ಕನ್ನಡ ಸಂಪದ ಶ್ರಾವ್ಯ ಆಂಡ್ರಾಯ್ಡ್ ಡೌನ್ ಲೋಡ್ ಉಚಿತ

By Super
|
ಕನ್ನಡ ಸಂಪದ ಶ್ರಾವ್ಯ ಆಂಡ್ರಾಯ್ಡ್ ಡೌನ್ ಲೋಡ್ ಉಚಿತ

ಸಂಪದದ ಅನೇಕ ಹೆಮ್ಮೆಯ ಕೊಡುಗೆಗಳಲ್ಲಿ ಒಂದು 'ಸಂಪದ ಶ್ರಾವ್ಯ'. ಸಂಪದದ ಸದಸ್ಯರು ನಾಡಿನ ಖ್ಯಾತನಾಮರ ಜೊತೆ ನಡೆಸಿದ ಸಂದರ್ಶನ-ಸಂವಾದದ ಧ್ವನಿಮುದ್ರಿಕೆಗಳ ಸಂಪುಟವೇ ಸಂಪದ ಶ್ರಾವ್ಯ. ಈಗಾಗಲೇ 13 ಪಾಡ್ ಕಾಸ್ಟ್ ಗಳು ಅಂತರಜಾಲದಲ್ಲಿ ಸ್ಟ್ರೀಮ್ ಹಾಗೂ ಡೌನ್ ಲೋಡ್ - ಎರಡೂ ಬಗೆಯಲ್ಲಿ ಲಭ್ಯವಿವೆ.

ಪ್ರತಿ ನಿತ್ಯ ಸಂಪದ ಸಂದರ್ಶನಗಳು ನೂರಾರು ಬಾರಿ ಡೌನ್ ಲೋಡ್ ಆಗುತ್ತಿವೆ. ಜಗತ್ತಿನ ಯಾವ ಭಾಗದಲ್ಲಿದ್ದರೂ ಇಂಟರ್ನೆಟ್ ಮೂಲಕ ಕೇಳಬಹುದಾದ ಈ ಸಂದರ್ಶನಗಳು ಪ್ರತಿನಿತ್ಯ ಇಷ್ಟೊಂದು ಬಾರಿ ಕೇಳಲ್ಪಡುತ್ತಿವೆ ಎಂಬ ವಿಷಯ ಒಂದು ಪ್ರತ್ಯೇಕ ಮೊಬೈಲ್ ತಂತ್ರಾಂಶವನ್ನೇ ಅಭಿವೃದ್ಧಿಪಡಿಸುವುದಕ್ಕೆ ಕಾರಣ.

ಕನ್ನಡದ ಖ್ಯಾತನಾಮ ಸಾಹಿತಿ, ಚಿಂತಕರ ಈ ಸಂದರ್ಶನಗಳನ್ನು ಹೊಂದಿರುವ ಕನ್ನಡದ ಪ್ರಪ್ರಥಮ ಆಂಡ್ರಾಯ್ಡ್ ಮೊಬೈಲ್ ತಂತ್ರಾಂಶ- 'ಸಂಪದ ಶ್ರಾವ್ಯ' ಈಗ ನಿಮ್ಮ ಮುಂದಿದೆ.

ಕನ್ನಡದ ಮೇರು ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಎಚ್.ಎಸ್.ವೆಂಕಟೇಶಮೂರ್ತಿ, ಕಯ್ಯಾರ ಕಿಞ್ಞಣ್ಣ ರೈ, ಯು. ಆರ್. ಅನಂತಮೂರ್ತಿ, ನಾಗೇಶ ಹೆಗಡೆ, ಟಿ.ಎನ್. ಸೀತಾರಾಮ್, ಜಿ.ಎಸ್. ಶಿವರುದ್ರಪ್ಪ - ಇವರೊಂದಿಗಿನ ಸಂದರ್ಶನಗಳು ಸೇರಿದಂತೆ ಒಟ್ಟು ೧೩ ಅಮೂಲ್ಯ ಸಂದರ್ಶನಗಳ ಸಂಪುಟ ಈ ತಂತ್ರಾಂಶದ ಮೂಲಕ ಲಭ್ಯವಿದೆ.

