Home
ಮೊಬೈಲ್

ಮಾರುಕಟ್ಟೆಗೆ ಅಪ್ಪಳಿಸಿತು Redmi Turbo 4 Pro; 7550mAh ಬ್ಯಾಟರಿ.. 512GB ಸ್ಟೋರೇಜ್.. ಬಜೆಟ್ ಬೆಲೆ!

ಶಿಯೋಮಿಯ ಉಪ ಬ್ರಾಂಡ್ ರೆಡ್ಮಿ (Redmi) ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ರೆಡ್ಮಿ ಟರ್ಬೊ 4 ಪ್ರೊ (REDMI Turbo 4 Pro) ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೌದು, ಕಂಪನಿಯು ಶಕ್ತಿಯುತ ಪ್ರೊಸೆಸರ್ ಮತ್ತು ಉತ್ತಮ ಕ್ಯಾಮೆರಾ ಸೆಟಪ್‌ನೊಂದಿಗೆ ಪರಿಚಯಿಸಿದೆ. ವಿಶೇಷವೆಂದರೆ, ಇದನ್ನು ವಿಶೇಷ ಹ್ಯಾರಿ ಪಾಟರ್ ಆವೃತ್ತಿ ಸೇರಿದಂತೆ ಹಲವು ರೂಪಾಂತರಗಳಲ್ಲಿ ತಂದಿದೆ. ಬನ್ನಿ, ರೆಡ್ಮಿ ಟರ್ಬೊ 4 ಪ್ರೊ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ರೆಡ್ಮಿ ಟರ್ಬೊ 4 ಪ್ರೊ ಮೊಬೈಲ್ ಐದು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಸ್ನಾಪ್‌ಡ್ರಾಗನ್ 8s ಜೆನ್ 4 ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಹೊಮದಿರುವ ಮೊದಲ ಫೋನ್ ಇದಾಗಿದೆ. ಈ ಮೊಬೈಲ್ 6.83 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದರೊಂದಿಗೆ 7550mAh ದೊಡ್ಡ ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಫೋನಿನ ಇನ್ನಿತರ ವಿಶೇಷತೆಗಳು ಈ ಕೆಳಗಿನಂತಿವೆ.

Redmi Turbo 4 Pro ಲಾಂಚ್; 7550mAh ಬ್ಯಾಟರಿ, 512GB ಸ್ಟೋರೇಜ್; ಬಜೆಟ್ ಬೆಲೆ!

ಡಿಸ್ಪ್ಲೇ ವಿವರ

ರೆಡ್ಮಿ ಟರ್ಬೊ 4 ಪ್ರೊ ಸ್ಮಾರ್ಟ್‌ಫೋನ್ 6.83 ಇಂಚಿನ OLED ಡಿಸ್ಪ್ಲೇ ಹೊಂದಿದೆ. ಇದು 2,800 x 1,280 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪೇಯು 120Hz ರಿಫ್ರೆಶ್ ದರ, 2560Hz ಟಚ್ ಸ್ಯಾಂಪ್ಲಿಂಗ್ ದರ, ಡಾಲ್ಬಿ ವಿಷನ್ ಮತ್ತು 3840Hz ಹೈ ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಬೆಂಬಲ ಹೊಂದಿದೆ. ಇದು 3,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ರೆಡ್ಮಿ ಟರ್ಬೊ 4 ಪ್ರೊ ಮೊಬೈಲ್ ಸ್ನಾಪ್‌ಡ್ರಾಗನ್ 8s ಜೆನ್ 4 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಈ ರೆಡ್ಮಿ ಫೋನ್ ಆಂಡ್ರಾಯ್ಡ್ 15 ಆಧಾರಿತ ಶಿಯೋಮಿ ಹೈಪರ್ ಓಎಸ್ 2 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ 825 ಜಿಪಿಯು ಸಹ ಹೊಂದಿದೆ. ಈ ಮೊಬೈಲ್ 12GB ಮತ್ತು 16GB RAM ಹೊಂದಿದೆ. ಹಾಗೆಯೇ 256GB, 512GB ಮತ್ತು 1TB ಆಂತರಿಕ ಸ್ಟೋರೇಜ್ ಆಯ್ಕೆ ಲಭ್ಯವಿದೆ.

ಕ್ಯಾಮೆರಾ ಸೆಟಪ್

ರೆಡ್ಮಿ ಟರ್ಬೊ 4 ಪ್ರೊ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಮತ್ತು EIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರೊಂದಿಗೆ, 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರೆಡ್ಮಿ ಟರ್ಬೊ 4 ಪ್ರೊ ಸ್ಮಾರ್ಟ್‌ಫೋನ್ 7550mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದೆ. ಈ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಇನ್ಫ್ರಾರೆಡ್ ಸೆನ್ಸರ್, ಯುಎಸ್‌ಬಿ ಟೈಪ್ ಸಿ ಆಡಿಯೊ ಬೆಂಬಲ ಮತ್ತು ಸ್ಟೀರಿಯೊ ಸ್ಪೀಕರ್‌ಗಳಿವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G SA/NSA, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Redmi Turbo 4 Pro ಲಾಂಚ್; 7550mAh ಬ್ಯಾಟರಿ, 512GB ಸ್ಟೋರೇಜ್; ಬಜೆಟ್ ಬೆಲೆ!

ರೆಡ್ಮಿ ಟರ್ಬೊ 4 ಪ್ರೊ ಬೆಲೆ ಮತ್ತು ಲಭ್ಯ

ರೆಡ್ಮಿ ಟರ್ಬೊ 4 ಪ್ರೊ ಮೊಬೈಲ್ ಐದು ಸ್ಟೋರೇಜ್ ರೂಪಾಂತರಗಳಲ್ಲಿ ಮತ್ತು ಹ್ಯಾರಿ ಪಾಟರ್ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಕಪ್ಪು, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ಬರುತ್ತದೆ. 12GB RAM + 256GB ಸ್ಟೋರೇಜ್ ಬೆಲೆ 25,760 ರೂ. ಆಗಿದೆ. 16GB RAM + 256GB ಸ್ಟೋರೇಜ್ ರೂಪಾಂತರವು 26,935 ರೂ.ಗೆ ಬಿಡುಗಡೆಯಾಗಿದೆ.

ಈ ಫೋನಿನ 12GB RAM + 512GB ಸ್ಟೋರೇಜ್ ಮಾದರಿಯ ಬೆಲೆ 29,280 ರೂ. ಆಗಿದೆ. 16GB RAM + 512GB ಸ್ಟೋರೇಜ್ ವೇರಿಯಂಟ್ ಅನ್ನು 31,620 ರೂ.ಗೆ ಪರಿಚಯಿಸಲಾಗಿದೆ. 16GB RAM + 512GB (ಹ್ಯಾರಿ ಪಾಟರ್ ಆವೃತ್ತಿ) ಸ್ಟೋರೇಜ್ 32,795 ರೂ.ಗೆ ಲಭ್ಯವಿದೆ. 16GB RAM + 1TB ಸ್ಟೋರೇಜ್ 35,135 ರೂ.ಗೆ ಮಾರಾಟವಾಗಲಿದೆ. ಪ್ರಸ್ತುತ ಈ ಮೊಬೈಲ್ ಚೀನಾ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ

Best Mobiles in India

English summary
Redmi Turbo 4 Pro with Snapdragon 8s Gen 4 and 7550mAh battery launched; when can it come to India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+