ಶಿಯೋಮಿಯಿಂದ ಏಕಾಏಕಿ ಬಿಗ್‌ ಸರ್‌ಪ್ರೈಸ್!..ದೇಶದಲ್ಲಿ 9,999ಕ್ಕೆ 'ರೆಡ್‌ಮಿ ನೋಟ್ 8' ಲಾಂಚ್!

|

ಭಾರತದಲ್ಲಿ ರೆಡ್‌ಮಿ ನೋಟ್ 8 ಸರಣಿ ಲಾಂಚ್ ಮಾಡುವುದಾಗಿ ಮೊನ್ನೆ ಮೊನ್ನೆಯಷ್ಟೇ ಸೋರಿಕೆ ಮಾಹಿತಿ ನೀಡಿದ ಶಿಯೋಮಿ ಇಂದು ಯಾರೂ ಊಹಿಸದಂತಹ ಬಿಗ್‌ ಸರ್‌ಪ್ರೈಸ್ ನೀಡಿದೆ. ದೇಶದ ಮೊಬೈಲ್ ಮಾರುಕಟ್ಟೆಯ ವೇಗಕ್ಕಿಂತಲೂ ವೇಗವಾಗಿ ಓಡಲು ಮುಂದಾಗಿರುವ ಶಿಯೋಮಿ, ಮೊಬೈಲ್ ಮಾರುಕಟ್ಟೆಗೆ ಆಶ್ಚರ್ಯವಾಗುವಂತೆ ಇಂದು ತನ್ನ 'ರೆಡ್‌ಮಿ ನೋಟ್ 8 ಸರಣಿ' ಫೋನ್‌ಗಳನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಇದು ಶಿಯೋಮಿ ಪ್ರತಿಸ್ಪರ್ಧಿ ಕಂಪೆನಿಗಳಿಗೆ ಬಿಗ್ ಶಾಕ್ ಆಗಿದ್ದರೆ, ಭಾರತೀಯರಿಗೆ ದೀಪಾವಳಿಯ ಭರ್ಜರಿ ಕೊಡುಗೆಯಾಗಿದೆ.

ಡ್‌ಮಿ ನೋಟ್ 8 ಸರಣಿ'

ಹೌದು, ಶಿಯೋಮಿಯ ಇತ್ತೀಚಿನ ''ರೆಡ್‌ಮಿ ನೋಟ್ 8 ಸರಣಿ'' ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಎಂಟ್ರಿ ನೀಡುವುದನ್ನೇ ಮೊಬೈಲ್ ಪ್ರಿಯರು ಕಾದುಕುಳಿತಿದ್ದರು. ಆದರೆ, ಶಿಯೋಮಿ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಆದರೆ, ಇಂದು ಏಕಾಏಕಿ ''ರೆಡ್‌ಮಿ ನೋಟ್ 8 ಸರಣಿ'' ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ರೆಡ್‌ಮಿ ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಕ್ರಮವಾಗಿ 9,999 ರೂ.ಗಳು ಹಾಗೂ 14,999 ರೂಪಾಯಿಗಳಿಂದ ಆರಂಭಿಸಿ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆ ಮೂಡಿಸಿದೆ.

ರೆಡ್ಮಿ ನೋಟ್ 8 ಬೆಲೆ 9,999 ರೂ.

4 ಜಿಬಿ RAM + 64 ಜಿಬಿ ಸಂಗ್ರಹ ಮಾದರಿಯ ರೆಡ್ಮಿ ನೋಟ್ 8 ಬೆಲೆ 9,999 ರೂ.ಗಳಾದರೆ, 6 ಜಿಬಿ RAM + 128 ಜಿಬಿ ಮಾದರಿಯ ರೆಡ್ಮಿ ನೋಟ್ 8 ಬೆಲೆ ಕೇವಲ 12,999 ರೂ.ಗಳಾಗಿವೆ. ಹಾಗೆಯೇ, 6 ಜಿಬಿ RAM + 64 ಜಿಬಿ ಮೆಮೊರಿ ಮಾದರಿಯ ರೆಡ್ಮಿ ನೋಟ್ 8 ಪ್ರೊ 14,999 ರೂ., 6 ಜಿಬಿ RAM + 128 ಜಿಬಿ ಮಾದರಿಯ ಬೆಲೆ 15,999 ರೂ. ಮತ್ತು 8 ಜಿಬಿ RAM+ 128 ಜಿಬಿ ಸಂಗ್ರಹ ಮಾದರಿದ ಹೈ ಎಂಡ್ ಫೋನಿನ ಬೆಲೆ ಕೇವಲ 17,999 ರೂ.ಗಳಾಗಿವೆ. ಇನ್ನು ಇದೇ ಅಕ್ಟೋಬರ್ 21 ರಿಂದಲೇ ದೇಶದಲ್ಲಿ ಎಲ್ಲಾ ಮಾದರಿ ಫೋನ್‌ಗಳು ಮಾರಾಟಕ್ಕೆ ಬರುತ್ತಿವೆ.

ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ

ಅಂದಾಜು ಎರಡು ತಿಂಗಳ ಹಿಂದೆ ಚೀನಾದಲ್ಲಿ ಬಿಡುಗಡೆಯಾಗಿರುವ ರೆಡ್‌ಮಿ ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ ಎರಡೂ ಫೋನ್‌ಗಳು ಶಕ್ತಿಯುತವಾದ ಪ್ರೊಸೆಸರ್, ನಾಲ್ಕು ಹಿಂಬದಿಯ ಕ್ಯಾಮೆರಾಗಳು ಸೇರಿದಂತೆ ಹಲವು ವಿಶೇಷ ಫೀಚರ್ಸ್ ಹೊತ್ತುಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿವೆ. ರೆಡ್‌ಮಿ ನೋಟ್ 8 ಪ್ರೊ 64 ಎಂಪಿ ಕ್ವಾಡ್-ಕ್ಯಾಮೆರಾ ಸೆಟಪ್‌ನೊಂದಿಗೆ ಬಂದಿರುವ ವಿಶ್ವದ ಮೊದಲ ಫೋನ್ ಎಂಬ ಹೆಗ್ಗಳಿಕೆಯನ್ನು ಸಹ ಪಡೆದಿದೆ. ಹಾಗಾದರೆ, ಇಂದು ದೇಶದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ರೆಡ್ಮಿ ನೋಟ್ 8'ಸರಣಿ ಫೋನ್‌ಗಳು ಹೇಗಿವೆ?, ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

@ರೆಡ್ಮಿ ನೋಟ್ 8 ಪ್ರೊ ಹೇಗಿದೆ?

@ರೆಡ್ಮಿ ನೋಟ್ 8 ಪ್ರೊ ಹೇಗಿದೆ?

ಇಂದು ರೆಡ್‌ಮಿ ಬಿಡುಗಡೆ ಮಾಡಿದ ಎರಡು ಫೋನ್‌ಗಳಲ್ಲಿ ದೊಡ್ಡ ಆವೃತ್ತಿಯೊಂದಿಗೆ ಪ್ರಾರಂಭವಾಗುವ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ 6.53-ಇಂಚಿನ ಪೂರ್ಣ-ಎಚ್‌ಡಿ + (1080x2340 ಪಿಕ್ಸೆಲ್‌ಗಳು) ಪರದೆಯನ್ನು ಹೊಂದಿದೆ. 19.5: 9 ಆಕಾರ ಅನುಪಾತ, ವಾಟರ್‌ಡ್ರಾ -ಶೈಲಿಯ ನಾಚ್ ಮತ್ತು ಗೊರಿಲ್ಲಾ ಗ್ಲಾಸ್ 5 ಅನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ಯಾಕ್ ಮಾಡುತ್ತದೆ.

ರೆಡ್ಮಿ ನೋಟ್ 8 ಪ್ರೊ ಪ್ರೊಸೆಸರ್

ರೆಡ್ಮಿ ನೋಟ್ 8 ಪ್ರೊ ಪ್ರೊಸೆಸರ್

ನೋಟ್ 8 ಪ್ರೊನಲ್ಲಿ ಮೀಡಿಯಾಟೆಕ್‌ನ ಗೇಮಿಂಗ್ ಫೋಕಸ್ಡ್ ಹೆಲಿಯೊ ಜಿ 90 ಟಿ SoCಯನ್ನು ತರಲಾಗಿದೆ.8GB ವರೆಗೆ RAM ನೊಂದಿಗೆ ಗೇಮಿಂಗ್ ಅನುಭವವನ್ನು ಸುಧಾರಿಸಲು ಫೋನ್‌ನಲ್ಲಿ ಲಿಕ್ವಿಡ್ ಕೂಲಿಂಗ್ ಬೆಂಬಲವನ್ನು ಕೂಡ ಸೇರಿಸಿದೆ. ಗೇಮಿಂಗ್-ಕೇಂದ್ರಿತ ವೈಶಿಷ್ಟ್ಯಗಳಾದ ಗೇಮ್ ಟರ್ಬೊ 2.0 ಮೋಡ್ ಮತ್ತು ಗೇಮ್ ಕಂಟ್ರೋಲರ್ ಅನ್ನು ಒಳಗೊಂಡಿದೆ.

