ಜೂನ್‌ 30 ರೊಳಗೆ 50 ಲಕ್ಷ Freedom 251 ಮೊಬೈಲ್‌ ಆಮದು: ಸರ್ಕಾರದ ಹೇಳಿಕೆ

By Suneel
|

ರಿಂಗಿಂಗ್ ಬೆಲ್ಸ್‌ ಕಂಪನಿ ಮಾರಾಟಕ್ಕೆ ಬುಕಿಂಗ್‌ ಮಾಡಿಸಿಕೊಂಡ ಪ್ರಪಂಚದ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ "Freedom 251" ಮೊಬೈಲ್‌ ನೀಡುವುದು ಸತ್ಯವೋ/ಸುಳ್ಳೋ ಎಂದು ಸಾರ್ವಜನಿಕರಲ್ಲಿ ಇನ್ನು ಸಹ ಸಂಶಯವಿರುವ ಸಂದರ್ಭದಲ್ಲೇ ಭಾರತದ ಜನತೆಗೆ ಇನ್ನೊಂದು ಆಶ್ಚರ್ಯಕರ ಸುದ್ದಿ ಹೊರಬಿದ್ದಿದೆ.

ಇತ್ತೀಚಿನ ವರದಿ ಪ್ರಕಾರ ರಿಂಗಿಂಗ್ ಬೆಲ್ಸ್‌ ಕಂಪನಿಯು ಟೆಲಿಕಾಂ ಸಚಿವರಾದ ರವಿಶಂಕರ್ ಪ್ರಸಾದ್‌'ರವರನ್ನು ಹಾಗೂ ಟೆಲಿಕಂಮ್ಯೂನಿಕೇಷನ್‌ ವಿಭಾಗದ ಇತರೆ ಅಧಿಕಾರಿಗಳನ್ನು ಬೆಲೆ ಕುರಿತ ವಿಷಯವಾಗಿ ಭೇಟಿ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೇ ಸರ್ಕಾರದ ಅಧಿಕೃತ ವರದಿ ಪ್ರಕಾರ ರಿಂಗಿಂಗ್‌ ಬೆಲ್ಸ್ ಕಂಪನಿಯೂ ಮೊದಲ ಹಂತದಲ್ಲಿ 50 ಲಕ್ಷ "Freedom 251" ಸ್ಮಾರ್ಟ್‌ಫೋನ್‌ ಆಮದು ಮಾಡಿಕೊಳ್ಳಲಿದೆ ಎಂದು ಹೇಳಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

 50 ಲಕ್ಷ  Freedom 251 ಆಮದು

50 ಲಕ್ಷ Freedom 251 ಆಮದು

ರಿಂಗಿಂಗ್ ಬೆಲ್ಸ್‌ ಕಂಪನಿಯು ಮೊದಲ ಹಂತದಲ್ಲಿ 50 ಲಕ್ಷ Freedom 251 ಸ್ಮಾರ್ಟ್‌ಫೋನ್‌ ಅನ್ನು ಆಮದು ಮಾಡಿಕೊಳ್ಳುತ್ತದೆ ಎಂದು ರಿಂಗಿಂಗ್ ಬೆಲ್ಸ್‌ ಕಂಪನಿಯ ಪ್ರಯೋಜಕರೊಂದಿಗೆ ನಡೆಸಿದ ಸಭೆಯಲ್ಲಿ ಸರ್ಕಾರ ಅಧಿಕೃತ ಮೂಲಗಳು ಹೇಳಿವೆ.

 6 ಕೋಟಿ ಸ್ಮಾರ್ಟ್‌ಫೋನ್‌ಗಳು ಬುಕ್‌

6 ಕೋಟಿ ಸ್ಮಾರ್ಟ್‌ಫೋನ್‌ಗಳು ಬುಕ್‌

ರಿಂಗಿಂಗ್ ಬೆಲ್ಸ್ ಕಂಪನಿಯು 6 ಕೋಟಿಗೂ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಕಾಯ್ದಿರಿಸಿರುವ ಬಗ್ಗೆ ದಾಖಲನ್ನು ಪಡೆದಿದೆ ಎಂದು ಹೇಳಿದೆ.

ಜೂನ್‌ 30 ರೊಳಗೆ ಫೋನ್‌ ಡಿಲಿವರಿ

ಜೂನ್‌ 30 ರೊಳಗೆ ಫೋನ್‌ ಡಿಲಿವರಿ

50 ಲಕ್ಷ Freedom 251 ಸ್ಮಾರ್ಟ್‌ಫೋನ್‌ ಅನ್ನು ಜೂನ್‌ ತಿಂಗಳ 30 ನೇ ದಿನಾಂಕದೊಳಗೆ ಬುಕ್‌ ಮಾಡಿರುವವರಿಗೆ ಮೊದಲ ಹಂತದಲ್ಲಿ ಡಿಲಿವರಿ ನೀಡಲಾಗುವುದು ಎಂದು ಹೇಳಿದೆ.

ಬ್ಯುಸಿನೆಸ್‌ ಮಾದರಿ

ಬ್ಯುಸಿನೆಸ್‌ ಮಾದರಿ

ಇಲೆಕ್ಟ್ರಾನಿಕ್ಸ್ ಇಲಾಖೆ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ ರಿಂಗಿಂಗ್ ಬೆಲ್ಸ್‌ ಅಧ್ಯಕ್ಷರಾದ ಅಶೋಕ್‌ ಚಾಡ್ದಾ ಮತ್ತು ಪ್ರಯೋಜಕರಾದ ಮೋಹಿತ್‌ ಗೋಯೆಲ್‌ರವರು ತಮ್ಮ ವ್ಯವಹಾರದ ಮಾದರಿ ಕುರಿತು ಹೇಳಿದ್ದಾರೆ.

ಸಚಿವಾಲಯದ ಹಿರಿಯ  ಅಧಿಕಾರಿಯವರ ನಿಖರತೆ

ಸಚಿವಾಲಯದ ಹಿರಿಯ ಅಧಿಕಾರಿಯವರ ನಿಖರತೆ

ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿಯವರ ಪ್ರಕಾರ " ಅಶೋಕ್‌ ಚಾಡ್ದಾ ಮತ್ತು ಮೋಹಿತ್ ಗೋಯೆಲ್‌ರವರು ಮೊದಲ ಹಂತದಲ್ಲಿ 50 ಲಕ್ಷ ಮೊಬೈಲ್‌ಗಳನ್ನು ಆಮದು ಮಾಡಿಕೊಂಡು, ನಂತರ ಬೇಡಿಕೆಗೆ ಅನುಗುಣವಾಗಿ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಅನ್ನು ತಯಾರಿಸಲಾಗುವುದು" ಎನ್ನಲಾಗಿದೆ.

ವರದಿಯ ಹೇಳಿಕೆ

ವರದಿಯ ಹೇಳಿಕೆ

ರಿಂಗಿಂಗ್ ಬೆಲ್ಸ್‌ ಕಂಪನಿಯ ಅಧ್ಯಕ್ಷರಾದ ಅಶೋಕ್ ಚಾಡ್ದಾ ರವರು " ಕಂಪನಿಯು ಆರ್ಥಿಕವಾಗಿ ಪ್ರಮಾಣಾನುಗುಣವಾಗಿ ಉಳಿತಾಯಕ್ಕೆ ತಕ್ಕಂತೆ ಶೇಕಡ 13.8 ಉಳಿತಾಯ ಪಡೆದು ಭಾರತದಲ್ಲಿಯೇ ಬಿಡಿಭಾಗಗಳನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್‌ ತಯಾರಿಸುತ್ತದೆ" ಎಂದು ಹೇಳಿದ್ದಾರೆ.

ತೈವಾನ್‌ನಿಂದ ಬಿಡಿಭಾಗಗಳು

ತೈವಾನ್‌ನಿಂದ ಬಿಡಿಭಾಗಗಳು

ಪ್ರಸ್ತುತದಲ್ಲಿ ಕಂಪನಿಯು ತೈವಾನ್‌ನಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ನೋಯ್ಡಾದಲ್ಲಿ ಸ್ಮಾರ್ಟ್‌ಫೋನ್‌ ಜೋಡಣೆ ನಡೆಸಲಾಗುತ್ತಿದೆ. ಅಲ್ಲದೇ ರಿಂಗಿಂಗ್ ಬೆಲ್‌ ಕಂಪನಿಯೂ 6-8 ತಿಂಗಳ ಒಳಗೆ 350 ಕೋಟಿ ವೆಚ್ಚದಲ್ಲಿ 2 ಸ್ಮಾರ್ಟ್‌ಫೋನ್‌ ತಯಾರಿಕ ಘಟಕಗಳನ್ನು ಭಾರತದಲ್ಲಿ ವ್ಯವಸ್ಥೆಗೊಸಲು ಚಿಂತಿಸಿದೆ ಎಂದು ಕಂಪನಿ ಪ್ರಯೋಜಕರು ಹೇಳಿದ್ದಾರೆ.

30,000 ಮೊಬೈಲ್‌ಗೆ ಹಣ ಸ್ವೀಕೃತ

30,000 ಮೊಬೈಲ್‌ಗೆ ಹಣ ಸ್ವೀಕೃತ

ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗಿನ ಸಭೆಯಲ್ಲಿ, ರಿಂಗಿಂಗ್ ಬೆಲ್ಸ್ ಕಂಪನಿಯು 30,000 ಸ್ಮಾರ್ಟ್‌ಫೋನ್‌ಗಳಿಗೆ ಹಣವನ್ನು ಸ್ವೀಕರಿಸಿದೆ ಎಂದು ಹೇಳಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ </a></strong><br /><strong><a href=ನಾಯಿಗಳ ತಳಿ ಕಂಡುಹಿಡಿಯಲು ಮೊಬೈಲ್‌ ಆಪ್‌
4G ಇಂಟರ್ನೆಟ್‌ಕ್ಕಿಂತ 1000 ಪಟ್ಟು ವೇಗ: ಪಿಸೆಲ್ ನೆಟ್‌ವರ್ಕ್‌
3,000 ಇಂಜಿನಿಯರ್‌ಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ" title="ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ನಾಯಿಗಳ ತಳಿ ಕಂಡುಹಿಡಿಯಲು ಮೊಬೈಲ್‌ ಆಪ್‌
4G ಇಂಟರ್ನೆಟ್‌ಕ್ಕಿಂತ 1000 ಪಟ್ಟು ವೇಗ: ಪಿಸೆಲ್ ನೆಟ್‌ವರ್ಕ್‌
3,000 ಇಂಜಿನಿಯರ್‌ಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ" />ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ನಾಯಿಗಳ ತಳಿ ಕಂಡುಹಿಡಿಯಲು ಮೊಬೈಲ್‌ ಆಪ್‌
4G ಇಂಟರ್ನೆಟ್‌ಕ್ಕಿಂತ 1000 ಪಟ್ಟು ವೇಗ: ಪಿಸೆಲ್ ನೆಟ್‌ವರ್ಕ್‌
3,000 ಇಂಜಿನಿಯರ್‌ಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ

Best Mobiles in India

English summary
Ringing Bells to import first 50 lakh phones: Govt. official. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X