ಸ್ವಲ್ಪ ಕಾಯಿರಿ! 6500mAh ಬಿಗ್ ಬ್ಯಾಟರಿ.. 20MP ಸೆಲ್ಫಿ ಕ್ಯಾಮೆರಾ.. ಭಾರತಕ್ಕೆ Redmi Turbo 4 ಎಂಟ್ರಿ ಯಾವಾಗ?
Redmi Turbo 4 Launched: ಬಹುನಿರೀಕ್ಷಿತ ರೆಡ್ಮಿ ಟರ್ಬೋ 4 (Redmi Turbo 4) ಮೊಬೈಲ್ ಬಿಡುಗಡೆಯಾಗಿದೆ. ಇದು ಶಿಯೋಮಿ (Xiaomi) ಉಪ ಬ್ರಾಂಡ್‌ನ ಪ್ರಮುಖ ಸ್ಮಾರ್ಟ್‌ಫೋನ್ ಆಗಿದೆ. ಕಂಪನಿಯು ಇದನ್ನು ಮೀಡಿಯಾಟೆಕ್ ಡೈಮೆನ್ಸಿಟಿ 8400 ಅಲ್ಟ್ರಾ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಈ ಪ್ರೊಸೆಸರ್ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಈ ಫೋನನ್ನು ಭಾರತ ಸೇರಿದಂತೆ ವಿಶ್ವದ ಇತರೆ ಮಾರುಕಟ್ಟೆಗಳಲ್ಲಿ ಪೊಕೊ X7 ಪ್ರೊ (Poco X7 Pro) ಹೆಸರಿನಲ್ಲಿ ಬಿಡುಗಡೆ ಮಾಡಲಾಗುವುದು.
ರೆಡ್ಮಿ ಟರ್ಬೋ 4 (Redmi Turbo 4) ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು 16GB RAM + 512GB ಸ್ಟೋರೇಜ್ ಹೊಂದಿದೆ. ಹಾಗೆಯೇ 6550mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಜನವರಿ 9 ರಂದು ಭಾರತಕ್ಕೆ ಎಂಟ್ರಿ ಕೊಡಲಿದೆ. ಬನ್ನಿ ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರೆಡ್ಮಿ ಟರ್ಬೋ 4 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ ಟರ್ಬೋ 4 ಫೋನ್ 6.67 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು ಫ್ಲಾಟ್ ಓಎಲ್‌ಇಡಿ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2712 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್ 120Hz ರಿಫ್ರೆಶ್ ದರ ಮತ್ತು 3200 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಬೆಂಬಲ ಹೊಂದಿದೆ. ಇದು ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ರೆಡ್ಮಿ ಟರ್ಬೋ 4 ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 8400 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ತುಂಬಾ ಪವರ್ಫುಲ್ ಆಗಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಗ್ರಾಫಿಕ್ಸ್‌ಗಾಗಿ, ಈ ಫೋನ್ ಮಾಲಿ G720 MC6 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ HyperOS 2 ಜೊತೆಗೆ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ರೆಡ್ಮಿ ಟರ್ಬೋ 4 ಸ್ಮಾರ್ಟ್‌ಫೋನ್ ಎರಡು RAM ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. 12GB RAM ಮತ್ತು 16GB RAM ಹೊಂದಿದೆ. ಈ ಫೋನಿನಲ್ಲಿ 256GB ಮತ್ತು 512GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ಕ್ಯಾಮೆರಾ ಸೆಟಪ್
ರೆಡ್ಮಿ ಟರ್ಬೋ 4 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್
ಹೊಸ ರೆಡ್ಮಿ ಟರ್ಬೋ 4 ಸ್ಮಾರ್ಟ್‌ಫೋನ್ 6550mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 90W ಸ್ಪೀಡ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ರೆಡ್ಮಿ ಟರ್ಬೊ 4 ಮೊಬೈಲ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP66 + IP68 + IP69 ರೇಟಿಂಗ್ ಪಡೆದಿದೆ. ಇದು ಪ್ಲಾಸ್ಟಿಕ್ ಬ್ಯಾಕ್ ಮತ್ತು ಶಾರ್ಟ್ ಫೋಕಸ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ರೆಡ್ಮಿ ಟರ್ಬೊ 4 ಬೆಲೆ
ರೆಡ್ಮಿ ಟರ್ಬೊ 4 ಫೋನನ್ನು ಚೀನಾದಲ್ಲಿ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮೂರು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ನೀವು, ಶ್ಯಾಡೋ ಬ್ಲ್ಯಾಕ್, ಶ್ಯಾಡೋ ಸೀ ಬ್ಲೂ ಮತ್ತು ಲಕ್ಕಿ ಕ್ಲೌಡ್ ವೈಟ್ ಬಣ್ಣದಲ್ಲಿ ಖರೀದಿಸಬಹುದು. ಫೋನಿನ 12GB RAM + 256GB ಸ್ಟೋರೇಜ್ ಬೆಲೆ 23,490 ರೂ. ಆಗಿದೆ. 12GB RAM + 512GB ಸ್ಟೋರೇಜ್ ರೂಪಾಂತರವನ್ನು 27,000 ರೂ.ಗೆ ಪರಿಚಯಿಸಲಾಗಿದೆ.
ಫೋನಿನ 16GB RAM + 256GB ಸ್ಟೋರೇಜ್ ರೂಪಾಂತರವನ್ನು 25,840 ರೂ.ಗೆ ಬಿಡುಗಡೆ ಮಾಡಲಾಗಿದೆ. ಇನ್ನು 16GB RAM + 512GB ಸ್ಟೋರೇಜ್ ರೂಪಾಂತರವು 29,370 ರೂ. ಬೆಲೆಯನ್ನು ಹೊಂದಿದೆ. ಕಂಪನಿಯು ಈ ಫೋನನ್ನು ಭಾರತದಲ್ಲಿ Poco X7 Pro ಹೆಸರಿನಲ್ಲಿ ಬಿಡುಗಡೆ ಮಾಡಲಿದೆ. ಇದು ಬಹುತೇಕ ರೆಡ್ಮಿ ಟರ್ಬೊ 4 ನಂತೆಯೇ ವಿಶೇಷತೆಗಳನ್ನು ಹೊಂದಿರುತ್ತದೆ. ಬೆಲೆಯೂ ಸಹ ಒಂದೇ ರೀತಿ ಇರುವ ಸಾಧ್ಯತೆಯಿದೆ.


Click it and Unblock the Notifications








