Home
ಮೊಬೈಲ್

ಏ.24ಕ್ಕೆ ಲಾಂಚ್; 7550mAh ಬಿಗ್ ಬ್ಯಾಟರಿ.. 50MP + 20MP ಕ್ಯಾಮೆರಾ.. ಯಾವ ಫೋನ್? ಬೆಲೆ ಎಷ್ಟು?

ಶಿಯೋಮಿ ತನ್ನ ಹೊಸ ರೆಡ್ಮಿ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಹೌದು, ಕಂಪನಿಯು ಏಪ್ರಿಲ್ 24 ರಂದು ರೆಡ್ಮಿ ಟರ್ಬೊ 4 ಪ್ರೊ (Redmi Turbo 4 Pro) ಮೊಬೈಲ್ ಅನ್ನು ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಲಿದೆ. ವಿಶೇಷವೆಂದರೆ, ಈ ಮೊಬೈಲ್ ಈ ವರ್ಷ ಬಿಡುಗಡೆಯಾದ ರೆಡ್ಮಿ ಟರ್ಬೊ 4 (Redmi Turbo 4) ಫೋನಿನ ಅಪ್‌ಗ್ರೇಡ್ ಮತ್ತು ಪ್ರೊ ಆವೃತ್ತಿಯಾಗಿದೆ. ಬನ್ನಿ, ಮುಂಬರುವ ರೆಡ್‌ಮಿ ಟರ್ಬೊ 4 ಪ್ರೊ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎನ್ನುವುದನ್ನು ತಿಳಿಯೋಣ.

ರೆಡ್ಮಿ ಟರ್ಬೊ 4 ಪ್ರೊ ಫೋನಿನ ಹಲವು ಪ್ರಮುಖ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಲಾಗಿದೆ. ಅದರಂತೆ, ಇದು 6.83 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಮೊಬೈಲ್ ಸ್ನಾಪ್‌ಡ್ರಾಗನ್ 8s ಜೆನ್ 4 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 16GB RAM + 1TB ಸ್ಟೋರೇಜ್, 7550mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಏ.24ಕ್ಕೆ ಲಾಂಚ್; 7550mAh ಬ್ಯಾಟರಿ, 50MP ಕ್ಯಾಮೆರಾ.. ಯಾವುದು? ಬೆಲೆ ಎಷ್ಟು?

ರೆಡ್ಮಿ ಟರ್ಬೊ 4 ಪ್ರೊ ಬಿಡುಗಡೆ ವಿವರ

ಬಹುನಿರೀಕ್ಷಿತ ರೆಡ್ಮಿ ಟರ್ಬೊ 4 ಪ್ರೊ ಮೊಬೈಲ್ ಏಪ್ರಿಲ್ 24 ರಂದು ಬಿಡುಗಡೆಯಾಗಲಿದೆ. ಕಂಪನಿಯು ಮೊದಲು ಈ ಫೋನನ್ನು ತವರು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಬಳಿಕ ಇತರೆ ಮಾರುಕಟ್ಟೆಗಳಿಗೆ ಪರಿಚಯಿಸಲಿದೆ. ಈ ಫೋನ್ ಬಿಡುಗಡೆ ಕಾರ್ಯಕ್ರಮವು ಏಪ್ರಿಲ್ 24 ರಂದು ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 4.30) ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಹೊಸ ಟರ್ಬೊ 4 ಪ್ರೊ ಮೊಬೈಲ್‌ನ ಬೆಲೆ, ಮಾರಾಟದ ವಿವರಗಳು ಮತ್ತು ವಿಶೇಷತೆಗಳನ್ನು ಬಹಿರಂಗಪಡಿಸಲಾಗುವುದು. ಶಿಯೋಮಿಯ ಅಧಿಕೃತ ವೆಬ್‌ಸೈಟ್ ಮೂಲಕ ಈ ಫೋನಿನ ಬಿಡುಗಡೆ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಬಹುದು.

ರೆಡ್ಮಿ ಟರ್ಬೊ 4 ಪ್ರೊ ಪ್ರೊಸೆಸರ್ ಬಹಿರಂಗ

ರೆಡ್ಮಿ ಟರ್ಬೊ 4 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8s ಜೆನ್ 4 ಪ್ರೊಸೆಸರ್ ಹೊಂದಿದೆ ಎಂದು ಕಂಪನಿಯು ಖಚಿತಪಡಿಸಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ 8 ಕೋರ್ CPU 2.02GHz ನಲ್ಲಿ ಕಾರ್ಟೆಕ್ಸ್ A720 ಕೋರ್‌ಗಳನ್ನು ಮತ್ತು 3.2GHz ವರೆಗಿನ ಕಾರ್ಟೆಕ್ಸ್ X4 ಕೋರ್‌ಗಳನ್ನು ಒಳಗೊಂಡಿದೆ. ಈ ರೆಡ್ಮಿ 5G ಫೋನ್ ಬಿಳಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ.

ಏ.24ಕ್ಕೆ ಲಾಂಚ್; 7550mAh ಬ್ಯಾಟರಿ, 50MP ಕ್ಯಾಮೆರಾ.. ಯಾವುದು? ಬೆಲೆ ಎಷ್ಟು?

ರೆಡ್ಮಿ ಟರ್ಬೊ 4 ಪ್ರೊ ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ರೆಡ್ಮಿ ಟರ್ಬೊ 4 ಪ್ರೊ 5G ಮೊಬೈಲ್ 6.83 ಇಂಚಿನ 1.5K OLED ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಲಿದೆ. ಇದು 2,800 x 1,280 ಪಿಕ್ಸೆಲ್ ರೆಸಲ್ಯೂಶನ್‌ ಬೆಂಬಲದೊಂದಿಗೆ ಬರುತ್ತದೆ. ಈ ಸ್ಕ್ರೀನ್ 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಹೊಂದಿದೆ.

RAM ಮತ್ತು ಸ್ಟೋರೇಜ್

ರೆಡ್ಮಿ ಟರ್ಬೊ 4 ಪ್ರೊ 5G ಫೋನನ್ನು 12GB RAM ಮತ್ತು 16GB RAM ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಈ RAM ಜೊತೆಗೆ, ಈ ಫೋನ್ 256GB, 512GB ಮತ್ತು 1TB ಸ್ಟೋರೇಜ್ ಆಯ್ಕೆ ಹೊಂದಿರಲಿದೆ.

ಕ್ಯಾಮೆರಾ ಸೆಟಪ್

ರೆಡ್ಮಿ ಟರ್ಬೊ 4 ಪ್ರೊ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ರೆಡ್ಮಿ ಫೋನಿನಲ್ಲಿ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರೆಡ್ಮಿ ಟರ್ಬೊ 4 ಪ್ರೊ 5G ಮೊಬೈಲ್ 6,550mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ.

Best Mobiles in India

English summary
Redmi Turbo 4 Pro with Snapdragon 8s Gen 4 to be launching on April 24th: Here Expected Price, Specs And Feature
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+