Redmi ಕಂಪೆನಿಯ ಮುಂಬರುವ ಹೈ-ಕೆಪಾಸಿಟಿ ಬ್ಯಾಟರಿ ಫೋನ್ ಇದೇ!
ಶಿಯೋಮಿಯ ಸಬ್-ಬ್ರ್ಯಾಂಡ್ Redmi ತನ್ನ 11ನೇ ವಾರ್ಷಿಕೋತ್ಸವವನ್ನು ಭಾರತದಲ್ಲಿ ಆಚರಿಸಲು ಸಿದ್ಧವಾಗಿದ್ದು, ಈ ಸಂದರ್ಭದಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲಿ ಬಿಡುಗಡೆ ಮಾಡುವುದಾಗಿ ಟೀಸರ್ ಮೂಲಕ ಖಚಿತಪಡಿಸಿದೆ. ಈ ಎರಡು ಫೋನ್‌ಗಳಲ್ಲಿ ಕಂಪೆನಿಯು ಒಂದು ಫೋನಿನ ಸೈಡ್ ಪ್ರೊಫೈಲ್ ಅನ್ನು ಪ್ರದರ್ಶಿಸಿದ್ದು, ಅದು ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ ಎಂದು ಹೇಳಿಕೊಂಡಿದೆ. ಕಂಪೆನಿಯು ಮುಂಬರುವ ಈ ಫೋನ್‌ಗಳ ಹೆಸರುಗಳು ಮತ್ತು ಸಂಪೂರ್ಣ ವೈಶಿಷ್ಟ್ಯಗಳು ಇನ್ನೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲವಾದರೂ, ಇವು ಬಹುತೇಕ Redmi 15 5G ಮತ್ತು Redmi 15C ಸ್ಮಾರ್ಟ್‌ಫೋನ್‌ಗಳಾಗಿರಬಹುದು ಎಂದು ಇತ್ತೀಚಿನ ಸೋರಿಕೆಯ ವರದಿಗಳು ತಿಳಿಸಿವೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಶಿಯೋಮಿ ಇಂಡಿಯಾ ವೆಬ್‌ಸೈಟ್‌ನಲ್ಲಿ ಮುಂಬರುವ Redmi ಸ್ಮಾರ್ಟ್‌ಫೋನ್‌ನ ಬಿಡುಗಡೆಯನ್ನು ದೃಢಪಡಿಸಿದೆ. "ಪವರ್ ರೆವಲ್ಯೂಷನ್" ಎಂಬ ಟ್ಯಾಗ್‌ಲೈನ್ ಮತ್ತು ಇತರ ಟೀಸರ್‌ಗಳು ಫೋನ್ ಶಕ್ತಿಶಾಲಿ ಬ್ಯಾಟರಿಯನ್ನು ಒಳಗೊಂಡಿರಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಬ್ಯಾಟರಿಯ ನಿಖರ ಗಾತ್ರವನ್ನು ಮುಂದಿನ ಕೆಲವು ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಅಚ್ಚರಿಯೆಂದರೆ, ಮುಂಬರುವ ಮಾದರಿಯು ಕೇವಲ 1 ಪ್ರತಿಶತ ಚಾರ್ಜ್‌ನೊಂದಿಗೆ 7.5 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
ಇದೇ Redmi ಸ್ಮಾರ್ಟ್‌ಫೋನ್‌ಗಾಗಿ ಅಮೆಜಾನ್‌ನಲ್ಲಿ ಮೈಕ್ರೋಸೈಟ್ ಕೂಡ ಲೈವ್ ಆಗಿದ್ದು, ಶಿಯೋಮಿ ಇಂಡಿಯಾ ಇ-ಸ್ಟೋರ್ ಜೊತೆಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕವೂ ಭಾರತದಲ್ಲಿ ಫೋನ್ ಖರೀದಿಗೆ ಲಭ್ಯವಿರುತ್ತದೆ ಎಂದು ಇದು ಸೂಚಿಸುತ್ತದೆ. ಟೀಸರ್‌ನಲ್ಲಿ, ಕಂಪನಿಯು ಮುಂಬರುವ Redmi ಹ್ಯಾಂಡ್‌ಸೆಟ್‌ನ ಸೈಡ್ ಪ್ರೊಫೈಲ್ ಅನ್ನು ತೋರಿಸಿದ್ದು, ಎಡ ಅಂಚಿನಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಅನ್ನು ಸ್ಪಷ್ಟವಾಗಿ ಕಾಣಬಹುದು. ಸಂಪೂರ್ಣವಾಗಿ ಗೋಚರಿಸದಿದ್ದರೂ, ಹಿಂಭಾಗದಲ್ಲಿ ಕನಿಷ್ಠ ಎರಡು ಕ್ಯಾಮೆರಾ ಬಂಪ್‌ಗಳು ಇರುವುದನ್ನು ಗಮನಿಸಬಹುದು.

ಶಿಯೋಮಿ ಟೈಮ್ ವರದಿಯ ಪ್ರಕಾರ, Redmi ಭಾರತದಲ್ಲಿ Redmi 15 ಸರಣಿಯನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಈ ಸರಣಿಯಲ್ಲಿ ಮೂಲ Redmi 15 ಮತ್ತು Redmi 15C ಮಾದರಿಗಳು ಸೇರಿವೆ. ಗಮನಾರ್ಹವಾಗಿ, Redmi 15C ಕುರಿತಾದ ವಿವರಗಳು ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಸೋರಿಕೆಗಳ ಪ್ರಕಾರ, Redmi 15C 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 6,000mAh ಬ್ಯಾಟರಿಯನ್ನು ಹೊಂದಿರಲಿದೆ.
ಇತ್ತ ಜನಪ್ರಿಯ ಟಿಪ್‌ಸ್ಟರ್ ಸುಧಾಂಶು ಅಂಬೋರ್ (@Sudhanshu1414) ತಮ್ಮ X ಪೋಸ್ಟ್‌ನಲ್ಲಿ, ಭಾರತದಲ್ಲಿ ಬಿಡುಗಡೆಯಾಗಲಿರುವ ದೊಡ್ಡ ಬ್ಯಾಟರಿ ಸ್ಮಾರ್ಟ್‌ಫೋನ್ ಮೂಲ Redmi 15 5G ಆಗಿರಬಹುದು ಎಂದು ಹೇಳಿಕೊಂಡಿದ್ದಾರೆ. ಈ ಫೋನ್ 7,000mAh ಬ್ಯಾಟರಿ ಮತ್ತು ಸ್ನಾಪ್‌ಡ್ರಾಗನ್ 6s Gen 3 SoC ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿರಬಹುದು ಮತ್ತು Android 15-ಆಧಾರಿತ HyperOS 2.0 ನೊಂದಿಗೆ ಬರಲಿದೆ ಎಂದು ಹೇಳಲಾಗಿದೆ.
Redmi 15 5G 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ. ಇದು IP64-ರೇಟೆಡ್ ಧೂಳು ಮತ್ತು ಸ್ಪ್ಲಾಶ್-ನಿರೋಧಕ ವಿನ್ಯಾಸವನ್ನು ಹೊಂದಿರಬಹುದು. ಹ್ಯಾಂಡ್‌ಸೆಟ್ 144Hz ರಿಫ್ರೆಶ್ ದರದೊಂದಿಗೆ 6.9-ಇಂಚಿನ ಪೂರ್ಣ-HD+ LCD ಪರದೆಯನ್ನು ಒಳಗೊಂಡಿರಬಹುದು. ಕ್ಯಾಮೆರಾಗಳ ವಿಚಾರದಲ್ಲಿ, ಇದು ಹಿಂಭಾಗದಲ್ಲಿ 2-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್‌ನೊಂದಿಗೆ 50-ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್ ಮತ್ತು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಪಡೆಯುವ ಸಾಧ್ಯತೆಯಿದೆ.. ಈ ಕುರಿತು ಹೆಚ್ಚಿನ ಅಧಿಕೃತ ಮಾಹಿತಿ ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.


Click it and Unblock the Notifications








