Reno 15 Pro Mini vs Vivo X200 FE vs OnePlus 13s: ಯಾವ ಕಾಂಪ್ಯಾಕ್ಟ್ ಬೆಸ್ಟ್?
ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಒಂದೇ ಕೈಯಲ್ಲಿ ಸುಲಭವಾಗಿ ಬಳಸಬಹುದಾದ ಕಾಂಪ್ಯಾಕ್ಟ್ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಗಮನ ಸೆಳೆಯುತ್ತಿವೆ. 2026ರ ಆರಂಭದಲ್ಲೇ ಈ ವಿಭಾಗವು ಮತ್ತಷ್ಟು ಹೊಸ ರೂಪ ಪಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ಹೊಸ ಉದಾಹರಣೆ ಎಂದರೆ, Reno 15 Pro Mini ಸ್ಮಾರ್ಟ್‌ಫೋನ್.! ಈ Reno 15 Pro Mini ಫೋನ್ ಬಿಡುಗಡೆ ಮೂಲಕ ಭಾರತದಲ್ಲಿ 2026ರಲ್ಲಿ 50 ರಿಂದ 55 ಸಾವಿರ ವಿಭಾಗದಲ್ಲಿ ಪ್ರೀಮಿಯಂ ಕಾಂಪ್ಯಾಕ್ಟ್ ಫೋನ್ ಹೇಗಿರಬೇಕು ಎಂಬುದಕ್ಕೆ Oppo ಉತ್ತರ ನೀಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿರುವ Vivo X200 FE ಮತ್ತು OnePlus 13s ಎದುರು, ಈ ಹೊಸ ಫೋನ್ ಹೇಗೆ ನಿಲ್ಲುತ್ತದೆ ಎಂಬುದು ಗ್ರಾಹಕರಿಗೆ ಕುತೂಹಲ. ಹಾಗಾಗಿ, ಈ ಲೇಖನದಲ್ಲಿ Reno 15 Pro Mini , Vivo X200 FE ಮತ್ತು OnePlus 13s ಫೋನ್‌ಗಳನ್ನು ಹೋಲಿಕೆ ಮಾಡಿ ನೋಡೋಣ.
ಡಿಸೈನ್ ಮತ್ತು ಡಿಸ್ಪ್ಲೇ: ಸಣ್ಣ ಗಾತ್ರ, ಪ್ರೀಮಿಯಂ ಅನುಭವ
ಗಮನಿಸುವುದಾದರೆ, Reno 15 Pro Mini , Vivo X200 FE ಮತ್ತು OnePlus 13s ಮೂರು ಸ್ಮಾರ್ಟ್‌ಫೋನ್‌ಗಳಲ್ಲೂ ಸುಮಾರು 6.3 ಇಂಚಿನ ಡಿಸ್ಪ್ಲೇ ನೀಡಲಾಗಿದೆ. ದೊಡ್ಡ ಸ್ಕ್ರೀನ್‌ಗಳಿಂದ ತುಂಬಿರುವ ಇಂದಿನ ಮಾರುಕಟ್ಟೆಯಲ್ಲಿ ಇದು ವಿಭಿನ್ನ ಮತ್ತು ಉಪಯುಕ್ತ ಆಯ್ಕೆ ಎನ್ನಬಹುದು
Oppo Reno 15 Pro Mini ಫ್ಲಾಟ್ 6.32-ಇಂಚಿನ AMOLED ಡಿಸ್ಪ್ಲೇ ಹೊಂದಿದ್ದು, ಸ್ಲಿಮ್ ಬೇಸೆಲ್ ಮತ್ತು ಸಮತೋಲನದ ವಿನ್ಯಾಸದಿಂದ ಹಿಡಿಯಲು ಸುಲಭವಾಗಿದೆ. 3,600 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊರಾಂಗಣ ಬಳಕೆಗೆ ಸೂಕ್ತವಾಗಿದ್ದು, ದಿನನಿತ್ಯದ ಬಳಕೆಯಲ್ಲಿ ಆರಾಮದಾಯಕ ಅನುಭವ ನೀಡುತ್ತದೆ.
Vivo X200 FE 6.31-ಇಂಚಿನ LTPO AMOLED ಡಿಸ್ಪ್ಲೇ ಮೂಲಕ ಹೆಚ್ಚು ಬ್ರೈಟ್‌ನೆಸ್ ಮತ್ತು HDR10+ ಬೆಂಬಲ ನೀಡುತ್ತದೆ. ವಿಡಿಯೋ ವೀಕ್ಷಣೆ ಮತ್ತು ಸೋಶಿಯಲ್ ಮೀಡಿಯಾ ಬಳಕೆಗೆ ಇದು ಹೆಚ್ಚು ಆಕರ್ಷಕವಾಗಿದೆ.
OnePlus 13s 6.32-ಇಂಚಿನ LTPO ಡಿಸ್ಪ್ಲೇ ಹೊಂದಿದ್ದು, ಬಣ್ಣಗಳ ನಿಖರತೆ ಮತ್ತು ಸ್ಥಿರತೆ ಮೇಲೆ ಒತ್ತು ನೀಡುತ್ತದೆ. ಅತಿಯಾದ ಸ್ಪೆಕ್‌ಗಳಿಗಿಂತ ವಿಶ್ವಾಸಾರ್ಹ ಅನುಭವವನ್ನು ಇಷ್ಟಪಡುವವರಿಗೆ ಇದು ಸೂಕ್ತ.
ಮೂರು ಫೋನ್‌ಗಳಲ್ಲೂ 120Hz ರಿಫ್ರೆಶ್ ರೇಟ್ ಇದ್ದು, ಸ್ಕ್ರೋಲಿಂಗ್ ಮತ್ತು ಗೇಮಿಂಗ್ ಅನುಭವವನ್ನು ಸ್ಮೂತ್ ಆಗಿಸುತ್ತದೆ.
ಕಾರ್ಯಕ್ಷಮತೆ: ವೇಗ, ಸ್ಥಿರತೆ ಮತ್ತು ತಾಪಮಾನ ನಿಯಂತ್ರಣ
ಕಾರ್ಯಕ್ಷಮತೆಯಲ್ಲಿ ಈ ಮೂರು ಫೋನ್‌ಗಳು ವಿಭಿನ್ನ ರೀತಿಯ ಬಳಕೆದಾರರನ್ನು ಗುರಿಯಾಗಿಸಿಕೊಂಡಿವೆ.
OnePlus 13s ನಲ್ಲಿ ಇರುವ Snapdragon 8 Elite ಪ್ರೊಸೆಸರ್ ಈ ಗುಂಪಿನಲ್ಲೇ ಅತ್ಯಂತ ಶಕ್ತಿಶಾಲಿ. ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ದೀರ್ಘಕಾಲದ ಬಳಕೆಯಲ್ಲೂ ವೇಗ ಕಡಿಮೆಯಾಗುವುದಿಲ್ಲ.
Oppo Reno 15 Pro Mini Dimensity 8450 ಚಿಪ್‌ಸೆಟ್ ಬಳಸಿ ಸಮತೋಲನದ ಕಾರ್ಯಕ್ಷಮತೆ ನೀಡುತ್ತದೆ. ದಿನನಿತ್ಯದ ಬಳಕೆ, ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಎಲ್ಲದರಲ್ಲೂ ಸ್ಥಿರ ಅನುಭವ ನೀಡುವುದು ಇದರ ಶಕ್ತಿ.
Vivo X200 FE ಯಲ್ಲಿನ Dimensity 9300 Plus ಗೇಮಿಂಗ್‌ಗೆ ಸೂಕ್ತವಾದರೂ, ದೀರ್ಘ ಕಾಲ ಬಳಕೆಯಲ್ಲಿ ಸ್ವಲ್ಪ ಹೆಚ್ಚಾದ ತಾಪಮಾನ ಕಂಡುಬರುತ್ತದೆ ಎಂಬುದು ನಮ್ಮ ಅಭಿಪ್ರಾಯ.

