ಇಂದಿನಿಂದ Samsung Galaxy M17e 5G ಫೋನ್ ಖರೀದಿಗೆ ಲಭ್ಯ: ಗೊಂದಲಕ್ಕೆ ಕೊನೆ!
ಭಾರತದಲ್ಲಿ ಸ್ಮಾರ್ಟ್‌ಫೋನ್ ಪ್ರಿಯರು ಕಾಯುತ್ತಿದ್ದ Samsung ಕಂಪೆನಿ ಹೊಸ Galaxy M17e 5G ಫೋನ್ ಬಿಡುಗಡೆಗೆ ಸಂಬಂಧಿಸಿದ ಗೊಂದಲ ಕೊನೆಗೂ ನಿವಾರಣೆಯಾಗಿದೆ. ಆರಂಭದಲ್ಲಿ Galaxy M17e 5G ಫೋನ್ ಮಾರ್ಚ್ 17ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದ್ದರೂ, ಆ ದಿನಾಂಕ ಮೀರಿದ ನಂತರವೂ ಫೋನ್ ಮಾರಾಟಕ್ಕೆ ಲಭ್ಯವಾಗಿರಲಿಲ್ಲ. ಇದೀಗ, ಕಂಪನಿಯು ಅಧಿಕೃತವಾಗಿ ಹೊಸ ದಿನಾಂಕವನ್ನು ಘೋಷಿಸಿದ್ದು, Galaxy M17e 5G ಫೋನ್ ಇಂದು (ಮಾರ್ಚ್ 20ರಂದು) ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗಲಿದೆ.
ಹೌದು, Samsung ಒದಗಿಸಿರುವ ಹೊಸ ಮಾಹಿತಿ ಅನುಸರಿಸಿ, ಅಮೆಜಾನ್‌ನ ಲ್ಯಾಂಡಿಂಗ್ ಪುಟದಲ್ಲೂ Galaxy M17e 5G ಮಾರಾಟದ ದಿನಾಂಕವನ್ನು ನವೀಕರಿಸಲಾಗಿದೆ. ಆದರೆ ಆರಂಭದಲ್ಲಿ ಊಹಿಸಿದಂತೆ ಇದು ಅಮೆಜಾನ್‌ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸ್ಯಾಮ್‌ಸಂಗ್ ಇದೀಗ ಸ್ಪಷ್ಟಪಡಿಸಿರುವಂತೆ, Galaxy M17e 5G ಫೋನ್ ಅನ್ನು ಅಮೆಜಾನ್ ಜೊತೆಗೆ ಕಂಪನಿಯ ಅಧಿಕೃತ ಆನ್‌ಲೈನ್ ಸ್ಟೋರ್ ಮತ್ತು ಆಯ್ದ ರಿಟೇಲ್ ಮಳಿಗೆಗಳಲ್ಲೂ ಖರೀದಿಸಬಹುದು. ಹಾಗಾದರೆ, Galaxy M17e 5G ಫೋನ್ ಬೆಲೆ ಎಷ್ಟು ಮತ್ತು ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

Galaxy M17e 5G: ಬೆಲೆ ಮತ್ತು ಕೊಡುಗೆಗಳು
4GB RAM + 128GB ಸ್ಟೋರೇಜ್: ₹12,999 (ಅಮೆಜಾನ್‌ನಲ್ಲಿ ಪರಿಣಾಮಕಾರಿ ಬೆಲೆ ₹11,749 ರೂ.ಗಳಾಗಿವೆ)
6GB RAM + 128GB ಸ್ಟೋರೇಜ್: ₹14,499 (ಸೀಮಿತ ಲಭ್ಯತೆ)
ಬಿಡುಗಡೆ ಆಫರ್: ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ₹1,250 ತ್ವರಿತ ರಿಯಾಯಿತಿ
Samsung Galaxy M17e 5G: ಪ್ರಮುಖ ವೈಶಿಷ್ಟ್ಯಗಳು
Galaxy M17e 5G ಫೋನಿನಲ್ಲಿನಲ್ಲಿ 6.58 ಇಂಚಿನ HD+ (720x1600 ಪಿಕ್ಸೆಲ್) PLS LCD ಡಿಸ್ಪ್ಲೇ ನೀಡಲಾಗಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 16 ಮಿಲಿಯನ್ ಬಣ್ಣಗಳನ್ನು ಬೆಂಬಲಿಸುತ್ತದೆ. ಫೋನ್ IP54 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನ ಸಿಂಪಡಣೆಗಳಿಂದ ರಕ್ಷಣೆ ಒದಗಿಸುತ್ತದೆ.
ಕಾರ್ಯಕ್ಷಮತೆಯ ದೃಷ್ಟಿಯಿಂದ, ಈ ಫೋನ್‌ನಲ್ಲಿ MediaTek Dimensity 6300 ಪ್ರೊಸೆಸರ್ (ಗರಿಷ್ಠ 2.4GHz ವೇಗ) ಅಳವಡಿಸಲಾಗಿದೆ. ಇದು 6GB RAM ಮತ್ತು 128GB ಸ್ಟೋರೇಜ್‌ವರೆಗೆ ಆಯ್ಕೆಯನ್ನು ನೀಡುತ್ತದೆ. ಜೊತೆಗೆ, ಮೈಕ್ರೋSD ಕಾರ್ಡ್ ಮೂಲಕ 2TB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದು.
ಕ್ಯಾಮೆರಾ ವಿಭಾಗದಲ್ಲಿ, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದ್ದು, 50MP ಮುಖ್ಯ ಸೆನ್ಸರ್ (f/1.8 ಅಪರ್ಚರ್, ಆಟೋಫೋಕಸ್) ಮತ್ತು 2MP ಡೆಪ್ತ್ ಸೆನ್ಸರ್ (f/2.4 ಅಪರ್ಚರ್) ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾ (f/2.0 ಅಪರ್ಚರ್) ಇದೆ. ಫೋನ್ 1080p/30fps ವರೆಗೆ ವಿಡಿಯೋ ರೆಕಾರ್ಡಿಂಗ್‌ಗೆ ಬೆಂಬಲಿಸುತ್ತದೆ.
ಈ ಫೋನ್‌ನ ಪ್ರಮುಖ ಹೈಲೈಟ್ ಎಂದರೆ ಅದರ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ. ಕಂಪನಿಯ ಪ್ರಕಾರ, ಇದು ಒಂದು ಚಾರ್ಜ್‌ನಲ್ಲಿ ಸುಮಾರು 26 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ನೀಡುತ್ತದೆ.
ಸಂಪರ್ಕ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, Bluetooth 5.3, USB Type-C ಪೋರ್ಟ್, 3.5mm ಆಡಿಯೋ ಜ್ಯಾಕ್, GPS, GLONASS, BeiDou, Galileo ಮತ್ತು QZSS ಸೇರಿವೆ. ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸೆನ್ಸರ್ ಒದಗಿಸಲಾಗಿದೆ.
ಸೆನ್ಸರ್‌ಗಳಲ್ಲಿ ಅಕ್ಸೆಲೆರೊಮೀಟರ್, ಗೈರೋಸ್ಕೋಪ್, ಜಿಯೋಮ್ಯಾಗ್ನೆಟಿಕ್ ಸೆನ್ಸರ್, ಲೈಟ್ ಸೆನ್ಸರ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಸೇರಿವೆ. ಫೋನ್‌ನ ಗಾತ್ರ 167.4 x 77.4 x 8.2 ಮಿಮೀ ಆಗಿದ್ದು, ಸುಮಾರು 199 ಗ್ರಾಂ ತೂಕವಿದೆ.
ವಿನ್ಯಾಸದ ದೃಷ್ಟಿಯಿಂದ, ಪಿಲ್-ಆಕಾರದ ಮಾಡ್ಯೂಲ್ ಒಳಗಿನ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಫೋನ್‌ಗೆ ಪ್ರೀಮಿಯಂ ಲುಕ್ ನೀಡುತ್ತದೆ. ದೊಡ್ಡ ಬ್ಯಾಟರಿ ಇದ್ದರೂ, ಕೈಯಲ್ಲಿ ಹಿಡಿದಾಗ ಸಮತೋಲನಯುತ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.


Click it and Unblock the Notifications








