ಭರ್ಜರಿ ಸುದ್ದಿ!..ಇಂದಿನಿಂದ 'ರೆಡ್‌ಮಿ ನೋಟ್ 8' ಫೋನ್‌ಗಳ ಫ್ಲಾಶ್‌ಸೇಲ್ ಆರಂಭ!

|

ಮೊಬೈಲ್ ಪ್ರಿಯರು ಕಾದುಕುಳಿತಿರುವ ಶಿಯೋಮಿಯ ''ರೆಡ್‌ಮಿ ನೋಟ್ 8 ಸರಣಿ'' ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಇಂದಿನಿಂದ ಮಾರಾಟಕ್ಕೆ ಬರುತ್ತಿವೆ. ರೆಡ್‌ಮಿ ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಕ್ರಮವಾಗಿ 9,999 ರೂ.ಗಳು ಹಾಗೂ 14,999 ರೂಪಾಯಿಗಳಿಂದ ಆರಂಭಿಸಿ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆ ಮೂಡಿಸಲು ತಯಾರಾಗಿರುವ ಶಿಯೋಮಿ, ಇಂದು ಮಧ್ಯಾಹ್ನ 12 ಗಂಟೆಗೆ ರೆಡ್‌ಮಿ ನೋಟ್ 8 ಸರಣಿ ಫ್ಲಾಶ್‌ಸೇಲ್ ಆಯೋಜಿಸಿದೆ. ಇನ್ನು ಇದೇ ಸಮಯದಲ್ಲಿ ಅಮೆಜಾನ್ ತಾಣದಲ್ಲೂ ಲಭ್ಯವಿರಲಿದೆ.

 ರೆಡ್ಮಿ 8 ನೋಟ್

ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಕಣ್ಣರಳಿಸಿರುವ ರೆಡ್ಮಿ 8 ನೋಟ್ 4 ಜಿಬಿ RAM + 64 ಜಿಬಿ ಸಂಗ್ರಹ ಮಾದರಿಯ ಬೆಲೆ 9,999 ರೂ.ಗಳಿಂದ ಆರಂಭವಾಗಿದ್ದರೆ, 6 ಜಿಬಿ RAM + 128 ಜಿಬಿ ಮಾದರಿಯ ರೆಡ್ಮಿ ನೋಟ್ 8 ಬೆಲೆ ಕೇವಲ 12,999 ರೂ.ಗಳಾಗಿವೆ. ಹಾಗೆಯೇ, 6 ಜಿಬಿ RAM + 64 ಜಿಬಿ ಮೆಮೊರಿ ಮಾದರಿಯ ರೆಡ್ಮಿ ನೋಟ್ 8 ಪ್ರೊ 14,999 ರೂ., 6 ಜಿಬಿ RAM + 128 ಜಿಬಿ ಮಾದರಿಯ ಬೆಲೆ 15,999 ರೂ. ಮತ್ತು 8 ಜಿಬಿ RAM+ 128 ಜಿಬಿ ಸಂಗ್ರಹ ಮಾದರಿದ ಹೈ ಎಂಡ್ ಫೋನಿನ ಬೆಲೆ ಕೇವಲ 17,999 ರೂ.ಗಳಾಗಿವೆ.

ಕ್ಯಾಮೆರಾಗಳು

ರೆಡ್‌ಮಿ ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ ಎರಡೂ ಫೋನ್‌ಗಳು ಶಕ್ತಿಯುತವಾದ ಪ್ರೊಸೆಸರ್, ನಾಲ್ಕು ಹಿಂಬದಿಯ ಕ್ಯಾಮೆರಾಗಳು ಸೇರಿದಂತೆ ಹಲವು ವಿಶೇಷ ಫೀಚರ್ಸ್ ಹೊತ್ತುಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿವೆ. ರೆಡ್‌ಮಿ ನೋಟ್ 8 ಪ್ರೊ 64 ಎಂಪಿ ಕ್ವಾಡ್-ಕ್ಯಾಮೆರಾ ಸೆಟಪ್‌ನೊಂದಿಗೆ ಬಂದಿರುವ ವಿಶ್ವದ ಮೊದಲ ಫೋನ್ ಎಂಬ ಹೆಗ್ಗಳಿಕೆಯನ್ನು ಸಹ ಪಡೆದಿದೆ. ಹಾಗಾದರೆ, ಇಂದು ದೇಶದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ರೆಡ್ಮಿ ನೋಟ್ 8'ಸರಣಿ ಫೋನ್‌ಗಳು ಹೇಗಿವೆ?, ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

 @ರೆಡ್ಮಿ ನೋಟ್ 8 ಪ್ರೊ ಹೇಗಿದೆ?

