Subscribe to Gizbot

ಮಾರುಕಟ್ಟೆಗೆ ಬರಲಿದೆ ರಿಲಾಯನ್ಸ್‌ ಲೆನೋವೋ ಸ್ಮಾರ್ಟ್‌ಫೋನ್‌

Posted By:

ರಿಲಾಯನ್ಸ್‌ ಕಂಪೆನಿ ಸದ್ಯದಲ್ಲೆ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ. ಈ ಸಂಬಂಧ ಲೆನೊವೋ ಕಂಪೆನಿ ಜೊತೆ ರಿಲಾಯನ್ಸ್‌ ಒಪ್ಪಂದ ಮಾಡಿಕೊಂಡಿದ್ದು 8 ಸಾವಿರದೊಳಗೆ ಹೊಸ GSM-CDMA ಹೊಂದಿರುವ ಸ್ಮಾರ್ಟ್‌ಫೋನ್‌ ತರಲು ಸಿದ್ದತೆ ನಡೆಸುತ್ತಿದೆ.
ಈ ಸಂಬಂಧ ರಿಕಾಮ್‌ ಅಧ್ಯಕ್ಷ ಮತ್ತು ವೈರ್‌ಲೆಸ್‌ ವಿಭಾಗದ ಸಿಇಒ ಗುರುದೀಪ್‌ ಸಿಂಗ್‌ ಮಾತನಾಡಿ' ಮುಂದಿನ ಆರು ತಿಂಗಳಿನಲ್ಲಿ 4 ಅಥವಾ 5 ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲು ಯೋಚನೆ ಮಾಡುತ್ತಿದ್ದು,ಜೊತೆಗೆ ಈ ಸಾಧನಗಳಿಗೆ ವಿಶೇಷ ಇಂಟರ್‌ನೆಟ್ ಡಾಟಾ ಪ್ಲ್ಯಾನ್‌ ರೂಪಿಸುತ್ತಿದ್ದೇವೆ 'ಎಂದು ಹೇಳಿದ್ದಾರೆ.

ಮಾರುಕಟ್ಟೆಗೆ ಬರಲಿದೆ ರಿಲಾಯನ್ಸ್‌ ಲೆನೋವೋ ಸ್ಮಾರ್ಟ್‌ಫೋನ್‌

Click Here For Gallery

ರಿಲಾಯನ್ಸ್‌ ಮತ್ತು ಲೆನೋವೋ ಪಾಲುಗಾರಿಕೆಯಲ್ಲಿ ಬರುವ ಈ ಸಾಧನಗಳು ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದ್ದು 1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌ನೊಂದಿಗೆ ಹೊರಬರಲಿದೆ.

ಲೆನೋವೋ ಕಂಪೆನಿ ಈಗಾಗ್ಲೇ 6 ಸಾವಿರ ರೂಪಾಯಿ ಮತ್ತು 28 ಸಾವಿರ ರೂಪಾಯಿ ಮಧ್ಯದಲ್ಲಿ 5 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು ಈ ವರ್ಷ ರಿಲಾಯನ್ಸ್‌ ಜೊತೆಗೂಡಿ 5 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot