₹15,999ಕ್ಕೆ Samsung Galaxy A07 5G ಬಿಡುಗಡೆ: ಆಫರ್ ಜೊತೆ ಇನ್ನೂ ಕಡಿಮೆ ಬೆಲೆ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Samsung ಭಾರತದಲ್ಲಿ ತನ್ನ ಎಂಟ್ರಿ-ಲೆವೆಲ್ 5G ಸ್ಮಾರ್ಟ್‌ಫೋನ್ Samsung Galaxy A07 5G ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹೊಸ ಫೋನ್ ಈಗಾಗಲೇ Samsung India ಆನ್‌ಲೈನ್ ಸ್ಟೋರ್‌ನಲ್ಲಿ ಮಾರಾಟಕ್ಕೆ ಬಂದಿದ್ದು, ದೀರ್ಘ ಬ್ಯಾಟರಿ , ದೊಡ್ಡ ಡಿಸ್ಪ್ಲೇ ಮತ್ತು 5G ಕಾರ್ಯಕ್ಷಮತೆ ಬೇಕೆನ್ನುವ ಬಜೆಟ್ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಹಾಗಾದರೆ, ಕೈಗೆಟುಕುವ ಬೆಲೆಯಲ್ಲಿ ಹೊಸ ತಂತ್ರಜ್ಞಾನವನ್ನು ಹೊತ್ತು ಬಂದಿರುವ ಹೊಸ Samsung Galaxy A07 5G ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನೊ.
Samsung Galaxy A07 5G: ಬೆಲೆ ಮತ್ತು ಕೊಡುಗೆಗಳು
ಭಾರತದಲ್ಲಿ Samsung Galaxy A07 5G ಬೆಲೆ ₹15,999 ರಿಂದ ಆರಂಭವಾಗುತ್ತದೆ. ಈ ದರದಲ್ಲಿ 4GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಲಭ್ಯವಿದ್ದು, 6GB RAM + 128GB ಸ್ಟೋರೇಜ್ ಮಾದರಿಯನ್ನು ₹17,999 ಕ್ಕೆ ಖರೀದಿಸಬಹುದು. ಲಾಂಚ್ ಆಫರ್ ಭಾಗವಾಗಿ SBI, HDFC ಹಾಗೂ Axis ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಿದರೆ ₹1,000 ತಕ್ಷಣದ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಬಣ್ಣ ಆಯ್ಕೆಗಳಲ್ಲಿ, ಈ ಫೋನ್ ಲೈಟ್ ವೈಯೊಲೆಟ್, ಲೈಟ್ ಗ್ರೀನ್ ಮತ್ತು ಕ್ಲಾಸಿಕ್ ಬ್ಲಾಕ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ದೊರೆಯುತ್ತದೆ.
Samsung Galaxy A07 5G: ಪ್ರಮುಖ ವೈಶಿಷ್ಟ್ಯಗಳು
ಮೊದಲು ಡಿಸ್ಪ್ಲೇ ವಿಚಾರಕ್ಕೆ ಬಂದರೆ, Samsung Galaxy A07 5G ಸ್ಮಾರ್ಟ್‌ಫೋನಿನನಲ್ಲಿ 6.7 ಇಂಚಿನ HD+ IPS LCD ಪರದೆ ಇದೆ. 