Subscribe to Gizbot

ಭಾರತದಲ್ಲಿ ಶಿಯೋಮಿ 'ರೆಡ್‌ ಮಿ ನೋಟ್ 5 ಬಿಡುಗಡೆ!!..ಏನೆಲ್ಲಾ ಫೀಚರ್ಸ್? ಬೆಲೆ ಎಷ್ಟು? ಫುಲ್ ಡೀಟೆಲ್ಸ್!!

Written By:
Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್

ನಿರೀಕ್ಷೆಯಂತೆಯೇ ಭಾರತದಲ್ಲಿ ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ಇಂದು ಬಿಡುಗಡೆಯಾಗಿದೆ.! ರೆಡ್‌ ಮಿ ನೋಟ್ 4 ಯಶಸ್ಸನ್ನು ಮತ್ತೆ ಪಡೆಯಲು ಶಿಯೋಮಿ ರೆಡ್‌ ಮಿ ನೋಟ್ 5 ಅನ್ನು ಭಾರತದಲ್ಲಿಯೇ ಮೊದಲು ಬಿಡುಗಡೆ ಮಾಡಿ ವಿಶ್ವ ಮೊಬೈಲ್ ಮಾರುಕಟ್ಟೆಗೆ ಶಿಯೋಮಿ ಶಾಕ್ ನೀಡಿದೆ.!!

ಭಾರತದಲ್ಲಿ ಶಿಯೋಮಿ 'ರೆಡ್‌ ಮಿ ನೋಟ್ 5 ಬಿಡುಗಡೆ!!..ಏನೆಲ್ಲಾ ಫೀಚರ್ಸ್?

ಭಾರತದಲ್ಲಿಯೇ ಮೊದಲು ನೇರವಾಗಿ ಲಾಂಚ್ ಆದ ಮೊದಲ ಸ್ಮಾರ್ಟ್‌ಫೋನ್ ಇದಾಗಿದ್ದು, ಇದು ಶಿಯೋಮಿ ಬಿಡುಗಡೆಮಾಡಿರುವ ಈ ವರ್ಷದ ಮೊದಲ ಸ್ಮಾರ್ಟ್‌ಫೋನ್ ಕೂಡ ಆಗಿದೆ.! ಅತ್ಯಂತ ಕಡಿಮೆ ಬೆಲೆಯಲ್ಲಿ ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಹಾಗಾದರೆ, ರೆಡ್‌ ಮಿ ನೋಟ್ 5 ಫೋನ್ ಫೀಚರ್ಸ್ ಯಾವುವು? ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.99 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ!!

5.99 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ!!

18:9 ಅನುಪಾತದಲ್ಲಿ 5.99 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಮೂಲಕ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. 8.05mm ದಪ್ಪವಿರುವ ರೆಡ್ಮಿ ನೋಟ್ 5 ಸ್ಮಾರ್ಟ್‌ಫೋನ್ ಮೆಟಲ್ ಬಾಡಿ ಹಾಗೂ ಹಿಂಬಾಗದಲ್ಲಿ ಟ್ಯಾಪರೆಡ್ ಬ್ಯಾಕ್ ಕವರ್ ಹೊಂದಿದೆ.!!

ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್!!

ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್!!

ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇನ್ನು ಸ್ಮಾರ್ಟ್‌ಫೋನ್ 3GB RAM ಮತ್ತು 32GB ಮೆಮೊರಿ ಹಾಗೂ 4GB ಮತ್ತು 64GB ಮೆಮೊರಿಯ ಎರಡು ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ.!

4000mAh ಬ್ಯಾಟರಿ!!

4000mAh ಬ್ಯಾಟರಿ!!

ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯನ್ನು ಹೊಂದಿದೆ. 14 ಗಂಟೆಗಳ ವಿಡಿಯೋ ಪ್ಲೇಬ್ಯಾಕ್, 26 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್, 22 ಗಂಟೆಗಳು ಕಾಲ್ ಸ್ಟಾಂಡ್ ಬೈ ಶಕ್ತಿಯನ್ನು ಶಿಯೋಮಿ ರೆಡ್‌ ಮಿ ನೋಟ್ 5 ಫೋನ್ ಬ್ಯಾಟರಿ ಹೊಂದಿದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.!!

ನೋಟ್ 5 ಕ್ಯಾಮೆರಾ ಹೇಗಿದೆ?

ನೋಟ್ 5 ಕ್ಯಾಮೆರಾ ಹೇಗಿದೆ?

ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಹೊಂದಿರಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ.! ರೆಡ್‌ ಮಿ ನೋಟ್ 5 ಪೋನ್ 12 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಜತೆಗೆ 1.5M ಲಾರ್ಜ್ ಪಿಕ್ಸೆಲ್ಸ್ ಅನ್ನು ನೀಡಲಾಗಿದೆ.! ಆದರೆ, ಸೆಲ್ಫಿ ಕ್ಯಾಮೆರಾದ ಬಗ್ಗೆ ಶಿಯೋಮಿ ಯಾವುದೇ ಮಾಹಿತಿ ನೀಡಿಲ್ಲ.!!

ಉಚಿತ ಮೊಬೈಲ್ ಕೇಸ್!!

ಉಚಿತ ಮೊಬೈಲ್ ಕೇಸ್!!

ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ಜತಗೆ ಅಲ್ಟ್ರಾ ಸ್ಲಿಮ್ ಮೊಬೈಲ್ ಕೇಸ್ ಅನ್ನು ಶಿಯೋಮಿ ಕಂಪೆನಿ ಉಚಿತವಾಗಿ ನೀಡುತ್ತಿದೆ.! ಇತರ ಮೊಬೈಲ್‌ ಕೇಸ್‌ಗಳಿಂದ ಸ್ಮಾರ್ಟ್‌ಫೋನ್ ಬಿಸಿಯಾಗುವುದನ್ನು ತಪ್ಪಿಸಲು ಶಿಯೋಮಿ ಕಂಪೆನಿಯೇ ಅತ್ಯುತ್ತಮ ಮೊಬೈಲ್ ಕೇಸ್ ನೀಡುತ್ತಿದೆ ಎನ್ನಲಾಗಿದೆ.!!

ರೆಡ್‌ ಮಿ ನೋಟ್ 5 ಬೆಲೆ ಎಷ್ಟು?

ರೆಡ್‌ ಮಿ ನೋಟ್ 5 ಬೆಲೆ ಎಷ್ಟು?

ಶಿಯೋಮಿ ರೆಡ್ ಮಿ ನೋಟ್ 5 ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಕಾಲಿಟ್ಟಿದ್ದು, 3GB RAM ಮತ್ತು 32GB ಮೆಮೊರಿ ವೆರಿಯಂಟ್ ಫೋನ್ ಬೆಲೆ ಕೇವಲ 9,999 ರೂಪಾಯಿಗಳಾಗಿದೆ. ಇನ್ನು 4GB ಮತ್ತು 64GB ಮೆಮೊರಿಯಂಟ್ ರೆಡ್ ಮಿ ನೋಟ್ 5 ಬೆಲೆ 11,999 ರೂಪಾಯಿಗಳಿಗೆ ಬಿಡುಗಡೆಗೊಂಡಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Redmi Note 5 comes with a 4000mAh full-day battery, a battery that ensures that you have enough juice for all-day activities from video playback to gaming
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot