Home
ಮೊಬೈಲ್

ಭಾರತದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ ಸಿರೀಸ್ ಗೆ ದಿನಾಂಕ ಫಿಕ್ಸ್

ಜನವರಿ 28, ಸೋಮವಾರದಂದು ಸ್ಯಾಮ್ ಸಂಗ್ ನ ಗ್ಯಾಲಕ್ಸಿ ಎಂ ಸರಣಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಳ್ಳುವ ಬಗ್ಗೆ ಸ್ಯಾಮ್ ಸಂಗ್ ಸಂಸ್ಥೆ ಅಧಿಕೃತ ಪ್ರಕಟಣೆಯನ್ನು ನೀಡಿದೆ. ಈ ಬ್ರ್ಯಾಂಡಿನ ಹೊಸ ಸರಣಿಯ ಫೋನ್ ಗಳು ಬಿಡಗಡೆಗೊಳಿಸುವ ಬಗೆಗಿನ ಮಾಧ್ಯಮ ಮಾಹಿತಿಯನ್ನು ಕಂಪೆನಿಯು ಬಿಡುಗಡೆಗೊಳಿಸಿದೆ. ಯುವ ಗ್ರಾಹಕರಿಗಾಗಿ ಈ ಗ್ಯಾಲಕ್ಸಿ ಎಂ ಸಿರೀಸ್ ಫೋನ್ ಗಳನ್ನು ತಯಾರಿಸಲಾಗಿದೆ ಎಂದು ಸ್ಯಾಮ್ ಸಂಗ್ ಸಂಸ್ಥೆ ತಿಳಿಸುತ್ತಿದೆ.

ಅಮೇಜಾನ್ ಜೊತೆ ಸಹಭಾಗಿತ್ವ:

ಅಮೇಜಾನ್ ಜೊತೆ ಸಹಭಾಗಿತ್ವ:

ಸ್ಯಾಮ್ ಸಂಗ್ ಜೊತೆಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ ಸಿರೀಸ್ ಫೋನ್ ಗಳ ಬಿಡುಗಡೆಗಾಗಿ ಸ್ಯಾಮ್ ಸಂಗ್ ಸಂಸ್ಥೆ ಅಮೇಜಾನ್ ಇಂಡಿಯಾ ಜೊತೆಗೆ ಕೈಜೋಡಿಸಿದೆ.ಹೊಸ ಸರಣಿ ಫೋನ್ ಗಳಲ್ಲಿ ಮೊದಲ ಜೋಡಿ ಫೋನ್ ಗಳು ಎಂದು ಈಗಾಗಲೇ ಹಬ್ಬಿರುವ ವದಂತಿಯಂತೆ ಗ್ಯಾಲಕ್ಸಿ ಎಂ10 ಮತ್ತು ಗ್ಯಾಲಕ್ಸಿ ಎಂ20 ಫೋನ್ ಗಳು ಮೊದಲಿಗೆ ಬಿಡುಗಡೆಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

ಗ್ಯಾಲಕ್ಸಿ ಎಂ ಸರಣಿ ಫೋನ್ ವೈಶಿಷ್ಟ್ಯತೆಗಳು:

ಗ್ಯಾಲಕ್ಸಿ ಎಂ ಸರಣಿ ಫೋನ್ ವೈಶಿಷ್ಟ್ಯತೆಗಳು:

ಗ್ಯಾಲಕ್ಸಿ ಎಂ ಸರಣಿ ಫೋನ್ ಗಳು ಜನವರಿ 28ಕ್ಕೆ ಬಿಡುಗಡೆಯಾಗುವ ಬಗ್ಗೆ ಖಾತ್ರಿಯಾದ ನಂತರ ಅಮೇಜಾನ್ ಇಂಡಿಯಾದ ಒಂದು ಪೇಜ್ ನಲ್ಲಿ ಕೆಲವು ಡಿಸೈನ್ ಬಗೆಗಿನ ಎಲಿಮೆಂಟ್ ಗಳನ್ನು ಹಾಕಲಾಗಿದೆ. ಈ ಪೇಜ್ ನಲ್ಲಿ ಗ್ಯಾಲಕ್ಸಿ ಎಂ ಫೋನ್ ಗಳು ಇನ್ಫಿನಿಟಿ ಯು ವಾಟರ್ ಡ್ರಾಪ್ ಡಿಸ್ಪ್ಲೇ, ಡುಯಲ್ ಹಿಂಭಾಗದ ಕ್ಯಾಮರಾ, ಹಿಂಭಾಗದಲ್ಲಿ ಅಳವಡಿಸಲಾಗಿರುವ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಹೊಂದಿರುತ್ತದೆ ಎಂಬುದನ್ನು ತಿಳಿಸಲಾಗಿದೆ. USBಟೈಪ್ ಸಿ ಪೋರ್ಟ್ ಜೊತೆಗೆ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲವನ್ನು ನೀಡುವ ಈ ಫೋನ್ ಹೆಡ್ ಫೋನ್ ಜ್ಯಾಕ್ ನ್ನು ಹೊಂದಿರುತ್ತದೆ ಎಂಬ ಬಗ್ಗೆ ಅಮೇಜಾನ್ ಪೇಜ್ ನಲ್ಲಿ ಬರೆಯಲಾಗಿದೆ.

ಹೆಸರಿನ ಬಗ್ಗೆ ಖಾತ್ರಿ ಇಲ್ಲ:

ಹೆಸರಿನ ಬಗ್ಗೆ ಖಾತ್ರಿ ಇಲ್ಲ:

ಸ್ಯಾಮ್ ಸಂಗ್ ಇದುವರೆಗೂ ಫೋನಿನ ಹೆಸರಿನ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಆದರೆ ಕಳೆದ ಹಲವು ವಾರಗಳಿಂದ ಸುದ್ದಿಲೋಕದಲ್ಲಿ ಹರಿದಾಡುತ್ತಿರುವ ಮಾಹಿತಿಯ ಅನುಸಾರವೇ ಹೇಳುವುದಾದರೆ ಇದರ ಹೆಸರು ಗ್ಯಾಲಕ್ಸಿ ಎಂ10 ಮತ್ತು ಗ್ಯಾಲಕ್ಸಿ ಎಂ20 ಆಗಿರುತ್ತದೆ ಎನ್ನಲಾಗಿದೆ.ಸ್ಯಾಮ್ ಸಂಗ್ ನೀಡಿರುವ ಮಾಧ್ಯಮ ಮಾಹಿತಿಯಲ್ಲಿ ಪವರ್ ಫುಲ್ ಡಿಸ್ಪ್ಲೇ, ಪವರ್ ಫುಲ್ ಕ್ಯಾಮರಾ, ಪವರ್ ಫುಲ್ ಬ್ಯಾಟರಿ ಮತ್ತು ಪವರ್ ಫುಲ್ ಪ್ರೊಸೆಸರ್ ನ್ನು ಈ ಸ್ಮಾರ್ಟ್ ಫೋನ್ ಒಳಗೊಂಡಿದ್ದು ಯುವಕ/ಯುವತಿಯರಿಗೆ ಹೇಳಿ ಮಾಡಿಸಿದ ಫೋನ್ ಇದಾಗಿರುತ್ತದೆ ಎಂದು ತಿಳಿಸಿದೆ.

ಕೈಗೆಟುಕುವ ಬೆಲೆಯ ಫೋನ್:

ಕೈಗೆಟುಕುವ ಬೆಲೆಯ ಫೋನ್:

ಈ ಹಿಂದಿನ ಗ್ಯಾಲಕ್ಸಿ ಜೆ ಮತ್ತು ಗ್ಯಾಲಕ್ಸಿ ಆನ್ ಸರಣಿಯ ಫೋನ್ ಗಳಂತೆ ಗ್ಯಾಲಕ್ಸಿ ಎಂ ಕೂಡ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿರುವ ಫೋನ್ ಎಂದು ಹೇಳಲಾಗಿದೆ. ಹೊಸ ಸರಣಿ ಫೋನ್ ಗಳಲ್ಲಿ ಮಾರುಕಟ್ಟೆಯಲ್ಲಿರುವ ಇತರೆ ಫೋನ್ ಗಳಿಗೆ ಸ್ಪರ್ಧೆಯೊಡ್ಡುವಂತಹ ಕೆಲವು ಹೊಸ ಫೀಚರ್ ಗಳು ಇರಲಿವೆ ಎಂಬ ನಿರೀಕ್ಷೆ ಇದೆ. ಗ್ಯಾಲಕ್ಸಿ ಎಂ10 ಮತ್ತು ಎಂ20 ಫೋನ್ ಗಳು ಸ್ಯಾಮ್ ಸಂಗ್ ಫೋನ್ ಮೊದಲ ಬಾರಿಗೆ ಇನ್ಫಿನಿಟಿ-ವಿ ಡಿಸ್ಪ್ಲೇಯನ್ನು ಹೊಂದಿರುವ ಫೋನ್ ಆಗಿರುತ್ತದೆ ಎಂಬ ಗಾಳಿಸುದ್ದಿಯೊಂದು ಹರಿದಾಡುತ್ತಿದೆ. 5,000mAh ಬ್ಯಾಟರಿ ಸೌಲಭ್ಯವಿರುವ ಫೋನ್ ಇದಾಗಿರುತ್ತದೆ ಎಂದೂ ಕೂಡ ಹೇಳಲಾಗಿದೆ.

ಅಂದಾಜು ಬೆಲೆ:

ಅಂದಾಜು ಬೆಲೆ:

ಗ್ಯಾಲಕ್ಸಿ ಎಂ10 ನ ಭಾರತೀಯ ಮಾರುಕಟ್ಟೆಯ ಆರಂಭಿಕ ಬೆಲೆ 10,000 ರುಪಾಯಿಗಳಾಗಿರುತ್ತದೆ ಮತ್ತು ಎಂ20 ಫೋನಿನ ಭಾರತೀಯ ಮಾರುಕಟ್ಟೆಯ ಆರಂಭಿಕ ಬೆಲೆ 15,000 ರುಪಾಯಿಗಳಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ಯಾಲಕ್ಸಿ ಎಂ30ಯನ್ನು ಕೂಡ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಗ್ಯಾಲಕ್ಸಿ ಎಂ30 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ ಮತ್ತು ಟ್ರಿಪಲ್ ಕ್ಯಾಮರಾ ಸಿಸ್ಟಮ್ ಹೊಂದಿರುವ ಅತೀ ಕಡಿಮೆ ಬೆಲೆಯ ಫೋನ್ ಕೂಡ ಇದಾಗಿರುತ್ತದೆ. ಒಟ್ಟಿನಲ್ಲಿ ಜನವರಿ 28 ಕ್ಕೆ ಭಾರತದಲ್ಲಿ ಗ್ಯಾಲಕ್ಸಿ ಎಂ ಸರಣಿ ಬಿಡುಗಡೆಗೊಳ್ಳುತ್ತಿದೆ ಮತ್ತು ಆ ಬಗೆಗಿನ ಟೀಸರ್ ಗಳನ್ನು ನಾವು ಇದೀಗ ಸ್ಯಾಮ್ ಸಂಗ್ ನಿಂದ ನಿರೀಕ್ಷಿಸಬಹುದಾಗಿದೆ.

Best Mobiles in India

English summary
Samsung confirms Galaxy M series India launch on January 28, Galaxy M10, M20 expected first
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+