ರೂ.2000ಕ್ಕೆ 'ಜಿಯೋ' ಗೋ ಸ್ಮಾರ್ಟ್‌ಫೋನ್: ಐಫೋನ್ X ಮೀರಿಸುವ ಫೇಸ್‌ಲಾಕ್, ಆಂಡ್ರಾಯ್ಡ್ ಒರಿಯೋ..!
ರಿಲಯನ್ಸ್ ಮಾಲೀಕತ್ವದ ಜಿಯೋ ಈಗಾಗಲೇ ಅತೀ ಕಡಿಮೆ ಬೆಲೆಗೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಇದೇ ಮಾದರಿಯಲ್ಲಿ ಶೀಘ್ರವೇ ಜಿಯೋ 4G ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸ್ಮಾರ್ಟ್‌ಫೋನ್ ನಿರ್ಮಾಣಕ್ಕಾಗಿ ಜಿಯೋ, ಚಿಪ್ ಸೆಟ್ ಉತ್ಪಾದಕ ಕಂಪನಿ ಮಿಡಿಯಾ ಟೆಕ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಭಾರತದಲ್ಲಿಯೇ ಜಿಯೋ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯೂ ನಡೆಯಲಿದೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಮೈಕ್ರೋ ಮಾಕ್ಸ್ ಅತೀ ಕಡಿಮೆ ಬೆಲೆಗೆ ಗೂಗಲ್ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ನೋಕಿಯಾ ಸಹ ಅತೀ ಕಡಿಮೆ ಬೆಲೆಗೆ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಿದ್ದತೆ ನಡೆಸಿದೆ. ಈ ಎಲ್ಲಾ ಕಂಪನಿಗಳಿಗೆ ಶಾಕ್ ನೀಡುವ ಸಲುವಾಗಿ ಜಿಯೋ ತನ್ನದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಿದ್ದತೆ ನಡೆಸಿದೆ.

ಆಂಡ್ರಾಯ್ಡ್ ಒರಿಯೋ(ಗೋ ಆವೃತ್ತಿ):
ಮೀಡಿಯಾ ಟೆಕ್ ನೊಂದಿಗೆ ಕೈ ಜೋಡಿಸಿರುವ ಜಿಯೋ ಆಂಡ್ರಾಯ್ಡ್ ಒರಿಯೋ(ಗೋ ಆವೃತ್ತಿ)ಯ ಸ್ಮಾರ್ಟ್‌ಫೋನ್ ನಿರ್ಮಾಣ ಮಾಡುತ್ತಿದ್ದು, ಜಿಯೋ ಫೋನ್ ಮಾದರಿಯಲ್ಲಿ ಈ ಫೋನ್ ಅನ್ನು ಉಚಿತವಾಗಿ ಮಾರಾಟ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಅಂಬಾನಿ ಉಚಿತ 4G ಸ್ಮಾರ್ಟ್‌ಫೋನ್ ನೀಡುವುದಾಗಿ ಘೋಷಣೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಶೀಘ್ರವೇ ಈ ಆಂಡ್ರಾಯ್ಡ್ ಒರಿಯೋ(ಗೋ ಆವೃತ್ತಿ) ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಸ್ಮಾರ್ಟ್‌ಫೋನ್‌ಗಳು ರೂ.2000ಕ್ಕೆ ಹಿಂದಿರುಗಿಸುವ ಠೇವಣಿಯೊಂದಿಗೆ ದೊರೆಯಲಿದೆ.

ಮೀಡಿಯಾ ಟೆಕ್:
ಆಂಡ್ರಾಯ್ಡ್ ಒರಿಯೋ(ಗೋ ಆವೃತ್ತಿ)ಯ ಸ್ಮಾರ್ಟ್‌ಫೋನ್‌ಗಳನ್ನು ಸಫೋರ್ಟ್ ಮಾಡುವ ಚಿಪ್ ಸೆಟ್ ಉತ್ಪಾದನೆಯ ಮೇಲೆ ಗಮನ ಹರಿಸಿರುವ ಮೀಡಿಯಾ ಟೆಕ್, ಇದಕ್ಕಾಗಿಯೇ MT6739, MT6580 ಚಿಪ್ ಸೆಟ್ ಗಳನ್ನು ವಿನ್ಯಾಸ ಮಾಡಿದ್ದು, ಇದಕ್ಕಾಗಿ ಗೂಗಲ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಫೇಸ್‌ಲಾಕ್ ಇರಲಿದೆ:
ಜಿಯೋ ಲಾಂಚ್ ಮಾಡಲಿರುವ ಜಿಯೋ ಆಂಡ್ರಾಯ್ಡ್ ಒರಿಯೋ(ಗೋ ಆವೃತ್ತಿ) ಸ್ಮಾರ್ಟ್‌ಫೋನಿನಲ್ಲಿ ಐಫೋನ್ X ಮಾದರಿಯ ಫೇಸ್ ಲಾಕ್ ಕಾಣಬಹುದಾಗಿದೆ. ಇದಲ್ಲದೇ 1GB RAM ಈ ಸ್ಮಾರ್ಟ್‌ಫೋನ್ ನಲ್ಲಿ ಕಾಣಬಹುದಾಗಿದ್ದು, 4G VoLTE ಸಫೋರ್ಟ್ ಮಾಡಲಿದೆ.


ಭಾರತ್ ಗೋ ಬಿಡುಗಡೆಗೆ ಸಿದ್ದ:
ಈಗಾಗಲ ಮಾರುಕಟ್ಟೆಗೆ ಪರಿಚಯಗೊಂಡಿರುವ ಮೈಕ್ರೋಮಾಕ್ಸ್ ಭಾರತ್ ಗೋ ಆಂಡ್ರಾಯ್ಡ್ ಒರಿಯೋ(ಗೋ ಆವೃತ್ತಿ) ಸ್ಮಾರ್ಟ್‌ಫೋನ್ ಶೀಘ್ರವೇ ಲಾಂಚ್ ಆಗಲಿದ್ದು, ಈ ಸ್ಮಾರ್ಟ್ ಫೋನ್ ಬೆಲೆ ರೂ.2000ದ ಅಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ.

ಮೇಕ್ ಇನ್ ಇಂಡಿಯಾ:
ಮೀಡಿಯಾ ಟೆಕ್ ನೊಂದಿಗೆ ಕೈ ಜೋಡಿಸಿರುವ ಜಿಯೋ, ಮೇಕ್ ಇನ್ ಇಂಡಿಯಾ ಯೋಜನೆಯಡಿ ಜಿಯೋ ಸ್ಮಾರ್ಟ್‌ಫೋನ್‌ಗಳನ್ನು ತಯಾರು ಮಾಡಲಿದ್ದು, ಈ ಮೂಲಕ ಜಿಯೋ ಫೋನ್ ಭಾರತೀಯ ಸ್ಮಾರ್ಟ್‌ಫೋನ್ ಎನ್ನಿಸಿಕೊಳ್ಳಲಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ.


Click it and Unblock the Notifications