@ರೆಡ್ಮಿ ನೋಟ್ 8 ಪ್ರೊ ಹೇಗಿದೆ?

ಇಂದು ರೆಡ್‌ಮಿ ಬಿಡುಗಡೆ ಮಾಡಿದ ಎರಡು ಫೋನ್‌ಗಳಲ್ಲಿ ದೊಡ್ಡ ಆವೃತ್ತಿಯೊಂದಿಗೆ ಪ್ರಾರಂಭವಾಗುವ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ 6.53-ಇಂಚಿನ ಪೂರ್ಣ-ಎಚ್‌ಡಿ + (1080x2340 ಪಿಕ್ಸೆಲ್‌ಗಳು) ಪರದೆಯನ್ನು ಹೊಂದಿದೆ. 19.5: 9 ಆಕಾರ ಅನುಪಾತ, ವಾಟರ್‌ಡ್ರಾ -ಶೈಲಿಯ ನಾಚ್ ಮತ್ತು ಗೊರಿಲ್ಲಾ ಗ್ಲಾಸ್ 5 ಅನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ಯಾಕ್ ಮಾಡುತ್ತದೆ.

ರೆಡ್ಮಿ ನೋಟ್ 8 ಪ್ರೊ ಪ್ರೊಸೆಸರ್

ರೆಡ್ಮಿ ನೋಟ್ 8 ಪ್ರೊ ಪ್ರೊಸೆಸರ್

ನೋಟ್ 8 ಪ್ರೊನಲ್ಲಿ ಮೀಡಿಯಾಟೆಕ್‌ನ ಗೇಮಿಂಗ್ ಫೋಕಸ್ಡ್ ಹೆಲಿಯೊ ಜಿ 90 ಟಿ SoCಯನ್ನು ತರಲಾಗಿದೆ.8GB ವರೆಗೆ RAM ನೊಂದಿಗೆ ಗೇಮಿಂಗ್ ಅನುಭವವನ್ನು ಸುಧಾರಿಸಲು ಫೋನ್‌ನಲ್ಲಿ ಲಿಕ್ವಿಡ್ ಕೂಲಿಂಗ್ ಬೆಂಬಲವನ್ನು ಕೂಡ ಸೇರಿಸಿದೆ. ಗೇಮಿಂಗ್-ಕೇಂದ್ರಿತ ವೈಶಿಷ್ಟ್ಯಗಳಾದ ಗೇಮ್ ಟರ್ಬೊ 2.0 ಮೋಡ್ ಮತ್ತು ಗೇಮ್ ಕಂಟ್ರೋಲರ್ ಅನ್ನು ಒಳಗೊಂಡಿದೆ.

ರೆಡ್ಮಿ ನೋಟ್ 8 ಪ್ರೊ ಕ್ಯಾಮೆರಾ

ರೆಡ್ಮಿ ನೋಟ್ 8 ಪ್ರೊ ಕ್ಯಾಮೆರಾ

ರೆಡ್‌ಮಿ ನೋಟ್ 8 ಪ್ರೊ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ. 64 ಎಂಪಿ ಸ್ಯಾಮ್‌ಸಂಗ್ ಜಿಡಬ್ಲ್ಯೂ 1 ಸಂವೇದಕ, 8 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 2 ಎಂಪಿ ಮ್ಯಾಕ್ರೋ ಲೆನ್ಸ್ ಮತ್ತು 2 ಎಂಪಿ ಡೆಪ್ತ್ ಸೆನ್ಸಾರ್‌ನೊಂದಿಗೆ ಜೋಡಿಯಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳನ್ನು ಸೆರೆಹಿಡಿಯಲು ಫೋನ್ 20 ಎಂಪಿ ಸೆಲ್ಫೀ ಕ್ಯಾಮೆರಾ ಹೊಂದಿದೆ.

ರೆಡ್ಮಿ ನೋಟ್ 8 ಪ್ರೊ ಇತರೆ ಫೀಚರ್ಸ್

ರೆಡ್ಮಿ ನೋಟ್ 8 ಪ್ರೊ ಇತರೆ ಫೀಚರ್ಸ್

ನೋಟ್ 8 ಪ್ರೊ 4500mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿದರೂ ಸಹ 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಸಹ ಉಳಿಸಿಕೊಂಡಿದೆ. ಈ ಬೆಲೆ ವ್ಯಾಪ್ತಿಯಲ್ಲಿ ಐಪಿ 52 ಪ್ರಮಾಣೀಕರಣವನ್ನು ಹೊಂದಿರುವ ಏಕೈಕ ಸ್ಮಾರ್ಟ್‌ಫೋನ್ ಆಗಿ ರೆಡ್‌ಮಿ ನೋಟ್ 8 ಪ್ರೊ ಹೊರಹೊಮ್ಮಿದೆ.

ರೆಡ್ಮಿ ನೋಟ್ 8 ಬೆಲೆ ಮತ್ತು ಮಾರಾಟ

ರೆಡ್ಮಿ ನೋಟ್ 8 ಬೆಲೆ ಮತ್ತು ಮಾರಾಟ

ಭಾರತದಲ್ಲಿ ರೆಡ್‌ಮಿ ನೋಟ್ 8 ಪ್ರ ಬೆಲೆ 14,999 ರೂ.ಗಳಿಂದ ಆರಂಭವಾಗಿದೆ. 6 ಜಿಬಿ RAM + 64 ಜಿಬಿ ಮೆಮೊರಿ ಮಾದರಿಯ ಫೋನ್ 14,999 ರೂ., 6 ಜಿಬಿ RAM + 128 ಜಿಬಿ ಮಾದರಿಯ 15,999 ರೂ. ಮತ್ತು 8 ಜಿಬಿ RAM+ 128 ಜಿಬಿ ಮಾದರಿ ಫೋನಿನ ಬೆಲೆ ಕೇವಲ 17,999 ರೂ.ಗಳಾಗಿವೆ. ಇನ್ನು ಇದೇ ಅಕ್ಟೋಬರ್ 21 ರಿಂದ ಫೋನ್ ಮಾರಾಟಕ್ಕೆ ಬರುತ್ತಿವೆ.

@ರೆಡ್ಮಿ ನೋಟ್ 8 ಹೇಗಿದೆ?

@ರೆಡ್ಮಿ ನೋಟ್ 8 ಹೇಗಿದೆ?

ಶಿಯೋಮಿ ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ 6.39-ಇಂಚಿನ ಪೂರ್ಣ-ಎಚ್‌ಡಿ + 1080x2340 ಪಿಕ್ಸೆಲ್‌ಗಳು) ಪರದೆ ಹೊಂದಿದೆ, 90 ಪ್ರತಿಶತದಷ್ಟು ಸ್ಕ್ರೀನ್-ಟು -ಬಾಡಿ ಅನುಪಾತ ಮತ್ತು 19.5: 9 ಆಕಾರ ಅನುಪಾತ. ಫೋನ್ ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ ಮತ್ತು ವಾಟರ್ ಡ್ರಾಪ್ ಶೈಲಿಯ ನಾಚ್ ಅಪ್ ಫ್ರಂಟ್ ಅನ್ನು ಹೊಂದಿದೆ.

