ಜಿಂಜರ್ ಬ್ರೆಡ್ ನಿಂದ ಡ್ರಾಯ್ಡ್ ಇನ್ನಷ್ಟು ಬಲಶಾಲಿ

Posted By: Staff
ಜಿಂಜರ್ ಬ್ರೆಡ್ ನಿಂದ ಡ್ರಾಯ್ಡ್ ಇನ್ನಷ್ಟು ಬಲಶಾಲಿ

 

ಇದೀಗ ಸ್ಯಾಮ್ ಸಂಗ್ ಡ್ರಾಯ್ಡ್ ಚಾರ್ಜ್ ಮೊಬೈಲ್ ಪರಿಷ್ಕ್ರತಗೊಳ್ಳಲಿದೆ. ಆಧುನಿಕ ಜಿಂಜರ್ ಬ್ರೆಡ್ ಆಯಾಮದೊಂದಿಗೆ ಡ್ರಾಯ್ಡ್ ಇನ್ನು ಕೆಲವು ದಿನಗಳಲ್ಲಿ ಹೊರಬರುವ ಸೂಚನೆಯನ್ನು ಕಂಪನಿ ನೀಡಿದೆ. ಈ ಪರಿಷ್ಕ್ರಾರದಿಂದ 119 ಎಂಬಿ ಸಾಮರ್ಥ್ಯ ಮೊಬೈಲಿಗೆ ಹೆಚ್ಚಾಗಿ ಲಭಿಸಲಿದೆ.

ಈ ಜಿಂಜರ್ ಬ್ರೆಡ್ ಆಪರೇ ಟಿಂಗ್ ಸಿಸ್ಟಮ್ ಅಳವಡಿಕೆಯಿಂದ ಬಳಕೆದಾರರು ತಮ್ಮ ಮೊಬೈಲಿನಿಂದ ಅತ್ಯುತ್ತಮ ಅನುಭವವನ್ನು ಪಡೆಯಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಜಿಂಜರ್ ಬ್ರೆಡ್ ಪರಿಷ್ಕ್ರತ ಆಯಾಮದಿಂದ ಹೊಸ ಹೊಸ ವಿಜೆಟ್ ಮತ್ತು ಐಕಾನ್ ಗಳು ಸೇರ್ಪಡೆಯಾಗಲಿವೆ. ವೆಬ್ ಬ್ರೌಸರ್ ಮೂಲಕ ನಿಮಗೆ ಅಗತ್ಯಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಸ್ಕ್ರೀನ್ ಇನ್ನಷ್ಟು ಬಣ್ಣಗಳ ಗುಣಮಟ್ಟವನ್ನು ಪಡೆಯಲಿದೆ.

ಮೊಬೈಲಿನಲ್ಲಿ ಸುರಕ್ಷತೆಗೆಂದೂ VPN ಇಂಟೆಗ್ರೇಟ್ IPSec ಇದೆ. ಇದರಲ್ಲಿ ಸಾಫ್ಟ್ ವೇರ್ ಅಸಿಸ್ಟಂಟ್ ಸೌಲಭ್ಯ ನೀಡಿರುವುದು ತುಂಬಾ ವಿಶೇಷವೆನಿಸಿದೆ.

ಸ್ಯಾಮ್ ಸಂಗ್ ಡ್ರಾಯ್ಡ್ ಮೊಬೈಲ್ ವಿಶೇಷತೆ:

* 5.11 x 2.66 x 0.46 ಇಂಚಿನ ಸುತ್ತಳತೆ

* 4.3 ಇಂಚಿನ ಡಿಸ್ಪ್ಲೇ

* ಟಚ್ ಸೌಲಭ್ಯ

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* 512 ಎಂಬಿ ಆಂತರಿಕ ಮೆಮೊರಿ

* 16 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

ಸಂಪರ್ಕಕ್ಕೆಂದು ಎಲ್ಲಾ ಆಯ್ಕೆಗಳೂ ಈ ಮೊಬೈಲಿನಲ್ಲಿದ್ದು, 660 ನಿಮಿಷದ ಟಾಕ್ ಟೈಂ ಮತ್ತು 280 ಗಂಟೆ ಸ್ಟ್ಯಾಂಡ್ ಬೈ ಟೈಂ ಮೂಲಕ ಒಳ್ಳೆಯ ಬ್ಯಾಟರಿ ಬ್ಯಾಕಪ್ ಕೂಡ ಪಡೆದುಕೊಂಡಿದೆ. ಜಿಂಜರ್ ಬ್ರೆಡ್ ಪರಿಷ್ಕರಣೆಯೊಂದಿಗೆ ಮೊಬೈಲ್ ಇನ್ನಷ್ಟು ಖ್ಯಾತಿ ಗಳಿಸುವುದರಲ್ಲಿ ಸಂಶಯವಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot