ಮಾರುಕಟ್ಟೆಗೆ ಮತ್ತೊಂದು ಶಿಯೋಮಿ ಬಜೆಟ್ ಸ್ಮಾರ್ಟ್‌ಫೋನ್: ಇಲ್ಲಿದೇ ಸಂಪೂರ್ಣ ಮಾಹಿತಿ..!
ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಶಿಯೋಮಿ ಕಂಪನಿಯೂ ಮತ್ತೊಂದು ಬಜೆಟ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ. ಮಾರುಕಟ್ಟೆಯಲ್ಲಿ ಶಿಯೋಮಿ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಹೆಚ್ಚಿನ ಪ್ರತಿ ಸ್ಪರ್ಧಿಗಳು ಹುಟ್ಟುಕೊಂಡಿರುವ ಕಾರಣ ಅವರನ್ನು ಮಟ್ಟ ಹಾಕುವ ಸಲುವಾಗಿ ರೆಡ್ ಮಿ S2 ಸ್ಮಾರ್ಟ್ ಫೋನ್ ಅನ್ನು ಚೀನಾದಲ್ಲಿ ಲಾಂಚ್ ಮಾಡಿದೆ. ಶೀಘ್ರವೇ ಈ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿಯೂ ಸದ್ದು ಮಾಡಲಿದೆ.

ಒಟ್ಟು ಮೂರು ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ಲಾಂಚ್ ಆಗಿದ್ದು, 2GB RAM + 16GB ಇಂಟರ್ನಲ್ ಮೆಮೊರಿಯೊಂದಿಗೆ, 3GB RAM + 32GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ 4GB RAM + 64GB ಇಂಟರ್ನಲ್ ಮೆಮೊರಿಯೊಂದಿಗೆ ಈ ಸ್ಮಾರ್ಟ್ ಫೋನ್ ಮಾರಾಟವಾಗಲಿದೆ. ಈ ಸ್ಮಾರ್ಟ ಫೋನ್ ಬೆಲೆ ಇನ್ನು ನಿಗಧಿಪಡಿಸಿಲ್ಲವಾಗಿದ್ದು, ಈ ಫೋನಿನ ಆರಂಭಿಕ ಆವೃತ್ತಿಯ ಬೆಲೆ ರೂ.10500 ನಿಗಧಿಯಾಗುವ ಸಾಧ್ಯತೆ ಇದೆ.
ರೆಡ್ ಮಿ S2 ಸ್ಮಾರ್ಟ್ ಫೋನಿನಲ್ಲಿ 5.99 ಇಂಚಿನ HD+ ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು 18:9 ಅನುಪಾತದಿಂದ ಕೂಡಿದೆ. ಅಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ ಶಿಯೋಮಿ ಕ್ವಾಲ್ಕಕಮ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಅನ್ನು ನೀಡಿದೆ. ಇದರೊಂದಿಗೆ ಅಡ್ರಿನೊ 506 GPUವನ್ನು ನೀಡಲಾಗಿದೆ.
ಇದಲ್ಲದೇ ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸುವ ರೆಡ್ ಮಿ S2 ಸ್ಮಾರ್ಟ್ ಫೋನಿನಲ್ಲಿ MIUI9 ಅನ್ನು ಸಹ ಕಾಣಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದ್ದು, 12MP + 5MP ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದಲ್ಲದೇ ಮುಂಭಾಗದ ಕ್ಯಾಮೆರಾಕ್ಕಾಗಿ ಕೃತಕ ಬುದ್ದಿಮತ್ತೆಯನ್ನು ನೀಡಲಾಗಿದೆ.
3080mAh ಬ್ಯಾಟರಿಯೊಂದಿಗೆ ಈ ಸ್ಮಾರ್ಟ್ ಫೋನ್ ಮಾರಾಟವಾಗಲಿದ್ದು, 10 ಬಣ್ಣಗಳಲ್ಲಿ ದೊರೆಯಲಿದೆ ಎನ್ನಲಾಗಿದೆ. ಬಳಕೆದಾರರಿಗೆ ಹೆಚ್ಚಿನ ಆಯ್ಕೆಯೂ ದೊರೆಯಲಿದ್ದು, ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಹೊಸ ಅಲೆಯನ್ನು ಹುಟ್ಟಿಸುವ ಎಲ್ಲಾ ಸಾಧ್ಯತೆಗಳನ್ನು ಕಾಣಬಹುದಾಗಿದೆ. ಈಗಾಗಲೇ ಮಾರಾಟವಾಗುತ್ತಿರುವ ಹಲವು ಸ್ಮಾರ್ಟ್ ಫೋನ್ ಗಳಿಗೆ ಸೆಡ್ಡು ಹೊಡೆಯಲಿದೆ.


Click it and Unblock the Notifications