೆಚ್ಚಿಬಿದ್ದಿದೆ. ಹಾಗಾದರೆ. ಇಂದು ಬಿಡುಗಡೆಯಾಗಿ ಶಾಕ್ ನೀಡಿದ ನೂತನ ರೆಡ್‌ಮಿ ನೋಟ್ 7 ಸರಣಿ ಸ್ಮಾರ್ಟ್‌ಫೋನ್‌ ಹೇಗಿದೆ ಎಂಬ ಎಲ್ಲಾ ಮಾಹಿತಿಗಳನ್ನು ಮುಂದೆ ಓದಿ ತಿಳಿಯಿರಿ.

'ರೆಡ್‌ಮಿ ನೋಟ್ 7' ಲಾಂಚ್!

'ರೆಡ್‌ಮಿ ನೋಟ್ 7' ಲಾಂಚ್!

ವಿಶ್ವ ಮೊಬೈಲ್ ಮಾರುಕಟ್ಟೆ ಊಹಿಸಲು ಸಾಧ್ಯವಿಲ್ಲದಂತೆ ಶಿಯೋಮಿ ಕಂಪೆನಿ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ವಾಟರ್ಡ್ರಾಪ್ ನೋಚ್, ಸ್ಲಿಮ್ ಬೆಜೆಲ್, 6.3-ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಸೇರಿದಂತೆ, 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ ಊಹಿಸಲು ಸಾಧ್ಯವಿಲ್ಲದಂತಹ 48MP ಕ್ಯಾಮೆರಾ ಹೊತ್ತು ಸ್ಮಾರ್ಟ್‌ಫೋನ್ ಲಾಂಚ್ ಆಗಿದೆ.

'ರೆಡ್‌ಮಿ ನೋಟ್ 7' ವಿನ್ಯಾಸ

'ರೆಡ್‌ಮಿ ನೋಟ್ 7' ವಿನ್ಯಾಸ

ವಾಟರ್‌ಡ್ರಾಪ್ ಚಿಕ್ಕ ನೋಚ್ ವಿನ್ಯಾಸದ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಆಯ್ಕೆ ಸೇರಿದಂತೆ ಹಿಂಬಾಗದಲ್ಲಿ 2.5 ಡಿ ಬಾಗಿದ ಗಾಜಿನ ರಕ್ಷಣೆ ವಿನ್ಯಾಸವನ್ನು ಹೊಂದಿರುವ ಸ್ಮಾರ್ಟ್‌ಪೋನ್ ಹೈ ಎಂಡ್ ಲುಕ್ ಹೊಂದಿದೆ. ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಿಗೂ ಸೆಡ್ಡು ಹೊಡೆಯುವಂತಹ ಲುಕ್‌ನಲ್ಲಿ ಬಿಡುಗಡೆಯಾಗ ಮೊದಲ ಬಜೆಟ್ ಫೋನಿನಂತೆ ಕಾಣುತ್ತಿದೆ.

'ರೆಡ್‌ಮಿ ನೋಟ್ 7' ಡಿಸ್‌ಪ್ಲೇ !

'ರೆಡ್‌ಮಿ ನೋಟ್ 7' ಡಿಸ್‌ಪ್ಲೇ !

'ರೆಡ್‌ಮಿ ನೋಟ್ 7' ಫೋನ್ 19.5: 9 ಆಕಾರ ಅನುಪಾತದಲ್ಲಿ 1080x2340 ಪಿಕ್ಸೆಲ್‌ಗಳ ಸಾಮರ್ಥ್ಯದ 6.3-ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿರುವ ಡಿಸ್‌ಪ್ಲೇ ವಾಟರ್‌ಡ್ರಾಪ್ ಚಿಕ್ಕ ನೋಚ್ ವಿನ್ಯಾಸವನ್ನು ಹೊಂದಿರುವುದನ್ನು ನೋಡಬಹುದಾಗಿದೆ. ಇದು ಮಲ್ಟಿಮೀಡಿಯಾ ಪ್ರಿಯರ ಮನಗೆಲ್ಲಲು ಯಶಸ್ವಿಯಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 2.2GHz ಸ್ನಾಪ್ಡ್ರಾಗನ್ 660 ಎಸ್‌ಒಸಿ ಪ್ರೊಸೆಸರ್, ಅಡ್ರಿನೋ 512 ಗ್ರಾಫಿಕ್ಸ್, ಮತ್ತು 3 ಜಿಬಿ, 4 ಜಿಬಿ, ಮತ್ತು 6 ಜಿಬಿ RAM ಆಯ್ಕೆಗಳೊಂದಿಗೆ ಬಿಡುಗಡೆಯಾಗಿದೆ. 32GB ಮತ್ತು 64GB ಮೆಮೊರಿ ಆಯ್ಕೆಗಳ ಸ್ಮಾರ್ಟ್‌ಫೋನಿನ ಆಂತರಿಕ ಮೆಮೊರಿಯನ್ನು 256GB ವರೆಗೆ ವಿಸ್ತರಿಸುವ ಆಯ್ಕೆಯೂ ಸಹ ಲಭ್ಯವಿದೆ.

48MP ಕ್ಯಾಮೆರಾ!

48MP ಕ್ಯಾಮೆರಾ!

ಶಿಯೋಮಿ ಕಂಪೆನಿ ಇದೇ ಮೊದಲ ಬಾರಿಗೆ 48MP ಸಾಮರ್ಥ್ಯದ ಕ್ಯಾಮೆರಾವನ್ನು ತನ್ನ ಸ್ಮಾರ್ಟ್‌ಪೋನಿನಲ್ಲಿ ಅಳವಡಿಸಿದೆ. 48 ಮೆಗಾಪಿಕ್ಸೆಲ್ ಸೋನಿ IMX586 ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಎರಡು ಕ್ಯಾಮೆರಾಗಳನ್ನು ಹಿಂಬಾಗದಲ್ಲಿ ನೀಡಲಾಗಿದೆ. ಡ್ಯುಯಲ್-ಎಲ್ಇಡಿ ಫ್ಲಾಶ್ ಬೆಂಬಲ, ಪಿಡಿಎಎಫ್ ಅನ್ನು ಸಹ ಹಿಂಬಾಗದಲ್ಲಿ ನೋಡಬಹುದಾಗಿದೆ.

13MP ಸೆಲ್ಫಿ ಕ್ಯಾಮೆರಾ!

13MP ಸೆಲ್ಫಿ ಕ್ಯಾಮೆರಾ!

ಹಿಂಬಾಗದಲ್ಲಿ 48MP+5MP ಸಾಮರ್ಥ್ಯದ ಕ್ಯಾಮೆರಾಗಳನ್ನು ಹೊಂದಿರುವ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಪೊರ್ಟ್ರೇಟ್ ಮೋಡ್, , ಹೆಚ್‌ಡಿಆರ್, ಎಐ ಫೇಸ್ ಅನ್ಲಾಕ್, ಎಐ ಸ್ಮಾರ್ಟ್ ಬ್ಯೂಟಿ, ಎಐ ಸಿಂಗಲ್ ಶಾಟ್ ಬ್ಲರ್, ಫ್ರಂಟ್ ಹೆಚ್‌ಡಿಆರ್‌ನಂತಹ ವಿಶೇಷತೆಗಳನ್ನು ಈ ಕ್ಯಾಮೆರಾ ತಂತ್ರಜ್ಞಾನದಲ್ಲಿವೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಕ್ವಿಕ್ ಚಾರ್ಜ್ 4 ತಂತ್ರಜ್ಞಾನ ಬೆಂಬಲದೊಂದಿಗೆ 4,000 mAh ಬ್ಯಾಟರಿಯನ್ನು 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇದು 251 ಗಂಟೆಗಳ ಸ್ಟ್ಯಾಂಡ್‌ ಬೈ ಸಮಯ, 23 ಗಂಟೆಗಳ ಟಾಕ್ ಟೈಮ್, 13 ಗಂಟೆಗಳ ವೀಡಿಯೋ ಪ್ಲೇಬ್ಯಾಕ್, ಮತ್ತು 7 ಗಂಟೆಗಳ ಗೇಮಿಂಗ್‌ವರೆಗೆ ಬ್ಯಾಟರಿ ಸಾಮರ್ಥ್ಯವನ್ನು ನೀಡಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಟೈಪ್ ಸಿ ಪೋರ್ಟ್, 3.5mm ಆಡಿಯೋ ಜ್ಯಾಕ್, 4ಜಿ ವೋಲ್ಟ್, ಜಿಪಿಎಸ್, ಎಜಿಪಿಎಸ್, ಗ್ಲೋನಾಸ್, ಬ್ಲೂಟೂತ್ ವಿ5, ಮತ್ತು ವೈ-ಫೈ 802.11 ಎ / ಬಿ / ಜಿ / ಎನ್ / ಎಸಿ. ಸೇರಿದಂತೆ 450 ನಿಟ್ಸ್ ಬ್ರೈಟ್ನೆಸ್, 84 ಶೇಕಡಾ ಎನ್ ಟಿ ಎಸ್ ಸಿ ಕಲರ್ ಗ್ಯಾಮೆಟ್‌ನಂತಹ ಇತ್ತೀಚಿನ ಹಲವು ನೂತನ ತಂತ್ರಜ್ಞಾನಗಳನ್ನು 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಪೋನಿನಲ್ಲಿ ತರಲಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಚೀನಾದಲ್ಲಿ ಮಾತ್ರ ಮೊದಲು ಬಿಡುಗಡೆಯಾಗಿರುವ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಪೋನ್ ಬೆಲೆ ಕೇವಲ '999 CNY' ( 10,200 ರೂ.)ಗಳಿಂದ ಆರಂಭವಾಗಿದೆ. 3GB RAM + 32GB ಫೋನ್ ಬೆಲೆ '999 ಸಿಎನ್‌ವೈ'( 10,200 ರೂ.)ಗಳಾದರೆ, 4GB RAM + 64GB ಫೋನ್ ಬೆಲೆ CNY 1,199 (ರೂ. 12,400)ಗಳಾಗಿವೆ. ಇನ್ನು ಇದೇ ಜನವರಿ15ನೇ ತಾರೀಖಿನಿಂದ ಫೋನ್ ಮಾರಾಟಕ್ಕೆ ಬರುತ್ತಿದೆ.

Best Mobiles in India

English summary
Xiaomi has finally launched the Redmi Note 7 under its new 'Redmi by Xiaomi' sub-brand. The smartphone sports a waterdrop-shaped notch, dual rear camera setup, a 48-megapixel sensor at the back, a rear fingerprint sensor, and a 4,000mAh battery. It also features 2.5D glass protection up front and at the back as well. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X