120Hz ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರೋಲಿಂಗ್ ಮತ್ತು ವೀಡಿಯೋ ವೀಕ್ಷಣೆ ಸ್ಮೂತ್ ಆಗಿರುತ್ತದೆ. ಗರಿಷ್ಠ 800 ನಿಟ್ಸ್ ಬ್ರೈಟ್‌ನೆಸ್ ಬೆಂಬಲದಿಂದ ಹೊರಾಂಗಣದಲ್ಲಿ ಸಹ ಪರದೆ ಸ್ಪಷ್ಟವಾಗಿ ಕಾಣುತ್ತದೆ. ಬಜೆಟ್ ಬೆಲೆಯ ಫೋನ್ ಆದರೂ, ದೊಡ್ಡ ಸ್ಕ್ರೀನ್ ಮತ್ತು 120Hz ರಿಫ್ರೆಶ್ ರೇಟ್ ಇರುವುದರಿಂದ ವೀಡಿಯೋ, ಗೇಮಿಂಗ್ ಮತ್ತು ದಿನನಿತ್ಯದ ಬಳಕೆ ಮತ್ತಷ್ಟು ಅನುಕೂಲವಿರುವಂತೆ ಕಾಣುತ್ತದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್‌ನಲ್ಲಿ MediaTek Dimensity 6300 ಆಕ್ಟಾ-ಕೋರ್ ಪ್ರೊಸೆಸರ್ ಬಳಕೆಯಾಗಿದೆ. ಗರಿಷ್ಠ 2.4GHz ಕ್ಲಾಕ್ ಸ್ಪೀಡ್ ಹೊಂದಿರುವ ಈ ಚಿಪ್‌ಸೆಟ್, ದೈನಂದಿನ ಅಪ್ಲಿಕೇಶನ್‌ಗಳು, ಸೋಶಿಯಲ್ ಮೀಡಿಯಾ ಮತ್ತು ಲಘು ಗೇಮಿಂಗ್‌ಗೆ ಸಮತೋಲನದ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಫೋನ್ Android 16 ಆಧಾರಿತ One UI 8 ನಲ್ಲಿ ಕಾರ್ಯನಿರ್ವಹಿಸುವುದರಿಂದ, ಹೊಸ ಸಾಫ್ಟ್‌ವೇರ್ ಫೀಚರ್‌ಗಳು ಮತ್ತು ಉತ್ತಮ ಭದ್ರತಾ ಅನುಭವ ದೊರೆಯುತ್ತದೆ.
ಕ್ಯಾಮೆರಾ ವಿಭಾಗದಲ್ಲಿ Samsung Galaxy A07 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. ಇದಕ್ಕೆ ಜೊತೆಯಾಗಿ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಇದೆ. ಸೆಲ್ಫಿಗಳಿಗಾಗಿ, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಸಿಹಿಸುದ್ದಿ ಏನೆಂದರೆ, ಈ ಫೋನ್ 1080p ರೆಸಲ್ಯೂಶನ್‌ನಲ್ಲಿ ವಿಡಿಯೋ ರೆಕಾರ್ಡಿಂಗ್ ಬೆಂಬಲಿಸುತ್ತದೆ ಮತ್ತು ದಿನದ ಬೆಳಕಿನಲ್ಲಿ ಸ್ಪಷ್ಟ ಮತ್ತು ವಿವರವಾದ ಫೋಟೋಗಳನ್ನು ಸೆರೆಹಿಡಿಯಲು ಶಕ್ತವಾಗಿದೆ ಎಂದು ಕಂಪೆನಿ ತಿಳಿಸಿದೆ.
ಬ್ಯಾಟರಿ Samsung Galaxy A07 5G ಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದರಲ್ಲಿ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ನೀಡಲಾಗಿದೆ. ಜೊತೆಗೆ 25W ಫಾಸ್ಟ್ ಚಾರ್ಜಿಂಗ್ ಬೆಂಬಲ ಇದೆ. ಸಂಪರ್ಕಕ್ಕಾಗಿ 5G, 4G LTE, Wi-Fi, Bluetooth 5.3, USB Type-C ಮತ್ತು ವಿವಿಧ ಸ್ಯಾಟಲೈಟ್ ನ್ಯಾವಿಗೇಶನ್ ವ್ಯವಸ್ಥೆಗಳ ಸಹಾಯವಿದೆ.ಒಟ್ಟಿನಲ್ಲಿ, Samsung Galaxy A07 5G ಬಜೆಟ್ ಸೆಗ್ಮೆಂಟ್‌ನಲ್ಲಿ ದೊಡ್ಡ ಪರದೆ, ಬಲಿಷ್ಠ ಬ್ಯಾಟರಿ ಮತ್ತು ನಂಬಿಕೆಯ 5G ಅನುಭವವನ್ನು ಒದಗಿಸುವ ಸ್ಮಾರ್ಟ್‌ಫೋನ್ ಆಗಿ ಪರಿಚಯಗೊಂಡಿದ್ದು, ಇದು ಗಮನಾರ್ಹ ಆಗಮನ ಎಂದು ಹೇಳಬಹುದು.


Click it and Unblock the Notifications