ಸಂಪದ ಶ್ರಾವ್ಯ ಎನ್ನುವ ಹೆಸರಿನ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಆಂಡ್ರಾಯ್ಡ್ ಕಾರ್ಯನಿರ್ವಹಣಾ ವ್ಯವಸ್ಥೆಯಿರುವ ಫೋನ್, ಟ್ಯಾಬ್ಲೆಟ್ ಗಳಲ್ಲಿ ಅನುಸ್ಥಾಪಿಸಿಕೊಂಡರೆ ಸಂಪದ ಎಲ್ಲಾ ಸಂದರ್ಶನಗಳ ಧ್ವನಿ ಮುದ್ರಿಕೆಗಳನ್ನು ನಿಮ್ಮ ಮೊಬೈಲ್ ಫೋನ್ ಇಲ್ಲವೆ ಟ್ಯಾಬ್ಲೆಟ್ ಗಳ ಮೂಲಕವೇ ಕೇಳಬಹುದು. ಇಷ್ಟವಾದರೆ ಸಂದರ್ಶನದ mp3 ಫೈಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಹೀಗೆ ಡೌನ್ ಲೋಡ್ ಮಾಡಿಕೊಂಡ ಸಂದರ್ಶನಗಳನ್ನು mp3 ಪ್ಲೇಯರ್ ಗಳಲ್ಲಿ, ಮ್ಯೂಸಿಕ್ ಸಿಸ್ಟಮ್ ಗಳಲ್ಲಿಯೂ ಕೇಳಬಹುದು. ಈ ತಂತ್ರಾಂಶಕ್ಕೆ ಯಾವುದೇ ಶುಲ್ಕವಿಲ್ಲ.

ಆಧುನಿಕ ತಂತ್ರಜ್ಞಾನದ ಜೊತೆಗೆ ಕನ್ನಡದ ಕಂಪನ್ನು ಬೆಸೆಯುವ ಪ್ರಯತ್ನ ಇಲ್ಲಿದೆ. ಈ ಪ್ರಯತ್ನದ ವಿಸ್ತರಣೆಯಾಗಿರುವ ಈ ಅಪ್ಲಿಕೇಶನ್ ನಲ್ಲಿ ಸಾಧ್ಯವಾದಲ್ಲೆಲ್ಲ ಕನ್ನಡವನ್ನು ಬಳಸುವ ಪ್ರಯತ್ನ ಮಾಡಲಾಗಿದೆ. ಯುನಿಕೋಡ್ ಬೆಂಬಲವಿಲ್ಲದ, ಕನ್ನಡ ಫಾಂಟ್ ಇಲ್ಲದ ಆಂಡ್ರಾಯ್ಡ್ ಮೊಬೈಲ್ ಗಳಲ್ಲೂ ಸಹ ಈ ತಂತ್ರಾಂಶವನ್ನು ಬಳಸಬಹುದು.

ಈ ತಂತ್ರಾಂಶ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯವಿದೆ. ಯಾವುದೇ ಶುಲ್ಕವಿಲ್ಲದೆ ಡೌನ್ ಲೋಡ್ ಮಾಡಿ ಬಳಸಬಹುದಾದ ತಂತ್ರಾಂಶವನ್ನು ಆಂಡ್ರಾಯ್ಡ್ ಮಾರ್ಕೆಟಿನಲ್ಲಿ Sampada Shravya kannada ಎಂದು ಹುಡುಕಬಹುದು.

ಈ ತಂತ್ರಾಂಶವನ್ನು ನೇರವಾಗಿ ಸಂಪದದಿಂದಲೂ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅನುಸ್ಥಾಪನೆಯ ವಿಧಾನ ಇಲ್ಲಿ [http://bit.ly/uOk2BJ ] ವಿವರಿಸಲಾಗಿದೆ.

ಈ ತಂತ್ರಾಂಶವನ್ನು ಸಾರಂಗ ಇನ್ಫೋಟೆಕ್ ಸಂಪದಕ್ಕಾಗಿ ಅಭಿವೃದ್ಧಿ ಪಡಿಸಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಹಾಗೂ IOS (ಐಫೋನ್ ಗಳ ಕಾರ್ಯನಿರ್ವಹಣಾ ವ್ಯವಸ್ಥೆ) ಗಳಿಗೆ ಹಲವು ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಸಾರಂಗ ಇನ್ಫೋಟೆಕ್ ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X