ನೂತನ ಆಂಡ್ರಾಯ್ಡ್ ಆವೃತ್ತಿ ಒರಿಯಾ ಆಪ್ಡೇಟ್ ಪಡೆದುಕೊಳ್ಳುವ ಸ್ಯಾಮ್ ಸಂಗ್ ಫೋನ್ ಗಳು
ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಸ್ಮಾರ್ಟ್ ಫೋನ್ ಕಂಪನಿಗಳು ಈಗಾಗಲೇ ಬಿಡುಗಡೆಗೊಂಡಿರುವ ತಮ್ಮ ನೂತನ ಸ್ಮಾರ್ಟ್ ಫೋನ್ ಗಳಿಗೆ ಆಂಡ್ರಾಯ್ಡ್ ನೂತನ ಆಂಡ್ರಾಯ್ಡ್ ಆವೃತ್ತಿ ಒರಿಯಾ ಆಪ್ಡೇಟ್ ನೀಡುತ್ತಿವೆ. ಇದೇ ಮಾದರಿಯಲ್ಲಿ ಖ್ಯಾತ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ಸ್ಯಾಮ್ ಸಂಗ್ ಸಹ ತನ್ನ ಹಲವು ಸ್ಮಾರ್ಟ್ ಫೋನ್ ಗಳಿಗೆ ಆಂಡ್ರಾಯ್ಡ್ ಒರಿಯಾ ಆಪ್ಡೇಟ್ ನೀಡಲು ಮುಂದಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಸ್ಮಾರ್ಟ್ ಫೋನ್ ಗಳು ಆಂಡ್ರಾಯ್ಡ್ ಒರಿಯಾ ಆಪ್ಡೇಟ್ ಪಡೆಯಲಿವೆ. ಈ ಹಿನ್ನಲೆಯಲ್ಲಿ ಯಾವ ಯಾವ ಸ್ಯಾಮ್ ಸಂಗ್ ಮೊಬೈಲ್ ಗಳು ಈ ಆಪ್ಡೇಟ್ ಪಡೆದುಕೊಳ್ಳಲಿದೆ ಎಂಬುದರ ಮಾಹಿತಿಯೂ ಲೀಕ್ ಆಗಿದೆ ಎನ್ನಲಾಗಿದೆ.
2015ರಲ್ಲೇ ಮಾರುಕಟ್ಟೆಗೆ ಬಂದ ಸ್ಯಾಮ್ ಸಂಗ್ ಗ್ಯಾಲೆಕ್ಸಿ S6, ಗ್ಯಾಲೆಕ್ಸಿ S6 ಎಡ್ಜ್, ಗ್ಯಾಲೆಕ್ಸಿ S6 ಎಡ್ಜ್ ಪ್ಲಸ್ ಸ್ಮಾರ್ಟ್ ಫೋನ್ ಗಳು ಸಹ ನೂತನ ಆಂಡ್ರಾಯ್ಡ್ ಆವೃತ್ತಿ ಒರಿಯಾ ಆಪ್ಡೇಟ್ ಪಡೆದುಕೊಳ್ಳಲಿವೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಇದಲ್ಲದೇ ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್ ಫೋನ್ ಗಳು ಸಹ ನೂತನ ಆಂಡ್ರಾಯ್ಡ್ ಆವೃತ್ತಿ ಒರಿಯಾ ಆಪ್ಡೇಟ್ ಪಡೆದುಕೊಳ್ಳಲಿವೆ. ಇದಲ್ಲದೇ ಗ್ಯಾಲೆಕ್ಸಿ ನೋಟ್ 8, ಗ್ಯಾಲೆಕ್ಸಿ ನೋಟ್ FE ಮತ್ತು ಗ್ಯಾಲೆಕ್ಸಿ ನೋಟ್ 5 ಸ್ಮಾರ್ಟ್ ಫೋನ್ ಗಳು ಈ ನೂತನ ಆಂಡ್ರಾಯ್ಡ್ ಆಪ್ಡೇಟ್ ಪಡೆದುಕೊಳ್ಳಲಿವೆ.
ಇದಲ್ಲದೇ ಗ್ಯಾಲೆಕ್ಸಿ A3, ಗ್ಯಾಲೆಕ್ಸಿ A5 ಮತ್ತು ಗ್ಯಾಲೆಕ್ಸಿA7 ಸ್ಮಾರ್ಟ್ ಫೋನ್ ಗಳು ನೂತನ ಆಂಡ್ರಾಯ್ಡ್ ಆವೃತ್ತಿ ಒರಿಯಾ ಆಪ್ಡೇಟ್ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ ಗ್ಯಾಲೆಕ್ಸಿ ಟಾಬ್ S2, ಗ್ಯಾಲೆಕ್ಸಿ ಟಾಬ್ S3, ಗ್ಯಾಲೆಕ್ಸಿ ಟಾಬ್ A ಮತ್ತು ಗ್ಯಾಲೆಕ್ಸಿ ಟಾಬ್ ಆಕ್ಟೀವ್ 2 ಗಳು ಸಹ ಆಂಡ್ರಾಯ್ಡ್ ಒರಿಯಾ ಆಪ್ಡೇಟ್ ಪಡೆದುಕೊಳ್ಳಲಿದೆ.


Click it and Unblock the Notifications








