Home
ಮೊಬೈಲ್

ನೈಟ್ರೊ ಮತ್ತು ಡಬಲ್ ಟೈಂ ಎರಡರಲ್ಲಿ ಮೊದಲ್ಯಾವುದು?

By Super
ನೈಟ್ರೊ ಮತ್ತು ಡಬಲ್ ಟೈಂ ಎರಡರಲ್ಲಿ ಮೊದಲ್ಯಾವುದು?


ಮೊಬೈಲ್ ಮತ್ತು ಸ್ಮಾರ್ಟ್ ಪೋನ್ ತಯಾರಿಕೆಯಲ್ಲಿ ಹೆಸರು ಗಳಿಸಿರುವ ಸ್ಯಾಮ್ ಸಂಗ್ ಮತ್ತು ಎಲ್ ಜಿ ಕಂಪನಿಗಳು ಕೆಲವು ದಿನಗಳ ಹಿಂದಷ್ಟೇ ಅಂತರರಾಷ್ಟ್ರೀಯ ಮೊಬೈಲ್ ಮಾರುಕಟ್ಟೆಗೆ ತಮ್ಮ ನೂತನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿವೆ. ಸ್ಯಾಮ್ ಸಂಗ್ ಡಬಲ್ ಟೈಮ್ ಮತ್ತು ಎಲ್ ಜಿ ನೈಟ್ರೊ ಎಚ್ ಡಿ ಬಿಡುಗಡೆಗೊಂಡಿರುವ ಹೊಸ ಮೊಬೈಲ್ ಗಳು.

ಎರಡೂ ಫೋನ್ ಗಳಲ್ಲಿಯೂ ನಿಮಗೆ ಬೇಕೆನ್ನುವ ಹಲವು ಆಧುನಿಕ ಆಯ್ಕೆ ಮತ್ತು ವಿಶೇಷತೆಗಳನ್ನು ನೀಡಲಾಗಿದೆ. ಎಲ್ ಜಿ ನೈಟ್ರೊ ಎಚ್ ಡಿ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದ್ದರೆ ಸ್ಯಾಮ್ ಸಂಗ್ ಡಬಲ್ ಟೈಂ ಮೊಬೈಲ್ ಆಂಡ್ರಾಯ್ಡ್ 2.2 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಸ್ಯಾಮ್ ಸಂಗ್ ಡಬಲ್ ಟೈಂ 800 MHz ಕ್ವಾಲ್ಕಂ ಪ್ರೊಸೆಸರ್ s1 ಮತ್ತು ಎಲ್ ಜಿ ನೈಟ್ರೊ ಎಚ್ ಡಿ 1.5 GHz ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿದೆ.

ಸ್ಯಾಮ್ ಸಂಗ್ ಡಬಲ್ ಟೈಮ್ ವಿಶೇಷತೆ:

* 3.2 ಇಂಚಿನ ಡಿಸ್ಪ್ಲೇ, 320 x 480 ಪಿಕ್ಸಲ್ ರೆಸೊಲ್ಯೂಷನ್

* 4.45 x 2.44 x 0.59 ಇಂಚಿನ ಸುತ್ತಳತೆ

* 147 ಗ್ರಾಂ ತೂಕ

* 3.0 ಮೆಗಾ ಪಿಕ್ಸಲ್ ಕ್ಯಾಮೆರಾ

* 1.0 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ವೈ-ಫೈ, ಬ್ಲೂಟೂಥ್, USB ಪೋರ್ಟ್, HDMI ಪೋರ್ಟ್

ಎಲ್ ಜಿ ನೈಟ್ರೊ ಎಚ್ ಡಿ ವಿಶೇಷತೆ:

* 4.5 ಇಂಚಿನ ಡಿಸ್ಪ್ಲೇ, 1280 x 720 ಪಿಕ್ಸಲ್ ರೆಸೊಲ್ಯೂಷನ್

* 5.27 x 2.67 x 0.41 ಇಂಚಿನ ಸುತ್ತಳತೆ

* 128 ಗ್ರಾಂ ತೂಕ

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* 1.0 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ವೈ-ಫೈ, ಬ್ಲೂಟೂಥ್, USB ಪೋರ್ಟ್, HDMI ಪೋರ್ಟ್

* ವೆಬ್ ಬ್ರೌಸಿಂಗ್

ಎಲ್ ಜಿ ನೈಟ್ರೊ ಎಚ್ ಡಿ ಮೊಬೈಲಿನ 1830 mAh ಲೀಥಿಯಂ ಐಯಾನ್ ಬ್ಯಾಟರಿ 3 ಗಂಟೆ ಟಾಕ್ ಟೈಂ ಮತ್ತು 10 ದಿನ, 12 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡಲಿದೆ. ಸ್ಯಾಮ್ ಸಂಗ್ ಡಬಲ್ ಟೈಂ ಮೊಬೈಲ್ ಕೂಡ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು 6 ಗಂಟೆ ಟಾಕ್ ಟೈಂ ಮತ್ತು 250 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ಎರಡರಲ್ಲೂ MP3, MPEG4 ಮತ್ತು AAC+ ಫೈಲ್ ಫಾರ್ಮಟ್ ಗಳನ್ನು ಬೆಂಬಲಿಸುವ ಆಡಿಯೋ, ವಿಡಿಯೋ ಪ್ಲೇಯರ್ ನೀಡಲಾಗಿದೆ. ಆದರೆ ಈ ಮೊಬೈಲ್ ಗಳ ಬೆಲೆ ನಿಖರವಾಗಿ ತಿಳಿದುಬಂದಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+