Home
ಮೊಬೈಲ್

ಐಫೋನ್ ಸ್ಲೋ ವಿವಾದದ ಬೆಂಕಿಗೆ ಪೆಟ್ರೋಲ್ ಸುರಿಯಿತು ಸ್ಯಾಮ್‌ಸಂಗ್!!

ಹೊಸ ಐಫೋನ್ ಮಾರುಕಟ್ಟೆಗೆ ಬಂದಾಗ ಹಳೆಯ ಐಫೋನ್‌ಗಳನ್ನು ನಿಧಾನವಾಗಿ ಕೆಲಸ ಮಾಡುವಂತೆ ಆಪಲ್ ಕಂಪೆನಿ ಮಾಡುತ್ತಿದೆ ಎಂಬ ಆರೋಪದ ಹಿಂದೆಯೇ ಆಪಲ್ ಕಂಪೆನಿಗೆ ಸ್ಯಾಮ್‌ಸಂಗ್ ಟಾಂಗ್ ನೀಡಿದೆ.!

By Bhaskar N J

ಹೊಸ ಐಫೋನ್ ಮಾರುಕಟ್ಟೆಗೆ ಬಂದಾಗ ಹಳೆಯ ಐಫೋನ್‌ಗಳನ್ನು ನಿಧಾನವಾಗಿ ಕೆಲಸ ಮಾಡುವಂತೆ ಆಪಲ್ ಕಂಪೆನಿ ಮಾಡುತ್ತಿದೆ ಎಂಬ ಆರೋಪದ ಹಿಂದೆಯೇ ಆಪಲ್ ಕಂಪೆನಿಗೆ ಸ್ಯಾಮ್‌ಸಂಗ್ ಟಾಂಗ್ ನೀಡಿದೆ.! ತನ್ನ ಸ್ಮಾರ್ಟ್‌ಫೋನ್‌ಗಳು ನಿಧಾನವಾಗುವ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು ಸ್ಯಾಮ್‌ಸಂಗ್ ಸ್ಪಷ್ಟಪಡಿಸಿದೆ.!!

ಐಫೋನ್‌ಗಳ ತಂತ್ರಾಂಶ ನವೀಕರಣದ ಹೆಸರಿನಲ್ಲಿ ಆ ಫೋನ್‌ಗಳಿಗೆ ಒಂದು ಕುತಂತ್ರಾಂಶವನ್ನು ಸೇರಿಸಿ ಹಳೆಯ ಐಫೋನ್‌ಗಳನ್ನು ನಿಧಾನವಾಗಿ ಕೆಲಸ ಮಾಡುವಂತೆ ಆಪಲ್ ಕಂಪೆನಿ ಮಾಡುತ್ತಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.! ಈ ಸುದ್ದಿಯ ಬೆನ್ನಿಗೆ ಸ್ಯಾಮ್‌ಸಂಗ್ ಆಪಲ್ ಅನ್ನು ಚೇಡಿಸುವಂತಹ ಹೇಳಿಕೆ ಬಿಡುಗಡೆ ಮಾಡಿದೆ.!!

ಐಫೋನ್ ಸ್ಲೋ ವಿವಾದದ ಬೆಂಕಿಗೆ ಪೆಟ್ರೋಲ್ ಸುರಿಯಿತು ಸ್ಯಾಮ್‌ಸಂಗ್!!

ಮೊದಲಿನಿಂದಲೂ ಹಾವು ಮುಂಗುಸಿಯಂತಿರುವ ವಿಶ್ವದ ಈ ಎರಡು ಟಾಪ್ ಬ್ರಾಂಡ್ ಮೊಬೈಲ್ ಕಂಪೆನಿಗಳು ಕಿತ್ತಾಡುತ್ತಿರುವುದು ಹೊದೇನಲ್ಲವಾದರೂ ಈ ಬಾರಿಯ ಕಿತ್ತಾಟ ಮತ್ತೊಂದು ಹಂತಕ್ಕೇರಿದೆ.! ಹಾಗಾದರೆ, ಸ್ಯಾಮ್‌ಸಂಗ್ ಆಪಲ್ ಕಂಪೆನಿಯನ್ನು ಹೇಗೆಲ್ಲಾ ಆಡಿಕೊಂಡಿದೆ? ಇದಕ್ಕೆ ಆಪಲ್ ಪ್ರತಿಕ್ರಿಯೆ ಏನು ಎಂಬುದನ್ನು ಮುಂದೆ ತಿಳಿಯಿರಿ.!!

ಆಪಲ್ ಐಫೋನ್ ಸ್ಲೋ ವಿವಾದ!!

ಆಪಲ್ ಐಫೋನ್ ಸ್ಲೋ ವಿವಾದ!!

ಮೊದಲು ನೂತನ ಸಾಫ್ಟ್‌ವೇರ್‌ಗೆ ಅಪ್‌ಡೇಟ್ ಆದರೆ ಐಫೋನ್ ಸ್ಲೋ ಆಗುತ್ತದೆ ಎಂದು ಹೇಳಿದ್ದ ಆಪಲ್, ಇದೀಗ ಹಳೆಯ ಐಫೋನ್‌ಗಳ ಬ್ಯಾಟರಿ ತನ್ನ ಶಕ್ತಿ ಕಳೆದುಕೊಂಡಿರುತ್ತದೆ ಆದುದರಿಂದ ಫೋನ್ ನಿಧಾನವಾಗಿ ಕೆಲಸ ಮಾಡುವಂತೆ ಮಾಡುತ್ತಿದ್ದೇವೆ ಎಂದು ಹೇಳಿತ್ತು.! ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.!!

ಆಪಲ್‌ಗೆ ನೇರ ಟಾಂಗ್!!

ಆಪಲ್‌ಗೆ ನೇರ ಟಾಂಗ್!!

ಕೆಲವು ದಿನಗಳ ಹಿಂದಷ್ಟೆ ಸ್ಯಾಮ್‌ಸಂಗ್ ಬಿಡುಗಡೆ ಮಾಡಿರುವ ಹೊಸ ಹೇಳಿಕೆಯಲ್ಲಿ ತಮ್ಮ ಸಾಧನಗಳ ಪ್ರೊಸೆಸರ್ ಹಳೆಯ ಬ್ಯಾಟರಿಗಳೊಂದಿಗೆ ಅದರ ತನ್ನ ಸ್ಮಾರ್ಟ್‌ಫೋನ್‌ಗಳು ನಿಧಾನವಾಗುವ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದು ಆಪಲ್‌ಗೆ ನೇರವಾಗಿ ಟಾಂಗ್ ನೀಡುವಂತಿದೆ.!!

ಸ್ಯಾಮ್‌ಸಂಗ್ ಹೇಳಿದ್ದೇನು?

ಸ್ಯಾಮ್‌ಸಂಗ್ ಹೇಳಿದ್ದೇನು?

ಸ್ಯಾಮ್‌ಸಂಗ್ ಕಂಪೆನಿಯ ಯಾವುದೇ ಸಾಧನದ ಕಾರ್ಯಕ್ಷಮತೆಯನ್ನು ಕಡಿಮೆ ಮಾಡಲು ಸಾಫ್ಟ್‌ವೇರ್ ನವೀಕರಣಗಳನ್ನು ನಾವು ಒದಗಿಸುವುದಿಲ್ಲ.ಈ ಬಗ್ಗೆ ತನಿಖೆಯಾದರೆ ಸತ್ಯವನ್ನು ಸ್ಪಷ್ಟಪಡಿಸಲು ನಾವು ಸಂಪೂರ್ಣವಾಗಿ ಸಹಕರಿಸುತ್ತೇವೆ" ಎಂದು ಸ್ಯಾಮ್ಸಂಗ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.!!

ಗ್ಯಾಲಾಕ್ಸಿ ಎಸ್‌9 ಗುರಿ?

ಗ್ಯಾಲಾಕ್ಸಿ ಎಸ್‌9 ಗುರಿ?

ಮುಂದಿನ ತಿಂಗಳು ಸ್ಪೇನ್‌ನಲ್ಲಿ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಸ್ಯಾಮ್ಸಂಗ್ ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ.! ಹಾಗಾಗಿ, ಆಪಲ್‌ಗೆ ಟಾಂಗ್ ನೀಡಿ ಮಾರುಕಟ್ಟೆಯಲ್ಲಿ ಆಪೆಲ್ ಐಫೋನ್ 10ಗೆ ಸ್ಪರ್ಧಿಸುವ ಗುರಿಯನ್ನು ಹೊಂದಿ ಈ ಹೇಳಿಕೆ ನೀಡಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.!!

ಆಪಲ್ ಪ್ರತಿಕ್ರಿಯೆ?

ಆಪಲ್ ಪ್ರತಿಕ್ರಿಯೆ?

ಸ್ಯಾಮ್‌ಸಂಗ್ ಈ ಹೇಳಿಕೆ ಬಿಡುಗಡೆ ಮಾಡಿದ ನಂತರ ಆಪಲ್ ಈವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.! ಆದರೆ, ಎಲ್ಲಿಯವರೆಗೂ ಇಂತಹ ಘಟನೆಗಳು ನಡೆಯುತ್ತವೆ ಅಲ್ಲಿಯವರೆಗೂ ಜನರಿಗೆ ಲಾಭವಾಗುತ್ತದೆ ಮತ್ತು ಸತ್ಯ ಸಂಗತಿಗಳು ಹೊರಬರುತ್ತವೆ ಎಂದು ಮೊಬೈಲ್ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

Best Mobiles in India

English summary
Previously we have seen how Apple’s criticized practice is pulling down others as well. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+