ಕ್ಯಾಮೆರಾ ವಿಭಾಗ: ಫೋಟೋಗ್ರಫಿಗೆ ಯಾವ ಫೋನ್ ಉತ್ತಮ?
ಕ್ಯಾಮೆರಾ ವಿಚಾರದಲ್ಲಿ Oppo Reno 15 Pro Mini ಸ್ಪಷ್ಟ ಮುನ್ನಡೆ ಪಡೆಯುತ್ತದೆ. 200MP ಮುಖ್ತ ಕ್ಯಾಮೆರಾ, 50MP ಅಲ್ಟ್ರಾವೈಡ್ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಇರುವುದರಿಂದ ಪೋರ್ಟ್ರೇಟ್ ಮತ್ತು ಜೂಮ್ ಫೋಟೋಗ್ರಫಿಗೆ ಇದು ಅತ್ಯುತ್ತಮ ಆಯ್ಕೆ.
Vivo X200 FE 50MP ಮೇನ್ ಕ್ಯಾಮೆರಾ, 8MP ಅಲ್ಟ್ರಾವೈಡ್ ಮತ್ತು 50MP ಪೆರಿಸ್ಕೋಪ್ ಲೆನ್ಸ್ ಮೂಲಕ ನೈಸರ್ಗಿಕ ಚಿತ್ರಗಳು ಮತ್ತು ವಿಶ್ವಾಸಾರ್ಹ ಜೂಮ್ ನೀಡುತ್ತದೆ.
OnePlus 13s ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ದಿನನಿತ್ಯದ ಫೋಟೋಗಳಿಗೆ ಉತ್ತಮವಾದರೂ ಅಲ್ಟ್ರಾವೈಡ್ ಇಲ್ಲದಿರುವುದು ಕೆಲವು ಬಳಕೆದಾರರಿಗೆ ಇದು ದೊಡ್ಡ ಮಿತಿಯಾಗಬಹುದು.
ಬ್ಯಾಟರಿ ಮತ್ತು ಚಾರ್ಜಿಂಗ್: ದೀರ್ಘಕಾಲಿಕ ಬಳಕೆಗೆ ಯಾವುದು ಸೂಕ್ತ?
Vivo X200 FE ಯ 6,500mAh ಬ್ಯಾಟರಿ ದೀರ್ಘಕಾಲ ಬಳಕೆಗೆ ಅತ್ಯುತ್ತಮ. ಹೆಚ್ಚಿನ ಬಳಕೆಯಲ್ಲೂ ದಿನದ ಅಂತ್ಯವರೆಗೆ ಬ್ಯಾಟರಿ ಸಾಕಾಗುತ್ತದೆ.
Oppo Reno 15 Pro Mini 6,200mAh ಬ್ಯಾಟರಿ ಮತ್ತು ವೈರ್ಡ್ ಜೊತೆಗೆ ವೈರ್‌ಲೆಸ್ ಚಾರ್ಜಿಂಗ್ ನೀಡುತ್ತದೆ. ವೇಗವಾಗಿ ಚಾರ್ಜ್ ಮಾಡುವ ಸೌಲಭ್ಯ ಇದಕ್ಕೆ ದೊಡ್ಡ ಪ್ಲಸ್.
OnePlus 13s 5,850mAh ಬ್ಯಾಟರಿ ಹೊಂದಿದ್ದು, ವೇಗವಾಗಿ ಚಾರ್ಜ್ ಆಗುತ್ತದೆ. ಆದರೆ, ಹೆಚ್ಚು ಬಳಕೆಯಲ್ಲಿ ಹೆಚ್ಚಾಗಿ ಚಾರ್ಜ್ ಮಾಡಬೇಕಾಗುತ್ತದೆ.