ರೆಡ್ಮಿ  ನೋಟ್ 8 ಪ್ರೊಸೆಸರ್

ರೆಡ್ಮಿ ನೋಟ್ 8 ಪ್ರೊಸೆಸರ್

ರೆಡ್‌ಮಿ ನೋಟ್ 8 ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 6 ಜಿಬಿ RAM ಮತ್ತು 128 ಜಿಬಿ ಆನ್‌ಬೋರ್ಡ್ ಸಂಗ್ರಹದೊಂದಿಗೆ ಬಂದಿದೆ. ಆಂಡ್ರಾಯ್ಡ್ 9 ಪೈ ಆಧಾರಿತ ಡ್ಯುಯಲ್ ಸಿಮ್ (ನ್ಯಾನೊ) ಕಾರ್ಯನಿರ್ವಹಿಸುವ ಈ ಫೋನಿನ ಬೇಸ್ ರೂಪಾಂತರದ ಶೇಖರಣೆಯನ್ನು 64 ಜಿಬಿಗೆ ಹೆಚ್ಚಿಸಿ ಶಿಯೋಮಿ ಸಿಹಿಸುದ್ದಿ ನೀಡಿದೆ

ರೆಡ್ಮಿ ನೋಟ್ 8 ಕ್ಯಾಮೆರಾ

ರೆಡ್ಮಿ ನೋಟ್ 8 ಕ್ಯಾಮೆರಾ

ರೆಡ್ಮಿ ನೋಟ್ 8 ನಲ್ಲಿ ನಾಲ್ಕು ಹಿಂದಿನ ಕ್ಯಾಮೆರಾಗಳನ್ನು ನಿಡಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಬೆಲೆಗೆ ಕ್ವಾಡ್ ಕ್ಯಾಮೆರಾ ಫೋನ್ ಒಂದು ಬಂದಂತಾಗಿದೆ. 48 ಮೆಗಾಪಿಕ್ಸೆಲ್ ಪ್ರಾಥಮಿಕ, 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಮತ್ತು ಎರಡು 2 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಇನ್ನು 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.

ರೆಡ್ಮಿ ನೋಟ್ 8 ಇತರೆ ಫೀಚರ್ಸ್

ರೆಡ್ಮಿ ನೋಟ್ 8 4000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಸಹ ಹೊಂದಿದೆ. ಕೆಳಭಾಗದಲ್ಲಿ ಯುಎಸ್ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಸ್ಮಾರ್ಟ್‌ಪೋನ್ ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಹೊಂದಿರುವುದು ಈ ಫೋನಿನ ಪ್ರಮುಖ ವಿಶೇಷತೆಗಳನ್ನು ಒಂದಾಗಿದೆ.

ರೆಡ್ಮಿ ನೋಟ್ 8 ಬೆಲೆ ಮತ್ತು ಮಾರಾಟ

ರೆಡ್ಮಿ ನೋಟ್ 8 ಬೆಲೆ ಮತ್ತು ಮಾರಾಟ

ಭಾರತದಲ್ಲಿ ರೆಡ್‌ಮಿ ನೋಟ್ 8 ಸ್ಮಾರ್ಟ್‌ಫೋನ್‌ 9,999 ರೂ.ಗಳಿಂದ ಆರಂಭವಾಗಿದೆ. 4 ಜಿಬಿ RAM + 64 ಜಿಬಿ ಸಂಗ್ರಹ ಮಾದರಿಯ ರೆಡ್ಮಿ ನೋಟ್ 8 ಬೆಲೆ 9,999 ರೂ.ಗಳಾದರೆ, 6 ಜಿಬಿRAM + 128 ಜಿಬಿ ಮಾದರಿಯ ರೆಡ್ಮಿ ನೋಟ್ 8 ಬೆಲೆ ಕೇವಲ 12,999 ರೂ.ಗಳಾಗಿವೆ. ಅಕ್ಟೋಬರ್ 21 ರಿಂದ ಅಮೆಜಾನ್ ಮತ್ತು ಎಂ.ಡಾಟ್‌ಕಾಮ್‌ನಲ್ಲಿ ಫೋನನ್ನು ಖರೀದಿಸಬಹುದು.

Best Mobiles in India

English summary
The Redmi Note 8 Pro is the latest Note series smartphone from Xiaomi that packs 64MP quad camera, MediaTek Helio G90T chipset, and more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X