Home
ಮೊಬೈಲ್

ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಿಗೆ ದೀಪಾವಳಿ ಸೇಲ್ ನಲ್ಲಿ ಯಾರಿಗುಂಟು ಯಾರಿಗಿಲ್ಲ ಆಫರ್

By Gizbot Bureau

ಸ್ಮಾರ್ಟ್ ಫೋನ್ ಖರೀದಿಗೆ ಸಂಬಂಧಿಸಿದಂತೆ ದೀಪಾವಳಿ ಹಬ್ಬದ ಕೊಡುಗೆಯಾಗಿ ಹಲವು ಆನ್ ಲೈನ್ ರೀಟೈಲರ್ ಗಳು ಈಗಾಗಲೇ ಬಳಕೆದಾರರಿಗೆ ಭರ್ಜರಿ ಆಫರ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಈ ಸಮಯದಲ್ಲಿ ಅಧಿಕೃತ ವೆಬ್ ಸೈಟ್ ಗಳು ಕೂಡ ತಾವೇನು ಕಡಿಮೆ ಇಲ್ಲ ಎಂಬಂತೆ ತಮ್ಮ ಸ್ಮಾರ್ಟ್ ಫೋನ್ ಗಳಿಗೆ ಆಕರ್ಷಕ ಕೊಡುಗೆಗಳನ್ನು ನೀಡಲು ಮುಂದಾಗಿವೆ. ಕಣ್ಣು ಕುಕ್ಕುವ ಆಫರ್ ಗಳನ್ನು ಸ್ಯಾಮ್ ಸಂಗ್ ಸಂಸ್ಥೆ ಕೂಡ ನೀಡುವುದಕ್ಕೆ ಮುಂದಾಗಿದ್ದು ಬೇರೆಬೇರೆ ಬೆಲೆಯ ಹ್ಯಾಂಡ್ ಸೆಟ್ ಗಳು ದೀಪಾವಳಿ ಧಮಾಕ ಸೇಲ್ ಅಡಿಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಸ್ಯಾಮ್ ಸಂಗ್ ದೀಪಾವಳಿ ಧಮಾಕ ಸೇಲ್ ಆಫರ್ ಗಳು

ಸ್ಯಾಮ್ ಸಂಗ್ ದೀಪಾವಳಿ ಧಮಾಕ ಸೇಲ್ ಆಫರ್ ಗಳು

ಕೆಲವು ಸ್ಮಾರ್ಟ್ ಫೋನ್ ಗಳಿಗೆ ಸ್ಯಾಮ್ ಸಂಗ್ ಅಧಿಕೃತ ವೆಬ್ ಸೈಟ್ ನಲ್ಲಿ 50% ದ ವರೆಗೆ ರಿಯಾಯಿತಿ ಇದೆ. ಈ ಡಿವೈಸ್ ಗಳನ್ನು ಖರೀದಿಸುವ ಮೂಲಕ ಹೆಚ್ ಡಿಎಫ್ ಸಿ ಬ್ಯಾಂಕ್ ಮೂಲಕ ಹೆಚ್ಚುವರಿ 10% ರಿಯಾಯಿತಿ, ಆಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮೂಲಕವೂ ಕೂಡ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಮೊಬಿಕ್ ವಿಕ್ ನಲ್ಲಿ 10% 1000 ರುಪಾಯಿ ವರೆಗೆ ಸೂಪರ್ ಕ್ಯಾಷ್ ಆಫರ್ ಇದೆ. ಮೇಕ್ ಮೈ ಟ್ರಿಪ್ ನಲ್ಲಿ 25% ದ ವರೆಗೆ ಟ್ರಾವೆಲ್ ಬುಕ್ಕಿಂಗ್ ನಲ್ಲಿ ಆಫರ್, ಉತ್ತಮ ಎಕ್ಸ್ ಚೇಂಜ್ ಆಫರ್ ಮತ್ತು ಇತ್ಯಾದಿ ಹಲವು ರಿಯಾಯಿತಿಗಳು ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಸ್ಯಾಮ್ ಸಂಗ್ ವೆಬ್ ಸೈಟ್ ನಲ್ಲಿ ಈ ಸ್ಮಾರ್ಟ್ ಫೋನ್ 13,999 ರುಪಾಯಿ ಬೆಲೆಗೆ ಲಭ್ಯವಿದೆ. ಇದರ ಜೊತೆಗೆ ಓವೈಓ ಹೊಟೆಲ್ ಬುಕ್ಕಿಂಗ್ ನಲ್ಲಿ 10,000 ರುಪಾಯಿವರೆಗೆ ಆಫರ್ ಕೂಡ ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಈ ಹ್ಯಾಂಡ್ ಸೆಟ್ ಅತೀ ಹೆಚ್ಚಿನ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಹಲವಾರು ಆಫರ್ ಗಳು ಈ ಫೋನಿಗೆ ಲಭ್ಯವಿರುವುದರಿಂದಾಗಿ ಖಂಡಿತ ಈ ಡಿವೈಸ್ ನ್ನು ಖರೀದಿಸುವಂತೆ ಮಾಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಸ್ಯಾಮ್ ಸಂಗ್ ವೆಬ್ ಸೈಟ್ ನಲ್ಲಿ 6ಜಿಬಿ ಮೆಮೊರಿ ವೇರಿಯಂಟ್ ನ ಈ ಡಿವೈಸ್ 21,490 ರುಪಾಯಿ ಬೆಲೆಗೆ ಲಭ್ಯವಿದೆ. 4ಜಿಬಿ ಮೆಮೊರಿ ವ್ಯವಸ್ಥೆಯ ಫೋನ್ 18,400 ರುಪಾಯಿ ಬೆಲೆಗೆ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

