ಹೆಲ್ತ್‌ ಆಪ್‌ನೊಂದಿಗೆ ಬರಲಿದೆ ಐಓಎಸ್‌ 8

By Ashwath
|

ವೇರಬಲ್‌ ಗ್ಯಾಜೆಟ್‌ಗಳು ಒಂದೊಂದಾಗಿ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ.ಸ್ಯಾಮ್‌ಸಂಗ್‌,ಸೋನಿ ಕಂಪೆನಿಗಳು ಸ್ಮಾರ್ಟ್‌‌ವಾಚ್‌ ಬಿಡುಗಡೆ ಮಾಡಿವೆ.ಗೂಗಲ್‌ ಈಗಾಗಲೇ ಗೂಗಲ್‌ ಗ್ಲಾಸ್‌ ತಯಾರಿಸಿದೆ. ದೊಡ್ಡ ದೊಡ್ಡ ಟೆಕ್‌ ಕಂಪೆನಿಗಳೇ ಉತ್ಪನ್ನಗಳನ್ನು ತಯಾರಿಸುತ್ತಿರುವಾಗ ಥಿಂಕ್‌ ಡಿಫರೆಂಟ್‌ ಖ್ಯಾತಿಯ ಆಪಲ್‌ ಕಂಪೆನಿ ತಯಾರಿಸದಿದ್ದರೆ ಹೇಗೆ? ಈಗ ಆಪಲ್‌ ಸಹ ವೇರಬಲ್‌ ಗ್ಯಾಜೆಟ್‌ಗಾಗಿ ಹೊಸ ಹೆಲ್ತ್‌ ಅಪ್ಲಿಕೇಶನ್‌ ತಯಾರಿಸಿದೆ.

ಆಪಲ್‌ ತನ್ನ ಐಓಎಸ್‌8ನ್ನು ಇದೇ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಓಎಸ್‌ಗೆ ಹೊಸ ವಿಶೇಷತೆಗಳನ್ನು ಸೇರಿಸಲು ಮುಂದಾಗುತ್ತಿದ್ದು ಹೊಸ ಓಎಸ್‌ ಹೆಲ್ತ್‌ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.

ಹೆಲ್ತ್‌ ಬುಕ್‌ ಆಪ್‌ನಲ್ಲಿ ಏನಿದೆ?
ವ್ಯಾಯಾಮ ಮಾಡಿದಾಗ ಬರ್ನ್‌ ಆದ ದೇಹದ ಕ್ಯಾಲೋರಿ ಪ್ರಮಾಣ,ರಕ್ತದಲ್ಲಿರುವ ಸಕ್ಕರೆಯ ಅಂಶ, ರಕ್ತದಲ್ಲಿರುವ ಆಮ್ಲಜನಕದ ಮಟ್ಟ ಉಸಿರಾಟದ ವಿವರಗಳನ್ನು ಆಪ್‌ ನೀಡಲಿದೆ. ಅಷ್ಟೇ ಅಲ್ಲದೇ ದೇಹದ ಚಟುವಟಿಕೆಗಳನ್ನು ಗಮನಿಸಿ ಕುಡಿಯಲು ಎಷ್ಟು ನೀರು ಬೇಕು ಎಂಬುದನ್ನು ಸಹ ತಿಳಿಸಲಿದೆಯಂತೆ.ಎಷ್ಟು ಹೊತ್ತು ನಿದ್ದೆ ಮಾಡಿದ್ದೀರಿ, ನಿದ್ದೆಯ ಮಧ್ಯೆ ಎಷ್ಟು ಸಲ ಎದ್ದಿದ್ದೀರಿ ಈ ಮಾಹಿತಿಯೂ ಆಪ್‌ನಲ್ಲಿ ವೀಕ್ಷಿಸಬಹುದಂತೆ.

ಸ್ಮಾರ್ಟ್‌‌ಫೋನ್‌ ಒಂದರಲ್ಲೇ ಈ ಎಲ್ಲಾ ಅಂಶಗಳು ಪತ್ತೆಯಾಗುತ್ತದೋ ಅಥವಾ ಆಪ್‌ಗಾಗಿ ಪ್ರತ್ಯೇಕ ಗ್ಯಾಜೆಟ್‌ನ್ನು ಆಪಲ್‌ ತಯಾರಿಸುತ್ತದೋ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ಇನ್ನೂ ಗೊಂದಲವಿದೆ. ಆದರೆ ಐಓಎಸ್‌,ಈ ಮೇಲೆ ತಿಳಿಸಿದ ಆರೋಗ್ಯ ಸಂಬಂಧಿಸಿದ ಮಾಹಿತಿಗಳನ್ನು ತಿಳಿಸುವ ಹೆಲ್ತ್‌ ಆಪ್‌ನೊಂದಿಗೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಹೆಲ್ತ್‌ ಆಪ್‌ ಹೇಗಿದೆ ಎನ್ನುವುದಕ್ಕೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿರುವ ಕೆಲ ಅಪ್ಲಿಕೇಶನ್‌ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

1

1


ಹೆಲ್ತ್‌ ಬುಕ್‌ ಆಪ್‌

2

2

ಫಿಟ್ನೆಸ್ ಆಪ್ ಕಾರ್ಯವಿಧಾನ

3

3

ಎಮರ್ಜೆನ್ಸಿ ಕಾರ್ಡ್‌

5

5


ಸ್ಲೀಪ್‌ ಟ್ಯ್ರಾಕಿಂಗ್‌

6

6


ಜಲಸಂಚಯನ ಮತ್ತು ಉಸಿರಾಟ ಪರಿಶೀಲನೆ(Hydration and Respiratory Rate Measuring)

6

6

ರಕ್ತದೊತ್ತಡ ಪರಿಶೀಲನೆ

7

7

ಬ್ಲಡ್ ಶುಗರ್ ಟ್ರ್ಯಾಕಿಂಗ್

source: 9to5mac.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X