ಬಿಡುಗಡೆ ಹಾದಿಯಲ್ಲಿ ಗ್ಲೈಡ್ ಸ್ಮಾರ್ಟ್ ಫೋನ್

Posted By: Staff
ಬಿಡುಗಡೆ ಹಾದಿಯಲ್ಲಿ ಗ್ಲೈಡ್ ಸ್ಮಾರ್ಟ್ ಫೋನ್

 

ಅತ್ಯುತ್ತಮ ಗುಣಮಟ್ಟದ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಕಂಪ್ಯೂಟರ್ ಹೀಗೆ ಹಲವು ಎಲೆಕ್ಟ್ರಾನಿಕ್ ಸಾಧನಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುವ ಸ್ಯಾಮ್ ಸಂಗ್ ಕಂಪನಿ ಇದೀಗ ಸ್ಯಾಮ್ ಸಂಗ್ ಕ್ಯಾಪ್ಟಿವೇಟ್ ಗ್ಲೈಡ್ ಎಂಬ ಸ್ಮಾರ್ಟ್ ಫೋನನ್ನು ಪರಿಚಯಿಸಿದೆ.

ಸ್ಯಾಮ್ ಸಂಗ್ ಕ್ಯಾಪ್ಟಿವೇಟ್ ಗ್ಲೈಡ್ ಆಂಡ್ರಾಯ್ಡ್ 2.3 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದು, 1000 MHz ವೇಗದ ಡ್ಯೂಯಲ್ ಕೋರ್ NVIDIA ಟೆಗ್ರಾ2 AP20H ಪ್ರೊಸೆಸರ್ ಹೊಂದಿದೆ.

ಸ್ಯಾಮ್ ಸಂಗ್ ಕ್ಯಾಪ್ಟಿವೇಟ್ ಗ್ಲೈಡ್ ವಿಶೇಷತೆ:

* 4.0 ಇಂಚಿನ ಸ್ಕ್ರೀನ್, 480 x 800 ಪಿಕ್ಸಲ್ ರೆಸೊಲ್ಯೂಷನ್

* ಮಲ್ಟಿ ಟಚ್ ಸ್ಕ್ರೀನ್ ಡಿಸ್ಪ್ಲೇ

* ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್ ಸ್ಕ್ರ್ಯಾಚ್ ರೆಸಿಸ್ಟಂಟ್ ಗ್ಲಾಸ್

* 1024 ಎಂಬಿ RAM ಸಾಮರ್ಥ್ಯ

* 32ಜಿಬಿ ಮೈಕ್ರೊ SD ಕಾರ್ಡ್ ಸ್ಲಾಟ್

* 8 ಮೆಗಾ ಪಿಕ್ಸಲ್ LED ಕ್ಯಾಮೆರಾ, 1280 x 720 ಪಿಕ್ಸಲ್ ರೆಸೊಲ್ಯೂಷನ್

* 1.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ

* ಆಟೊ ಫೋಕಸ್ ಮತ್ತು ಸ್ಮೈಲ್ ಡಿಟೆಕ್ಷನ್

* 720p ಹೈ ಡೆಫನಿಶನ್ ವಿಡಿಯೋ ರೆಕಾರ್ಡಿಂಗ್

* 3.0 ಬ್ಲೂಟೂಥ್, 802.11 b/ g/n ವೈ-ಫೈ ಸಂಪರ್ಕ

* USB 2.0 ಪೋರ್ಟ್ ಮತ್ತು HDMI ಔಟ್ ಪುಟ್ ಪೋರ್ಟ್

* ಅಕ್ಸೆಲೆರೊಮೀಟರ್, ಗೈರೊಸ್ಕೋಪ್ ಮತ್ತು ಕಾಂಪಾಸ್ ಸೆನ್ಸಾರ್

* 3.5 ಎಂಎಂ ಆಡಿಯೋ ಜ್ಯಾಕ್

ಸ್ಮಾರ್ಟ್ ಫೋನಿನಲ್ಲಿ ಆಡಿಯೋ ಮತ್ತು ವಿಡಿಯೋ ಪ್ಲೇಯರ್, ಎಫ್ ಎಂ ಇದ್ದು, MP3, AAC, MPEG4 ಮತ್ತು DivX ಫೈಲ್ ಫಾರ್ಮೆಟ್ ಗಳನ್ನು ಬೆಂಬಲಿಸಲಿದೆ. ಜೊತೆಗೆ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಪಿಕಾಸಾ ಮತ್ತು ಟ್ವಿಟರ್ ಆಯ್ಕೆಯನ್ನೂ ನೀಡಲಾಗಿದೆ.

ಬ್ರೌಸರ್ ಗೆಂದು ಮೊಬೈಲಿನಲ್ಲಿ HTML ಮತ್ತು ಫ್ಲಾಶ್ ನೀಡಲಾಗಿದೆ. ನೇವಿಗೇಶನ್ ಗೆಂದು A-GPS ಸೌಲಭ್ಯ ಒದಗಿಸಲಾಗಿದೆ. ಗೂಗಲ್ ಟಾಕ್ ಆಯ್ಕೆಯೊಂದಿಗೆ ಗೇಮ್ ಗಳನ್ನೂ ನೀಡಲಾಗಿದೆ.

ಈ ಕ್ಯಾಪ್ಟಿವೇಟ್ ಗ್ಲೈಡ್ ಫೋನ್ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, ಉತ್ತಮ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡಲಿದೆ. ಆದರೆ ಮೊಬೈಲಿನ ಬೆಲೆಯ ಬಗ್ಗೆ ಇನ್ನೂ ಮಾಹಿತಿ ಲಭಿಸಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot