ಐಫೋನ್ ಖರೀದಿಗೆ ಕಾರಣವೇನು ಗೊತ್ತಾ..? ಎಕನಾಮಿಸ್ಟ್ ಬಿಚ್ಚಿಟ್ಟ ಶಾಕಿಂಗ್ ಸಂಗತಿ...!
ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ನಂಬರ್ ಸ್ಮಾರ್ಟ್ ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಆಪಲ್, ಭಾರತ ಸೇರಿಂದತೆ ಹಲವು ಮಾರುಕಟ್ಟೆಯಲ್ಲಿ ಪ್ರತಿಷ್ಠೆಯ ದುಬಾರಿ ಪೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಹೊಸದೊಂದು ವರದಿಯೂ ಆಪಲ್ ಐಫೋನಿನ ಕುರಿತು ಬಿಡುಗಡೆಯಾಗಿದ್ದು, ಈ ವರದಿಯ ಅನ್ವಯ ಶೀಮಂತರು ಹೆಚ್ಚಾಗಿ ಐಫೋನ್ ಅನ್ನು ಬಳಕೆ ಮಾಡಿಕೊಳ್ಳಲು ಮುಂದಾಗುತ್ತಾರೆ ಎಂಬ ಸತ್ಯ ಸಂಗತಿಯನ್ನು ತಿಳಿಸಿದೆ.

ಐಫೋನ್ ಅನ್ನು ತಮ್ಮ ಶ್ರೀಮಂತಿಕೆಯ ಸಂಕೇತ ಎನ್ನುವಂತೆ ಬಳಕೆ ಮಾಡಿಕೊಳ್ಳಲು ಹಲವು ಮಂದಿ ಬಯಸುತ್ತಾರೆ ಎನ್ನುವುದನ್ನು ಚಿಕಾಗೋ ವಿಶ್ವವಿದ್ಯಾನಿಲಯದ ಇಬ್ಬರು ಅರ್ಥಶಾಸ್ತ್ರಜ್ಞರು ಪ್ರಸ್ತುತ ಪಡಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಐಫೋನ್ ದುಬಾರಿ ಬೆಲೆಯಾದರು ಸಹ ತಮ್ಮ ಶ್ರೀಮಂತಿಕೆಯೇ ಪ್ರದರ್ಶನಕ್ಕಾಗಿಯೇ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂತಸ್ತು:
ಇದಲ್ಲದೇ ಐಫೋನಿನ ಮೂಲಕವೇ ತಮ್ಮ ಅಂತಸ್ತನ್ನು ತೋರಿಸಲು ಪ್ರಯತ್ನಿಸುತ್ತಾರೆ ಮತ್ತು ಐಪೋನ್ ಮೂಲಕವೇ ಬೇರೆಯವರ ಅಂತಸ್ತನ್ನು ಗುರುತಿಸುತ್ತಾರೆ ಎನ್ನಲಾಗಿದೆ. ಐಪೋನ್ X ಅನ್ನು ಬಳಸುವ ವ್ಯಕ್ತಿಯೂ ಹೆಚ್ಚು ಶ್ರೀಮಂತನಾಗಿದ್ದರೇ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಎನ್ನುವ ಐಪೋನ್ SEಯನ್ನು ಬಳಸುವವರುದು ಕಡಿಮೆ ಆದಾಯವನ್ನು ಹೊಂದಿದ್ದಾರೆ ಎಂಬುದನ್ನು ಪ್ರತಿ ನಿಧಿಸುತ್ತದೆ ಎಂದು ತಿಳಿಸಿದ್ದಾರೆ.

ಐಫೋನ್ X:
ಮಾರುಕಟ್ಟೆಯಲ್ಲಿ ಹಲವು ಮಂದಿ ಶ್ರೀಮಂತರು ಐಫೋನ್ X ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿರುವುದು ತಮ್ಮ ಆದಾಯವನ್ನು ಹೊರ ಜಗತ್ತಿಗೆ ತೋರಿಸುವುದಾಗಿಯೇ ಎನ್ನಲಾಗಿದೆ. ಆಪಲ್ ಬಿಡುಗಡೆ ಮಾಡಿರುವ ಅತೀ ಹೆಚ್ಚಿನ ಬೆಲೆಯ ಐಪೋನ್ ಇದಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಇದು ಒಂದು ಲಕ್ಷಕ್ಕೂ ಅಧಿಕ ಬೆಲೆಯನ್ನು ಹೊಂದಿತ್ತು.

6000 ಮಂದಿ ಸಮೀಕ್ಷೆ:
ಚಿಕಾಗೋ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞರು ಐಫೋನ್ ವಿಚಾರವಾಗಿ ನಡೆಸಿರುವ ಸಮೀಕ್ಷೆಗಾಗಿ ಸುಮಾರು 6000 ಮಂದಿಯನ್ನು ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ಹಲವು ಮಂದಿ ಈ ಮೇಲಿನ ಅಭಿಪ್ರಾಯವನ್ನು ನೀಡಿದ್ದಾರೆ. ಈ ಒಂದು ಸಮೀಕ್ಷೆಯಲ್ಲಿ ಹಲವು ಮಂದಿ ಸೆಲೆಬ್ರಿಟಿಗಳನ್ನು ಬಳಕೆ ಮಾಡಿಕೊಂದಿದ್ದಾರೆ ಎನ್ನಲಾಗಿದೆ. ಅವರು ನೀಡಿದ ಎಲ್ಲಾ ಮಾಹಿತಿಯನ್ನು ಬಳಕೆ ಮಾಡಿಕೊಂಡು ಐಫೋನ್ ಶ್ರೀಮಂತಿಕೆಯನ್ನು ಸಂಕೇತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಶ್ರೀಮಂತಿಕೆಯ ಪ್ರದರ್ಶನವೇ ಹೆಚ್ಚು:
ಐಫೋನ್ ಹೆಚ್ಚಿನ ಸಂದರ್ಭದಲ್ಲಿ ಆಂಡ್ರಾಯ್ಡ್ ಗಿಂತಲೂ ಬಳಕೆಯ ವಿಷಯದಲ್ಲಿ ಹೆಚ್ಚಿನ ಕಷ್ಟಕರವಾಗಿದ್ದು, ಆದರೂ ಸಹ ಗುಣಮಟ್ಟ ಮತ್ತು ಸ್ಟೇಟಸ್ ಪ್ರದರ್ಶನಕ್ಕಾಗಿ ಐಪೋನ್ ಅನ್ನು ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಇದೆ. ಶ್ರೀಮಂತಿಕೆಯ ಸಂಕೇತವಾಗಿಯೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಸತ್ಯ ಸಂಗತಿಗಳಲ್ಲಿ ಒಂದಾಗಿದೆ.


Click it and Unblock the Notifications








