Home
ಮೊಬೈಲ್

ರಿಲಾಯನ್ಸ್‌ ಜಿಯೋಫೋನ್‌ 2 ಲಾಂಚ್‌.! ಹೊಸ ಫೋನ್‌ ಹೇಗೆಲ್ಲಾ ಭಿನ್ನ!!

By Avinash
41st Reliance AGM: WhatsApp for JioPhone, JioPhone 2, and Jio Giga Fiber

ಭಾರತೀಯ ಟಿಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಮತ್ತು ದರಸಮರಕ್ಕೆ ಕಾರಣವಾದ ರಿಲಾಯನ್ಸ್‌ ಜಿಯೋ ಮತ್ತೆ ಸುದ್ದಿಯಲ್ಲಿದೆ. ಗ್ರಾಹಕರನ್ನು ಸೆಳೆಯಲು ಅಗ್ಗದ ದರದಲ್ಲಿ ದಿನಕ್ಕೊಂದು ಪ್ಲಾನ್ ಘೋಷಿಸುತ್ತಿರುವ ಜಿಯೋ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಸಾಧ್ಯತೆಯನ್ನು ಹುಟ್ಟುಹಾಕಿದೆ. ಇತ್ತೀಚೆಗೆ ತಾನೇ ಡಬಲ್ ಧಮಾಕಾ ಆಫರ್ ಘೋಷಿಸಿ ಇತರೆ ಟೆಲಿಕಾಂ ಆಪರೇಟರ್‌ಗಳ ನಿದ್ದೆಗೆಡಿಸಿದ್ದ ಜಿಯೋ ತನ್ನ ಜಿಯೋಫೋನ್ ಯಶಸ್ಸಿನ ಮುಂದುವರೆದ ಭಾಗವಾಗಿ ಜಿಯೋಫೋನ್ 2 ಲಾಂಚ್ ಮಾಡಿ ದೆ.

ರಿಲಾಯನ್ಸ್‌ ಜಿಯೋಫೋನ್‌ 2 ಲಾಂಚ್‌.! ಹೊಸ ಫೋನ್‌ ಹೇಗೆಲ್ಲಾ ಭಿನ್ನ!!

ಹೌದು, ಇಂದು ಮುಂಬೈನಲ್ಲಿ ನಡೆದ ರಿಲಾಯನ್ಸ್‌ ಇಂಡಸ್ಟ್ರೀಸ್‌ನ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋಗೆ ಸಂಬಂಧಿಸಿದಂತೆ ಹಲವು ಘೋಷಣೆಗಳ ಜತೆಗೆ ಜಿಯೋಫೋನ್ ಕೂಡ ಲಾಂಚ್ ಆಗಿದ್ದು, ಆಗಸ್ಟ್‌ 15ರ ನಂತರ ಜನರ ಕೈ ಸೇರಲಿದೆ. ಸ್ಮಾರ್ಟ್‌ಫೀಚರ್ ಹೊಂದಿರುವ ಹೊಸ ಜಿಯೋ ಫೋನ್ 2 ಹಿಂದಿನ ಜಿಯೋ ಫೋನ್‌ಗಿಂತ ವಿಭಿನ್ನವಾಗಿದ್ದು, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿ ಸೃಷ್ಟಿಸಲು ತಯಾರಾಗಿದೆ.

ರಿಲಾಯನ್ಸ್‌ ಜಿಯೋಫೋನ್‌ 2 ಲಾಂಚ್‌.! ಹೊಸ ಫೋನ್‌ ಹೇಗೆಲ್ಲಾ ಭಿನ್ನ!!

ಮಾನ್ಸೂನ್ ಹಂಗಾಮಾ ಆಫರ್‌ನೊಂದಿಗೆ ಹಳೇ ಫೀಚರ್‌ ಫೋನ್‌ನ್ನು ಜಿಯೋ ಫೋನ್‌ಗೆ ಕೇವಲ 500 ರೂ.ಯಲ್ಲಿ ಬದಲಾಯಿಸಿಕೊಳ್ಳುವ ಆಯ್ಕೆಯನ್ನು ನೀಡಿದೆ. ಇದರಿಂದ ಟೆಲಿಕಾಂ ಆಪರೇಟರ್‌ಗಳಿಗಷ್ಟೇ ಅಲ್ಲದೇ ಮೊಬೈಲ್ ತಯಾರಿಕಾ ಕಂಪನಿಗಳಿಗೂ ಸ್ಪರ್ಧೆ ನೀಡುವ ತವಕದಲ್ಲಿ ಜಿಯೋ ಇದೆ. 2.5 ಕೋಟಿ ಬಳಕೆದಾರರನ್ನು ಹೊಂದಿರುವ ಜಿಯೋ ಫೋನ್‌ಗೆ ಪ್ರತಿಯಾಗಿ ಜಿಯೋಫೋನ್ 2 ಲಾಂಚ್ ಆಗಿದ್ದು, ಎರಡು ಯಾವ ರೀತಿ ಭಿನ್ನ ಎಂಬುದನ್ನು ಮುಂದೆ ನೋಡಿ.

ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ಹೊಸ ಜಿಯೋ ಫೋನ್ 2 ವಿನ್ಯಾಸ ಮತ್ತು ಡಿಸ್‌ಪ್ಲೇನಲ್ಲಿ ಜಿಯೋ ಫೋನ್‌ಗಿಂತಲೂ ವಿಭಿನ್ನವಾಗಿದೆ. QWERTY ಕೀಪ್ಯಾಡ್‌ ಜತೆಗೆ 4 ವೇ ನ್ಯಾವಿಗೇಷನ್ ಪ್ಯಾಡ್‌ನ್ನು ಜಿಯೋ ಫೋನ್ 2 ಹೊಂದಿದೆ. ಆದರೆ, ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಎರಡು 2.4 ಇಂಚ್ ಡಿಸ್‌ಪ್ಲೇ ಹೊಂದಿವೆ.

ಕ್ಯಾಮೆರಾ

ಕ್ಯಾಮೆರಾ

ಜಿಯೋ ಫೋನ್ 2 ಜಿಯೋ ಫೋನ್‌ನಂತೆಯೇ ಕ್ಯಾಮೆರಾ ಫೀಚರ್‌ ಹೊಂದಿದ್ದು, 2 MP ಹಿಂಬದಿ ಕ್ಯಾಮೆರಾ ಮತ್ತು 0.3 MP (VGA) ಕ್ಯಾಮೆರಾವನ್ನು ಮುಂಬದಿಯಲ್ಲಿ ಹೊಂದಿದೆ. ಎರಡು ಫೋನ್‌ಗಳು ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯ ಹೊಂದಿದ್ದು, ಫೀಚರ್‌ ಫೋನ್‌ನಲ್ಲಿ ಉತ್ತಮ ಫೀಚರ್ ಹೊಂದಿದೆ.

ಸಂಪರ್ಕ, ಬ್ಯಾಟರಿ ಮತ್ತು ಒಎಸ್‌

ಸಂಪರ್ಕ, ಬ್ಯಾಟರಿ ಮತ್ತು ಒಎಸ್‌

ಸಂಪರ್ಕದ ವಿಚಾರಕ್ಕೆ ಬಂದರೆ ಜಿಯೋ ಫೋನ್ 2 ವಿಭಿನ್ನವಾಗಿದ್ದು, ಡ್ಯುಯಲ್ ಸಿಮ್‌ಗೆ ಬೆಂಬಲ ಮತ್ತು ವೋವೈ-ಫೈ ಫೀಚರ್ ಹೊಂದಿದೆ. ಇವೆರಡು ಫೀಚರ್‌ಗಳು ಜಿಯೋ ಫೋನ್‌ನಲ್ಲಿ ಇದ್ದಿಲ್ಲ. ಮತ್ತು ಜಿಯೋ ಫೋನ್‌ನ ಉಳಿದ ಫೀಚರ್‌ಗಳಾದ 4G ವೋಲ್ಟೇ ಬೆಂಬಲ, ಎಫ್‌ಎಂ ರೇಡಿಯೋ, ವೈ-ಫೈ, ಜಿಪಿಎಸ್ ಮತ್ತು ಎನ್‌ಎಫ್‌ಸಿ ಫೀಚರ್‌ಗಳನ್ನು ಹೊಂದಿದೆ. ಸಾಫ್ಟ್‌ವೇರ್‌ನಲ್ಲಿ ನೋಡುವುದಾದರೆ ಎರಡು ಫೋನ್‌ಗಳು KaiOS ಹೊಂದಿವೆ. 2000 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಫೀಚರ್‌ ಫೋನ್‌ನಲ್ಲಿ ಬೆಸ್ಟ್‌ ಎನಿಸಬಹುದು.

ಮೆಮೊರಿ

ಮೆಮೊರಿ

ಜಿಯೋ ಫೋನ್ 2 ಮೆಮೊರಿ ವಿಚಾರದಲ್ಲೂ ವಿಭಿನ್ನವಾಗಿಲ್ಲ. ಜಿಯೋ ಫೋನ್‌ನಂತೆಯೇ 512MB RAM ಮತ್ತು 4GB ಆಂತರಿಕ ಸ್ಟೊರೇಜ್ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ನೀಡಲಾಗಿದೆ.

ಆಪ್‌ಗಳು

ಆಪ್‌ಗಳು

ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಎರಡು ಮೊಬೈಲ್‌ಗಳು ಜಿಯೋ ಆಪ್‌ಗಳಾದ ಮೈ ಜಿಯೋ, ಜಿಯೋ ಮ್ಯೂಸಿಕ್, ಜಿಯೋ ಟಿವಿಯಂತಹ ಆಪ್‌ಗಳನ್ನು ಒಳಗೊಳ್ಳಲಿವೆ. ಆದರೆ ಜಿಯೋ ಫೋನ್‌ 2 ರಲ್ಲಿ ಈ ಆಪ್‌ಗಳನ್ನು ಹೊರತುಪಡಿಸಿ ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ನಂತಹ ಆಪ್‌ಗಳು ಇರಲಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

ಬೆಲೆ

ಬೆಲೆ

2016ರಲ್ಲಿ ಜಿಯೋ ಫೋನ್ ಕೇವಲ 1500 ರೂ. ಗಳಿಗೆ ಲಭ್ಯವಿತ್ತು. ಅದು ಸಹ 3 ವರ್ಷದ ನಂತರ ಮರುಪಾವತಿಯಾಗುತ್ತಿತ್ತು. ಆದರೆ, ಜಿಯೋ ಫೋನ್ 2ನ್ನು ಜಿಯೋ ಫೋನ್‌ಗೆ ಹೋಲಿಕೆ ಮಾಡಿ ನೋಡಿದರೆ ಬೇಲೆ ಸ್ವಲ್ಪ ಹೆಚ್ಚಾಯಿತು ಎನ್ನಬಹುದು. ಜಿಯೋ ಫೋನ್ 2 ಮೊಬೈಲ್‌ನ ಆರಂಭಿಕ ಬೆಲೆ 2,999 ರೂ. ಇದೆ. ರಿಲಾಯನ್ಸ್‌ ಜಿಯೋ ನಂತರದ ದಿನಗಳಲ್ಲಿ ಈ ಫೋನ್‌ಗೂ ಮರುಪಾವತಿಯ ಆಫರ್ ನೀಡಿದರೆ ಅಚ್ಚರಿಪಡಬೇಕಾಗಿಲ್ಲ.

Best Mobiles in India

English summary
Reliance JioPhone 2 vsJioPhone: What’s new in the latest Jio smart feature phone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+