ಶಿಯೋಮಿ 'ರೆಡ್ಮಿ ಕೆ20 ಪ್ರೊ' ಬಂದರೆ 'ಒನ್‌ಪ್ಲಸ್ 7 ಪ್ರೊ' ಕಥೆ ಕ್ಲೋಸ್!

|

ಮೊನ್ನೆ ಮೊನ್ನೆಯಷ್ಟೇ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟ ಒನ್‌ಪ್ಲಸ್ 7 ಪ್ರೊಗೆ ಶುಭಕೋರಿದ ಶಿಯೋಮಿ ಕಂಪೆನಿ ಅದರ ಜೊತೆಯಲ್ಲೇ ಎಚ್ಚರಿಕೆಯೊಂದನ್ನು ರವಾನಿಸಿದ್ದು ಮೊಬೈಲ್ ಮಾರುಕಟ್ಟೆಯಲ್ಲಿ ಸ್ವಲ್ಪ ಗೊಂದಲವನ್ನು ಮೂಡಿಸಿತ್ತು. ಶಿಯೋಮಿ ನೀಡಿದ ಆ ಎಚ್ಚರಿಕೆ ಏನು ಎಂಬುದು ಎಲ್ಲರ ತಲೆಕೆಡಿಸಿತ್ತು. ಆದರೆ, ಈಗ ಆ ಗೊಂದಲ ಪರಿಹಾರವಾಗಿದೆ. ಒನ್‌ಪ್ಲಸ್ 7 ಪ್ರೊಗೆ ಶುಭಕೋರುವ ಜೊತೆಗೆ ಶಿಯೋಮಿ ನೀಡಿದ ಎಚ್ಚರಿಕೆ ಏನು ಎಂಬುದನ್ನು ಶಿಯೋಮಿಯ ಇತ್ತೀಚಿನ ಸ್ಮಾರ್ಟ್‌ಗಫೋನ್ ಬಿಡುಗಡೆ ಸುದ್ದಿ ಬಹಿರಂಗಪಡಿಸಿದೆ.

ಶಿಯೋಮಿ 'ರೆಡ್ಮಿ ಕೆ20 ಪ್ರೊ' ಬಂದರೆ 'ಒನ್‌ಪ್ಲಸ್ 7 ಪ್ರೊ' ಕಥೆ ಕ್ಲೋಸ್!

ಹೌದು, ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದ ತಕ್ಷಣದಲ್ಲೇ ಶಿಯೋಮಿ ತನ್ನ ಮುಂದಿನ ಪ್ರೀಮಿಯಂ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ನೀಡಿದೆ. ಒನ್‌ಪ್ಲಸ್ 7 ಪ್ರೊ ನಂತರಯೇ ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್ ಒಂದು ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್‌ನಿಂದ ರನ್ ಆಗಲಿದೆ ಎಂದು ಖಚಿತವಾಗಿದೆ. ವೈಬೋ ಪೋಸ್ಟ್ ನಲ್ಲಿ ರೆಡ್ಮಿಯ ಜನರಲ್ ಮ್ಯಾನೇಜರ್ ಲು ವಯಬಿಂಗ್ ಅವರು ಹೊಸ ರೆಡ್ಮಿ ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಮಾಹಿತಿಗಳನ್ನು ಖಾತ್ರಿಗೊಳಿಸಿದ್ದಾರೆ.

ಶಿಯೋಮಿ 'ರೆಡ್ಮಿ ಕೆ20 ಪ್ರೊ' ಬಂದರೆ 'ಒನ್‌ಪ್ಲಸ್ 7 ಪ್ರೊ' ಕಥೆ ಕ್ಲೋಸ್!

ಬಜೆಟ್ ಬೆಲೆಯಲ್ಲೇ ಪ್ರೀಮಿಯಂ ಸ್ಮಾರ್ಟ್‌ಪೋನ್‌ಗಳ ತಯಾರಿಕೆಗೆ ಮುಂದಾಗಿರುವ ಶಿಯೋಮಿ ಕಂಪೆನಿ ಕೆಲವೇ ದಿನಗಳಲ್ಲಿ ರೆಡ್ಮಿ ಕೆ20 ಪ್ರೊ( ಶಿಯೋಮಿ ಪೊಕೊ ಫೋನ್ 2) ಎಂಬ ಸ್ಮಾರ್ಟ್‌ಪೋನ್ ಅನ್ನು ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ. ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್, 6.39- ಇಂಚಿನ AMOLED ಸ್ಕ್ರೀನ್ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಶಿಯೋಮಿ ಪೊಕೊ ಫೋನ್ 2 ಆಗಿ ಎಂಟ್ರಿ ನೀಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಓದಿರಿ: ಅಬ್ಬಾ.! ಭಾರತದಲ್ಲಿ 'ಶಿಯೋಮಿ' ಮಾರಿದ ಸ್ಮಾರ್ಟ್‌ಟಿವಿಗಳು ಎಷ್ಟು ಗೊತ್ತಾ?

ಶಿಯೋಮಿ ಪೊಕೊ ಫೋನ್ 2!

ಶಿಯೋಮಿ ಪೊಕೊ ಫೋನ್ 2!

ಹೊಸದಾಗಿ ಲೀಕ್ ಆಗಿರುವ ಸುದ್ದಿಯ ಪ್ರಕಾರ, ಶಿಯೋಮಿಯ ಮುಂಬರುವ ಬಜೆಟ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ರೆಡ್ಮಿ ಕೆ20 ಪ್ರೊ ಎಂದು ಕರೆಯಲಾಗಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಎಸ್‌ಒಸಿ ಪ್ರೊಸೆಸರ್ ಚಿತ್ರವೊಂದು ಈಗಾಗಲೇ ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಇದು ಭಾರತದಲ್ಲಿ ಶಿಯೋಮಿ ಪೊಕೊ ಫೋನ್ 2 ಹೆಸರಿನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಹೇಗಿರಲಿದೆ ಪೊಕೊ ಫೋನ್ 2?

ಹೇಗಿರಲಿದೆ ಪೊಕೊ ಫೋನ್ 2?

ಶಿಯೋಮಿ ಪೊಕೊ ಫೋನ್ 2 ಫೋನ್ ಚೀನಾದಲ್ಲಿ K20 ಪ್ರೊ ರೂಪಾಂತರದಲ್ಲಿ ಇರುವುದನ್ನು ಶಿಯೋಮಿ ಈವರೆಗೂ ದೃಢೀಕರಿಸಲ್ಪಟ್ಟಿಲ್ಲ. ಆದರೆ, ಈ ಹ್ಯಾಂಡ್ಸೆಟ್ 6.39- ಇಂಚಿನ AMOLED ಸ್ಕ್ರೀನ್ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದು ಬಹುತೇಕ ಪ್ರೀಮಿಯಂ ಲುಕ್ ಹೊಂದಿರಲಿದೆ ಎಂದು ವರದಿಗಳು ತಿಳಿಸಿವೆ.

4,000mAh ಬ್ಯಾಟರಿ

4,000mAh ಬ್ಯಾಟರಿ

ಶಿಯೋಮಿ ಪೊಕೊ ಫೋನ್ 2 ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿರಲಿದ್ದು, ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ ಎಂದು ಹೇಳಲಾಗಿದೆ. ಈ ಪೋನಿನಲ್ಲಿ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿರುವುದನ್ನು ವರದಿಗಳಲ್ಲಿ ತಿಳಿಸಲಾಗಿದೆ.

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ರೆಡ್ಮಿ ಕೆ20 ಪ್ರೊನಲ್ಲಿ (ಪೊಕೊ ಫೋನ್ 2 ) 32 ಎಂಪಿ ಪಾಪ್-ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇರಲಿದೆ ಎಂದು ವದಂತಿಗಳಿವೆ. ಜೊತೆಗೆ ಇದರಲ್ಲಿ ಟ್ರಿಪಲ್ ಲೆನ್ಸ್ ಸೆಟಪ್ ಹಿಂಭಾಗದಲ್ಲಿದ್ದು 48ಎಂಪಿ ಪ್ರೈಮರಿ ಸೆನ್ಸರ್, 8ಎಂಪಿ ಡೆಪ್ತ್ ಸೆನ್ಸರ್ ಹಾಗೂ ವೈಡ್ ಆಂಗಲ್‌ಗೆ ಸಹಕಾರಿಯಾಗುವಂತಹ ಅನ್ನು ಅಳವಡಿಸಲಾಗಿದೆ. ಆದರೆ, ಕಂಪೆನಿಯು ಇದನ್ನು ಇನ್ನೂ ಖಾತ್ರಿಪಡಿಸಿಲ್ಲ.

ಬೆಲೆ ಎಷ್ಟಿರಬಹುದು?

ಬೆಲೆ ಎಷ್ಟಿರಬಹುದು?

ಒನ್‌ಪ್ಲಸ್ 7 ಪ್ರೊನಲ್ಲಿ ತಂದಿರುವ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್, ಸ್ನ್ಯಾಪ್ ಡ್ರ್ಯಾಗನ್ 855, ಪಾಪ್-ಅಪ್ ಸೆಲ್ಫೀ ಕ್ಯಾಮರಾ ಮತ್ತು ಟ್ರಿಪಲ್ ಲೆನ್ಸ್ ಸೆಟಪ್ ಫೀಚರ್ಸ್‌ಗಳು ಈ ನೂತನ ಸ್ಮಾರ್ಟ್‌ಫೋನಿನಲ್ಲೂ ತರಲಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಎಲ್ಲಾ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ 30 ಸಾವಿರ ರೂ.ಗಳನ್ನು ದಾಟುವುದಿಲ್ಲ ಎಂದು ವರದಿಗಳು ಹೇಳುತ್ತಿವೆ.

ಓದಿರಿ: ಬೆಂಗಳೂರಿನಲ್ಲೇ ಮೊದಲು!..'ಎಟಿಎಂ' ಮೂಲಕ ಶಿಯೋಮಿ ಮೊಬೈಲ್ ಖರೀದಿಸಿ!!

Best Mobiles in India

English summary
Chinese phone maker Xiaomi would want you to believe. This refers to a new phone from the company but in the sub brand Redmi. It will be called the Redmi K20.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X