ಸಾಫ್ಟ್‌ವೇರ್ ಮತ್ತು ಅಪ್‌ಡೇಟ್ ಭರವಸೆ
OnePlus 13s OxygenOS 16 (Android 16) ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 4 ವರ್ಷಗಳ Android ಅಪ್‌ಡೇಟ್ ಮತ್ತು 6 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ಭರವಸೆ ನೀಡುತ್ತದೆ.
Vivo X200 FE Funtouch OS ಜೊತೆಗೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ OriginOS 6 ಅಪ್‌ಡೇಟ್ ಪಡೆಯಲಿದೆ. 3 Android ಅಪ್‌ಡೇಟ್ ಮತ್ತು 4 ವರ್ಷಗಳ ಸೆಕ್ಯುರಿಟಿ ಬೆಂಬಲ ಲಭ್ಯ.
Oppo Reno 15 Pro Mini ColorOS 16 (Android 16) ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 5 Android ಅಪ್‌ಡೇಟ್ ಮತ್ತು 6 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ಮೂಲಕ ದೀರ್ಘಕಾಲಿಕ ಬೆಂಬಲ ನೀಡುತ್ತದೆ.
ಭಾರತದಲ್ಲಿ ಬೆಲೆ ವಿವರ
ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್‌ಗಳ ಬೆಲೆ ಹೀಗಿದೆ:
OnePlus 13s ₹54,998 ರಿಂದ ಆರಂಭವಾಗುತ್ತದೆ.
Vivo X200 FE ₹56,999 ಆರಂಭಿಕ ಬೆಲೆಯಲ್ಲಿ ಲಭ್ಯ.
Oppo Reno 15 Pro Mini ₹59,999 ರಿಂದ ಆರಂಭವಾಗುತ್ತದೆ.
ಅಂತಿಮ ಮಾತು: ನಿಮ್ಮ ಬಳಕೆಗೆ ಯಾವ ಕಾಂಪ್ಯಾಕ್ಟ್ ಫ್ಲಾಗ್‌ಶಿಪ್ ಸರಿಹೊಂದುತ್ತದೆ?
ಅತ್ಯುತ್ತಮ ವೇಗ ಮತ್ತು ಮೌಲ್ಯ ಬೇಕಾದರೆ OnePlus 13s ಸರಿಯಾದ ಆಯ್ಕೆ.
ಕ್ಯಾಮೆರಾ ಮತ್ತು ಬ್ಯಾಟರಿ ಸಮತೋಲನ ಮುಖ್ಯವಾದರೆ Vivo X200 FE ಉತ್ತಮ.
ದೀರ್ಘಕಾಲಿಕ ಸಾಫ್ಟ್‌ವೇರ್ ಬೆಂಬಲ, ಶಕ್ತಿಶಾಲಿ ಕ್ಯಾಮೆರಾ ಮತ್ತು ಒಟ್ಟಾರೆ ಪ್ರೀಮಿಯಂ ಅನುಭವ ಬೇಕಾದರೆ Oppo Reno 15 Pro Mini 2026ರ ಅತ್ಯಂತ ಸಂಪೂರ್ಣ ಕಾಂಪ್ಯಾಕ್ಟ್ ಫ್ಲಾಗ್‌ಶಿಪ್ ಆಗಿ ಹೊರಹೊಮ್ಮುತ್ತದೆ.
ಒಟ್ಟಾರೆಯಾಗಿ, ಈ ಮೂರು ಫೋನ್‌ಗಳು ವಿಭಿನ್ನ ಅಗತ್ಯಗಳಿಗೆ ಉತ್ತರ ನೀಡುತ್ತವೆ. ನಿಮ್ಮ ಬಳಕೆಯ ಆದ್ಯತೆ ತಿಳಿದಿದ್ದರೆ, ಸರಿಯಾದ ಆಯ್ಕೆ ಮಾಡುವುದು ಇನ್ನಷ್ಟು ಸುಲಭ.


Click it and Unblock the Notifications