ರೆಡ್ಮಿ ನೋಟ್ 8 ಪ್ರೊ ಕ್ಯಾಮೆರಾ

ರೆಡ್ಮಿ ನೋಟ್ 8 ಪ್ರೊ ಕ್ಯಾಮೆರಾ

ರೆಡ್‌ಮಿ ನೋಟ್ 8 ಪ್ರೊ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ. 64 ಎಂಪಿ ಸ್ಯಾಮ್‌ಸಂಗ್ ಜಿಡಬ್ಲ್ಯೂ 1 ಸಂವೇದಕ, 8 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 2 ಎಂಪಿ ಮ್ಯಾಕ್ರೋ ಲೆನ್ಸ್ ಮತ್ತು 2 ಎಂಪಿ ಡೆಪ್ತ್ ಸೆನ್ಸಾರ್‌ನೊಂದಿಗೆ ಜೋಡಿಯಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳನ್ನು ಸೆರೆಹಿಡಿಯಲು ಫೋನ್ 20 ಎಂಪಿ ಸೆಲ್ಫೀ ಕ್ಯಾಮೆರಾ ಹೊಂದಿದೆ.

ರೆಡ್ಮಿ ನೋಟ್ 8 ಪ್ರೊ ಇತರೆ ಫೀಚರ್ಸ್

ರೆಡ್ಮಿ ನೋಟ್ 8 ಪ್ರೊ ಇತರೆ ಫೀಚರ್ಸ್

ನೋಟ್ 8 ಪ್ರೊ 4500mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿದರೂ ಸಹ 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಸಹ ಉಳಿಸಿಕೊಂಡಿದೆ. ಈ ಬೆಲೆ ವ್ಯಾಪ್ತಿಯಲ್ಲಿ ಐಪಿ 52 ಪ್ರಮಾಣೀಕರಣವನ್ನು ಹೊಂದಿರುವ ಏಕೈಕ ಸ್ಮಾರ್ಟ್‌ಫೋನ್ ಆಗಿ ರೆಡ್‌ಮಿ ನೋಟ್ 8 ಪ್ರೊ ಹೊರಹೊಮ್ಮಿದೆ.

ರೆಡ್ಮಿ ನೋಟ್ 8 ಬೆಲೆ ಮತ್ತು ಮಾರಾಟ

ರೆಡ್ಮಿ ನೋಟ್ 8 ಬೆಲೆ ಮತ್ತು ಮಾರಾಟ

ಭಾರತದಲ್ಲಿ ರೆಡ್‌ಮಿ ನೋಟ್ 8 ಪ್ರ ಬೆಲೆ 14,999 ರೂ.ಗಳಿಂದ ಆರಂಭವಾಗಿದೆ. 6 ಜಿಬಿ RAM + 64 ಜಿಬಿ ಮೆಮೊರಿ ಮಾದರಿಯ ಫೋನ್ 14,999 ರೂ., 6 ಜಿಬಿ RAM + 128 ಜಿಬಿ ಮಾದರಿಯ 15,999 ರೂ. ಮತ್ತು 8 ಜಿಬಿ RAM+ 128 ಜಿಬಿ ಮಾದರಿ ಫೋನಿನ ಬೆಲೆ ಕೇವಲ 17,999 ರೂ.ಗಳಾಗಿವೆ. ಇನ್ನು ಇದೇ ಅಕ್ಟೋಬರ್ 21 ರಿಂದ ಫೋನ್ ಮಾರಾಟಕ್ಕೆ ಬರುತ್ತಿವೆ.

@ರೆಡ್ಮಿ ನೋಟ್ 8 ಹೇಗಿದೆ?

@ರೆಡ್ಮಿ ನೋಟ್ 8 ಹೇಗಿದೆ?

ಶಿಯೋಮಿ ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ 6.39-ಇಂಚಿನ ಪೂರ್ಣ-ಎಚ್‌ಡಿ + 1080x2340 ಪಿಕ್ಸೆಲ್‌ಗಳು) ಪರದೆ ಹೊಂದಿದೆ, 90 ಪ್ರತಿಶತದಷ್ಟು ಸ್ಕ್ರೀನ್-ಟು -ಬಾಡಿ ಅನುಪಾತ ಮತ್ತು 19.5: 9 ಆಕಾರ ಅನುಪಾತ. ಫೋನ್ ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ ಮತ್ತು ವಾಟರ್ ಡ್ರಾಪ್ ಶೈಲಿಯ ನಾಚ್ ಅಪ್ ಫ್ರಂಟ್ ಅನ್ನು ಹೊಂದಿದೆ.