ಈ ಸ್ಮಾರ್ಟ್ ಫೋನ್ ಖರೀದಿಸುವ ಮೂಲಕ ನೀವು 8,000 ರುಪಾಯಿವರೆಗಿನ ಬೆನಿಫಿಟ್ ಗಳನ್ನು ಪಡೆಯುವುದಕ್ಕೆ ಅವಕಾಶವಿದೆ. 6,000 ರುಪಾಯಿಯ ಕ್ಯಾಷ್ ಬ್ಯಾಕ್ ಆಫರ್ ಕೂಡ ಈ ಫೋನಿಗೆ ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30ಎಸ್

ಈ ಸ್ಮಾರ್ಟ್ ಫೋನ್ ಖರೀದಿಯಿಂದಾಗಿ ಬಳಕೆದಾರರು 8,000 ರುಪಾಯಿಯ ಬೆನಿಫಿಟ್ ನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ 6,000 ರುಪಾಯಿವರೆಗಿನ ಕ್ಯಾಷ್ ಬ್ಯಾಕ್ ಆಫರ್ ನ್ನು ಕೂಡ ಪಡೆದುಕೊಳ್ಳುವ ಅವಕಾಶವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20ಎಸ್

ಈ ಸ್ಮಾರ್ಟ್ ಫೋನ್ ಖರೀದಿಯಿಂದಾಗಿ ಬಳಕೆದಾರರು 8,000 ರುಪಾಯಿಯ ಬೆನಿಫಿಟ್ ನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ 6,000 ರುಪಾಯಿವರೆಗಿನ ಕ್ಯಾಷ್ ಬ್ಯಾಕ್ ಆಫರ್ ನ್ನು ಕೂಡ ಪಡೆದುಕೊಳ್ಳುವ ಅವಕಾಶವಿದೆ.

ಸ್ಯಾಮ್ ಸಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿಎಸ್9, ಸ್ಯಾಮ್ ಸಂಗ್ ಗ್ಯಾಲಕ್ಸಿಎ70ಎಸ್,
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10ಎಸ್, ಸ್ಯಾಮ್ ಸಂಗ್ ಗ್ಯಾಲಕ್ಸಿನೋಟ್ 9, ಸ್ಯಾಮ್ ಸಂಗ್ ಗ್ಯಾಲಕ್ಸಿಎಸ್10, ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10ಎಸ್

ಈ ಮೇಲಿನ ಎಲ್ಲಾ ಸ್ಮಾರ್ಟ್ ಫೋನ್ ಗಳ ಖರೀದಿಯಿಂದಲೂ ಕೂಡ 8,000 ರುಪಾಯಿಯ ಬೆನಿಫಿಟ್ ನ್ನು ಗ್ರಾಹಕರು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ 6,000 ರುಪಾಯಿಯ ಕ್ಯಾಷ್ ಬ್ಯಾಕ್ ಆಫರ್ ಕೂಡ ಇದೆ.

Best Mobiles in India

English summary
Samsung has recently come up with some iconic offers on its different price category handsets, under its scheme called “Diwali Dhamaka Sales”. The sales will allow users to buy several devices and other electronic products at bigger discounts and other more attractive offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+