ಹೇಗಿದೆ ಗೊತ್ತಾ ಸಚಿನ್ ಸ್ಮಾರ್ಟ್‌ಪೋನ್..? ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ...!!
ಈ ಸ್ಮಾರ್ಟ್‌ಫೋನನ್ನು ಭಾರತೀಯ ಮೂಲದ ಸ್ಮಾರ್ಟ್ರಾನ್ ಎಂಬ ಕಂಪನಿಯೂ ಬಿಡುಗಡೆ ಮಾಡಿದೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಆಂಡ್ರಾಯ್ಡ್ ಫೋನ್ ಇಂದು ಭಾರತದಲ್ಲಿ ಬಿಡುಗಡೆಯಾಗಿದ್ದು, ಇದಕ್ಕೆ SRT ಫೋನ್ ಎಂದು ನಾಮಕರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನನ್ನು ಭಾರತೀಯ ಮೂಲದ ಸ್ಮಾರ್ಟ್ರಾನ್ ಎಂಬ ಕಂಪನಿಯೂ ಬಿಡುಗಡೆ ಮಾಡಿದ್ದು, ಈ ಕಂಪನಿಯಲ್ಲಿ ಸಚಿನ್ ಸಹ ಕಾರ್ಯತಂತ್ರದ ಹೂಡಿಕೆದಾರರಾಗಿದ್ದಾರೆ ಎನ್ನಲಾಗಿದೆ.

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..? ಯಾಕಿಲ್ಲ ಇಲ್ಲಿದೇ ಸಂಪೂರ್ಣ ಮಾಹಿತಿ
ಭಾರತದ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯುವ ದೃಷ್ಟಿಯಿಂದ ಸಚಿನ್ ಹೆಸರಿನಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಾಗಿದ್ದು, ಈ ಫೋನಿನ ಹಿಂಭಾಗದಲ್ಲಿ ಸಚಿನ್ ಬಾಲ್ಯದಲ್ಲಿ ಕ್ರಿಕೆಟ್ ಆಡುತ್ತಿದ್ದ ಚಿತ್ರವಿದ್ದು, ಅದರೊಂದಿಗೆ ಸಚಿನ್ ಆಟೋಗ್ರಾಫ್ ಸಹ ನೀಡಲಾಗಿದೆ.

ಜಿಯೋ ಸಪೋರ್ಟ್ ಮಾಡುತ್ತೇ ಸಚಿನ್ ಫೋನ್:
ಇಂದು ಮಾರುಕಟ್ಟೆಯನ್ನು ಪ್ರವೇಶಿರುವ ಸಚಿನ್ ಸ್ಮಾರ್ಟ್‌ಫೋನ್ ಜಿಯೋ ಸಪೋರ್ಟ್ ಮಾಡಲಿದ್ದು, VoLTE ಸಂಪರ್ಕವನ್ನು ಹೊಂದಲು ಶಕ್ತವಾಗಿದೆ. ಹಾಗಾಗಿ ನೀವು ಜಿಯೋ ಉಚಿತ ಸೇವೆಯನ್ನು ಈ ಫೋನಿನಲ್ಲಿ ಪಡೆಯಬಹುದಾಗಿದೆ.

ಸ್ನಾಪ್‌ಡ್ರಾಗನ್ 652 ಪ್ರೋಸೆಸರ್:
SRT ಸ್ಮಾರ್ಟ್‌ಫೋನು ವೇಗದ ಕಾರ್ಯಚರಣೆಯನ್ನು ಹೊಂದಿದ್ದು, ಇದಕ್ಕಾಗಿಯೇ ಸ್ನಾಪ್‌ಡ್ರಾಗನ್ 652 ಪ್ರೋಸೆಸರ್ ಅಳವಡಿಸಲಾಗಿದೆ. ಅಲ್ಲದೇ ಇದರೊಂದಿಗೆ 4G RAM ಸಹ ನೀಡಲಾಗಿದೆ. ಇದು ಮತ್ತಷ್ಟು ವೇಗವಾಗಿ ಕಾರ್ಯ ನಿರ್ವಹಿಸಲು ಶಕ್ತಿ ನೀಡಲಿದೆ.

13 MP ಕ್ಯಾಮೆರಾ:
SRT ಸ್ಮಾರ್ಟ್‌ಫೋನಿನಲ್ಲಿ 13 MP ಹಿಂಬದಿ ಕ್ಯಾಮೆರಾವನ್ನು ನೀಡಲಾಗಿದ್ದು, ಇದೇ ಮಾದರಿಯಲ್ಲಿ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಉತ್ತಮ ಸೆಲ್ಫಿಯನ್ನು ಸೆರೆಹಿಡಿಯಲು ಸಹಾಯಕಾರಿಯಾಗಿದೆ.

5.5 ಇಂಚಿನ ಪರದೆ:
SRT ಸ್ಮಾರ್ಟ್‌ಫೋನ್‌ನಲ್ಲಿ 5.5 ಇಂಚಿನ FHD ಪರದೆಯನ್ನು ಕಾಣಬಹುದಾಗಿದ್ದು, ಇದಕ್ಕೆ 2.5D ಗ್ಲಾಸ್ ಸುರಕ್ಷೆಯನ್ನು ನೀಡಲಾಗಿದೆ. ಇದು ಉತ್ತಮ ವಿಡಿಯೋ ನೋಡಲು ಸಹಾಯಕಾರಿಯಾಗಿದೆ.

ಫಾಸ್ಟ್ ಚಾರ್ಜಿಂಗ್:
3,000mAh ಬ್ಯಾಟರಿ SRT ಸ್ಮಾರ್ಟ್‌ಫೋನ್‌ನಲ್ಲಿದ್ದು, ಇದರೊಂದಿಗೆ ಕ್ವಿಕ್ ಚಾರ್ಜರ್ ನೀಡಲಾಗಿದ್ದು, USB Type-C ಚಾರ್ಜಿಂಗ್ ಇದರಲ್ಲಿದೆ. ಅಲ್ಲದೇ ಡ್ಯುಯಲ್ ಸಿಮ್ ಹಾಕಬಹುದಾಗಿದೆ.

ಬೆಲೆ ಎಷ್ಟು ಅಂದ್ರಾ..?
SRT ಸ್ಮಾರ್ಟ್‌ಫೋನ್ ಎರಡು ಮಾದರಿಯಲ್ಲಿ ಲಭ್ಯವಿದ್ದು, 4GB RAM/ 32GB ROM ಫೋನಿನ ಬೆಲೆ ರೂ. 12,999 ಆಗಿದ್ದು, GB RAM/ 64GB ROM ಫೋನಿನ ಬೆಲೆ ರೂ. 13,999 ಆಗಿದೆ. ಸದ್ಯ ಮಾರುಕಟ್ಟೆಗೆ ಬಂದಿರುವ ಮೋಟೋ G5 ಫೋನಿಗೆ ಇದು ಸ್ಪರ್ಧೆ ನೀಡಲಿದೆ.


Click it and Unblock the Notifications