ರೆಡ್ಮಿ ನೋಟ್ 8 ಪ್ರೊಸೆಸರ್

ರೆಡ್ಮಿ ನೋಟ್ 8 ಪ್ರೊಸೆಸರ್

ರೆಡ್‌ಮಿ ನೋಟ್ 8 ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 6 ಜಿಬಿ RAM ಮತ್ತು 128 ಜಿಬಿ ಆನ್‌ಬೋರ್ಡ್ ಸಂಗ್ರಹದೊಂದಿಗೆ ಬಂದಿದೆ. ಆಂಡ್ರಾಯ್ಡ್ 9 ಪೈ ಆಧಾರಿತ ಡ್ಯುಯಲ್ ಸಿಮ್ (ನ್ಯಾನೊ) ಕಾರ್ಯನಿರ್ವಹಿಸುವ ಈ ಫೋನಿನ ಬೇಸ್ ರೂಪಾಂತರದ ಶೇಖರಣೆಯನ್ನು 64 ಜಿಬಿಗೆ ಹೆಚ್ಚಿಸಿ ಶಿಯೋಮಿ ಸಿಹಿಸುದ್ದಿ ನೀಡಿದೆ

ರೆಡ್ಮಿ ನೋಟ್ 8 ಕ್ಯಾಮೆರಾ

ರೆಡ್ಮಿ ನೋಟ್ 8 ಕ್ಯಾಮೆರಾ

ರೆಡ್ಮಿ ನೋಟ್ 8 ನಲ್ಲಿ ನಾಲ್ಕು ಹಿಂದಿನ ಕ್ಯಾಮೆರಾಗಳನ್ನು ನಿಡಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಬೆಲೆಗೆ ಕ್ವಾಡ್ ಕ್ಯಾಮೆರಾ ಫೋನ್ ಒಂದು ಬಂದಂತಾಗಿದೆ. 48 ಮೆಗಾಪಿಕ್ಸೆಲ್ ಪ್ರಾಥಮಿಕ, 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಮತ್ತು ಎರಡು 2 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಇನ್ನು 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.

ರೆಡ್ಮಿ ನೋಟ್ 8 ಇತರೆ ಫೀಚರ್ಸ್

ರೆಡ್ಮಿ ನೋಟ್ 8 ಇತರೆ ಫೀಚರ್ಸ್

ರೆಡ್ಮಿ ನೋಟ್ 8 4000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಸಹ ಹೊಂದಿದೆ. ಕೆಳಭಾಗದಲ್ಲಿ ಯುಎಸ್ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಸ್ಮಾರ್ಟ್‌ಪೋನ್ ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಹೊಂದಿರುವುದು ಈ ಫೋನಿನ ಪ್ರಮುಖ ವಿಶೇಷತೆಗಳನ್ನು ಒಂದಾಗಿದೆ.

ರೆಡ್ಮಿ ನೋಟ್ 8 ಬೆಲೆ ಮತ್ತು ಮಾರಾಟ

ರೆಡ್ಮಿ ನೋಟ್ 8 ಬೆಲೆ ಮತ್ತು ಮಾರಾಟ

ಭಾರತದಲ್ಲಿ ರೆಡ್‌ಮಿ ನೋಟ್ 8 ಸ್ಮಾರ್ಟ್‌ಫೋನ್‌ 9,999 ರೂ.ಗಳಿಂದ ಆರಂಭವಾಗಿದೆ. 4 ಜಿಬಿ RAM + 64 ಜಿಬಿ ಸಂಗ್ರಹ ಮಾದರಿಯ ರೆಡ್ಮಿ ನೋಟ್ 8 ಬೆಲೆ 9,999 ರೂ.ಗಳಾದರೆ, 6 ಜಿಬಿRAM + 128 ಜಿಬಿ ಮಾದರಿಯ ರೆಡ್ಮಿ ನೋಟ್ 8 ಬೆಲೆ ಕೇವಲ 12,999 ರೂ.ಗಳಾಗಿವೆ. ಅಕ್ಟೋಬರ್ 21 ರಿಂದ ಅಮೆಜಾನ್ ಮತ್ತು ಎಂ.ಡಾಟ್‌ಕಾಮ್‌ನಲ್ಲಿ ಫೋನನ್ನು ಖರೀದಿಸಬಹುದು.

Best Mobiles in India

English summary
Redmi Note 8, Redmi Note 8 Pro will be available starting 21 October The smartphone will go on sale on Amazon India. Xiaomi Redmi Note 8 Pro pricing:6 GB RAM + 64 GB = Rs 14,9996 GB RAM + 128 GB storage = Rs 15,9998 GB RAM + 128 GB storage = Rs 17,999Xiaomi Redmi Note 8 pricing:4 GB RAM + 64 GB storage = Rs 9,9996.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X