ಸ್ಯಾಮ್ ಸಂಗ್ ಚಾಂಪ್ ಮೊಬೈಲಿನ ಹೊಸ ಆಯಾಮ

Posted By: Staff
ಸ್ಯಾಮ್ ಸಂಗ್ ಚಾಂಪ್ ಮೊಬೈಲಿನ ಹೊಸ ಆಯಾಮ

 

ಸ್ಯಾಮ್ ಸಂಗ್ ಚಾಂಪ್ ಹೆಚ್ಚು ಯಶಸ್ವಿಯಾಗಿ ಮಾರಾಟವಾದ ಮೊಬೈಲ್. ಇದಕ್ಕೆ ಕಾರಣವೆಂದರೆ ಹೆಚ್ಚು ಆಯ್ಕೆಗಳನ್ನು ಕಡಿಮೆ ಬೆಲೆಗೆ ನೀಡಿರುವುದು. ಈ ಯಶಸ್ಸೇ ಇದೀಗ ಕಂಪನಿ ಸ್ಯಾಮ್ ಸಂಗ್ ಚಾಂಪ್ ನ ಇನ್ನೊಂದು ಹೊಸಆಯಾಮವನ್ನು ಪರಿಚಯಿಸಲು ಕಾರಣವಾಗಿದೆ.

ಸ್ಯಾಮ್ ಸಂಗ್ ಚಾಂಪ್ 2 ಎಂಬ ಈ ಮೊಬೈಲ್ ತನ್ನ ಹಿಂದಿನ ಫೋನ್ ನಂತೆಯೇ ಮತ್ತು ಅದಕ್ಕಿಂತ ಹೆಚ್ಚು ಆಯ್ಕೆಗಳನ್ನು ಒಳಗೊಂಡಿದೆ. ಕರ್ವ್ ವಿನ್ಯಾಸ ಹೊಂದಿರುವ ಈ ಮೊಬೈಲ್ ನಲ್ಲಿ ಪ್ರೊಸೆಸರ್ ಇದೆ. ಸ್ಯಾಮ್ ಸಂಗ್ ಚಾಂಪ್ 2 ಸ್ಯಾಮ್ ಸಂಗ್ ಕಂಪನಿಯದೇ ಆಪರೇಟಿಂಗ್ ಸಿಸ್ಟಮನ್ನು ಪಡೆದುಕೊಂಡಿದೆ.

ಸ್ಯಾಮ್ ಸಂಗ್ ಚಾಂಪ್ 2 ವಿಶೇಷತೆ:

* 75.9 ಗ್ರಾಂ ತೂಕ

* 6.1 cm ಡಿಸ್ಪ್ಲೇ, 320 x 240 ಪಿಕ್ಸಲ್ ರೆಸೊಲ್ಯೂಷನ್

* TFT QVGA ಟಚ್ ಸ್ಕ್ರೀನ್ ಡಿಸ್ಪ್ಲೇ

* 2 ಮೆಗಾ ಪಿಕ್ಸಲ್ ಕ್ಯಾಮೆರಾ

* ಎಫ್ ಎಂ ರೇಡಿಯೋ

* 3.5 ಎಂಎಂ ಆಡಿಯೋ ಜ್ಯಾಕ್

* ವೈ-ಫೈ, USB, ಬ್ಲೂಟೂಥ್, WAP

* 16ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

1000mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 500 ಗಂಟೆ ಸ್ಟ್ಯಾಂಡ್, 10 ಗಂಟೆ ಟಾಕ್ ಟೈಂ ನೀಡುತ್ತದೆ. ಈ ಸ್ಯಾಮ್ ಸಂಗ್ ಚಾಂಪ್ 2 ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ನಿಗದಿ ಪಡಿಸಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot