ಇನ್ನು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನ್ನು ಕನ್ನಡಕ್ಕೆ ಬದಲಾಯಿಸಬಹುದು!

Posted By:

ಸ್ಯಾಮ್‌ಸಂಗ್‌ ಫೋನ್‌ನ್ನು ಇನ್ನೂ ನೀವು ಸಂಪೂರ್ಣವಾಗಿ ಕನ್ನಡಕ್ಕೆ ಬದಲಾಯಿಸಬಹುದು.ಇಂದಿನಿಂದ ಸ್ಯಾಮ್‌ಸಂಗ್‌ನ ಗೆಲಾಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ನಲ್ಲಿ ಕನ್ನಡ ಸೇರಿದಂತೆ ದೇಶದ ಎಂಟು ಭಾಷೆಗಳಿಗೆ ಬದಲಾಯಿಸಬಹುದು.

ಸ್ಯಾಮ್‌ಸಂಗ್‌ ಯೂಸರ್‌ ಇಂಟರ್‌‌ಫೇಸ್‌ಗೆ ಸಪೋರ್ಟ್‌ ಮಾಡುವ ಆಪ್‌ನ್ನು ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದೆ. ಕನ್ನಡ,ಹಿಂದಿ,ಬೆಂಗಾಳಿ,ತಮಿಳು,ಗುಜರಾತಿ,ಮರಾಠಿ,ತೆಲುಗು,ಮಲೆಯಾಳಂ ಭಾಷೆಯ ಆಪ್‌ನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ಸ್ಯಾಮ್‌ಸಂಗ್‌ ಆಪ್‌ ಮೂಲಕ ಈ ಭಾಷೆಗಳನ್ನು ಡೌನ್‌ಲೋಡ್‌ ಮಾಡಿ ಬಳಸಬಹುದಾಗಿದೆ.

ಹೊಸ ಸ್ಮಾರ್ಟ್‌‌ಫೋನ್‌, ಟ್ಯಾಬ್ಲೆಟ್‌ಗಳ ಬೆಲೆ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಜೆಟ್‌ ಹುಡುಕಿ

 ಇನ್ನು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನ್ನು ಕನ್ನಡಕ್ಕೆ ಬದಲಾಯಿಸಬಹುದು!

ಸದ್ಯ ಈ ಆಪ್‌ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4,ಗೆಲಾಕ್ಸಿ ಗ್ಯ್ರಾಂಡ್‌ ಸ್ಮಾರ್ಟ್‌‌ಫೋನ್‌ ಮತ್ತು ಗೆಲಾಕ್ಸಿ ಟ್ಯಾಬ್‌3 ಮಾತ್ರ ಈ ಭಾಷೆಗಳು ಸಪೋರ್ಟ್‌ ಮಾಡಲಿದ್ದು, ಮುಂದಿನ ಎರಡು ತಿಂಗಳಿನೊಳಗಡೆ ಸ್ಯಾಮ್‌ಸಂಗ್‌ನ ಎಲ್ಲಾ ಸಾಧನಗಳಿಗೆ ಈ ಸೇವೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಸ್ಯಾಮ್‌ಸಂಗ್ ತಿಳಿಸಿದೆ.

ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ಗೆಲಾಕ್ಸಿ ಸ್ಟಾರ್‌ ಈ ವಿಶೇಷತೆಯೊಂದಿಗೆ ಬಿಡುಗಡೆಯಾಗಲಿದ್ದು, ಜೊತೆಗೆ  ಪ್ರಾದೇಶಿಕ ಭಾಷೆಗಳಲ್ಲಿ ಆಪ್‌ ತಯಾರಿಸುವ ಕಂಪೆನಿಗಳ ಸಹಕಾರದಿಂದ ಮತ್ತಷ್ಟು ದೇಶಿಯ ಭಾಷೆಯನ್ನು ಅಳವಡಿಸಲಿದ್ದೇವೆ ಎಂದು ಸ್ಯಾಮ್‌ಸಂಗ್‌ ಹೇಳಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot